Upcoming Car Bike July: ಮಾರುತಿ ಇನ್ವಿಕ್ಟೊ, ಕಿಯಾ ಸೆಲ್ಟೊಸ್‌ ಸೇರಿದಂತೆ ಜುಲೈನಲ್ಲಿ ಆಗಮಿಸುವ ಹೊಸ ಕಾರು ಬೈಕ್‌ಗಳ ವಿವರ ಇಲ್ಲಿದೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Upcoming Car Bike July: ಮಾರುತಿ ಇನ್ವಿಕ್ಟೊ, ಕಿಯಾ ಸೆಲ್ಟೊಸ್‌ ಸೇರಿದಂತೆ ಜುಲೈನಲ್ಲಿ ಆಗಮಿಸುವ ಹೊಸ ಕಾರು ಬೈಕ್‌ಗಳ ವಿವರ ಇಲ್ಲಿದೆ

Upcoming Car Bike July: ಮಾರುತಿ ಇನ್ವಿಕ್ಟೊ, ಕಿಯಾ ಸೆಲ್ಟೊಸ್‌ ಸೇರಿದಂತೆ ಜುಲೈನಲ್ಲಿ ಆಗಮಿಸುವ ಹೊಸ ಕಾರು ಬೈಕ್‌ಗಳ ವಿವರ ಇಲ್ಲಿದೆ

Upcoming Cars Bikes July: ಕಿಯಾ ಸೆಲ್ಟೊಸ್‌ ಫೇಸ್‌ಲಿಫ್ಟ್‌, ಮಾರುತಿ ಸುಜುಕಿ ಇನ್ವಿಕ್ಟೊ, ಹಾರ್ಲೆ ಡೇವಿಡ್‌ಸನ್‌ ಎಕ್ಸ್‌440, ಟ್ರಯಂಪ್‌ ಸ್ಪೀಡ್‌ 400, ಸ್ಕ್ರಿಂಬ್ಲರ್‌ 400 ಎಕ್ಸ್‌ ಸೇರಿದಂತೆ ಹಲವು ಹೊಸ ಕಾರು ಬೈಕ್‌ಗಳು ಜುಲೈ ಮೊದಲ ವಾರದಲ್ಲಿ ಭಾರತದ ರಸ್ತೆಗಿಳಿಯಲಿವೆ.

Upcoming Cars Bikes July: ಜುಲೈನಲ್ಲಿ ಆಗಮಿಸುವ ಹೊಸ ಕಾರು ಬೈಕ್‌ಗಳ ವಿವರ ಇಲ್ಲಿದೆ
Upcoming Cars Bikes July: ಜುಲೈನಲ್ಲಿ ಆಗಮಿಸುವ ಹೊಸ ಕಾರು ಬೈಕ್‌ಗಳ ವಿವರ ಇಲ್ಲಿದೆ

ಜುಲೈ ತಿಂಗಳಲ್ಲಿ ಭಾರತದ ಎಸ್‌ಯುವಿ ಲವರ್‌ಗಳಿಗೆ ಇಷ್ಟವಾಗುವ ಹಲವು ಕಾರುಗಳು (Upcoming Cars Bikes July 2023) ಬರಲಿವೆ. ಕಿಯಾ ಸೆಲ್ಟೊಸ್‌ನ ಹೊಸ ಆವೃತ್ತಿ ಆಗಮಿಸಲಿದೆ. ಮಾರುತಿ ಸುಜುಕಿ ಕಂಪನಿಯು ಇನ್ವಿಕ್ಟೊ ಎಂಬ ಬೃಹತ್‌ ಎಂಪಿವಿ ಪರಿಚಯಿಸಲಿದೆ. ಬೈಕ್‌ ಪ್ರಿಯರಿಗೆ ಟ್ರಯಂಪ್‌ ಮತ್ತು ಬಜಾಜ್‌ ಜತೆಯಾಗಿ ಹೊಸ ಬೈಕ್‌ ತರಲಿದೆ. ಸ್ಕ್ರ್ರಂಬ್ಲರ್‌ 400 ಎಕ್ಸ್‌ ಕೂಡ ಆಗಮಿಸಲಿದೆ. ಹಾರ್ಲಿ ಡೇವಿಡ್‌ಸನ್‌ ಎಕ್ಸ್‌440 ಬೈಕ್‌ ಕೂಡ ಆಗಮಿಸಲಿದೆ.

