Valentines Day: ವೈಟ್‌ಡೇಯಿಂದ ಸಾಮೂಹಿಕ ವಿವಾಹದವರೆಗೆ; ಪ್ರಪಂಚದಾದ್ಯಂತ ವ್ಯಾಲೆಂಟೈನ್ಸ್‌ ಡೇಯನ್ನು ಹೇಗೆಲ್ಲಾ ಆಚರಿಸ್ತಾರೆ ನೋಡಿ-valentines day 2024 from japans white day to philippines mass weddings xplore top traditions from around the world rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Valentines Day: ವೈಟ್‌ಡೇಯಿಂದ ಸಾಮೂಹಿಕ ವಿವಾಹದವರೆಗೆ; ಪ್ರಪಂಚದಾದ್ಯಂತ ವ್ಯಾಲೆಂಟೈನ್ಸ್‌ ಡೇಯನ್ನು ಹೇಗೆಲ್ಲಾ ಆಚರಿಸ್ತಾರೆ ನೋಡಿ

Valentines Day: ವೈಟ್‌ಡೇಯಿಂದ ಸಾಮೂಹಿಕ ವಿವಾಹದವರೆಗೆ; ಪ್ರಪಂಚದಾದ್ಯಂತ ವ್ಯಾಲೆಂಟೈನ್ಸ್‌ ಡೇಯನ್ನು ಹೇಗೆಲ್ಲಾ ಆಚರಿಸ್ತಾರೆ ನೋಡಿ

ಫಿನ್‌ಲ್ಯಾಂಡ್‌ನಲ್ಲಿ ಫ್ರೆಂಡ್‌ಶಿಪ್‌ ಡೇ ಆದ್ರೆ, ಫಿಲಿಪ್ಪೀನ್ಸ್‌ನಲ್ಲಿ ಸಾಮೂಹಿಕ ವಿವಾಹ, ಜರ್ಮನಿಯಲ್ಲಿ ಕೊಡ್ತಾರೆ ಹಂದಿ ಆಕಾರದ ಗಿಫ್ಟ್‌ ವ್ಯಾಲೆಂಟೈನ್ಸ್‌ ಡೇಯನ್ನು ಪ್ರಪಂಚದ ವಿವಿಧ ಭಾಗಗಳಲ್ಲಿ ಹೇಗೆಲ್ಲಾ ಆಚರಿಸುತ್ತಾರೆ ಅನ್ನೋದನ್ನು ತಿಳಿಯುವ ಕುತೂಹಲ ನಿಮಗಿದ್ರೆ ಈ ಸ್ಟೋರಿ ನೋಡಿ.

ಪ್ರಪಂಚದಾದ್ಯಂತ ವ್ಯಾಲೆಂಟೈನ್ಸ್‌ ಡೇಯನ್ನು ಹೇಗೆಲ್ಲಾ ಆಚರಿಸ್ತಾರೆ ನೋಡಿ
ಪ್ರಪಂಚದಾದ್ಯಂತ ವ್ಯಾಲೆಂಟೈನ್ಸ್‌ ಡೇಯನ್ನು ಹೇಗೆಲ್ಲಾ ಆಚರಿಸ್ತಾರೆ ನೋಡಿ

