Tampon: ಟ್ಯಾಂಪೂನ್ ಬಳಸುವುದು ಹೇಗೆ, ಮುಟ್ಟಿನ ದಿನಗಳಲ್ಲಿ ಇದರ ಉಪಯೋಗವೇನು; ಈ ಕುರಿತು ನಿಮಗೆ ತಿಳಿದಿರದ ವಿಷಯಗಳು ಇಲ್ಲಿವೆ
ಮುಟ್ಟಿನ ದಿನಗಳಲ್ಲಿ ಅತಿಯಾದ ರಕ್ತಸ್ರಾವದ ಕಾರಣದಿಂದ ಹೆಣ್ಣುಮಕ್ಕಳು ಹಿಂಸೆ ಪಡುವುದು ಸಹಜ. ಕೆಲವೊಮ್ಮೆ ಪ್ಯಾಡ್‌ಗಳು ಕೂಡ ಬ್ಲೀಡಿಂಗ್ ತಡೆಯಲು ಅಸಮರ್ಥ ಎನ್ನಿಸಿಕೊಳ್ಳುತ್ತವೆ. ಅಂತಹವರಿಗೆ ಮಾತ್ರವಲ್ಲ, ಪ್ರತಿ ಹೆಣ್ಣುಮಕ್ಕಳಿಗೂ ಋತುಚಕ್ರದ ಸಮಯದಲ್ಲಿ ಟ್ಯಾಂಪೂನ್ ಬಳಕೆ ಉತ್ತಮ. ಹಾಗಾದರೆ ಇದನ್ನು ಬಳಸುವುದು ಹೇಗೆ, ಇದರಿಂದಾಗುವ ಉಪಯೋಗಗಳೇನು ನೋಡಿ.
ಮುಟ್ಟಿನ ಸಮಯದಲ್ಲಿ ರಕ್ತಸ್ರಾವದ ಕಾರಣದಿಂದ ಹೆಣ್ಣುಮಕ್ಕಳು ಯಾವುದೇ ಕೆಲಸಕ್ಕೂ ಹಿಂಜರಿಕೆ ಮಾಡುವುದು ಸಹಜ. ರಕ್ತಸ್ರಾವದ ಕಾರಣದಿಂದ ಕೆಲವರು ಕುಳಿತ ಜಾಗದಿಂದ ಎದ್ದೇಳಲು ಭಯ ಪಡುತ್ತಾರೆ. ಎಲ್ಲಿ ಡ್ರೆಸ್ ಕಲೆ ಆಗಿದ್ಯೋ ಅನ್ನುವ ಚಿಂತೆಯಲ್ಲೇ ಕಾಲ ಕಳೆಯುತ್ತಾರೆ. ಹಿಂದಿನ ಕಾಲದಲ್ಲಿ ಮುಟ್ಟಿನ ದಿನಗಳಲ್ಲಿ ಬಟ್ಟೆ ಬಳಕೆ ಮಾಡುತ್ತಿದ್ದರು, ನಂತರ ಪ್ಯಾಡ್ ಕಂಡುಹಿಡಿಯಲಾಯಿತು, ಆನಂತರ ಟ್ಯಾಂಪೂನ್... ಹಲವರು ಟ್ಯಾಂಪೂನ್ ಹೆಸರು ಕೇಳಿರುತ್ತಾರೆ. ಆದರೆ ಬಳಕೆ ಹೇಗೆ ಎಂಬುದು ಗೊತ್ತಿರುವುದಿಲ್ಲ. ಹಾಗಾದರೆ ಟ್ಯಾಂಪೂನ್ ಏನು ಎಂಬುದನ್ನು ಮೊದಲು ತಿಳಿಯಿರಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಟ್ಯಾಂಪೂನ್ ಎಂದರೇನು?
ಟ್ಯಾಂಪೂನ್ ಎಂದರೆ ಸಿಲಿಂಡರ್ ಆಕೃತಿಯ ಒಂದು ಸಾಧನ ಎಂದು ಹೇಳಬಹುದು. ಇದನ್ನು ಹೀರಿಕೊಳ್ಳುವ ವಸ್ತುಗಳಿಂದ ತಯಾರಿಸಿರುತ್ತಾರೆ. ಇದು ಸಾಂಪ್ರದಾಯಿಕ ಪ್ಯಾಡ್‌ಗಳಿಗಿಂತ ಭಿನ್ನವಾಗಿರುತ್ತದೆ ಹಾಗೂ ಇದರ ಬಳಕೆ ವಿಧಾನವೂ ಭಿನ್ನ. ಇದೊಂದು ಯೋನಿಯೊಳಗೆ ಇರಿಸಿಕೊಳ್ಳುವ ಸಾಧನವಾಗಿದೆ. ಈ ಸಾಧನವನ್ನು ಯೋನಿಯೊಳಗೆ ಸೇರಿಸಿದರೆ ಬ್ಲೀಡಿಂಗ್ ಲೀಕ್ ಆಗುವುದು, ಬಟ್ಟೆ ಕಲೆ ಆಗುವುದು ಇಂತಹ ಪರಿಸ್ಥಿತಿಗಳು ಎದುರಾಗುವುದಿಲ್ಲ ಎಂಬುದು ತಜ್ಞರ ಅಭಿಪ್ರಾಯ.
