Honeymoon Trip: ಚಳಿಗಾಲದಲ್ಲಿ ಮಧುಚಂದ್ರಕ್ಕೆ ಹೊರಡುವಿರಾ? ನಿಮ್ಮ ಪ್ರವಾಸಿ ಬ್ಯಾಗ್‌ನಲ್ಲಿ ಈ ಐಟಂಗಳನ್ನು ಪ್ಯಾಕ್‌ ಮಾಡಲು ಮರೆಯದಿರಿ
ಕನ್ನಡ ಸುದ್ದಿ  /  ಜೀವನಶೈಲಿ  /  Honeymoon Trip: ಚಳಿಗಾಲದಲ್ಲಿ ಮಧುಚಂದ್ರಕ್ಕೆ ಹೊರಡುವಿರಾ? ನಿಮ್ಮ ಪ್ರವಾಸಿ ಬ್ಯಾಗ್‌ನಲ್ಲಿ ಈ ಐಟಂಗಳನ್ನು ಪ್ಯಾಕ್‌ ಮಾಡಲು ಮರೆಯದಿರಿ

Honeymoon Trip: ಚಳಿಗಾಲದಲ್ಲಿ ಮಧುಚಂದ್ರಕ್ಕೆ ಹೊರಡುವಿರಾ? ನಿಮ್ಮ ಪ್ರವಾಸಿ ಬ್ಯಾಗ್‌ನಲ್ಲಿ ಈ ಐಟಂಗಳನ್ನು ಪ್ಯಾಕ್‌ ಮಾಡಲು ಮರೆಯದಿರಿ

Packing list for honeymoon trip: ಈ ಚಳಿಗಾಲದಲ್ಲಿ ಹೊಸದಾಗಿ ಮದುವೆಯಾದವರೂ, ಈಗಾಗಲೇ ಮದುವೆಯಾದವರು ಪ್ರವಾಸ ಹೊರಡುವ ಯೋಜನೆ ಮಾಡುತ್ತಿರಬಹುದು. ಈ ಸಮಯದಲ್ಲಿ ನೀವು ಏನೆಲ್ಲ ಪ್ಯಾಕ್‌ ಮಾಡಿಕೊಳ್ಳಬೇಕು ಎಂಬ ವಿವರ ಇಲ್ಲಿ ನೀಡಲಾಗಿದೆ.

ಹನಿಮೂನ್‌ ಪ್ಯಾಕಿಂಗ್‌ ಲಿಸ್ಟ್‌
ಹನಿಮೂನ್‌ ಪ್ಯಾಕಿಂಗ್‌ ಲಿಸ್ಟ್‌

Packing list for honeymoon trip: ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ಕಡೆ ಚಳಿ ಹೆಚ್ಚಾಗಿದೆ. ಇದೇ ಸಮಯದಲ್ಲಿ ಊಟಿ ಸೇರಿದಂತೆ ಕೆಲವು ಕಡೆ ಇನ್ನಷ್ಟು ಚಳಿ ಇರಲಿದೆ. ಚಳಿ ಚಳಿ ತಾಳೇನು ಈ ಚಳಿಯಾ ಎಂದು ಎಲ್ಲರೂ ಹೇಳುತ್ತಿರಬಹುದು. ಈ ಸಮಯದಲ್ಲಿ ಹೊಸದಾಗಿ ಮದುವೆಯಾದವರು ಮಧುಚಂದ್ರಕ್ಕೆ ಪ್ಲ್ಯಾನ್‌ ಮಾಡುತ್ತಿರಬಹುದು. ಈಗಾಗಲೇ ಮದುವೆಯಾದವರೂ ಇನ್ನೊಂದು ಸಾರಿ ಎಲ್ಲಾದರ ಹೋಗಿ ಬರೋಣ ಎಂದು ಪ್ರವಾಸಕ್ಕೆ ಯೋಜಿಸಿರಬಹುದು. ಈ ಚಳಿಗಾಲದಲ್ಲಿ ಹನಿಮೂನ್‌ಗೆ ಹೊರಡುವವರು ತಮ್ಮ ಬ್ಯಾಗ್‌ನಲ್ಲಿ ಏನೆಲ್ಲ ಪ್ಯಾಕ್‌ ಮಾಡಬೇಕು? ಯಾವುದನ್ನು ಪ್ಯಾಕ್‌ ಮಾಡಲು ಮರೆಯಾರದು ಎಂದು ತಿಳಿಯೋಣ. ಇವು ಐಡಿಯಲ್‌ ಲಿಸ್ಟ್‌ ಅಷ್ಟೇ, ಇನ್ನಷ್ಟು ವಸ್ತುಗಳು ಅಗತ್ಯವಿದ್ದರೆ, ನಿಮ್ಮ ಬ್ಯಾಗ್‌ನಲ್ಲಿ ಜಾಗವಿದ್ದರೆ ಹಾಕಿಕೊಳ್ಳಬಹುದು.