ವ್ಯಾಲೆಂಟೈನ್ಸ್‌ ಡೇ ಆಚರಣೆ ಇನ್ನೊಂದೇ ದಿನ ಬಾಕಿ. ಈಗಾಗಲೇ ರೋಸ್‌ ಡೇ, ಪ್ರಪೋಸ್‌ ಡೇ, ಹಗ್‌ ಡೇ ಎಲ್ಲವೂ ಮುಗಿದಿದೆ. ನಾಳೆ ಅಂದರೆ ಫೆ. 14 ಪ್ರೇಮಿಗಳ ದಿನ. ವರುಷಗಳು ಎಷ್ಟೇ ಕಳೆಯಲಿ ಈ ದಿನಕ್ಕಾಗಿ ಪ್ರೇಮಿಗಳು ಎದುರು ನೋಡುತ್ತಿರುತ್ತಾರೆ. ಪ್ರೇಮಲೋಕದಲ್ಲಿ ತೇಲಾಡುವವರಿಗೆ ಈ ದಿನ ಬಹಳ ವಿಶೇಷ. ಈ ದಿನದಂದು ತಮ್ಮ ಮನಸ್ಸಿಗೆ ಹತ್ತಿರವಾದ ವ್ಯಕ್ತಿಗೆ ವಿಶೇಷ ಉಡುಗೊರೆ ನೀಡುವ ಮೂಲಕ ಮನದಿಂಗಿತವನ್ನು ವ್ಯಕ್ತಪಡಿಸುತ್ತಾರೆ. ಪ್ರಪಂಚದಾದ್ಯಂತ ಫೆ. 14 ಪ್ರೇಮಿಗಳ ದಿನವಾದರೂ ಕೂಡ ಆಚರಣೆಯ ಕ್ರಮ ಮಾತ್ರ ದೇಶದಿಂದ ದೇಶಕ್ಕೆ ಭಿನ್ನವಾಗಿದೆ. ಯಾವ ಯಾವ ದೇಶದಲ್ಲಿ ಪ್ರೇಮಿಗಳ ದಿನವನ್ನು ಹೇಗೆ ಭಿನ್ನವಾಗಿ ಆಚರಿಸುತ್ತಾರೆ ಎನ್ನುವುದನ್ನು ಇಂದಿನ ಲೇಖನದಲ್ಲಿ ನೋಡೋಣ.

ಫಿನ್‌ಲ್ಯಾಂಡ್‌

ಫಿನ್‌ಲ್ಯಾಂಡ್‌ನಲ್ಲಿ ಪ್ರೇಮಿಗಳ ದಿನವನ್ನು ಸ್ನೇಹ ದಿನ ಎಂದು ಆಚರಿಸಲಾಗುತ್ತದೆ. ಈ ದಿನದಂದು ಫಿನ್‌ಲ್ಯಾಂಡ್‌ ಮಂದಿ ತಮ್ಮ ಸ್ನೇಹಿತರು ಹಾಗೂ ಪ್ರೀತಿ ಪಾತ್ರರಿಗೆ ಉಡುಗೊರೆ ನೀಡುವುದು ಹಾಗೂ ನೆನಪಿನಲ್ಲಿ ಉಳಿಯುವ ಕ್ಷಣಗಳನ್ನು ಸೃಷ್ಟಿಸುವ ಮೂಲಕ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾರೆ. ಈ ದೇಶದವರಿಗೆ ವ್ಯಾಲೆಂಟೈನ್ಸ್‌ ಡೇ ಎನ್ನುವುದು ಪ್ರೀತಿ, ಕಾಳಜಿ ಅತಿರಂಜಿತ ಪ್ರದರ್ಶನಗಳಿಗೆ ವಿರುದ್ಧವಾಗಿರುವುದಾಗಿದೆ.

