Healthy Habits: ಈ ಟಿಪ್ಸ್ ಅನುಸರಿಸುವುದರಿಂದ ನೀವು ಆರೋಗ್ಯದಿಂದಿರಬಹುದು
ಕನ್ನಡ ಸುದ್ದಿ  /  ಜೀವನಶೈಲಿ  /  Healthy Habits: ಈ ಟಿಪ್ಸ್ ಅನುಸರಿಸುವುದರಿಂದ ನೀವು ಆರೋಗ್ಯದಿಂದಿರಬಹುದು

Healthy Habits: ಈ ಟಿಪ್ಸ್ ಅನುಸರಿಸುವುದರಿಂದ ನೀವು ಆರೋಗ್ಯದಿಂದಿರಬಹುದು

ಆರೋಗ್ಯಕರ ಜೀವನಶೈಲಿಗಾಗಿ ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಹಾಗಂತ ಹೆಚ್ಚು ಮಹತ್ವದ ಬದಲಾವಣೆ ಏನು ಬೇಡ. ನಿಮ್ಮ ಲೈಫ್​ಸ್ಟೈಲ್​ನಲ್ಲಿ ಕೆಲವೊಂದು ಸಣ್ಣ-ಪುಟ್ಟ ಬದಲಾವಣೆಗಳನ್ನು ಮಾಡಿಕೊಂಡರೆ ಸಾಕು. ಇದರಿಂದ ಉತ್ತಮ ಆರೋಗ್ಯ ಪಡೆಯಬಹುದು ಎನ್ನುತ್ತಾರೆ ತಜ್ಞರು.

<p>ಸಾಂದರ್ಭಿಕ ಚಿತ್ರ</p>
ಸಾಂದರ್ಭಿಕ ಚಿತ್ರ

ಉತ್ತಮ ಆಹಾರ, ಹಣ್ಣುಗಳು, ತರಕಾರಿಗಳು ಅನೇಕ ದೀರ್ಘಕಾಲದ ಕಾಯಿಲೆಗಳನ್ನು ನಿಯಂತ್ರಿಸಲು ಉಪಯುಕ್ತವಾಗಿದೆ. ಅವು ನಮ್ಮನ್ನು ದೀರ್ಘಕಾಲ ಆರೋಗ್ಯವಾಗಿರಿಸುತ್ತವೆ. ಆದರೂ ಆಹಾರದ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು ಎನ್ನುತ್ತಾರೆ ತಜ್ಞರು. ಒಂದೇ ಬಾರಿಗೆ ಭಾರೀ ಬದಲಾವಣೆಗಳು ಎಂದರೆ ಎಲ್ಲರಿಗೂ ಕಷ್ಟ. ಹಾಗಾಗಿ ಆಹಾರದಲ್ಲಿ ಮಹತ್ವದ ಬದಲಾವಣೆ ಮಾಡಿಕೊಳ್ಳುವ ಬದಲು ದಿನವನ್ನು ಚಿಕ್ಕ ಚಿಕ್ಕ ವಿಷಯಗಳಿಂದಲೇ ಆರಂಭಿಸುವುದು ಉತ್ತಮ.

