ದೀಪಾವಳಿಗೆ ರಿಲಯನ್ಸ್ ಜಿಯೋ ಭರ್ಜರಿ ಆಫರ್, 699 ರೂಗೆ ಜಿಯೋಭಾರತ್ 4ಜಿ ಫೋನ್‌, ಒಂಬತ್ತೇ ತಿಂಗಳಲ್ಲಿ ಹಾಕಿದ ದುಡ್ಡು ವಸೂಲಿ; ಹೇಗಂತೀರಾ..
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ದೀಪಾವಳಿಗೆ ರಿಲಯನ್ಸ್ ಜಿಯೋ ಭರ್ಜರಿ ಆಫರ್, 699 ರೂಗೆ ಜಿಯೋಭಾರತ್ 4ಜಿ ಫೋನ್‌, ಒಂಬತ್ತೇ ತಿಂಗಳಲ್ಲಿ ಹಾಕಿದ ದುಡ್ಡು ವಸೂಲಿ; ಹೇಗಂತೀರಾ..

ದೀಪಾವಳಿಗೆ ರಿಲಯನ್ಸ್ ಜಿಯೋ ಭರ್ಜರಿ ಆಫರ್, 699 ರೂಗೆ ಜಿಯೋಭಾರತ್ 4ಜಿ ಫೋನ್‌, ಒಂಬತ್ತೇ ತಿಂಗಳಲ್ಲಿ ಹಾಕಿದ ದುಡ್ಡು ವಸೂಲಿ; ಹೇಗಂತೀರಾ..

ದೀಪಾವಳಿಗೆ ಮುಂಚಿತವಾಗಿಯೇ ಸಾಮಾನ್ಯ ಗ್ರಾಹಕರಿಗೆ ಖುಷಿಯಾಗುವಂತೆ ರಿಲಯನ್ಸ್ ಜಿಯೋ ಭರ್ಜರಿ ಆಫರ್ ಪ್ರಕಟಿಸಿದೆ. ಜಿಯೋಭಾರತ್ 4ಜಿ ಫೋನ್‌ ಅನ್ನು ಕೇವಲ 699 ರೂಪಾಯಿಗೆ ಒದಗಿಸುವುದಾಗಿ ಪ್ರಕಟಿಸಿದ ಜಿಯೋ, ಇದು ಸೀಮಿತ ಅವಧಿಯ ಕೊಡುಗೆ ಎಂದು ಘೋಷಿಸಿದೆ. ಫೋನ್‌ಗೆ ಹಾಕಿದ ದುಡ್ಡು 9 ತಿಂಗಳಲ್ಲೇ ವಸೂಲಿ ಹೇಗೆ? ಇಲ್ಲಿದೆ ಆ ವಿವರ.

ದೀಪಾವಳಿಗೆ ರಿಲಯನ್ಸ್ ಜಿಯೋ ಭರ್ಜರಿ ಆಫರ್, 699 ರೂಗೆ ಜಿಯೋಭಾರತ್ 4ಜಿ ಫೋನ್‌, ಒಂಬತ್ತೇ ತಿಂಗಳಲ್ಲಿ ಹಾಕಿದ ದುಡ್ಡು ವಸೂಲಿ ಆಗುವುದು ಹೇಗೆ ಎಂಬ ವಿವರ ಇಲ್ಲಿದೆ. (ಸಾಂಕೇತಿಕ ಚಿತ್ರ)
ದೀಪಾವಳಿಗೆ ರಿಲಯನ್ಸ್ ಜಿಯೋ ಭರ್ಜರಿ ಆಫರ್, 699 ರೂಗೆ ಜಿಯೋಭಾರತ್ 4ಜಿ ಫೋನ್‌, ಒಂಬತ್ತೇ ತಿಂಗಳಲ್ಲಿ ಹಾಕಿದ ದುಡ್ಡು ವಸೂಲಿ ಆಗುವುದು ಹೇಗೆ ಎಂಬ ವಿವರ ಇಲ್ಲಿದೆ. (ಸಾಂಕೇತಿಕ ಚಿತ್ರ)