ಸ್ಪೇನ್‌

ಸ್ಪೇನ್‌ನಲ್ಲಿ ಫೆ. 14 ರಂದು ಸ್ಯಾನ್‌ ವ್ಯಾಲೆಂಟೈನ್‌ ಅಥವಾ ಸೇಂಟ್‌ ವ್ಯಾಲೆಂಟೆನ್ಸ್‌ ಡೇ ಅನ್ನು ಆಚರಿಸಲಾಗುತ್ತದೆ. ಉಡುಗೊರೆ ನೀಡುವುದು, ರೊಮ್ಯಾಂಟಿಕ್‌ ಡಿನ್ನರ್‌ ಹಾಗೂ ಇತರ ಸಂಪ್ರದಾಯಗಳು ಅಮೆರಿಕನ್ನರಂತೆ ಇರುತ್ತವೆ. ವೆಲೆನ್ಸಿಯನ್ನರು ಮತ್ತು ಇತರ ಸ್ಪೇನ್‌ ದೇಶದವರು ಪ್ರೀತಿಯ ಪೋಷಕ ಸಂತ ಎಂದು ಪರಿಗಣಿಸಲ್ಪಟ್ಟ ಸೇಂಟ್‌ ಡಿಯೊನೈಸಸ್‌ ಅವರನ್ನು ಗೌರವಿಸುವ ಸಲುವಾಗಿ ಅಕ್ಟೋಬರ್‌ 9 ರಂದು ಪ್ರೇಮಿಗಳ ದಿನವನ್ನು ಆಚರಿಸುತ್ತಾರೆ. ಈ ದಿನದಂದು ಸ್ಪೇನ್‌ನ ಕೆಲವು ಭಾಗಗಳಲ್ಲಿ ಮೆರವಣಿಗೆ, ಜಾತ್ರೆಗಳು ಹಾಗೂ ಇತರ ಕಾರ್ಯಕ್ರಮಗಳು ನಡೆಯುತ್ತವೆ. ಈ ಆಚರಣೆಯನ್ನು ಮೊಕಾರೊ ಎಂದು ಕರೆಯಲಾಗುತ್ತದೆ.

ಜಪಾನ್‌

ಜಪಾನ್‌ನಲ್ಲಿ ಪ್ರೇಮಿಗಳ ದಿನದಂದು ಮಹಿಳೆಯರು ಹೆಚ್ಚು ಹಣ ಖರ್ಚು ಮಾಡಲು ಬಯಸುತ್ತಾರೆ. ಆ ದಿನ ದುಬಾರಿಯಾದ ಆಚರಣೆ ಹಾಗೂ ಚಾಕೊಲೇಟ್‌ಗಳನ್ನು ಖರೀದಿಸಿ ನೀಡುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಇಲ್ಲಿ ಪ್ರೇಮಿಗಳ ದಿನ ಎನ್ನುವುದು ಉಡುಗೊರೆ ನೀಡುವುದಕ್ಕೆ ಸೀಮಿತವಾಗಿಲ್ಲ. ಪ್ರೇಮಿಗಳ ದಿನದ ಒಂದು ತಿಂಗಳ ನಂತರ ಅಂದರೆ ಮಾರ್ಚ್‌ 14 ರಂದು ಜಪಾನ್‌ ವೈಟ್‌ ಡೇ ಎಂದು ಆಚರಿಸಲಾಗುತ್ತದೆ. ಈ ದಿನ ಮಹಿಳೆಯರಿಂದ ಉಡುಗೊರೆ ಸ್ವೀಕರಿಸಿದ ಪುರುಷರು ತಾವು ಮರಳಿ ಉಡುಗೊರೆಗಳನ್ನು ನೀಡುತ್ತಾರೆ. ವೈಟ್‌ ಡೇ ದಿನ ಒಳ ಉಡುಪುಗಳಿಂದ ಹಿಡಿದು ಸ್ವೀಟ್ಸ್‌ಗಳು, ಆಭರಣಗಳು ಹಾಗೂ ಚಾಕೊಲೇಟ್‌ಗಳನ್ನು ಉಡುಗೊರೆಯಾಗಿ ನೀಡಲಾಗುತ್ತದೆ.

