ಜಿಯೋ ದೀಪಾವಳಿ ಆಫರ್‌: ಜಿಯೋ ಫೈಬರ್‌, ಏರ್‌ಫೈಬರ್‌ 1 ವರ್ಷ ಉಚಿತವಾಗಿ ಬೇಕೇ, ಬಳಕೆದಾರರು ಮಾಡಬೇಕಾಗಿರುವುದು ಇಷ್ಟೇ
ಕನ್ನಡ ಸುದ್ದಿ  /  ಜೀವನಶೈಲಿ  /  ಜಿಯೋ ದೀಪಾವಳಿ ಆಫರ್‌: ಜಿಯೋ ಫೈಬರ್‌, ಏರ್‌ಫೈಬರ್‌ 1 ವರ್ಷ ಉಚಿತವಾಗಿ ಬೇಕೇ, ಬಳಕೆದಾರರು ಮಾಡಬೇಕಾಗಿರುವುದು ಇಷ್ಟೇ

ಜಿಯೋ ದೀಪಾವಳಿ ಆಫರ್‌: ಜಿಯೋ ಫೈಬರ್‌, ಏರ್‌ಫೈಬರ್‌ 1 ವರ್ಷ ಉಚಿತವಾಗಿ ಬೇಕೇ, ಬಳಕೆದಾರರು ಮಾಡಬೇಕಾಗಿರುವುದು ಇಷ್ಟೇ

ಜಿಯೋ ದೀಪಾವಳಿ ಆಫರ್‌: ಜಿಯೋ ಕಂಪನಿಯು ಜಿಯೋ ಫೈಬರ್‌, ಏರ್‌ಫೈಬರ್‌ ಗ್ರಾಹಕರಿಗೆ ವಿಶೇಷ ದೀಪಾವಳಿ ಆಫರ್‌ ನೀಡಿದೆ. ಒಂದು ವರ್ಷ ಉಚಿತವಾಗಿ ಜಿಯೋ ಫೈಬರ್‌, ಏರ್‌ಫೈಬರ್‌ ಬಳಸುವಂತಹ ಅವಕಾಶ ಇದಾಗಿದೆ. ಜಿಯೋ ಏರ್‌ಫೈಬರ್‌, ಏರ್‌ಫೈಬರ್‌ ಮೂಲಕ ಇಂಟರ್‌ನೆಟ್‌ ಬಳಸಲು ಬಯಸುವವರಿಗೆ ಇದರಿಂದ ಅನುಕೂಲವಾಗಲಿದೆ.

ಜಿಯೋ ದೀಪಾವಳಿ ಆಫರ್‌: ಜಿಯೋ ಕಂಪನಿಯು ಜಿಯೋ ಫೈಬರ್‌, ಏರ್‌ಫೈಬರ್‌ ಗ್ರಾಹಕರಿಗೆ ವಿಶೇಷ ದೀಪಾವಳಿ ಆಫರ್‌ ನೀಡಿದೆ.
ಜಿಯೋ ದೀಪಾವಳಿ ಆಫರ್‌: ಜಿಯೋ ಕಂಪನಿಯು ಜಿಯೋ ಫೈಬರ್‌, ಏರ್‌ಫೈಬರ್‌ ಗ್ರಾಹಕರಿಗೆ ವಿಶೇಷ ದೀಪಾವಳಿ ಆಫರ್‌ ನೀಡಿದೆ. (PTI)