ಟ್ಯಾಂಪೂನ್ ಬಳಕೆ ಹೇಗೆ?
ಪ್ರಸ್ತುತ ವಿವಿಧ ಬಗೆಯ ಟ್ಯಾಂಪೂನ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಆದರೆ ಎಲ್ಲಾ ರೀತಿಯ ಟ್ಯಾಂಪೂನ್‌ಗಳು ಒಂದೇ ರೀತಿ ಇರುವುದಿಲ್ಲ. ವಿವಿಧ ಬ್ರ್ಯಾಂಡ್‌ಗಳಿಗೆ ಅನುಗುಣವಾಗಿ ಆಕಾರ ಮತ್ತು ಮೆಟಿರಿಯಲ್‌ನಲ್ಲಿ ವ್ಯತ್ಯಾಸವಿರುತ್ತದೆ. ಆದರೆ ಎಲ್ಲಾ ಟ್ಯಾಂಪೂನ್‌ಗಳು ಹೆಚ್ಚು ರಕ್ತವನ್ನು ಹೀರಿಕೊಳ್ಳಬಲ್ಲವುಗಳಾಗಿವೆ.
- ನೀವು ಮೊದಲ ಬಾರಿ ಟ್ಯಾಂಪೂನ್ ಬಳಸುತ್ತಿದ್ದರೆ, ನಿಮಗೆ ಭಯವಾಗುವುದು ಸಹಜ. ಟ್ಯಾಂಪೂನ್ ಬಳಕೆ ಮುನ್ನ ಕೈಗಳನ್ನು ಚೆನ್ನಾಗಿ ತೊಳೆಯಿರಿ. ಮನಸಿನಲ್ಲಿ ಒತ್ತಡ, ಆತಂಕವಿಲ್ಲದೇ ಆರಾಮವಾಗಿರಿ.
- ಟಾಯೆಟ್ಲ್‌ನಲ್ಲಿ ಕುಕ್ಕರುಗಾಲಿನಲ್ಲಿ ಕುಳಿತುಕೊಳ್ಳಿ. ಒಂದು ಕೈಯಲ್ಲಿ ಟ್ಯಾಂಪೊನ್ ಹಿಡಿದುಕೊಳ್ಳಿ. ಟ್ಯಾಂಪೂನ್ ಮಧ್ಯ ಭಾಗವನ್ನು ನಿಮ್ಮ ಹೆಬ್ಬೆರಳು ಮತ್ತು ಮಧ್ಯದ ಬೆರಳಿನಿಂದ ಹಿಡಿದುಕೊಳ್ಳಿ. ದಾರವು ಹೊರ ಬರುವ ತೆಳುವಾದ ಕೊಳವೆಯ ತುದಿಯನ್ನು ಹಿಡಿದಿಡಲು ನಿಮ್ಮ ತೋರು ಬೆರಳನ್ನು ಬಳಸಿ.
- ನಂತರ ನಿಮ್ಮ ಯೋನಿಯ ಬಳಿಯ ಚರ್ಮವನ್ನು ನಿಧಾನಕ್ಕೆ ಸರಿಸಿ, ಟ್ಯಾಂಪೂನ್ ತುದಿಯನ್ನು ಆ ಜಾಗದಲ್ಲಿ ಇರಿಸಿ. ನಂತರ ವಿಧಾನಕ್ಕೆ ಸಂಪೂರ್ಣ ಟ್ಯಾಂಪೂನ್ ಅನ್ನು ಒಳಕ್ಕೆ ತಳ್ಳಿ. ಟ್ಯಾಂಪೂನ್ ಯೋನಿ ಒಳಗೆ ಇರಿಸುವಾಗ ಕೊಂಚ ಬೆನ್ನನ್ನು ಬಾಗಿಸುವುದರಿಂದ ಸುಲಭವಾಗುತ್ತದೆ.
- ನಿಮ್ಮ ಮಧ್ಯದ ಬೆರಳು, ಹೆಬ್ಬೆರಳು ಎಷ್ಟು ಒಳಗೆ ಹೋಗುತ್ತದೋ ಅಲ್ಲಿಯವರೆಗೆ ಟ್ಯಾಂಪೂನ್ ಹೋಗಲು ಬಿಡಿ.
- ಟ್ಯಾಂಪೂನ್ ಒಳಗಡೆ ಹೋದ ನಂತರ ನಿಮಗೆ ಕಂಪರ್ಟ್ ಅನ್ನಿಸಿದ ಮೇಲೆ ಮಧ್ಯದ ಭಾಗವನ್ನು ಹಾಗೆ ಹಿಡಿದುಕೊಂಡು, ತೆಳುವಾದ ಟ್ಯೂಬ್ ಅನ್ನು ತಳ್ಳಲು ನಿಮ್ಮ ತೋಳು ಬೆರಳು ಬಳಸಿ. ಇದು ಟ್ಯಾಂಪೂನ್‌ನ ಹೀರಿಕೊಳ್ಳುವ ಭಾಗವನ್ನು ನಿಮ್ಮ ಯೋನಿಯೊಳಗೆ ತಳ್ಳುತ್ತದೆ. ಮಧ್ಯ ಭಾಗ ಮತ್ತು ನಿಮ್ಮ ಇತರ ಬೆರಳುಗಳನ್ನು ಸಂಧಿಸುವವರೆಗೂ ಅದನ್ನು ತಳ್ಳಿರಿ.