ಜುಲೈನಲ್ಲಿ ಆಗಮಿಸಲಿರುವ ಕೆಲವು ಬೈಕ್‌ ಮತ್ತು ಕಾರುಗಳ ವಿವರ ಇಲ್ಲಿದೆ

ಕಿಯಾ ಸೆಲ್ಟೊಸ್‌ (ಜುಲೈ 4)

ಕೊರಿಯಾದ ವಾಹನ ತಯಾರಿಕಾ ಕಂಪನಿಯು ಕಿಯಾವು ನೂತನ ತಲೆಮಾರಿನ ಸೆಲ್ಟೊಸ್‌ ಕಾರನ್ನು ಜುಲೈ ತಿಂಗಳಲ್ಲಿ ಲಾಂಚ್‌ ಮಾಡಲಿದೆ. ನೂತನ ಸೆಲ್ಟೊಸ್‌ ಎಸ್‌ಯುವಿ ಬುಕ್ಕಿಂಗ್‌ ಆರಂಭವಾಗಿದೆ. 25 ಸಾವಿರ ರೂಪಾಯಿ ನೀಡಿ ಕಿಯಾ ಸೆಲ್ಟೊಸ್‌ ಫೇಸ್‌ಲಿಫ್ಟ್‌ ಬುಕ್ಕಿಂಗ್‌ ಮಾಡಿಕೊಳ್ಳಬಹುದು. ಮರು ವಿನ್ಯಾಸ ಮಾಡಿದ ಮುಂಭಾಗದ ಗ್ರಿಲ್‌, ರಿವರ್ಕ್‌ ಮಾಡಿದ ಎಲ್‌ಇಡಿ ಡಿಆರ್‌ಎಲ್‌, ಹೊಸ ಬಗೆಯ ಟೇಲ್‌ಲೈಟ್‌ ಇತ್ಯಾದಿ ಸಾಕಷ್ಟು ಬದಲಾವಣೆಗಳನ್ನು ಇದರಲ್ಲಿ ನಿರೀಕ್ಷಿಸಬಹುದು. ಕಾರಿನೊಳಗೆ 10.25 ಇಂಚಿನ ಟಚ್‌ಸ್ಕ್ರೀನ್‌ ಇನ್‌ಫೋಟೈನ್‌ಮೆಂಟ್‌ ಸಿಸ್ಟಮ್‌ ಇರುವ ನಿರೀಕ್ಷೆಯಿದೆ. ಇದರೊಂದಿಗೆ ಮೂರು ಎಂಜಿನ್‌ ಆಯ್ಕೆಗಳಲಿ ದೊರಕಲಿದೆ. ಮ್ಯಾನುಯಲ್‌ ಮತ್ತು ಐಎಂಟಿ ಗಿಯರ್‌ಬಾಕ್ಸ್‌ನ ಪೆಟ್ರೋಲ್‌ ಎಂಜಿನ್‌ ಜತೆಗೆ 1.5 ಲೀಟರ್‌ನ ಡೀಸೆಲ್‌ ಎಂಜಿನ್‌ ಆಯ್ಕೆಯಲ್ಲಿಯೂ ದೊರಕಲಿದೆ.

ಮಾರುತಿ ಸುಜುಕಿ ಇನ್ವಿಕ್ಟೊ : ಜುಲೈ 5

ಮಾರುತಿ ಸುಜುಕಿ ಇನ್ವಿಕ್ಟೊ ಎಂಬ ಏಳು ಸೀಟಿನ ಪ್ರೀಮಿಯಂ ಎಂಪಿವಿಯನ್ನು ಪರಿಚಯಿಸಲಿದೆ. ಇದು ಟೊಯೊಟಾ ಇನ್ನೋವಾ ಹೈಕ್ರಾಸ್‌ ಆಧರಿತ ಕಾರು. ಇದು ಜುಲೈ 5ರಂದು ಲಾಂಚ್‌ ಆಗಲಿದೆ. ನೂತನ ಮಾರುತಿ ಸುಜುಕಿ ಇನ್ವಿಕ್ಟೊ ಕಾರು ಪೆಟ್ರೋಲ್‌ ಮತ್ತು ಪೆಟ್ರೋಲ್‌ ಹೈಬ್ರಿಡ್‌ ಪವರ್‌ಟ್ರೇನ್‌ ಆಯ್ಕೆಗಳಲ್ಲಿ ದೊರಕುವ ನಿರೀಕ್ಷೆಯಿದೆ. 2.0 ಲೀಟರ್‌ನ ಫೋರ್‌ ಸಿಲಿಂಡರ್‌ ಪೆಟ್ರೋಲ್‌ ಎಂಜಿನ್‌ ಇರುವ ನಿರೀಕ್ಷೆಯಿದೆ. ಇದರಲ್ಲಿ ಎಂಟು ಹಂತದ ಆಟೋಮ್ಯಾಟಿಕ್‌ ಗಿಯರ್‌ಬಾಕ್ಸ್‌ ಇರುವ ಸಾಧ್ಯತೆಯಿದೆ. ಇದು 6600 ಆವರ್ತನಕ್ಕೆ 183.72 ಬಿಎಚ್‌ಪಿ ಪವರ್‌ ಮತ್ತು 4,398 ಆರ್‌ಪಿಎಂನಿಂದ 5,196 ಆರ್‌ಪಿಎಂವರೆಗೆ 183.72 ಬಿಎಚ್‌ಪಿ ಪೀಕ್‌ ಟಾರ್ಕ್‌ ಪವರ್‌ ನೀಡುವ ನಿರೀಕ್ಷೆಯಿದೆ ಎಂದು ಎಚ್‌ಟಿ ಆಟೋ ವರದಿ ಮಾಡಿದೆ. ಪೆಟ್ರೋಲ್‌ ಮಾತ್ರ ಆವೃತ್ತಿಯು ಲೀಟರ್‌ಗೆ 16.13 ಕಿ.ಮೀ. ಇಂಧನ ದಕ್ಷತೆ ಮತ್ತು ಹೈಬ್ರಿಡ್‌ ಆವೃತ್ತಿಯು ಲೀಟರ್‌ಗೆ 23.24 ಕಿ.ಮೀ. ಮೈಲೇಜ್‌ ನೀಡುವ ನಿರೀಕ್ಷೆಯಿದೆ