ಜಿಯೋ ದೀಪಾವಳಿ ಆಫರ್‌: ರಿಲಯೆನ್ಸ್‌ ಜಿಯೋ ಕಂಪನಿಯು ಭಾರತದ ಬೃಹತ್‌ ದೂರಸಂಪರ್ಕ ಕಂಪನಿಯಾಗಿದೆ. ಹೈಸ್ಪೀಡ್‌ ಬ್ರಾಡ್‌ಬ್ಯಾಂಡ್‌ ಸೇವೆ ಒದಗಿಸುವಲ್ಲಿ ಈ ಕಂಪನಿ ಮುಂಚೂಣಿಯಲ್ಲಿದೆ. ಪ್ರತಿವರ್ಷ ರಿಲಯೆನ್ಸ್‌ ಕಂಪನಿಯು ವಿಶೇಷ ದೀಪಾವಳಿ ಆಫರ್‌ ಪ್ರಕಟಿಸುತ್ತಿದೆ. ಈ ವರ್ಷವೂ ಜಿಯೋ ಗ್ರಾಹಕರಿಗೆ ಬಂಪರ್‌ ಆಫರ್‌ಗಳು ಇವೆ. ಹೊಸ ಜಿಯೋ ಬಳಕೆದಾರರು ಅಥವಾ ಈಗಾಗಲೇ ಜಿಯೋ ಗ್ರಾಹಕರಾದವರು ಈ ಆಫರ್‌ ಪಡೆಯಬಹುದು. ಗ್ರಾಹಕರು ಒಂದು ವರ್ಷಗಳ ಕಾಲ ಉಚಿತ ಜಿಯೋ ಏರ್‌ಫೈಬರ್‌ ಅನ್ನು ಉಚಿತವಾಗಿ ಪಡೆಯಬಹುದು. ದೀಪಾವಳಿ ಹಬ್ಬದ ಸಮಯದಲ್ಲಿ ಈ ಆಫರ್‌ ಹೇಗೆ ಪಡೆಯಬಹುದು? ಷರತ್ತುಗಳೇನು ತಿಳಿಯೋಣ.

ರಿಲಯೆನ್ಸ್‌ ಜಿಯೋ ದೀಪಾವಳಿ ಧಮಕಾ ಆಫರ್‌

ಈ ಆಫರ್‌ ಪಡೆಯುವುದು ಹೇಗೆ?: ಹೊಸ ಜಿಯೋ ಏರ್‌ಫೈಬರ್‌/ಫೈಬರ್‌ ಕನೆಕ್ಷನ್‌ ಅನ್ನು ಒಂದು ವರ್ಷಗಳ ಕಾಲ ಉಚಿತವಾಗಿ ಪಡೆಯಲು ಬಯಸುವವರು ಯಾವುದೇ ರಿಲಯೆನ್ಸ್‌ ಡಿಜಿಟಲ್‌ ಸ್ಟೋರ್‌ನಲ್ಲಿ ಅಥವಾ ಮೈಜಿಯೋ ಸ್ಟೋರ್‌ನಲ್ಲಿ 20 ಸಾವಿರ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ವಸ್ತುಗಳನ್ನು ಶಾಪಿಂಗ್‌ ಮಾಡಬೇಕು. ಇಷ್ಟು ಮೊತ್ತದ ವಸ್ತುಗಳನ್ನು ಖರೀದಿಸಿದವರಿಗೆ ಒಂದು ವರ್ಷಗಳ ಕಾಲ ಉಚಿತ ಏರ್‌ಫೈಬರ್‌, ಜಿಯೋ ಫೈಬರ್‌ ಕನೆಕ್ಷನ್‌ ದೊರಕಲಿದೆ. ಹೊಸ ಗ್ರಾಹಕರು ಮೂರು ತಿಂಗಳ ದೀಪಾವಳಿ ಪ್ಲ್ಯಾನ್‌ ಅನ್ನು 2222 ಮೂಲಕ ಏರ್‌ಫೈಬರ್‌ ಕನೆಕ್ಷನ್‌ ಪಡೆಯಬಹುದು.

ಈಗಾಗಲೇ ಏರ್‌ಫೈಬರ್‌/ಫೈಬರ್‌ ಹೊಂದಿರುವ ಗ್ರಾಹಕರು ಒಂದು ಬಾರಿ ಮೂರು ತಿಂಗಳ ದೀಪಾವಳಿ ಪ್ಲ್ಯಾನ್‌ ಅನ್ನು 2222 ರೂಪಾಯಿ ನೀಡಿ ಹಾಕಿಕೊಂಡರೆ ಒಂದು ವರ್ಷ ಉಚಿತ ಚಂದಾದಾರಿಕೆ ದೊರಕುತ್ತದೆ.

