Brain Teaser: ಗಣಿತದಲ್ಲಿ ನೀವು ಪಂಟರಾದ್ರೆ ಇಲ್ನೋಡಿ, ಈ ಪಜಲ್ಗೆ ಉತ್ತರವೇನು ಹೇಳಿ; ನಿಮ್ಮ ಜಾಣ್ಮೆಗೊಂದು ಸವಾಲ್
ಸಾಮಾಜಿಕ ಜಾಲತಾಣದಲ್ಲಿ ಕಳೆದು, ಕೂಡಿಸಿ, ಭಾಗಿಸುವ ಲೆಕ್ಕಾಚಾರದ ಪಜಲ್ ಒಂದು ವೈರಲ್ ಆಗಿದೆ. ಇದಕ್ಕೆ ಗಣಿತ ಎಕ್ಸ್ಪರ್ಟ್ಗಳಿಂದ ಮಾತ್ರ ಉತ್ತರ ಕಂಡುಹಿಡಿಯಲು ಸಾಧ್ಯ. ನೀವು ಗಣಿತದಲ್ಲಿ ಟಾಪರ್ ಆದ್ರೆ ಪ್ರಯತ್ನಿಸಿ. ಆದರೆ ನಿಮಗಿರೋದು 15 ಸೆಕೆಂಡ್ ಸಮಯ ಮಾತ್ರ.
ಬ್ರೈನ್ ಟೀಸರ್ಗಳು ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ. ಇವು ನಮ್ಮ ಮೆದುಳಿಗೆ ಸಾಕಷ್ಟು ಕೆಲಸ ಕೊಡುವ ಜೊತೆಗೆ ನಮ್ಮ ಬುದ್ಧಿವಂತಿಕೆಯನ್ನೂ ಪರೀಕ್ಷೆ ಮಾಡುತ್ತವೆ. ಅದರಲ್ಲೂ ಗಣಿತ ಎಕ್ಸ್ಪರ್ಟ್ಗಳಿಗೆ ಬ್ರೈನ್ ಟೀಸರ್ಗಳು ಸಖತ್ ಇಷ್ಟವಾಗೋದು ಸುಳ್ಳಲ್ಲ, ಯಾಕೆಂದರೆ ಇದರಲ್ಲಿ ಇರುವ ಪ್ರಶ್ನೆಗಳು ಬಹುತೇಕ ಗಣಿತಕ್ಕೆ ಸಂಬಂಧಿಸಿದ್ದು ಆಗಿರುತ್ತವೆ.
ಗಣಿತದ ಪಜಲ್ ಇರುವ ಬ್ರೈನ್ ಟೀಸರ್ಗಳ ಪ್ರಶ್ನೆ ಮೇಲ್ನೋಟಕ್ಕೆ ಸುಲಭವಾಗಿ ಕಂಡರೂ ಇದಕ್ಕೆ ಉತ್ತರ ಕಂಡುಕೊಳ್ಳುವುದು ನಿಜಕ್ಕೂ ಸುಲಭವಲ್ಲ. ಯಾಕೆಂದರೆ ಇದು ಟ್ರಿಕ್ಕಿಯಾಗಿರುತ್ತದೆ. ಇಂದಿನ ಬ್ರೈನ್ ಟೀಸರ್ನಲ್ಲಿ ಇರುವುದು ಕಳೆದು, ಕೂಡಿಸಿ, ಭಾಗಿಸುವ ಲೆಕ್ಕಾಚಾರ. ಇದಕ್ಕೆ ನೀವು 15 ಸೆಕೆಂಡ್ನಲ್ಲಿ ಉತ್ತರ ಹೇಳಬೇಕು. ಭಾನುವಾರದ ಬೇಸರ ಕಳೆಯಲು ನಿಮಗೆ ಇದಕ್ಕಿಂತ ಉತ್ತಮ ಆಯ್ಕೆ ಇನ್ನೊಂದಿಲ್ಲ.
Maths with Zia ಎಂಬ ಎಕ್ಸ್ ಪುಟ ನಿರ್ವಹಿಸುವವರು ಈ ಬ್ರೈನ್ ಟೀಸರ್ ಅನ್ನು ಪೋಸ್ಟ್ ಮಾಡಿದ್ದಾರೆ. ಈ ಬ್ರೈನ್ ಟೀಸರ್ ಪಜಲ್ನಲ್ಲಿರುವ ಪ್ರಶ್ನೆ ಹೀಗಿದೆ. R-M=5, R+M= 15 ಆದ್ರೆ R/M= ಎಷ್ಟು? ಈ ಪ್ರಶ್ನೆಗೆ ನೀವು ಉತ್ತರ ಕಂಡುಹಿಡಿಯಬೇಕು. R/M= ಎಷ್ಟು ಎಂಬುದು ಕಂಡುಹಿಡಿಯಲು ಸುಲಭವಾಗಿ ಸಾಧ್ಯವಿಲ್ಲ. ಆದರೆ ಇದಕ್ಕೆ ನೀವು ಸಾಕಷ್ಟು ಬುದ್ಧಿ ಉಪಯೋಗಿಸಬೇಕಾಗುತ್ತದೆ.
