ಎಟಿಎಂನಲ್ಲಿ ಹರಿದ ನೋಟು ಸಿಕ್ಕಾಗ ಅದನ್ನು ಬದಲಾಯಿಸೋದು ಹೇಗಂತೀರಾ, ಆರ್‌ಬಿಐನ ಈ ನಿಯಮ ತಿಳ್ಕೊಂಡಿರಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಎಟಿಎಂನಲ್ಲಿ ಹರಿದ ನೋಟು ಸಿಕ್ಕಾಗ ಅದನ್ನು ಬದಲಾಯಿಸೋದು ಹೇಗಂತೀರಾ, ಆರ್‌ಬಿಐನ ಈ ನಿಯಮ ತಿಳ್ಕೊಂಡಿರಿ

ಎಟಿಎಂನಲ್ಲಿ ಹರಿದ ನೋಟು ಸಿಕ್ಕಾಗ ಅದನ್ನು ಬದಲಾಯಿಸೋದು ಹೇಗಂತೀರಾ, ಆರ್‌ಬಿಐನ ಈ ನಿಯಮ ತಿಳ್ಕೊಂಡಿರಿ

ಎಟಿಎಂನಲ್ಲಿ ಹಣ ವಿತ್‌ಡ್ರಾ ಮಾಡುವಾಗ ಹರಿದ ನೋಟು ಸಿಗುವುದು ಸಾಮಾನ್ಯ. ಹೀಗೆ ಎಟಿಎಂನಲ್ಲಿ ಹರಿದ ನೋಟು ಸಿಕ್ಕಾಗ ಅದನ್ನು ಬದಲಾಯಿಸೋದು ಹೇಗಂತೀರಾ, ಬಹಳ ಸುಲಭ ಇದೆ. ಆದರೆ ಆರ್‌ಬಿಐನ ಈ ನಿಯಮ ತಿಳ್ಕೊಂಡಿರಿ.

ಎಟಿಎಂನಲ್ಲಿ ಹರಿದ ನೋಟು ಸಿಕ್ತು, ಅದನ್ನು ಬದಲಾಯಿಸೋದು ಹೇಗಂತೀರಾ, ಆರ್‌ಬಿಐನ ಈ ನಿಯಮ ತಿಳ್ಕೊಂಡಿರಿ.
ಎಟಿಎಂನಲ್ಲಿ ಹರಿದ ನೋಟು ಸಿಕ್ತು, ಅದನ್ನು ಬದಲಾಯಿಸೋದು ಹೇಗಂತೀರಾ, ಆರ್‌ಬಿಐನ ಈ ನಿಯಮ ತಿಳ್ಕೊಂಡಿರಿ. (PC - @jeet_0410 / @starneelima X)

ಎಟಿಎಂಗೆ ಹೋಗಿ ತುರ್ತಾಗಿ ಹಣ ಬೇಕು ಎಂದು ವಿತ್‌ಡ್ರಾ ಮಾಡುವಾಗ ಹರಿದ ನೋಟುಗಳು ಸಿಗುವುದು ಸಾಮಾನ್ಯ. ಈ ರೀತಿ ಹಲವು ಬಾರಿ ಎಟಿಎಂನಿಂದ ಹಣ ತೆಗೆಯುವಾಗ ಹರಿದ ನೋಟುಗಳು ಹೊರಬರುತ್ತವೆ. ಹಾಗೆ ಹರಿದ ನೋಟು ಸಿಕ್ಕಾಗ ತಲೆ ಕೆಟ್ಟು ಹೋಗುತ್ತೆ. ಇದನ್ನು ಇನ್ನು ಹೇಗಪ್ಪ ಬದಲಾಯಿಸೋದು ಎಂಬ ಚಿಂತೆ ಶುರುವಾಗುತ್ತದೆ. ಈ ನೋಟನ್ನು ಅಂಗಡಿಯವರಿಗೆ ಕೊಟ್ಟರೆ ಬೇಡ ಎನ್ನುವುದು ಗ್ಯಾರೆಂಟಿ. ಮತ್ತೇನು ಮಾಡುವುದು ಎಂಬ ಕಳವಳ ಶುರುವಾಗುತ್ತದೆ. ಸೋಷಿಯಲ್ ಮೀಡಿಯಾಗಳಲ್ಲೂ ಈ ವಿಚಾರ ಚರ್ಚೆಗೆ ಒಳಗಾಗುತ್ತಿರುತ್ತದೆ. ಆದರೆ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಪ್ರಕಾರ, ಹರಿದ ನೋಟುಗಳು, ಗಲೀಜಾಗಿರುವ ನೋಟುಗಳು ಎಟಿಎಂನಿಂದ ಹೊರಬಂದರೆ, ಗಾಬರಿಯಾಗುವುದು ಸಹಜ. ಆದರೆ ಇದನ್ನು ಸುಲಭವಾಗಿ ಬದಲಾಯಿಸಬಹುದು.

