Weight loss tips: ತೂಕ ಇಳಿಕೆಗೆ ಪಡಿಪಾಟಲು ಪಡುತ್ತಿದ್ದೀರಾ: ಈ ಐದು ಬೀಜಗಳನ್ನು ರಾತ್ರಿಯಿಡೀ ನೆನೆಸಿ ಸೇವಿಸಿ-weight loss tips 5 foods to eat to lose weight soak seeds overnight before eating prk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Weight Loss Tips: ತೂಕ ಇಳಿಕೆಗೆ ಪಡಿಪಾಟಲು ಪಡುತ್ತಿದ್ದೀರಾ: ಈ ಐದು ಬೀಜಗಳನ್ನು ರಾತ್ರಿಯಿಡೀ ನೆನೆಸಿ ಸೇವಿಸಿ

Weight loss tips: ತೂಕ ಇಳಿಕೆಗೆ ಪಡಿಪಾಟಲು ಪಡುತ್ತಿದ್ದೀರಾ: ಈ ಐದು ಬೀಜಗಳನ್ನು ರಾತ್ರಿಯಿಡೀ ನೆನೆಸಿ ಸೇವಿಸಿ

ತೂಕ ನಷ್ಟಕ್ಕೆ ಪ್ರಯತ್ನಿಸುತ್ತಿರುವವರು ಇಲ್ಲಿ ತಿಳಿಸಲಾಗಿರುವ ಬೀಜಗಳನ್ನು ಸೇವಿಸುವುದರಿಂದ ಪ್ರಯೋಜನಗಳನ್ನು ಪಡೆಯಬಹುದು. ಇವುಗಳನ್ನು ಹಾಗೆಯೇ ಸೇವಿಸುವ ಬದಲುರಾತ್ರಿಯಿಡೀ ನೆನೆಸಿ ಸೇವಿಸುವುದು ಉತ್ತಮ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

ತೂಕ ನಷ್ಟಕ್ಕೆ ಪ್ರಯತ್ನಿಸುತ್ತಿರುವವರು ಈ ಬೀಜಗಳನ್ನು ಸೇವಿಸುವುದರಿಂದ ಪ್ರಯೋಜನಗಳನ್ನು ಪಡೆಯಬಹುದು.
ತೂಕ ನಷ್ಟಕ್ಕೆ ಪ್ರಯತ್ನಿಸುತ್ತಿರುವವರು ಈ ಬೀಜಗಳನ್ನು ಸೇವಿಸುವುದರಿಂದ ಪ್ರಯೋಜನಗಳನ್ನು ಪಡೆಯಬಹುದು.

ತೂಕ ಇಳಿಸಲು ಪಡಿಪಾಟಲು ಪಡುತ್ತಿದ್ದೀರಾ? ವ್ಯಾಯಾಮ ಅಥವಾ ಡಯೆಟ್ ಮಾಡುತ್ತಿದ್ರೂ ತೂಕದಲ್ಲಿ ಯಾವುದೇ ಬದಲಾವಣೆ ಆಗುತ್ತಿಲ್ಲ ಎಂದು ಬೇಸರದಲ್ಲಿದ್ದೀರಾ. ಹಾಗಿದ್ದರೆ ಇಲ್ಲಿ ತಿಳಿಸಲಾಗಿರುವ ಬೀಜಗಳನ್ನು ಸೇವಿಸಬಹುದು. ಇದರಿಂದ ದೇಹಕ್ಕೆ ಬೇಕಾದ ಅಗತ್ಯ ಪೌಷ್ಟಿಕಾಂಶವು ದೊರೆಯುತ್ತದೆ. ಜೊತೆಗೆ ತೂಕ ಇಳಿಕೆಗೂ ಸಹಕಾರಿಯಾಗಲಿದೆ. ಹಾಗಂತ ಈ ಬೀಜಗಳನ್ನು ಹಾಗೆಯೇ ಸೇವಿಸುವದು ಉತ್ತಮವಲ್ಲ. ರಾತ್ರಿ ಪೂರ್ತಿ ನೀರಿನಲ್ಲಿ ನೆನೆಸಿಟ್ಟು ಈ ಆಹಾರಗಳನ್ನು ಸೇವಿಸುವುದು ಉತ್ತಮ. ಇದು ಪೌಷ್ಟಿಕಾಂಶ ಮತ್ತು ಒಟ್ಟಾರೆ ಪರಿಣಾಮಕಾರಿತ್ವವನ್ನು ಹೆಚ್ಚಿಸುತ್ತದೆ. ಬೀಜಗಳನ್ನು ರಾತ್ರಿಯಿಡೀ ನೆನೆಸಿ ಸೇವಿಸುವುದರಿಂದ ಜೀರ್ಣಕ್ರಿಯೆಗೂ ಸಹಕಾರಿಯಾಗಲಿದೆ. ತೂಕ ಇಳಿಸಲು ಪ್ರಯತ್ನಿಸುವವರಿಗೆ ಇದು ಪರಿಣಾಮಕಾರಿ. ಹಾಗಾದರೆ ಅವು ಯಾವ್ಯಾವು ಇಲ್ಲಿ ತಿಳಿದುಕೊಳ್ಳಿ:

ಕಾಮ ಕಸ್ತೂರಿ ಬೀಜಗಳು: ಕಾಮ ಕಸ್ತೂರಿ ಬೀಜಗಳು (Chia Seeds) ಒಮೆಗಾ 3, ಕೊಬ್ಬಿನಾಮ್ಲಗಳು, ವಿಟಮಿನ್ ಎ, ಬಿ, ಇ ಮತ್ತು ಕೆ, ಕ್ಯಾಲ್ಸಿಯಂ, ರಂಜಕ, ಮೆಗ್ನೀಸಿಯಮ್ ಮತ್ತು ಕಬ್ಬಿಣದಂತಹ ವಿವಿಧ ರೀತಿಯ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಕಾಮ ಕಸ್ತೂರಿ ಅಥವಾ ತುಳಸಿ ಬೀಜ ಎಂದೇ ಜನಪ್ರಿಯವಾಗಿರುವ ಈ ಪದಾರ್ಥದ ಸೇವನೆಯಿಂದ ಒಟ್ಟಾರೆ ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡುತ್ತದೆ. 1 ರಿಂದ 2 ಟೀ ಚಮಚ ಕಾಮ ಕಸ್ತೂರಿ ಬೀಜಗಳನ್ನು 1/2 ಕಪ್ ನೀರಿನೊಂದಿಗೆ ಮಿಶ್ರಣ ಮಾಡಿ. ಅವುಗಳನ್ನು ರಾತ್ರಿಯಿಡೀ ನೆನೆಯಲು ಬಿಡಿ. ಮರುದಿನ ಬೆಳಿಗ್ಗೆ, ಸ್ಮೂಥಿ, ಮೊಸರು ಅಥವಾ ಓಟ್ಮೀಲ್‍ಗೆ ಸೇರಿಸಿ ಸೇವಿಸಬಹುದು. ಈ ಬೀಜಗಳು ಉರಿಯೂತವನ್ನು ಕಡಿಮೆ ಮಾಡಲು, ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಮತ್ತು ಅರಿವಿನ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಅಗಸೆ ಬೀಜಗಳು: ಫೈಬರ್, ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ಲಿಗ್ನಾನ್‌ನಂತಹ ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಅಗಸೆ ಬೀಜಗಳು ತೂಕ ನಿರ್ವಹಣೆಯಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಹಾಗೂ ಹಲವಾರು ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ. ಇದು ಹೊಟ್ಟೆ ಉಬ್ಬರ, ತೂಕ ನಷ್ಟ ಮತ್ತು ಮಲಬದ್ಧತೆಯನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.

