ಯಾವ ದೇಶದಲ್ಲಿ ಐಫೋನ್ ಹೆಚ್ಚು ಬಳಸುತ್ತಾರೆ ಎಂಬುದು ನಿಮಗೆ ತಿಳಿದಿದೆಯೇ: ಭಾರತವೂ ಅಲ್ಲ, ಅಮೆರಿಕವೂ ಅಲ್ಲ- ಇಲ್ಲಿದೆ ಮಾಹಿತಿ
ಭಾರತದಲ್ಲಿ ಐಫೋನ್ ಬಳಸುವವರ ಸಂಖ್ಯೆ ಎಷ್ಟೆಂಬ ಮಾಹಿತಿ ಹೊರಬಿದ್ದಿದೆ. ಅನೇಕ ದೇಶಗಳಲ್ಲಿ, ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರು ಐಫೋನ್ ಹೊಂದಿದ್ದಾರೆ. ಹಾಗಾದರೆ ಯಾವ ದೇಶದಲ್ಲಿ ಐಫೋನ್ ಹೆಚ್ಚು ಬಳಕೆಯಾಗುತ್ತಿದೆ ಎಂಬುದನ್ನು ನೋಡೋಣ. (ಬರಹ: ವಿನಯ್ ಭಟ್)
ಅಮೆರಿಕದ ಪ್ರಸಿದ್ಧ ಟೆಕ್ ಕಂಪನಿ ಆಪಲ್‌ನ ಐಫೋನ್ ಇಂದು ವಿಶ್ವಾದ್ಯಂತ ಸಾಕಷ್ಟು ಬೇಡಿಕೆ ಸೃಷ್ಟಿಸಿದೆ. ಈ ಕಂಪನಿಯ ಫೋನ್‌ಗಳು ಪ್ರಪಂಚದ ಅನೇಕ ದೇಶಗಳಲ್ಲಿ ಹೆಚ್ಚು ಬಳಸುತ್ತಿದ್ದಾರೆ. ಭಾರತದಲ್ಲಿಯೂ ಐಫೋನ್ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಬಳಕೆದಾರರ ಸಂಖ್ಯೆ ವೇಗವಾಗಿ ಏರಿಕೆಯಾಗುತ್ತಿದೆ. ಕಂಪನಿಯು ದೆಹಲಿ ಮತ್ತು ಮುಂಬೈನಲ್ಲಿ ತನ್ನ ಮಳಿಗೆಗಳನ್ನು ಕೂಡ ತೆರೆದಿದೆ. ಆದರೆ ಪ್ರಸ್ತುತ ಭಾರತದಲ್ಲಿ ಕೇವಲ ಐದು ಪ್ರತಿಶತ ಜನರು ಮಾತ್ರ ಆಪಲ್ ಫೋನ್ ಅನ್ನು ಬಳಸುತ್ತಾರೆ ಎಂದು ಕೇಳಿದರೆ ನಿಮಗೆ ಆಶ್ಚರ್ಯವಾಗಬಹುದು.
ಹೌದು, ಭಾರತದಲ್ಲಿ ಐಫೋನ್ ಬಳಸುವವರ ಸಂಖ್ಯೆ ಎಷ್ಟೆಂಬ ಮಾಹಿತಿ ಹೊರಬಿದ್ದಿದೆ. ಅನೇಕ ದೇಶಗಳಲ್ಲಿ, ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರು ಐಫೋನ್ ಹೊಂದಿದ್ದಾರೆ. ಹಾಗಾದರೆ ಯಾವ ದೇಶದಲ್ಲಿ ಐಫೋನ್ ಹೆಚ್ಚು ಬಳಕೆಯಾಗುತ್ತಿದೆ ಎಂಬುದನ್ನು ನೋಡೋಣ.
ಆಪಲ್ ಅಮೆರಿಕಾದ ಕಂಪನಿಯಾಗಿದ್ದರೂ, ಅಲ್ಲಿ ಕೇವಲ 51 ಪ್ರತಿಶತ ಜನರು ಮಾತ್ರ ಐಫೋನ್ ಅನ್ನು ಬಳಸುತ್ತಾರೆ. ಶೇ. 27 ರಷ್ಟು ಅಮೆರಿಕನ್ನರು ಸ್ಯಾಮ್‌ಸಂಗ್ ಫೋನ್‌ಗಳನ್ನು ಬಳಸಿದರೆ 22 ಪ್ರತಿಶತ ಜನರು ಇತರ ಬ್ರಾಂಡ್‌ಗಳನ್ನು ಉಪಯೋಗಿಸುತ್ತಿದ್ದಾರೆ.
ಅತಿ ಹೆಚ್ಚು ಐಫೋನ್ ಅನ್ನು ಬಳಸುವ ದೇಶ ಜಪಾನ್ ಆಗಿದೆ. ಐಫೋನ್ ಬಳಸುವ ವಿಷಯದಲ್ಲಿ ಜಪಾನ್ ಮೊದಲ ಸ್ಥಾನದಲ್ಲಿದೆ. ಈ ದೇಶದಲ್ಲಿ ಶೇ. 59 ರಷ್ಟು ಮಂದಿ ಐಫೋನ್ ಹೊಂದಿದ್ದಾರೆ. ಜಪಾನ್‌ನಲ್ಲಿ ಶೇಕಡಾ ಒಂಬತ್ತು ಜನರು ದಕ್ಷಿಣ ಕೊರಿಯಾದ ಸ್ಯಾಮ್‌ಸಂಗ್‌ನ ಫೋನ್‌ಗಳನ್ನು ಬಳಸುತ್ತಾರೆ. ಶೇಕಡಾ 32 ರಷ್ಟು ಜನರು ಇತರ ಕಂಪನಿಗಳ ಫೋನ್‌ಗಳನ್ನು ಹೊಂದಿದ್ದಾರೆ.