1. ಆಹಾರವನ್ನು ಆನಂದಿಸುವುದು

ನಿಮ್ಮ ಆಹಾರವನ್ನು ಆನಂದಿಸಲು ಸಮಯ ತೆಗೆದುಕೊಳ್ಳುವುದು ಬಹಳ ಮುಖ್ಯ. ಏಕೆಂದರೆ ಇದು ವ್ಯಕ್ತಿ ತಿನ್ನುವ ಆಹಾರದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಕ್ರಮೇಣ ಇದು ಅವರ ತೂಕದ ಮೇಲೂ ಪರಿಣಾಮ ಬೀರುತ್ತದೆ. ವರದಿಯ ಪ್ರಕಾರ, ವೇಗವಾಗಿ ತಿನ್ನುವ ಜನರು ನಿಧಾನವಾಗಿ ತಿನ್ನುವವರಿಗಿಂತ ಹೆಚ್ಚಿನ ಬಾಡಿ ಮಾಸ್ ಇಂಡೆಕ್ಸ್ (BMI) ಹೊಂದಿರುತ್ತಾರೆ. ಅದಕ್ಕಾಗಿಯೇ ನಿಧಾನವಾಗಿ ತಿನ್ನುವುದರಿಂದ ಹೊಟ್ಟೆ ತುಂಬಿದೆ ಎಂದು ಮೆದುಳು ಗ್ರಹಿಸುತ್ತದೆ. ಆದ್ದರಿಂದ ನಾವು ಕಡಿಮೆ ತಿನ್ನುತ್ತೇವೆ.

2. ಪ್ರೋಟೀನ್ ಸೇವನೆ

ಪ್ರೋಟೀನ್​ಗಳು ಕೆಲವು ಸೂಪರ್ ಪವರ್​​ಗಳನ್ನು ಹೊಂದಿವೆ. ಒಬ್ಬ ವ್ಯಕ್ತಿಯು ತನ್ನ ಸ್ನಾಯುವಿನ ದ್ರವ್ಯರಾಶಿಯನ್ನು ಕಾಪಾಡಿಕೊಳ್ಳಲು ಪ್ರೋಟೀನ್‌ಗಳು ಸಹಾಯ ಮಾಡುತ್ತವೆ. ಅತಿಯಾದ ಪ್ರೊಟೀನ್‌ಗಳು ಕ್ಯಾಲೋರಿಗಳನ್ನು ಸುಡುವುದರಿಂದ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.

3. ಮನೆಯಲ್ಲಿಯೇ ಊಟ

ಹೊರಗಡೆ ಊಟ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದೂ ತಿಳಿದಿದ್ದರೂ ಕೂಡ ಅನೇಕ ಜನರು ಹೊರಗೆ ತಿನ್ನಲು ಒಲವು ತೋರುತ್ತಾರೆ. ಆದರೆ ಮನೆಯಲ್ಲಿ ತಯಾರಿಸಿದ ಊಟ ತಿಂದರೆ ಅನವಶ್ಯಕ ಖರ್ಚು ಬರುವುದಿಲ್ಲ ಹಾಗೂ ಆರೋಗ್ಯ ಕೂಡ ಹಾಳಾಗುವುದದಿಲ್ಲ. ಮನೆಯ ಅಡುಗೆಯನ್ನ ತಿಂದರೆ ಅನಾರೋಗ್ಯಕರ ಅಥವಾ ಹೆಚ್ಚಿನ ಕ್ಯಾಲೋರಿ ಪದಾರ್ಥಗಳನ್ನು ಸೇವಿಸುವ ಸಾಧ್ಯತೆಗಳು ತುಂಬಾ ಕಡಿಮೆ.

4. ಸಕ್ರಿಯವಾಗಿರುವುದು

ವ್ಯಾಯಾಮವು ನಿಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ. ಖಿನ್ನತೆ, ಆತಂಕ, ಒತ್ತಡವನ್ನು ಕಡಿಮೆ ಮಾಡುತ್ತದೆ. ಜೊತೆಗೆ, ನಿಮ್ಮ ದೇಹವು ಕ್ರಿಯಾಶೀಲವಾಗಿರುವಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಇದಕ್ಕಾಗಿ ಜಿಮ್‌ಗಳಿಗೆ ಹೋಗುವ ಅಗತ್ಯವಿಲ್ಲ. ಯೋಗದಲ್ಲಿ ಸಕ್ರಿಯವಾಗಿರಬಹುದು, ಮನೆಕೆಲಸಗಳನ್ನು ಮಾಡುವುದು, ದೈನಂದಿನ ನಡಿಗೆಗಳು (ಸಾಕು ಪ್ರಾಣಿಗಳೊಂದಿಗೆ), ಮಕ್ಕಳೊಂದಿಗೆ ಆಟವಾಡುವುದು.ಮತ್ತು ಇತರ ಚಟುವಟಿಕೆಗಳನ್ನು ಮಾಡುತ್ತಿರಬೇಕು.