ಮಧುಚಂದ್ರ ಪ್ರವಾಸ: ಪ್ಯಾಕಿಂಗ್‌ ಪಟ್ಟಿ

ಕೆಲವರು ಪ್ರವಾಸಕ್ಕೆ ಹೋಗುವ ಸಮಯದಲ್ಲಿ ಅಗತ್ಯವಿರುವುದನ್ನು ಮಾತ್ರ ಪ್ಯಾಕ್‌ ಮಾಡಿಕೊಳ್ಳುತ್ತಾರೆ. ಇನ್ನು ಕೆಲವರು ಇರಲಿ ಎಂದು ಇರೋಬರೋದನ್ನೆಲ್ಲ ತುಂಬಿಸಿಕೊಳ್ಳುತ್ತಾರೆ. ಪ್ರವಾಸಕ್ಕೆ ಹೋದ ಬಳಿಕ ಅಗತ್ಯವಾದ ವಸ್ತುಗಳನ್ನೇ ತಂದಿರುವುದಿಲ್ಲ. ಹನಿಮೂನ್‌ಗೆ ಹೊರಡುವವರು (ಇತರರೂ ಈ ಪ್ಯಾಕಿಂಗ್‌ ಲಿಸ್ಟ್‌ ಗಮನಿಸಬಹುದು) ಪ್ಯಾಕ್‌ ಮಾಡಬೇಕಾದ ಐಟಂಗಳ ವಿವರ ಇಲ್ಲಿದೆ.