- ನಿಮ್ಮ ಹೆಬ್ಬೆರಳು ಮತ್ತು ಮಧ್ಯದ ಬೆರಳನ್ನು ಬಳಸಿ, ಟ್ಯಾಂಪೂನ್ ಲೇಪಕವನ್ನು ಎಚ್ಚರಿಕೆಯಿಂದ ಹೊರತೆಗೆಯಿರಿ, ಸ್ಟ್ರಿಂಗ್ ಅನ್ನು ನೇತಾಡಲು ಬಿಡಿ. ದಾರವನ್ನು ಎಳೆಯಬಾರದು ಎಂಬುದು ನೆನಪಿರಲಿ. ಇದನ್ನು ಟ್ಯಾಂಪೂನ್‌ಗೆ ಲಗತ್ತಿಸಲಾಗಿರುತ್ತದೆ. ಟ್ಯಾಂಪೂನ್ ತುಂಬಿದಾಗ ಅದನ್ನು ಹೊರತೆಗೆಯಲು ನಿಮಗೆ ಈ ದಾರದ ಅಗತ್ಯವಿದೆ.
ಟ್ಯಾಂಪೂನ್ ಬಳಕೆಯ ಉಪಯೋಗಗಳು
ಟ್ಯಾಂಪೂನ್‌ಗಳ ನೈರ್ಮಲ್ಯ ಕಾಡುತ್ತದೆ: ಮುಟ್ಟಿನ ದಿನಗಳಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳಲ ಟ್ಯಾಂಪೂನ್ ಬೆಸ್ಟ್. ಇದು ಸುವಾಸನೆಯಿಂದ ಕೂಡಿರುತ್ತದೆ. ಇದು ಸಂಪೂರ್ಣ ರಕ್ತಸ್ರಾವವನ್ನು ಹೀರಿಕೊಳ್ಳುವ ಕಾರಣ ವಾಸನೆ ಬರುವ ಸಾಧ್ಯತೆ ಕಡಿಮೆ.
ಲೀಕ್ ಇರುವುದಿಲ್ಲ: ಪ್ಯಾಡ್ ಅಥವಾ ಬಟ್ಟೆ ಬಳಸಿದಾಗ ಲೀಕ್ ಆಗುವುದು ಸಾಮಾವ್ಯ. ಅಲ್ಲದೆ ಮಳೆ, ನೀರು ಇಂತಹ ಸಮಯದಲ್ಲಿ ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ಆದರೆ ಟ್ಯಾಂಪೂನ್ ಬಳಕೆಯಿಂದ ಲೀಕೇಜ್ ತೊಂದರೆಯನ್ನು ತಪ್ಪಿಸಬಹುದು. ಇದನ್ನು ಮೂರ್ನಾಲ್ಕು ಗಂಟೆಗಳ ಕಾಲ ಬದಲಿಸದೇ ಇದ್ದರೂ ಸೋರುವ ಸಮಸ್ಯೆ ಇರುವುದಿಲ್ಲ.
ಬಹಳ ಹೊತ್ತು ಬಳಸಬಹುದು: ಮುಟ್ಟಿನ ಸಮಯದಲ್ಲಿ ಬಹು ದೊಡ್ಡ ತೊಂದರೆ ಎಂದರೆ ಆಗಾಗ ಪ್ಯಾಡ್ ಬದಲಿಸುವುದು. ಆದರೆ ಟ್ಯಾಂಪೂನ್ ಬಳಕೆಯಿಂದ ಈ ತೊಂದರೆ ಇರುವುದಿಲ್ಲ. ಒಮ್ಮೆ ಟ್ಯಾಂಪೂನ್ ಬಳಸಿದರೆ 4 ರಿಂದ 8 ಗಂಟೆಯವರೆಗೆ ಬದಲಿಸಬೇಕು ಎಂದೇನಿಲ್ಲ.
ಆದರೆ ಯೋನಿಭಾಗವು ತುಂಬಾ ಸೂಕ್ಷ್ಮವಾಗಿರುವುದಂದ ಟ್ಯಾಂಪೂನ್ ಬಳಕೆ ಮಾಡುವಾಗ ಸಾಕಷ್ಟು ಎಚ್ಚರಿಕೆ ಅವಶ್ಯ. ಈ ಕುರಿತು ತಜ್ಞರಿಂದ ಅಭಿಪ್ರಾಯ ಪಡೆದು ಬಳಕೆ ಮಾಡಿದರೆ ಇನ್ನೂ ಉತ್ತಮ.
ವಿಭಾಗ