ಎಟಿಎಂನಲ್ಲಿ ಹರಿದ ಮತ್ತು ಗಲೀಜಾಗಿರುವ ನೋಟು ಸಿಕ್ಕರೆ ಏನು ಮಾಡಬೇಕು

ಆರ್‌ಬಿಐ ನಿಯಮ ಪ್ರಕಾರ, ಎಟಿಎಂನಿಂದ ಹೊರ ಬಂದ ನೋಟುಗಳು ಹರಿದಿದ್ದರೆ ಅಥವಾ ವಿರೂಪಗೊಂಡಿದ್ದರೆ ಅಥವಾ ಗಲೀಜಾಗಿದ್ದರೆ, ಅದನ್ನು ಬದಲಾಯಿಸಲು ಬ್ಯಾಂಕ್ ನಿರಾಕರಿಸುವಂತಿಲ್ಲ. ಬ್ಯಾಂಕ್‌ನಲ್ಲಿ ನೋಟುಗಳನ್ನು ಬದಲಾಯಿಸುವುದಕ್ಕೆ ದೀರ್ಘ ಪ್ರಕ್ರಿಯೆಯೇನೂ ಇಲ್ಲ. ಹರಿದ ಅಥವಾ ವಿರೂಪಗೊಂಡ, ಗಲೀಜಾಗಿರುವ ನೋಟುಗಳನ್ನು ನಿಮಿಷಗಳಲ್ಲಿ ಬದಲಾಯಿಸಬಹುದು. ಎಟಿಎಂನಿಂದ ತೆಗೆದ ಹರಿದ ನೋಟನ್ನು ಅದಕ್ಕೆ ಸಂಬಂಧಪಟ್ಟ ಬ್ಯಾಂಕ್‌ ಶಾಖೆಗೆ ಕೊಂಡೊಯ್ಯಿರಿ. ಅಲ್ಲಿ ನೋಟು ಬದಲಾವಣೆಗೆ ನಿಗದಿತ ಫಾರಂ ಸಿಗುತ್ತದೆ. ಅದನ್ನು ಭರ್ತಿ ಮಾಡಿ. ಅದರಲ್ಲಿ ಹಣ ವಿತ್‌ ಡ್ರಾ ಮಾಡಿದ ದಿನಾಂಕ, ಸಮಯ ಮತ್ತು ಎಟಿಎಂ ಹೆಸರು (ಸ್ಥಳ) ಬರೆದು, ನೋಟುಗಳ ಮೌಲ್ಯ ನಮೂದಿಸಿ. ಬಳಿಕ ನೋಟುಗಳೊಂದಿಗೆ ಈ ಫಾರಂ ಅನ್ನೂ ಕೊಡಿ. ಅವರು ಅದನ್ನು ಬದಲಾಯಿಸಿ ಕೊಡುತ್ತಾರೆ. ಇದಲ್ಲದೇ ಇದ್ದರೆ, ನಿಮ್ಮ ಹತ್ತಿರದ ಬ್ಯಾಂಕ್ ಶಾಖೆ ಅಥವಾ ಭಾರತೀಯ ರಿಸರ್ವ್ ಬ್ಯಾಂಕ್ ಕಚೇರಿಗೆ ಭೇಟಿ ನೀಡಿ ಹರಿದ ನೋಟು ಬದಲಾಯಿಸಬಹುದು.