ಕುಂಬಳಕಾಯಿ ಬೀಜಗಳು: ಕುಂಬಳಕಾಯಿ ಬೀಜಗಳನ್ನು ನೆನೆಸಿ ಸೇವಿಸಬೇಕು. ಇದರಲ್ಲಿ ಮೆಗ್ನೀಸಿಯಮ್, ಸತು ಮತ್ತು ಇತರ ಖನಿಜಗಳು ಅಡಕವಾಗಿದೆ. ಇದು ಚಯಾಪಚಯ ಆರೋಗ್ಯ ಮತ್ತು ತೂಕ ನಿರ್ವಹಣೆಗೆ ಅವಶ್ಯಕವಾಗಿದೆ.

ಸೂರ್ಯಕಾಂತಿ ಬೀಜಗಳು: ಸೂರ್ಯಕಾಂತಿ ಬೀಜಗಳು ವಿಟಮಿನ್ ಇ, ಖನಿಜಗಳು ಇತ್ಯಾದಿ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದು ಚಯಾಪಚಯ ಪ್ರಕ್ರಿಯೆಗಳನ್ನು ಮತ್ತು ಒಟ್ಟಾರೆ ಆರೋಗ್ಯವನ್ನು ಬೆಂಬಲಿಸುತ್ತದೆ. ನೆನೆಸಿ ಸೇವಿಸುವ ಪ್ರಕ್ರಿಯೆಯು ಸೂರ್ಯಕಾಂತಿ ಬೀಜಗಳನ್ನು ಜೀರ್ಣಿಸಿಕೊಳ್ಳಲು ಸುಲಭಗೊಳಿಸುತ್ತದೆ ಮತ್ತು ಜೀರ್ಣಕಾರಿ ಅಸ್ವಸ್ಥತೆಯ ಅಪಾಯವನ್ನು ಕಡಿಮೆ ಮಾಡುತ್ತದೆ.

ಎಳ್ಳು ಬೀಜಗಳು: ಎಳ್ಳು ಬೀಜಗಳು ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಕಬ್ಬಿಣದಂತಹ ಪ್ರಮುಖ ಖನಿಜಗಳಿಂದ ಸಮೃದ್ಧವಾಗಿದೆ. ಇವು ದೇಹವನ್ನು ಆರೋಗ್ಯಕರವಾಗಿರಿಸುವಲ್ಲಿ ಮತ್ತು ಚಯಾಪಚಯವನ್ನು ಕಾಪಾಡಿಕೊಳ್ಳಲು ಪ್ರಯೋಜನಕಾರಿಯಾಗಿದೆ. ಇದು ಕ್ಯಾಲ್ಸಿಯಂ ಮತ್ತು ಇತರ ಪೋಷಕಾಂಶಗಳ ಹೀರಿಕೊಳ್ಳುವಿಕೆಗೆ ಅಡ್ಡಿಪಡಿಸುವ ಆಕ್ಸಲೇಟ್‌ಗಳಂತಹ ಆಂಟಿನ್ಯೂಟ್ರಿಯೆಂಟ್‌ಗಳನ್ನು ತಟಸ್ಥಗೊಳಿಸಲು ಸಹಾಯ ಮಾಡುತ್ತದೆ.

ಈ 5 ಬೀಜಗಳನ್ನು ರಾತ್ರಿಯಿಡೀ ನೆನೆಸುವ ಅಗತ್ಯ ಏನು?

ಬೀಜಗಳನ್ನು ರಾತ್ರಿಯಿಡೀ ನೆನೆಸಿ ಸೇವಿಸುವುದರಿಂದ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಮುಖ್ಯವಾಗಿ ತೂಕ ಇಳಿಕೆಗೆ ಪ್ರಯತ್ನಿಸುವವರು ರಾತ್ರಿಯಿಡೀ ನೆನೆಸಿದ ಬೀಜವನ್ನು ಸೇವನೆ ಮಾಡುವುದರಿಂದ ದೇಹಕ್ಕೆ ಅಗಾಧ ಪೌಷ್ಟಿಕಾಂಶ ಲಭ್ಯವಾಗುತ್ತದೆ. ಬೀಜಗಳನ್ನು ನೆನೆಸುವುದರಿಂದ ಪ್ರಯೋಜನಕಾರಿ ಕಿಣ್ವಗಳು ಸಕ್ರಿಯಗೊಳ್ಳುತ್ತದೆ.