5. ಆರೋಗ್ಯಕರ ತೈಲಗಳು ..

ಇತ್ತೀಚಿನ ದಿನಗಳಲ್ಲಿ ಸೋಯಾಬೀನ್, ಹತ್ತಿಬೀಜ ಮತ್ತು ಸೂರ್ಯಕಾಂತಿ ಎಣ್ಣೆಗಳನ್ನು ಒಳಗೊಂಡಂತೆ ಹೆಚ್ಚು ಸಂಸ್ಕರಿಸಿದ ಬೀಜ ಮತ್ತು ಸಸ್ಯಜನ್ಯ ಎಣ್ಣೆಗಳು ಮನೆಯ ವಸ್ತುಗಳಾಗಿವೆ. ಈ ಎಣ್ಣೆಗಳಲ್ಲಿ ಒಮೆಗಾ-6 ಕೊಬ್ಬಿನಾಮ್ಲಗಳು ಅಧಿಕವಾಗಿದೆ. ಆದ್ದರಿಂದ ತಜ್ಞರು ಆರೋಗ್ಯಕರವಾಗಿರಲು ಪರ್ಯಾಯ ಎಣ್ಣೆಯನ್ನು ಆಯ್ಕೆ ಮಾಡಲು ಸಲಹೆ ನೀಡುತ್ತಾರೆ. ಪರ್ಯಾಯಗಳಲ್ಲಿ ಆಲಿವ್ ಎಣ್ಣೆ, ಆವಕಾಡೊ ಎಣ್ಣೆ ಅಥವಾ ತೆಂಗಿನ ಎಣ್ಣೆ ಸೇರಿವೆ. ಭಾರತೀಯ ತೈಲಗಳಲ್ಲಿ, ಎಳ್ಳೆಣ್ಣೆ, ಕಡಲೆ ಎಣ್ಣೆ ಮತ್ತು ಸಾಸಿವೆ ಎಣ್ಣೆಯನ್ನು ಉತ್ತಮ ಆರೋಗ್ಯಕ್ಕಾಗಿ ಸೂಚಿಸಲಾಗುತ್ತದೆ.

ಇವುಗಳ ಜೊತೆಗೆ ನಿಯಮಿತ ಆರೋಗ್ಯ ತಪಾಸಣೆ ಅಗತ್ಯ. ಇವುಗಳು ಆರೋಗ್ಯ ಸ್ಥಿತಿಗಳನ್ನು ಸಮಯೋಚಿತವಾಗಿ ಪತ್ತೆಹಚ್ಚಲು ಮತ್ತು ರೋಗನಿರ್ಣಯ ಮಾಡಲು ಸಹಾಯ ಮಾಡುತ್ತದೆ. ಒಬ್ಬ ವ್ಯಕ್ತಿಯು ಕೌಟುಂಬಿಕ ಹಿನ್ನೆಲೆಯ ಅನಾರೋಗ್ಯವನ್ನು ಹೊಂದಿದ್ದರೆ 25 ವರ್ಷಗಳ ನಂತರ ನಿಯಮಿತ ಸ್ಕ್ರೀನಿಂಗ್ ಮಾಡಬೇಕು. ಆನುವಂಶಿಕ, ದೈಹಿಕ, ಪರಿಸರ ಮತ್ತು ನಡವಳಿಕೆಯ ಅಂಶಗಳ ಸಂಯೋಜನೆಯಿಂದ ಉಂಟಾಗುವ ರೋಗಗಳು ಪ್ರಪಂಚದಾದ್ಯಂತ ಅನೇಕ ಜನರ ಮೇಲೆ ಪರಿಣಾಮ ಬೀರುತ್ತವೆ.

Whats_app_banner