ನವದೆಹಲಿ: ಈ ಸಲ ದೀಪಾವಳಿಗೆ ಫೀಚರ್ ಫೋನ್ ಖರೀದಿ ಮಾಡುವ ಯೋಜನೆಯಲ್ಲಿದ್ದೀರಾ, ಹಾಗಾದರೆ ನಿಮಗೊಂದು ಒಳ್ಳೆಯ ಸುದ್ದಿ ಇದೆ. ದೀಪಾವಳಿಯ ಭರ್ಜರಿ ಕೊಡುಗೆಯಾಗಿ ರಿಲಯನ್ಸ್ ಜಿಯೋ ತನ್ನ ಜಿಯೋಭಾರತ್ 4ಜಿ ಫೀಚರ್ ಫೋನ್‌ ದರವನ್ನು ಶೇಕಡ 30 ಇಳಿಕೆ ಮಾಡಿದ್ದು, 999 ರೂಪಾಯಿ ಫೋನ್ ಅನ್ನು 699 ರೂಪಾಯಿಗೆ ಒದಗಿಸಲಿದೆ. ಇದಲ್ಲದೆ, ಆಕರ್ಷಕ ರೀಚಾರ್ಜ್ ಪ್ಲಾನ್ ಕೂಡ ಪ್ರಕಟಿಸಿದೆ. ಹತ್ತಿರದ ಮೊಬೈಲ್‌ ಅಂಗಡಿಗಳ ಹೊರತಾಗಿ, ಈ ಫೋನ್ ಅನ್ನು ಜಿಯೋ ಮಾರ್ಟ್‌ ಅಥವಾ ಅಮೆಜಾನ್‌ನಲ್ಲೂ ಖರೀದಿಸಬಹುದು. 9 ತಿಂಗಳ ರೀಚಾರ್ಜ್‌ ಬಳಿಕ ಜಿಯೋಭಾರತ್ ಫೋನ್ ಗ್ರಾಹಕರಿಗೆ ಉಚಿತವಾಗಿ ಸಿಕ್ಕಂತಾಗುತ್ತದೆ. ಅಂದರೆ ಫೋನ್‌ಗೆ ಹಾಕಿದ ದುಡ್ಡು 9 ತಿಂಗಳಲ್ಲೇ ವಸೂಲಿಯಾದಂತೆ ಆಗುತ್ತದೆ.

123 ರೂಪಾಯಿಗೆ ತಿಂಗಳ ರೀಚಾರ್ಜ್‌; ಏನೇನು ಸಿಗುತ್ತೆ

ಜಿಯೋದ 123 ರೂಪಾಯಿ ಮಾಸಿಕ ರೀಚಾರ್ಜ್ ಯೋಜನೆಯೊಂದಿಗೆ, ಗ್ರಾಹಕರು ಅನಿಯಮಿತ ಫೋನ್‌ ಕರೆಗಳು, ತಿಂಗಳಿಗೆ 14 GB ಡೇಟಾ, 455 ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳು, ಸಿನಿಮಾ ಪ್ರೀಮಿಯರ್‌ಗಳು ಮತ್ತು ಇತ್ತೀಚಿನ ಚಲನಚಿತ್ರಗಳು, ವಿಡಿಯೋಗಳನ್ನು, ಕ್ರೀಡಾ ನೇರ ಪ್ರಸಾರ ಕಾರ್ಯಕ್ರಮಗಳು, ಜಿಯೋಸಿನಿಮಾದಲ್ಲಿನ ಮುಖ್ಯಾಂಶಗಳನ್ನು ನೋಡಬಹುದು. ಕ್ಯೂಆರ್ ಕೋಡ್ ಸ್ಕ್ಯಾನ್‌ ಪಾವತಿ ಪ್ರಯೋಜನವನ್ನೂ ಆನಂದಿಸಬಹುದು. ಜಿಯೋಪೇ, ಜಿಯೋಚಾಟ್‌ ಮುಂತಾದ ಪ್ರಿಲೋಡೆಡ್ ಅಪ್ಲಿಕೇಶನ್‌ ಕೂಡ ಜಿಯೋಭಾರತ್ 4ಜಿ ಫೋನ್‌ನಲ್ಲಿ ಲಭ್ಯವಿದೆ.