ಹಾಗೆಯೆ ಕೆನಡಾದಲ್ಲಿ ಶೇ. 56 ಮತ್ತು ಆಸ್ಟ್ರೇಲಿಯಾದಲ್ಲಿ ಶೇ. 53 ರಷ್ಟು ಜನರು ಐಫೋನ್ ಬಳಸುತ್ತಾರೆ. ಈ ದೇಶಗಳ ಜನಸಂಖ್ಯೆಯು ಅಮೆರಿಕಾಕ್ಕಿಂತ ತುಂಬಾ ಕಡಿಮೆ ಎಂಬುದನ್ನು ಗಮನಿಸಬೇಕು.
ಭಾರತದಲ್ಲಿ ಕೇವಲ ಶೇ. 5 ರಷ್ಟು ಜನರು ಮಾತ್ರ ಐಫೋನ್ ಬಳಸುತ್ತಾರೆ. ಶೇ. 19 ರಷ್ಟು ಜನರು ಸ್ಯಾಮ್‌ಸಂಗ್ ಫೋನ್ ಹೊಂದಿದ್ದಾರೆ. ಹಾಗೆಯೆ 76 ಪ್ರತಿಶತ ಜನರು ಶವೋಮಿ, ವಿವೋ ಮತ್ತು ಒಪ್ಪೋ ದಂತಹ ಚೀನಾದ ಕಂಪನಿಗಳ ಫೋನ್‌ಗಳನ್ನು ಬಳಸುತ್ತಾರೆ. ಚೀನಾದಲ್ಲಿ ಸಹ ಶೇ. 76 ರಷ್ಟು ಜನರು ಶವೋಮಿ, ವಿವೋ ಮತ್ತು ಒಪ್ಪೋ ಫೋನ್‌ಗಳನ್ನು ಬಳಸುತ್ತಾರೆ.
ಆಪಲ್ ಐಫೋನ್ ಬಳಕೆದಾರರು ಬ್ರಿಟನ್‌ನಲ್ಲಿ ಶೇ. 48, ಚೀನಾದಲ್ಲಿ ಶೇ. 21, ಜರ್ಮನಿಯಲ್ಲಿ ಶೇ. 34, ಫ್ರಾನ್ಸ್‌ನಲ್ಲಿ ಶೇ. 35, ದಕ್ಷಿಣ ಕೊರಿಯಾದಲ್ಲಿ ಶೇ. 18, ಆಸ್ಟ್ರೇಲಿಯಾದಲ್ಲಿ ಶೇ. 53, ಬ್ರೆಜಿಲ್‌ನಲ್ಲಿ ಶೇ. 16, ಇಟಲಿಯಲ್ಲಿ ಶೇ. 30, ರಷ್ಯಾದಲ್ಲಿ ಶೇ. 30, ಮೆಕ್ಸಿಕೋದಲ್ಲಿ ಶೇ. 20 ಮತ್ತು ಸ್ಪೇನ್‌ನಲ್ಲಿ ಶೇ. 29 ರಷ್ಟು ಜನರು ಐಫೋನ್ ಹೊಂದಿದ್ದಾರೆ.
ಐಫೋನ್ 16 ಬೆಲೆ ಭಾರಿ ಕುಸಿತ
ಇತ್ತೀಚಿನ ಐಫೋನ್ 16 ಪ್ರಸ್ತುತ ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಲಭ್ಯವಿದೆ. ನೀವು ಈ ಪ್ರೀಮಿಯಂ ಸ್ಮಾರ್ಟ್‌ಫೋನ್ ಅನ್ನು ರೂ. 50,000 ಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದು. ಫ್ಲಿಪ್ಕಾರ್ಟ್ ಐಫೋನ್ 16 ಮೇಲೆ ಉತ್ತಮ ಕೊಡುಗೆಗಳನ್ನು ನೀಡುತ್ತಿದೆ. ಭಾರತದಲ್ಲಿ ಐಫೋನ್ 16ರ ಆರಂಭಿಕ ಬೆಲೆ 128ಜಿಬಿ ರೂಪಾಂತರಕ್ಕೆ ರೂ. 79,990 ಇದೆ. ಇದರ ಮೇಲೆ ಉತ್ತಮ ವಿನಿಮಯ ಕೊಡುಗೆಯೂ ಲಭ್ಯವಿದೆ. ಐಫೋನ್ 15 ಪ್ಲಸ್ ಅನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ನೀವು ರೂ. 26,250 ವರೆಗೆ ಉಳಿಸಬಹುದು. ಇದು ಬೆಲೆಯನ್ನು ರೂ. 53,650 ಕ್ಕೆ ತರುತ್ತದೆ. ಇದಲ್ಲದೇ, ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸುವ ಮೂಲಕ ನೀವು 5,000 ರೂಪಾಯಿಗಳ ತ್ವರಿತ ರಿಯಾಯಿತಿಯನ್ನು ಪಡೆಯಬಹುದು.