Gold Price Today: ಚಿನ್ನಾಭರಣ ಖರೀದಿಸುವ ಯೋಚನೆ ಇದ್ದರೆ ಇಂದಿನ ದರ ಗಮನಿಸಿ; ಚಿನ್ನದ ದರದಲ್ಲಿ ಇಳಿಕೆ, ಬೆಳ್ಳಿ ದರ ಸ್ಥಿರ
Gold Price Today: ಕರ್ನಾಟಕದಲ್ಲಿ ಇಂದು ಚಿನ್ನದ ದರದಲ್ಲಿ ಇಳಿಕೆಯಾಗಿದ್ದರೆ, ಬೆಳ್ಳಿ ದರ ಸ್ಥಿರವಾಗಿದೆ. ಚಿನಿವಾರ ಪೇಟೆಯಲ್ಲಿ ಇಂದು 22 ಕ್ಯಾರೆಟ್ 1 ಗ್ರಾಂ ಚಿನ್ನದ ದರ 5,450 ರೂ ಆಗಿದೆ. 24 ಕ್ಯಾರೆಟ್ ಅಪರಂಜಿ ಚಿನ್ನದ 1 ಗ್ರಾಂಗೆ 5,945 ರೂ ಆಗಿದೆ.
ಬೆಂಗಳೂರು: ಇದೀಗ ಶ್ರಾವಣ ಮಾಸ ನಡೆಯುತ್ತಿರುವ ಕಾರಣ ರಾಜ್ಯದಲ್ಲಿ ಹಬ್ಬಗಳು ಹಾಗೂ ವಿಶೇಷ ಕಾರ್ಯಕ್ರಮಗಳು ಹೆಚ್ಚಾಗಿ ಜರಗುತ್ತಿವೆ. ಈ ಸಂದರ್ಭದಲ್ಲಿ ಚಿನ್ನಾಭರಣ ಖರೀದಿಸುವುದು ಸಾಮಾನ್ಯ. ನೀವು ಚಿನ್ನ ಖರೀದಿಸುವ ಯೋಚನೆಯಲ್ಲಿದ್ದರೆ ಇಂದು ಖರೀದಿ ಮಾಡಬಹುದು. ಯಾಕೆಂದರೆ ಇಂದು ಚಿನ್ನದ ದರದಲ್ಲಿ ಇಳಿಕೆಯಾಗಿದೆ. ನಿನ್ನೆ ದರ ಸ್ಥಿರವಾಗಿದ್ದು, ನಿನ್ನೆಗಿಂತ ಇಂದು ಕಡಿಮೆಯಾಗಿದೆ. ಕಳೆದ ಕೆಲ ದಿನಗಳಿಂದ ಚಿನ್ನದ ದರದಲ್ಲಿ ಅಂತಹ ವ್ಯತ್ಯಾಸವೇನು ಆಗಿಲ್ಲ. ಇಂದು ಬೆಂಗಳೂರು, ಮಂಗಳೂರು, ಮೈಸೂರು, ಬಳ್ಳಾರಿ ಸೇರಿದಂತೆ ವಿವಿಧೆಡೆ ಇಂದು ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ ನೋಡಿ.
22 ಕ್ಯಾರೆಟ್ ಚಿನ್ನದ ದರ
ಇಂದು ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 5,450 ರೂ ಇದೆ. ನಿನ್ನೆ 5,484 ರೂ ಇದ್ದು, ನಿನ್ನೆಗೆ ಹೋಲಿಸಿದರೆ 34 ರೂ ಕಡಿಮೆ ಆಗಿದೆ. ಇಂದು 8 ಗ್ರಾಂ ಚಿನ್ನದ ದರ 43,600 ರೂ. ಇದೆ. ನಿನ್ನೆ 43,872 ರೂ. ಇದ್ದು ನಿನ್ನೆಗೆ ಹೋಲಿಸಿದರೆ 272 ರೂ ಕಡಿಮೆಯಾಗಿದೆ. ಇಂದು 10 ಗ್ರಾಂ ಚಿನ್ನಕ್ಕೆ 54,500 ಆಗಿದ್ದು, ನಿನ್ನೆ 54,840 ರೂ. ಇತ್ತು. ನಿನ್ನೆಯ ದರಕ್ಕೆ ಹೋಲಿಸಿದರೆ ಇಂದು 340 ರೂ. ಇಳಿಕೆ ಕಂಡಿದೆ. ಇಂದು 100 ಗ್ರಾಂ ಚಿನ್ನದ ದರ 5,45,000 ಇದ್ದು, ನಿನ್ನೆ 5,48,400 ರೂ ಇತ್ತು. ನಿನ್ನೆಯ ದರಕ್ಕೆ ಹೋಲಿಸಿದರೆ ಇಂದು 3,400 ರೂ ಇಳಿಕೆ ಕಂಡಿದೆ.