ಆಫರ್‌ ಪಡೆಯುವುದು ಹೇಗೆ?

ಅರ್ಹ ಗ್ರಾಹಕರಿಗೆ 12 ತಿಂಗಳ ಕೂಪನ್‌ ದೊರಕುತ್ತದೆ. ಇದನ್ನು ಒಂದು ವರ್ಷಗಳ ಕಾಲ ಏರ್‌ಫೈಬರ್‌ ಪ್ಲ್ಯಾನ್‌ ರಿಚಾರ್ಜ್‌ಗೆ ಬಳಸಬಹುದು. ನವೆಂಬರ್‌ 24ರಿಂದ ಅಕ್ಟೋಬರ್‌ 25ರವರೆಗೆ ಈ ಕೂಪನ್‌ ಇರುತ್ತದೆ. ಪ್ರತಿಯೊಂದು ಕೂಪನ್‌ ಪ್ರತಿತಿಂಗಳು ರಿಡೆಮ್‌ ಆಗುತ್ತದೆ. ಈ ಕೂಪನ್‌ ಅನ್ನು ಹತ್ತಿರದ ರಿಲಯೆನ್ಸ್‌ ಡಿಜಿಟಲ್‌ ಸ್ಟೋರ್‌/ ಮೈ ಜಿಯೋ ಸ್ಟೋರ್‌/ ಜಿಯೋ ಪಾಯಿಂಟ್‌ ಸ್ಟೋರ್‌/ ಜಿಯೋ ಮಾರ್ಟ್‌ ಡಿಜಿಟಲ್‌ ಎಕ್ಸ್‌ಕ್ಲೂಸಿವ್‌ ಸ್ಟೋರ್‌ಗಳಲ್ಲಿ ರಿಡೇಮ್‌ ಮಾಡಿಕೊಳ್ಳಬಹುದು. ಸೆಪ್ಟೆಂಬರ್‌ 18ರಿಂದ ನವೆಂಬರ್‌ 3ರ ನಡುವೆ 15 ಸಾವಿರ ರೂಪಾಯಿಗಿಂತ ಹೆಚ್ಚು ಖರೀದಿ ಮಾಡುವ ಸಮಯದಲ್ಲಿ ಪ್ರತಿಕೂಪನ್‌ ರಿಡೇಮ್‌ ಮಾಡಿಕೊಳ್ಳಬಹುದು.

ಜಿಯೋ ಏರ್‌ಫೈಬರ್‌ ಎನ್ನುವುದು ಜಿಯೋ ಫೈಬರ್‌ನಂತೆ ಯಾವುದೇ ಫಿಸಿಕಲ್‌ ಕನೆಕ್ಷನ್‌ ಹೊಂದಿರುವುದಿಲ್ಲ. ಮನೆ, ಆಫೀಸ್‌ ಅಥವಾ ಅವಶ್ಯಕತೆ ಇರುವಲ್ಲಿ ವೈಫೈ ರೂಟರ್‌ ಹಾಕಿಕೊಳ್ಳಬಹುದು. 4ಕೆ ಸೆಟಪ್‌ ಟಾಪ್‌ ಬಾಕ್ಸ್‌, ವಾಯ್ಸ್‌ ಆಕ್ಟಿವ್‌ ರಿಮೋಟ್‌ ಹೊಂದಿರುತ್ತದೆ. ಜಿಯೋ ಏರ್‌ಫೈಬರ್‌ನಲ್ಲಿ ಪ್ರಮುಖ ಒಟಿಟಿ ಆಪ್‌ಗಳು ಉಚಿತವಾಗಿ ದೊರಕುತ್ತವೆ. ಬಳಕೆದಾರರು ಈ ಚಂದಾದಾರಿಕೆಯನ್ನು ತಮ್ಮ ಟಿವಿ, ಲ್ಯಾಪ್‌ಟಾಪ್‌, ಮೊಬೈಲ್‌ ಅಥವಾ ಟ್ಯಾಬ್ಲೆಟ್‌ ಮುಂತಾದ ಸಾಧನಗಳಲ್ಲಿ ಬಳಸಬಹುದು.

Whats_app_banner