ಹಾರ್ಲೆ ಡೇವಿಡ್‌ಸನ್‌ ಎಕ್ಸ್‌440: ಜುಲೈ 3

ಜುಲೈ 3ರಂದು ಹಾರ್ಲೆ ಡೇವಿಡ್‌ಸನ್‌ ಕಂಪನಿಯು ಕಡಿಮೆ ದರದ ಬೈಕನ್ನು ಭಾರತಕ್ಕೆ ಪರಿಚಯಿಸಲಿದೆ. ಈ ಕಂಪನಿಯು 2021ರಲ್ಲಿ ಭಾರತದ ಹೀರೋಮೋಟೊಕಾರ್ಪ್‌ ಜತೆ ಮೈತ್ರಿ ಮಾಡಿಕೊಂಡಿತ್ತು. ನೂತನ ಹಾರ್ಲೆ ಡೇವಿಡ್‌ಸನ್‌ ಎಕ್ಸ್‌440ನಲ್ಲಿ 440ಸಿಸಿಯ ಸಿಂಗಲ್‌ ಸಿಲಿಂಡರ್‌ ಆಯಿಲ್‌ ಕೂಲಿಂಗ್‌ ಎಂಜಿನ್‌ ಇರಲಿದೆ. ಇದು 34 ಬಿಎಚ್‌ಪಿ 30 ಎನ್‌ಎಂ ಟಾರ್ಕ್‌ ಬಿಡುಗಡೆ ಮಾಡಲಿದೆ.

ಟ್ರಯಂಪ್‌ ಸ್ಪೀಡ್‌ 400, ಸ್ಕ್ರಿಂಬ್ಲರ್‌ 400 ಎಕ್ಸ್‌ ವಿಡಿಯೋ ಈ ಕೆಳಗಿದೆ ನೋಡಿ

ಟ್ರಯಂಪ್‌ ಸ್ಪೀಡ್‌ 400, ಸ್ಕ್ರಿಂಬ್ಲರ್‌ 400 ಎಕ್ಸ್‌

ಈ ಜುಲೈ ತಿಂಗಳ ಮೊದಲ ವಾರದಲ್ಲಿ ಟ್ರಯಂಪ್‌ ಸ್ಪೀಡ್‌ 400, ಸ್ಕ್ರಿಂಬ್ಲರ್‌ 400 ಎಕ್ಸ್‌ ಬೈಕ್‌ ಬರಲಿದೆ. ಇದು ಜುಲೈ 5ರಂದು ಈ ಬೈಕ್‌ಗಳು ಲಾಂಚ್‌ ಆಗಲಿವೆ. ಈ ಬೈಕ್‌ಗಳನ್ನು ಬಜಾಜ್‌ ಆಟೋ ತನ್ನ ಪುಣೆಯ ಚಕನ್‌ ಘಟಕದಲ್ಲಿ ಉತ್ಪಾದಿಸಲಿದೆ. ಈ ಬೈಕ್‌ಗಳ ಬುಕ್ಕಿಂಗ್‌ ಈಗಾಗಲೇ ಆರಂಭವಾಗಿದೆ. ಇದು 398.15 ಸಿಸಿಯ, ಸಿಂಗಲ್‌ ಸಿಲಿಂಡರ್‌ ಲಿಕ್ವಿಡ್‌ ಕೂಲ್ಡ್‌ ಎಂಜಿನ್‌ ಹೊಂದಿರಲಿದೆ. ಇದು 39.5 bhp ಪವರ್‌ ಮತ್ತು 37.5 Nm ಟಾರ್ಕ್‌ ಒದಗಿಸುತ್ತದೆ. ಆರು ಸ್ಪೀಡ್‌ನ ಗಿಯರ್‌ ಬಾಕ್ಸ್‌ ಜತೆಗಿರಲಿದೆ.

ಇವಿಷ್ಟು ಜುಲೈ ಮೊದಲ ವಾರದಲ್ಲಿ ಭಾರತದಲ್ಲಿ ಲಾಂಚ್‌ ಆಗಲಿರುವ ಕಾರು ಮತ್ತು ಬೈಕ್‌ಗಳು. ಜುಲೈನಲ್ಲಿ ಬಿಡುಗಡೆಯಾಗುವ ಇತರೆ ಕಾರು ಬೈಕ್‌ಗಳ ಕುರಿತು ಮಾಹಿತಿ ಪಡೆಯಲು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡಕ್ಕೆ ಸದಾ ಭೇಟಿ ನೀಡಿ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.