  • ಪ್ರವಾಸ ದಾಖಲೆಗಳು: ಚಾಲನಾ ಪರವಾನಿಗೆ, ಪಾಸ‌ಪೋರ್ಟ್‌ ಸೇರಿದಂತೆ ಅಗತ್ಯ ದಾಖಲೆಗಳ ಒಂದ ಪ್ರತಿ ಇರಲಿ
  • ಹಣ: ನಗದು, ಕ್ರೆಡಿಟ್‌ ಕಾರ್ಡ್‌ಗಳು, ಅಂತಾರಾಷ್ಟ್ರೀಯ ವ್ಯವಹಾರ ಮಾಡಲು ಸಾಧ್ಯವಿರುವ ಬ್ಯಾಂಕ್ ಖಾತೆ, ಕಾರ್ಡ್‌
  • ಎಲೆಕ್ಟ್ರಾನಿಕ್ಸ್‌: ಫೋನ್‌ಗಳು, ಚಾರ್ಜರ್‌ಗಳು, ಅಡಾಪ್ಟರ್‌ಗಳು
  • ಮನರಂಜನೆ: ಇ-ರೀಡರ್‌, ಹೆಡ್‌ಫೋನ್‌, ಇಯರ್‌ ಫೋ್‌
  • ಟಾಯ್ಲೆಟರೀಸ್‌: ಫೇಸ್‌ ವಾಸ್‌, ಟೂತ್‌ಬ್ರಷ್‌, ಟೂತ್‌ ಪೇಸ್ಟ್‌, ಸುಗಂಧ ದ್ರವ್ಯಗಳು
  • ಬಟ್ಟೆ: ಅಗತ್ಯ ಬಟ್ಟೆಗಳು, ಚಳಿ ಜಾಸ್ತಿಯಿದೆ, ಬೆಚ್ಚಗಿನ ಉಡುಗೆ ಇರಲಿ.
  • ಚಪ್ಪಲಿ, ಶೂಗಳು ಇರಲ. ಇದರೊಂದಿಗೆ ಟ್ರಾವೆಲ್‌ ದಿಂಬು, ಸ್ಲೀಪ್‌ ಮಾಸ್ಕ್‌, ಹ್ಯಾಂಡ್‌ ಸ್ಯಾನಿಟೈಜರ್‌, ಟಿಶ್ಯೂ, ಮರುಬಳಕೆ ಮಾಡಬಹುದಾದ ನೀರಿನ ಬಾಟಲ್‌ಗಳು.
  • ಏರ್‌ಲೈನ್ ಟಿಕೆಟ್‌ಗಳು ಅಥವಾ ಇ-ಟಿಕೆಟ್ ದೃಢೀಕರಣದ ಚೀಟಿ
  • ಹೋಟೆಲ್/ಥಿಯೇಟರ್ ಬುಕ್ಕಿಂಗ್‌ ಮಾಡಿರುವ ಕನ್ಫರ್ಮೆಷನ್‌ ಟಿಕೆಟ್‌
  • ನಿಮ್ಮ ವೈದ್ಯರು ಮತ್ತು ಕ್ರೆಡಿಟ್ ಕಾರ್ಡ್ ಕಂಪನಿಗಳ ಫೋನ್ ಸಂಖ್ಯೆಗಳು (ನಿಮ್ಮ ಕಾರ್ಡ್‌ಗಳು ಕಳೆದುಹೋದರೆ ಅಥವಾ ಕಳ್ಳತನವಾದರೆ)
  • ಅಗತ್ಯ ಔಷಧಗಳು
  • ಗರ್ಭನಿರೋಧಕ ವಸ್ತುಗಳು
  • ಟ್ರಾವೆಲ್ ಲಾಕ್‌ಗಳು (ಕೀ ಬದಲು ನಂಬರ್‌ ಲಾಕ್‌ ಉತ್ತಮ) ಮತ್ತು ಲಗೇಜ್‌ಗಾಗಿ ಐಡಿ ಟ್ಯಾಗ್‌ಗಳು
  • ಕ್ಯಾಮೆರಾ (ಈಗಿನ ಮೊಬೈಲ್‌ ಕಾಲದಲ್ಲಿ ಬೇರೆ ಕ್ಯಾಮೆರಾ ಬೇಡ ಅಂತೀರಾ? ಓಕೆ).
  • ಸನ್‌ಸ್ಕ್ರೀನ್ ಮತ್ತು ಲಿಪ್ ಬಾಮ್
  • ಸನ್‌ಗ್ಲಾಸ್‌, ಸನ್ ಹ್ಯಾಟ್ ಅಥವಾ ಬೇಸ್ ಬಾಲ್ ಕ್ಯಾಪ್
  • ಆಸ್ಪಿರಿನ್
  • ಆಂಟಾಸಿಡ್
  • ಆಂಟಿಹಿಸ್ಟಮೈನ್
  • ಲೂಸ್‌ ಮೋಷನ್‌ ಅಥವಾ ಹೊಟ್ಟೆ ಕೆಟ್ಟರೆ ತಿನ್ನಲು ಮಾತ್ರೆ ಇರಲಿ
  • ಟ್ಯಾಂಪೂನ್‌ಗಳು/ಪ್ಯಾಡ್‌ಗಳು

ಹೀಗೆ ಹನಿಮೂನ್‌ಗೆ ಹೊರಡುವಾಗ ಈ ಐಟಂಗಳು ಮತ್ತು ದಾಖಲೆಗಳು ನಿಮ್ಮಲ್ಲಿ ಇರಲಿ. ಪ್ರಮುಖ ದಾಖಲೆಗಳನ್ನು ಎರಡೆರಡು ಜೆರಾಕ್ಸ್‌ ಮಾಡಿ ತಗೆದುಕೊಂಡು ಹೋಗುವುದು ಉತ್ತಮ. ಸಂಬಂಧಿತ ವೈದ್ಯಕೀಯ ಮತ್ತು/ಅಥವಾ ಟ್ರಿಪ್ ಇನ್ಶೂರೆನ್ಸ್ ಕವರೇಜ್ ಮತ್ತು ಪ್ರಿಸ್ಕ್ರಿಪ್ಷನ್‌ಗಳ ಜೆರಾಕ್ಸ್‌. ಇಂತಹ ದಾಖಲೆಗಳ ಎರಡು ಸೆಟ್‌ ಇರಲಿ, ಒಂದನ್ನು ಹೋಟೆಲ್‌ನಲ್ಲಿಯೇ ಬಿಟ್ಟು ಹೋಗಿ. ಮತ್ತೊಂದನ್ನು ಸದಾ ನಿಮ್ಮ ಜತೆ ಇಟ್ಟುಕೊಳ್ಳಿ.

Whats_app_banner