24 ಕ್ಯಾರೆಟ್ ಚಿನ್ನದ ದರ
ಇಂದು ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 5,945 ರೂ. ಇದೆ. ನಿನ್ನೆ 5,983 ರೂ. ಇತ್ತು. ನಿನ್ನೆಗೆ ಹೋಲಿಸಿದರೆ ಇಂದು 38 ರೂ. ಇಳಿಕೆ ಕಂಡಿದೆ. 8 ಗ್ರಾಂ ಚಿನ್ನದ ದರ ಇಂದು 47,560 ರೂ. ಆಗಿದ್ದು, ನಿನ್ನೆ 47,864 ರೂ. ಇದ್ದು, ನಿನ್ನೆಗೆ ಹೋಲಿಸಿದರೆ 304 ರೂ ಇಳಿಕೆ ಕಂಡಿದೆ. ಇಂದು 10 ಗ್ರಾಂ ಚಿನ್ನ ಖರೀದಿಸುವುದಾದರೆ 59,450 ರೂ. ನೀಡಬೇಕು. ನಿನ್ನೆ 59,830 ರೂ ಇತ್ತು. ನಿನ್ನೆಯ ದರಕ್ಕೆ ಹೋಲಿಸಿದರೆ ಇಂದು 380 ರೂ ಕಡಿಮೆ ಆಗಿದೆ. ಇಂದು 100 ಗ್ರಾಂ ಚಿನ್ನದ ದರ 5,94,500 ರೂ ಆಗಿದ್ದು, ನಿನ್ನೆ 5,98,300 ರೂ ಆಗಿದೆ. ನಿನ್ನೆಯ ದರಕ್ಕೆ ಹೋಲಿಸಿದರೆ ಇಂದು 3800 ರೂ, ಇಳಿಕೆ ಕಂಡಿದೆ.
ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ದರ
10 ಗ್ರಾಂ 22 ಕ್ಯಾರೆಟ್ ಚಿನ್ನದ ದರ ಇಂದು ಬೆಂಗಳೂರಿನಲ್ಲಿ 54,500 ರೂ. ಇದೆ. ಮಂಗಳೂರು 54,500 ರೂ., ಮೈಸೂರಿನಲ್ಲಿ 54,500 ರೂ. ಇದೆ. ಸಾಮಾನ್ಯವಾಗಿ ರಾಜ್ಯದ ಬಹುತೇಕ ನಗರಗಳಲ್ಲಿ ಇಂದು ಇದೇ ದರ ಇರುತ್ತದೆ. ಮಜೂರಿ, ಇತರೆ ಶುಲ್ಕ ಇತ್ಯಾದಿಗಳಿಂದ ಚಿನ್ನದಂಗಡಿಯಿಂದ ಚಿನ್ನದಂಗಡಿಗೆ ದರ ವ್ಯತ್ಯಾಸ ಇರಬಹುದು. ಚೆನ್ನೈನಲ್ಲಿ 54,800 ರೂ., ಮುಂಬೈನಲ್ಲಿ 54,500 ರೂ., ದೆಹಲಿಯಲ್ಲಿ 54,650 ರೂ., ಕೋಲ್ಕತಾದಲ್ಲಿ 54,500 ರೂ., ಹೈದರಾಬಾದ್ 54,500 ರೂ., ಕೇರಳ 54,500 ರೂ., ಪುಣೆ 54,500 ರೂ., ಅಹಮದಾಬಾದ್ 54,550 ರೂ., ಜೈಪುರ 54,650 ರೂ., ಲಖನೌ 54,650 ರೂ., ಕೊಯಮತ್ತೂರು 54,800 ರೂ., ಮಧುರೈ 54,800 ರೂ. ಹಾಗೂ ವಿಜಯವಾಡ 54,500 ರೂ., ಇದೆ.
ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ದರ
10 ಗ್ರಾಂ 24 ಕ್ಯಾರೆಟ್ ಚಿನ್ನದ ದರ ಇಂದು ಬೆಂಗಳೂರಿನಲ್ಲಿ 59,780 ರೂ. ಇದೆ. ಮಂಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿಯೂ ಇದೇ ದರ ಇದೆ. ಚೆನ್ನೈನಲ್ಲಿ 59,450 ರೂ., ಮುಂಬೈನಲ್ಲಿ 59,600 ರೂ., ದೆಹಲಿಯಲ್ಲಿ 59,600 ರೂ., ಕೋಲ್ಕತಾದಲ್ಲಿ 59,450 ರೂ., ಹೈದರಾಬಾದ್ 59,450 ರೂ., ಕೇರಳ 59,450 ರೂ., ಪುಣೆ 59,450 ರೂ., ಅಹಮದಾಬಾದ್ 59,500 ರೂ., ಜೈಪುರ 59,600 ರೂ., ಲಖನೌ 59,600 ರೂ., ಕೊಯಮುತ್ತೂರು 59,780 ರೂ., ಮದುರೈ 59,780, ವಿಜಯವಾಡ 59,450 ರೂ. ಇದೆ.
ಇಂದು ಬೆಳ್ಳಿ ದರ ಎಷ್ಟಿದೆ?
ಒಂದು ಗ್ರಾಂ ಬೆಳ್ಳಿಗೆ 73.25 ರೂ. 8 ಗ್ರಾಂ ಬೆಳ್ಳಿಗೆ 586 ರೂ., 10 ಗ್ರಾಂ ಬೆಳ್ಳಿ ದರ 732.50 ರೂ., 100 ಗ್ರಾಂ ಬೆಳ್ಳಿಗೆ 7,325 ಮತ್ತು 1 ಕೆ.ಜಿ. ಬೆಳ್ಳಿ ದರ 73,250 ರೂಪಾಯಿ ಇದೆ.
ವಿಭಾಗ