Personality Test: ನಗುವ ಮುಖ, ಹುಣ್ಣಿಮೆ ಚಂದ್ರ ಚಿತ್ರ ಕಂಡಾಕ್ಷಣ ನಿಮಗೆ ಮೊದಲು ಕಂಡಿದ್ದೇನು? ನಿಮ್ಮ ಗುಣ ಸ್ವಭಾವ ತಿಳಿಸುವ ಚಿತ್ರವಿದು
ನಮ್ಮ ಬಗ್ಗೆ ನಮಗೆ ತಿಳಿದಿರದ ನಮ್ಮ ವ್ಯಕ್ತಿತ್ವವನ್ನು ನಮಗೆ ಪರಿಚಯ ಮಾಡಿಸುವ ವೇದಿಕೆ ಆಪ್ಟಿಕಲ್ ಇಲ್ಯೂಷನ್ ಪರ್ಸನಾಲಿಟಿ ಟೆಸ್ಟ್, ಇಂದಿನ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ನಿಮ್ಮ ಕಣ್ಣಿಗೆ ಮೊದಲು ಚಂದ್ರ ಕಾಣಿಸಿದ್ದಾ ಅಥವಾ ನಗುವ ಮುಖ ಕಾಣಿಸಿದ್ದಾ ಹೇಳಿ, ಇದರಿಂದ ಪ್ರೀತಿ ವಿಚಾರದಲ್ಲಿ ನಿಮ್ಮ ಸ್ವಭಾವ ಹೇಗೆ ತಿಳಿಯಬಹುದು.
ನಾವು ಹೇಗೆ ಎಂದು ಕೆಲವೊಮ್ಮೆ ನಮಗೂ ನಮ್ಮನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತದೆ. ಎಷ್ಟೋ ಬಾರಿ ನಾವ್ಯಾಕೆ ಹೀಗೆ ಮಾಡಿದೆ ನನ್ನ ಸ್ವಭಾವ ಇದಲ್ಲವಲ್ಲ ಎಂಬು ನಿಮಗೆ ಅನ್ನಿಸಿಯೂ ಇರಬಹುದು. ಇದಕ್ಕೆಲ್ಲಾ ಕಾರಣ ನಮ್ಮಲ್ಲಿ ಅಡಗಿರುವ ಗುಪ್ತ ವ್ಯಕ್ತಿತ್ವ. ನಮ್ಮಲ್ಲಿರುವ ಗುಪ್ತ ವ್ಯಕ್ತಿತ್ವ ನಮಗೆ ನಮ್ಮ ಬಗ್ಗೆ ಗೊಂದಲ ಮೂಡಿಸುವಂತೆ ಮಾಡಬಹುದು. ಆದರೆ ನಮಗೆ ಅರಿವಿಲ್ಲದ ನಮ್ಮ ಸ್ವಭಾವದ ಬಗ್ಗೆ ತಿಳಿಯಲು ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಸಹಾಯ ಮಾಡುತ್ತವೆ.
ಆಪ್ಟಿಕಲ್ ಇಲ್ಯೂಷನ್ ಪರ್ಸನಾಲಿಟಿ ಟೆಸ್ಟ್‌ಗಳು ನಿಮಗೆ ಮೋಜು ನೀಡಿದ್ರು, ತಮಾಷೆ ಅನ್ನಿಸಿದ್ರೂ ಮನಃಶಾಸ್ತ್ರದ ಪ್ರಕಾರ ಇವುಗಳಿಗೆ ಮಹತ್ವವಿದೆ. ನಮ್ಮ ಮೆದುಳು ಗ್ರಹಿಸುವುದು ನಮ್ಮ ವ್ಯಕ್ತಿತ್ವವಾಗಿರುತ್ತದೆ ಎಂದು ಮನೋಶಾಸ್ತ್ರ ಕೂಡ ಒಪ್ಪಿಕೊಳ್ಳುತ್ತದೆ.
ನಮ್ಮ ಮೆದುಳು ಮೊದಲು ಏನನ್ನು ಗ್ರಹಿಸುತ್ತದೆ ಎಂಬುದರ ಆಧಾರದ ಮೇಲೆ ನಮ್ಮ ಮೆದುಳಿಗೆ ಜಾಗ ಭಾಗ ಅಂದರೆ ಎಡ ಭಾಗ ಅಥವಾ ಬಲ ಭಾಗ ಯಾವ ಭಾಗ ಹೆಚ್ಚು ಕ್ರಿಯಾಶೀಲವಾಗಿದೆ ಎಂಬುದನ್ನ ಕೂಡ ತಿಳಿದುಕೊಳ್ಳಬಹುದು.
ಇಂದಿನ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಹುಣ್ಣಿಮೆ ಚಂದ್ರ ಹಾಗೂ ನಗುವ ಮನುಷ್ಯನ ಮುಖ ಈ ಎರಡು ಅಂಶಗಳಿವೆ. ಇದರಲ್ಲಿ ನಿಮ್ಮ ಕಣ್ಣಿಗೆ ಮೊದಲು ಕಂಡಿದ್ದೇನು? ಅದು ನಿಮ್ಮ ವ್ಯಕ್ತಿತ್ವದ ಸೂಚಕವಾಗಿರುತ್ತದೆ.