ಈ ಬ್ರೈನ್ ಟೀಸರ್ಗೆ ಹಲವರು ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಅವರು ಕಾಮೆಂಟ್ ಮಾಡುವ ಮೂಲಕ ತಾವು ಕಂಡುಕೊಂಡ ಉತ್ತರವನ್ನು ತಿಳಿಸಿದ್ದಾರೆ.
ಬ್ರೈನ್ ಟೀಸರ್ಗೆ ಬಂದ ಕಾಮೆಂಟ್ಗಳು ಹೀಗಿವೆ
‘ಈ ರೀತಿಯ ಸವಾಲುಗಳನ್ನು ನಾನು ಪ್ರೀತಿಸುತ್ತೇನೆ. ಇದಕ್ಕೆ ಉತ್ತರ ಕಂಡುಹಿಡಿಯಲು ನನಗೆ ಒಂದು ನಿಮಿಷ ಸಮಯ ಬೇಕಾಯಿತು. ಆದರೆ ನಾನು ಅದನ್ನು ಕಂಡುಕೊಂಡೆ‘ ಎಂದು ಎಕ್ಸ್ ಬಳಕೆದಾರರೊಬ್ಬರು ಖುಷಿಯಿಂದ ಬರೆದುಕೊಂಡಿದ್ದಾರೆ. ‘ಇದು ನಿಜಕ್ಕೂ ಟ್ರಿಕ್ಕಿಯಾಗಿದೆ. ಇದಕ್ಕೆ ಉತ್ತರ ಕಂಡುಹಿಡಿಯುವುದು ನನಗೆ ಕಷ್ಟವಾಯಿತು‘ ಎಂದು ಇನ್ನೊಬ್ಬರು ಹೇಳಿದ್ದಾರೆ. ‘ನಾನು ಒಂದು ಉತ್ತರವನ್ನು ಕಂಡುಕೊಂಡಿದ್ದೇನೆ. ಆದರೆ ನಾನು ಕಂಡುಕೊಂಡ ಉತ್ತರ ಸರಿಯೊ ತಪ್ಪೋ ಎಂಬುದು ನನಗೆ ತಿಳಿಯುತ್ತಿಲ್ಲ, ನೋಡೋಣ, ಬೇರೆಯವರ ಉತ್ತರ ಹೇಗಿದೆ ಎಂದು ತಿಳಿಯೋಣ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
ಅವರೆಲ್ಲರ ಉತ್ತರ, ಕಾಮೆಂಟ್ಗಳನ್ನು ಬಿಡಿ. ನಿಮಗೆ ಯಾವ ಉತ್ತರ ಸಿಕ್ಕಿತು ಕಾಮೆಂಟ್ ಮಾಡಿ, ನಿಮ್ಮ ಬುದ್ಧಿವಂತಿಕೆ ಹೇಗಿದೆ ತಿಳಿಯೋಣ.
ಈ ಬ್ರೈನ್ ಟೀಸರ್ ಅನ್ನೂ ಓದಿ
Brain Teaser: ಒಂದೇ ರೀತಿ ಕಾಣುವ ಈ ಚಿತ್ರಗಳಲ್ಲಿ 3 ವ್ಯತ್ಯಾಸಗಳಿವೆ; ಅದೇನು ಎಂದು 13 ಸೆಕೆಂಡ್ಗಳಲ್ಲಿ ಕಂಡುಹಿಡಿಯಿರಿ, ನಿಮಗಿದು ಚಾಲೆಂಜ್
ಇಲ್ಲಿ ಎರಡು ಒಂದೇ ರೀತಿಯ ಚಿತ್ರಗಳಿವೆ. ಇದರಲ್ಲಿ ಹುಡುಗಿಯೊಬ್ಬಳು ಕೇಕ್ ಮಾಡುತ್ತಿರುವುದು ಕಾಣಬಹುದು. ಆದರೆ ಈ ಎರಡು ಚಿತ್ರಗಳಲ್ಲಿ 3 ವ್ಯತ್ಯಾಸಗಳಿವೆ. ಅದೇನು ಎಂದು 13 ಸೆಕೆಂಡ್ನಲ್ಲಿ ಕಂಡುಹಿಡಿಯಬೇಕು. ನಿಮ್ಮ ಮೆದುಳು, ಕಣ್ಣು ಶಾರ್ಪ್ ಇದ್ರೆ ಈ ಚಾಲೆಂಜ್ ಸ್ವೀಕರಿಸಿ, ಈ ಬ್ರೈನ್ ಟೀಸರ್ಗೆ ಉತ್ತರ ಕಂಡುಹಿಡಿಯಲು ಸಾಧ್ಯವೇ ಪ್ರಯತ್ನಿಸಿ.