ಡೆನ್ಮಾರ್ಕ್‌

ಡೆನಾರ್ಕ್‌ ಹಾಗೂ ನಾರ್ವೆಯಲ್ಲಿ ವ್ಯಾಲೆಂಟೈನ್ಸ್‌ ಡೇ ಆಚರಣೆಗಳು ಕೇವಲ ಪ್ರೇಮಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಭಾವನಾತ್ಮಕ ಹಾಗೂ ಹಾಸ್ಯಾತ್ಮಕ ಬರಹಗಳಿರುವ ಲವರ್ಸ್‌ ಕಾರ್ಡ್‌ಗಳನ್ನು ಸ್ನೇಹಿತರು ಹಾಗೂ ಸಂಬಂಧಿಕರಿಗೆ ನೀಡಲಾಗುತ್ತದೆ. ಕೆಲವರು "ಗೇಕೆಬ್ರೆವ್" ಎಂದು ಕರೆಯಲ್ಪಡುವ ಅನಾಮಧೇಯ ಹಾಸ್ಯಭರಿತ ಪತ್ರವನ್ನು ಸಹ ಬರೆಯುತ್ತಾರೆ. ಇದನ್ನು ಈಸ್ಟರ್‌ ಎಗ್‌ ಎಂದೂ ಕರೆಯುತ್ತಾರೆ. ಇದನ್ನು ಯಾರು ಕಳುಹಿಸಿದ್ದಾರೆ ಎಂದು ಸರಿಯಾಗಿ ಊಹಿಸಿದವರು ಈಸ್ಟರ್‌ ಎಗ್‌ಗೆ ಅರ್ಹರಾಗಿರುತ್ತಾರೆ ಎಂಬ ನಂಬಿಕೆಯೂ ಇದೆ.

ಇಂಗ್ಲೆಡ್‌

ಇಂಗ್ಲೆಡ್‌ನಲ್ಲಿ ಪ್ರೇಮಿಗಳ ದಿನವನ್ನು ಹಲವು ವಿಧಗಳನ್ನು ಆಚರಿಸುತ್ತಾರೆ. ಆದರೆ ಪುಟಾಣಿ ಮಕ್ಕಳ ಬಾಯಿಂದ ಹಾಡು ಕೇಳುವುದು ಇಲ್ಲಿನ ವಿಶೇಷ. ಪುಟ್ಟ ಗಾಯಕರಿಗೆ ಸಿಹಿತಿಂಡಿ, ಹಣ್ಣು ಹಾಗೂ ಹಣವನ್ನು ಉಡುಗೊರೆಯಾಗಿ ನೀಡಲಾಗುತ್ತದೆ. ಕೆಲವು ಕಡೆ ವ್ಯಾಲೆಂಟೈನ್‌ ಬನ್‌ಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಇದನ್ನು ಪ್ಲಮ್‌ ಶಟಲ್ಸ್‌ ಎಂದು ಕರೆಯಲಾಗುತ್ತದೆ.

ಫಿಲಿಪ್ಪೀನ್ಸ್‌

ಫಿಲಿಪ್ಪೀನ್ಸ್‌ನಲ್ಲಿ ವ್ಯಾಲೆಂಟೈನ್ಸ್‌ ಡೇ ಆಚರಣೆಯು ಭಿನ್ನವಾಗಿದೆ. ಈ ದಿನದಂದು ಇಲ್ಲಿ ಸಾಮೂಹಿಕ ವಿವಾಹ ನಡೆಯುವುದು ವಿಶೇಷ. ಸಾವಿರಾರು ಜೋಡಿಗಳು ಸಾಮೂಹಿಕ ವಿವಾಹದಲ್ಲಿ ಭಾಗವಹಿಸುತ್ತಾರೆ.

ಜರ್ಮನಿ

ಜರ್ಮನಿಯಲ್ಲಿ ವ್ಯಾಲೆಂಟೈನ್ಸ್‌ ಡೇಯಂದು ಹಂದಿ ಆಕಾರದ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುವುದು ವಿಶೇಷ. ಹಂದಿಯು ಕಾಮ ಹಾಗೂ ಪ್ರೇಮ ಎರಡನ್ನೂ ಪ್ರತಿನಿಧಿಸುತ್ತದೆ ಎಂದು ಹೇಳಲಾಗುತ್ತದೆ. ಆ ಕಾರಣಕ್ಕೆ ಇಲ್ಲಿ ಹಂದಿಗಳ ಆಕಾರವಿರುವ ಗಿಫ್ಟ್‌ಗಳನ್ನೇ ನೀಡುತ್ತಾರೆ. ಚಾಕೊಲೇಟ್‌ ಹೂಗಳ ಜೊತೆಗೆ ಶುಂಠಿ ಬಿಸ್ಕತ್ತುಗಳನ್ನು ಕೂಡ ಹಂಚಿಕೊಳ್ಳಲಾಗುತ್ತದೆ.