ನಗುವ ಮುಖ
ಚಿತ್ರದಲ್ಲಿ ನಿಮಗೆ ನಗುವ ಮುಖ ಮೊದಲು ಕಾಣಿಸಿದರೆ ನಿಮ್ಮ ಪ್ರೀತಿಪಾತ್ರರು ನಿಮ್ಮನ್ನು ತುಂಬಾ ಸಹಾನುಭೂತಿಯ ವ್ಯಕ್ತಿ ಪರಿಗಣಿಸುತ್ತಾರೆ. ನೀವು ತುಂಬಾ ಕರುಣಾಮಯಿ. ಜನರು ಯಾವಾಗಲೂ ನಿಮ್ಮ ಬಗ್ಗೆ ಉತ್ತಮ ಭಾವನೆ ಹೊಂದಿರುತ್ತಾರೆ. ನೀವು ಯಾವಾಗಲೂ ಇತರರ ಬಗ್ಗೆ ಉತ್ತಮವಾದದ್ದನ್ನೇ ಯೋಚಿಸಲು ಪ್ರಯತ್ನಿಸುತ್ತೀರಿ ಮತ್ತು ಎಲ್ಲರನ್ನೂ ಕ್ಷಮಿಸುವ ಗುಣ ನಿಮ್ಮದು. ಆದರೆ ಸಂಬಂಧಗಳ ವಿಚಾರದಲ್ಲಿ ನೀವು ಸದಾ ಭಯ ಹೊಂದಿರುತ್ತೀರಿ. ಕೆಲವೊಮ್ಮೆ ಮಾಡದ ತಪ್ಪಿಗೆ ನೀವು ಗುರಿಯಾಗುತ್ತೀರಿ. ಯಾರು ನಿಮ್ಮ ಪಾಲಿಗೆ ಒಳ್ಳೆಯವರು ಎಂಬುದನ್ನು ತಿಳಿದುಕೊಳ್ಳುವುದು ನಿಮಗೆ ದೊಡ್ಡ ಸವಾಲಾಗುತ್ತದೆ.
ಚಂದ್ರ
ಚಿತ್ರದಲ್ಲಿ ನಿಮ್ಮ ಮೆದುಳು ಮೊದಲು ಚಂದ್ರನನ್ನು ಗ್ರಹಿಸಿದರೆ ಸಂಬಂಧಗಳ ವಿಚಾರಕ್ಕೆ ಬಂದಾಗ ನೀವು ತುಂಬಾ ಭಾವೋದ್ರಿಕ್ತ ಮತ್ತು ರೊಮ್ಯಾಂಟಿಕ್ ಆಗಿರುತ್ತೀರಿ. ಪ್ರೀತಿಪಾತ್ರರು ದೂರಾಗುತ್ತಾರೆ ಎಂಬ ಭಾವನೆ ನಿಮ್ಮಲ್ಲಿ ಇಲ್ಲಸಲ್ಲದನ್ನೆಲ್ಲಾ ಮಾಡಿಸಬಹುದು. ಪ್ರೀತಿಯ ವಿಚಾರದಲ್ಲಿ ನಿಮಗೆ ಸದಾ ಹತಾಶೆಯೇ ಇರುತ್ತದೆ. ನೀವು ಆಳವಾಗಿ ಭಾವನೆಗಳಲ್ಲಿ ಮುಳುಗುತ್ತೀರಿ. ನೀವು ಒಬ್ಬರನ್ನು ಇಷ್ಟಪಟ್ಟರೆ ಅವರನ್ನು ಪ್ರಾಣಕ್ಕಿಂತಲೂ ಹೆಚ್ಚು ಪ್ರೀತಿಸುತ್ತೀರಿ. ಆದರೆ ನೀವು ಸುಲಭವಾಗಿ ಯಾರನ್ನೂ ನಂಬುವುದಿಲ್ಲ. ಆ ಕಾರಣಕ್ಕೆ ಮುಕ್ತವಾಗಿರಲು ನಿಮಗೆ ಕಷ್ಟವಾಗುತ್ತದೆ. ನೀವು ತುಂಬಾ ಭಾವೋದ್ರಿಕ್ತರಾಗಿರುವುದರಿಂದ ಭಾವನಾತ್ಮಕವಾಗಿ ಪ್ರತಿದಿನ ಸಾಕಷ್ಟು ಏರುಪೇರುಗಳನ್ನು ಅನುಭವಿಸುತ್ತೀರಿ. ನೀವು ಖುಷಿಯಲ್ಲಿದ್ದಾಗ ನಿಮ್ಮನ್ನ ಹಿಡಿಯುವವರೇ ಇರುವುದಿಲ್ಲ. ಇನ್ನು ನೀವು ದುಃಖದಲ್ಲಿ ಮುಳುಗಿದರೇ ಪ್ರಪಂಚವೇ ಮುಳುಗಿದಂತೆ ಇರುತ್ತೀರಿ.