ಫೋನ್‌ಗೆ ಹಾಕಿದ ದುಡ್ಡು 9 ತಿಂಗಳಲ್ಲೇ ವಸೂಲಿ

ಜಿಯೋದ 123 ರೂಪಾಯಿ ಮಾಸಿಕ ರೀಚಾರ್ಜ್ ಯೋಜನೆಯು ಇತರ ಆಪರೇಟರ್‌ಗಳಿಗಿಂತ (ತಿಂಗಳಿಗೆ 199 ರೂಪಾಯಿ) 40 ಪ್ರತಿಶತ ಅಗ್ಗವಾಗಿದೆ ಎಂದು ಕಂಪನಿ ಹೇಳುತ್ತದೆ. ಇತರೆ ಕಂಪನಿಗಳು ಫೀಚರ್ ಫೋನ್‌ಗಳ ಮಾಸಿಕ ರೀಚಾರ್ಜ್‌ಗೆ ಕನಿಷ್ಠ 199 ರೂಪಾಯಿ ಇದೆ. ಇದು ಜಿಯೋದ ಮಾಸಿಕ ರೀಚಾರ್ಜ್‌ ಪ್ಲಾನ್‌ ದರಕ್ಕಿಂತ 76 ರೂಪಾಯಿ ದುಬಾರಿಯಾಗಿದೆ. ಇದರರ್ಥ ಗ್ರಾಹಕರು ಪ್ರತಿ ರೀಚಾರ್ಜ್‌ನಲ್ಲಿ ತಿಂಗಳಿಗೆ 76 ರೂಪಾಯಿ ಉಳಿಸಿದರೆ, ಸಂಪೂರ್ಣ ಫೋನ್ ವೆಚ್ಚವನ್ನು ಅಂದರೆ ಫೋನ್ ಖರೀದಿಗೆ ಕೊಟ್ಟ 699 ರೂಪಾಯಿಯನ್ನು ಕೇವಲ 9 ತಿಂಗಳಲ್ಲಿ ವಾಪಸ್ ಪಡೆದಂತಾಗುತ್ತದೆ. ಅಂದರೆ ಜಿಯೋಭಾರತ್ ಫೋನ್ ಗ್ರಾಹಕರಿಗೆ ಉಚಿತವಾಗಿ ಸಿಕ್ಕಂತಾಗುತ್ತದೆ.

ಈ ಹಿಂದೆ, ಇಂಡಿಯಾ ಮೊಬೈಲ್ ಕಾಂಗ್ರೆಸ್ 2024 ರಲ್ಲಿ, ರಿಲಯನ್ಸ್ ಜಿಯೋ ಮುಂದಿನ ಪೀಳಿಗೆಯ ಕೈಗೆಟುಕುವ 4G ಫೀಚರ್ ಫೋನ್‌ಗಳಾದ ಜಿಯೋಭಾರತ್ V3 ಮತ್ತು V4 ಅನ್ನು ಪರಿಚಯಿಸಿತು. ಇದರ ಬೆಲೆ 1099 ರೂಪಾಯಿ. ಜಿಯೋಭಾರತ್‌ ಫೋನ್‌ಗಳ ಮಾಸಿಕ ರೀಚಾರ್ಜ್‌ ಪ್ಲಾನ್ 123 ರೂಪಾಯಿ ರೂ 123 ರ ಮಾಸಿಕ ರೀಚಾರ್ಜ್ ಯೋಜನೆಯೊಂದಿಗೆ ಅನಿಯಮಿತ ಧ್ವನಿ ಕರೆಗಳು ಮತ್ತು 14 GB ಡೇಟಾದ ಪ್ರಯೋಜನವನ್ನು ಗ್ರಾಹಕರಿಗೆ ನೀಡುತ್ತಿದೆ.

ಜಿಯೋಭಾರತ್‌ ಫೋನ್‌ಗಳು 1000 mAh ಬ್ಯಾಟರಿಯನ್ನು ಹೊಂದಿದ್ದು, ಬಳಕೆದಾರರು ದಿನವಿಡೀ ತಡೆರಹಿತ ಸೇವೆಯನ್ನು ಆನಂದಿಸಬಹುದು. ಫೋನ್‌ಗಳು 128 GB ಸಂಗ್ರಹಣಾ ಸಾಮರ್ಥ್ಯವನ್ನು ಹೊಂದಿದೆ. ಇದು 23 ಭಾರತೀಯ ಭಾಷೆಗಳನ್ನು ಬೆಂಬಲಿಸುತ್ತ ಗ್ರಾಹಕರಿಗೆ ನೆರವಾಗುತ್ತಿದೆ.

"ಜಿಯೋಭಾರತ್ ಫೋನ್‌ಗಳನ್ನು ರಿಲಯನ್ಸ್ ಜಿಯೋ, ಪ್ರಸ್ತುತ 2G ನೆಟ್‌ವರ್ಕ್‌ನಲ್ಲಿರುವ ಜನರಿಗೆ ಕೈಗೆಟುಕುವ ಬೆಲೆಯಲ್ಲಿ ಡೇಟಾ ಅನುಭವವನ್ನು ನೀಡವುದಕ್ಕಾಗಿ ಪರಿಚಯಿಸಿದೆ. ವಾಸ್ತವವಾಗಿ, ಜಿಯೋಭಾರತ್ ಫೋನ್ ಈಗಾಗಲೇ ಸಬ್‌-ಸಿ 1,000 ವಿಭಾಗದಲ್ಲಿ 50 ಪ್ರತಿಶತ ಮಾರುಕಟ್ಟೆ ಪಾಲನ್ನು ಪಡೆದುಕೊಂಡಿದೆ ಎಂದು ರಿಲಯನ್ಸ್ ತನ್ನ 2024ರ ಹಣಕಾಸು ವರ್ಷದ ವಾರ್ಷಿಕ ವರದಿಯಲ್ಲಿ ಬಹಿರಂಗಪಡಿಸಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.