ಹರಿದ ನೋಟುಗಳ ಬದಲಾವಣೆಗೆ ಮಿತಿ ಏನು

ಬ್ಯಾಂಕ್‌ಗಳು ಹರಿದ ನೋಟುಗಳ ಬದಲಾವಣೆ ಮಾಡಿಕೊಡುವುದಿಲ್ಲ ಎಂದು ಹೇಳಲಾಗದು. ಆದರೆ, ಹರಿದ/ ಗಲೀಜಾಗಿರುವ ನೋಟುಗಳ ಬದಲಾವಣೆಗೆ ಮಿತಿ ನಿಗದಿಪಡಿಸಲಾಗಿದೆ. ಆರ್‌ಬಿಐ ನಿಯಮಗಳ ಪ್ರಕಾರ ಒಬ್ಬ ವ್ಯಕ್ತಿ ಒಂದು ಬಾರಿಗೆ ಗರಿಷ್ಠ 20 ನೋಟುಗಳನ್ನು ಮಾತ್ರ ಬದಲಾಯಿಸಿಕೊಳ್ಳಬಹುದು. ಅಲ್ಲದೆ, ಅವುಗಳ ಮೌಲ್ಯ 5000 ರೂ. ಮೀರಬಾರದು.

ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರಕಾರ, ನಿಯಮಿತ ಬಳಕೆಯಿಂದಾಗಿ ಕೆಟ್ಟ ನೋಟು ಹಾನಿಯಾಗಿದೆ. ಇದರಲ್ಲಿ ಆ ನೋಟುಗಳೂ ಸೇರಿವೆ. ಅದನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ನೋಟುಗಳಲ್ಲಿ ಬರೆದಿರುವ ಯಾವುದೇ ಪ್ರಮುಖ ಮಾಹಿತಿಯು ಹಾಳಾಗಿಲ್ಲ ಅಥವಾ ಕಾಣೆಯಾಗಿಲ್ಲ ಎಂಬುದನ್ನು ದೃಢೀಕರಿಸಬೇಕು. ಈ ಎಲ್ಲಾ ನೋಟುಗಳನ್ನು ಸರ್ಕಾರಿ ಬ್ಯಾಂಕ್‌ಗಳು, ಖಾಸಗಿ ಬ್ಯಾಂಕ್‌ಗಳು, ಬ್ಯಾಂಕ್‌ಗಳ ಕರೆನ್ಸಿ ಚೆಸ್ಟ್ ಶಾಖೆಗಳು ಅಥವಾ ಭಾರತೀಯ ರಿಸರ್ವ್ ಬ್ಯಾಂಕ್‌ನ ಯಾವುದೇ ಕಚೇರಿಯಿಂದ ವಿನಿಮಯ ಮಾಡಿಕೊಳ್ಳಬಹುದು. ಇದನ್ನು ಮಾಡಲು ಯಾವುದೇ ಫಾರ್ಮ್ ಅನ್ನು ಭರ್ತಿ ಮಾಡುವ ಅಗತ್ಯವಿಲ್ಲ.

ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಬ್ಯಾಂಕ್‌ನಲ್ಲಿರುವ ನೋಟುಗಳ ಗುಣಮಟ್ಟವನ್ನು ಅತ್ಯಾಧುನಿಕ ನೋಟು ಹೊಂದಿಸುವ ಯಂತ್ರದಲ್ಲಿ ಪರಿಶೀಲಿಸುತ್ತದೆ. ಬಳಿಕ ಅವುಗಳನ್ನು ಶಾಖೆಗಳಿಗೆ ವಿವಿಧೆಡೆ ರವಾನಿಸುತ್ತದೆ. ಇಷ್ಟಾಗ್ಯೂ, ಹರಿದ ಅಥವಾ ಗಲೀಜಾಗಿರುವ, ವಿರೂಪಗೊಂಡಿರುವ ನೋಟುಗಳು ಸಿಕ್ಕರೆ ಗ್ರಾಹಕರು ಅವುಗಳನ್ನು ಬ್ಯಾಂಕಿನ ಶಾಖೆಗೆ ಹೋಗಿ ಬದಲಾಯಿಸಬಹುದು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.