ಮೆಕ್ಸಿಕೊ

ಮೆಕ್ಸಿಕೊದಲ್ಲಿ ಪ್ರೇಮಿಗಳ ದಿನವನ್ನು ಆಚರಿಸಲು ಪ್ರೇಮಿಗಳೇ ಆಗಿರಬೇಕು ಎಂದೇನಿಲ್ಲ. ಇಲ್ಲಿ ಈ ದಿನವನ್ನು ಎ ಡೇ ಆಫ್‌ ಲವ್‌ ಅಂಡ್‌ ಫ್ರೆಂಡ್‌ಶಿಪ್‌ ಎಂದು ಆಚರಿಸಲಾಗುತ್ತದೆ.

ಸೌತ್‌ ಆಫ್ರಿಕಾ

ದಕ್ಷಿಣ ಆಫ್ರಿಕಾದಲ್ಲಿ ಫೆ. 15 ರಂದು ರೋಮನ್‌ ಹಬ್ಬವಾದ ಲುಪರ್ಕಾಲಿಯಾವನ್ನು ಆಚರಿಸುವ ಜೊತೆಯಾಗಿ ಪ್ರೇಮಿಗಳ ದಿನವನ್ನೂ ಆಚರಿಸುತ್ತಾರೆ. ಈ ದಿನದಂದು ತಮ್ಮ ಪ್ರೀತಿಯ ಬಗ್ಗೆ ಮುಕ್ತವಾಗಿ ಹೇಳಿಕೊಳ್ಳುತ್ತಾರೆ. ಅಲ್ಲದೇ ಮಹಿಳೆಯರು ತಮ್ಮ ಸ್ಲೀವ್‌ ಮೇಲೆ ಹೃದಯಾಕಾರಣದ ಟ್ಯಾಟೂ ಹಾಕಿಸಿಕೊಂಡಿರುತ್ತಾರೆ. ಕೆಲವರು ತಾವು ಪ್ರೀತಿಸುತ್ತಿರುವ ವ್ಯಕ್ತಿಯ ಹೆಸರನ್ನು ಬರೆದು ಅದನ್ನು ತಮ್ಮ ತೋಳಿಗೆ ಅಂಟಿಕೊಂಡಿರುತ್ತಾರೆ.

ದಕ್ಷಿಣ ಕೊರಿಯಾ

ದಕ್ಷಿಣ ಕೊರಿಯಾದಲ್ಲೂ ಜಪಾನ್‌ನಂತೆ ಹೆಣ್ಣುಮಕ್ಕಳು ಗಂಡುಮಕ್ಕಳಿಗೆ ಉಡುಗೊರೆಗಳನ್ನು ನೀಡುತ್ತಾರೆ. ಒಂದು ತಿಂಗಳ ನಂತರ ಬರುವ ವೈಟ್‌ ಡೇಯಂದು ಪುರುಷರು ಚಾಕೊಲೇಟ್‌ ಅನ್ನು ಉಡುಗೊರೆಯಾಗಿ ನೀಡುತ್ತಾರೆ. ಏಪ್ರಿಲ್‌ 14 ರಂದು ಇಲ್ಲಿ ಸಿಂಗಲ್ಸ್‌ ಡೇ ಕೂಡ ಆಚರಣೆ ಇದೆ. ಇದನ್ನು ಬ್ಲ್ಯಾಕ್‌ ಡೇ ಎಂದು ಕರೆಯಲಾಗುತ್ತದೆ. 

(This copy first appeared in Hindustan Times Kannada website. To read more like this please logon to kannada.hindustantime.com )