ಶ್ರಾವಣ ಸೋಮವಾರದ ಶುಭ ದಿನ, ಈ ದಿನ ಬೆಂಗಳೂರು ಮಂಗಳೂರು ಮೈಸೂರಲ್ಲಿ ಹೇಗಿದೆ ಚಿನ್ನ ಬೆಳ್ಳಿ ಧಾರಣೆ
Gold Rate Today in Bengaluru; ಈ ದಿನ ಎರಡನೇ ಶ್ರಾವಣ ಸೋಮವಾರ. ಚಿನ್ನಾಭರಣ ಖರೀದಿಗೆ ಮನಸ್ಸು ಮಾಡಿದ್ದೀರಾ? ಹಾಗಾದ್ರೆ, ಈಗಲೇ ಬೆಂಗಳೂರು ಮಂಗಳೂರು ಮೈಸೂರಲ್ಲಿ ಹೇಗಿದೆ ಚಿನ್ನ ಬೆಳ್ಳಿ ಧಾರಣೆ ಅಂತ ಚೆಕ್ ಮಾಡಿಕೊಳ್ಳಿ ಒಮ್ಮೆ.
ಬೆಂಗಳೂರು: ಎರಡನೆ ಶ್ರಾವಣ ಸೋಮವಾರದ ಸಂಭ್ರಮ. ಅನೇಕರು ಚಿನ್ನಾಭರಣ ಖರೀದಿಗೆ ಮನಸ್ಸು ಮಾಡುವ ಸಮಯ ಇದು. ಹೂಡಿಕೆಗಾದರೂ ಅಷ್ಟೆ, ಅಲಂಕಾರಕ್ಕಾದರೂ ಅಷ್ಟೆ. ಮೊದಲು ಚಿನ್ನ ಬೆಳ್ಳಿ ರೇಟ್ (Gold Silver Rate Today) ಗಮನಿಸುವುದು ವಾಡಿಕೆ. ನಿನ್ನೆ ಭಾನುವಾರ ರಜಾದಿನ. ಯಾವುದೇ ವಹಿವಾಟು ಇಲ್ಲದ ಕಾರಣ ಚಿನ್ನ ಬೆಳ್ಳಿ ಧಾರಣೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಗುಡ್‌ರಿಟರ್ನ್ಸ್ ವೆಬ್‌ತಾಣದ ಮಾಹಿತಿ ಪ್ರಕಾರ ಸೋಮವಾರವಾದ ಇಂದು (ಆಗಸ್ಟ್ 12) ಚಿನ್ನದ ದರ 10 ಗ್ರಾಂಗೆ 10 ರೂಪಾಯಿ ಇಳಿಕೆಯಾಗಿದೆ.
ಬೆಂಗಳೂರಿನ ಚಿನಿವಾರ ಪೇಟೆಯಲ್ಲಿ ಶನಿವಾರದ ವಹಿವಾಟು ಕೊನೆಯಾದಾಗ ಸ್ಟಾಂಡರ್ಡ್ ಚಿನ್ನ (99.5 ಪರಿಶುದ್ಧ)ದ ಬೆಲೆ 10 ಗ್ರಾಂಗೆ 71,820 ರೂಪಾಯಿ ಇತ್ತು. ಆಭರಣ ಚಿನ್ನದ ಬೆಲೆ ಗ್ರಾಂಗೆ 6,645 ರೂಪಾಯಿ ಇತ್ತು. ಇನ್ನು ಬೆಳ್ಳಿ ದರ ಕಿಲೋಗೆ 82,400 ರೂಪಾಯಿ ಇತ್ತು.
ಬೆಂಗಳೂರು, ಮಂಗಳೂರು, ಮೈಸೂರುಗಳಲ್ಲಿ 22 ಕ್ಯಾರೆಟ್ ಆಭರಣ ಚಿನ್ನದ ದರ (22 carat gold rate)
ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ದೇಶದ ಪ್ರಮುಖ ನಗರಗಳಲ್ಲಿ 10 ಗ್ರಾಂ 22 ಕ್ಯಾರೆಟ್ ಆಭರಣ ಚಿನ್ನದ ದರ ನಿನ್ನೆ (ಆಗಸ್ಟ್ 11) ಸ್ಥಿರವಾಗಿತ್ತು. ಯಾವುದೇ ಬದಲಾವಣೆ ಇರಲಿಲ್ಲ. ಇಂದು (ಆಗಸ್ಟ್ 12) 10 ಗ್ರಾಂ ಚಿನ್ನದ ದರ 10 ರೂಪಾಯಿ ಇಳಿಕೆಯಾಗಿದೆ.
ಬೆಂಗಳೂರು- 64,440 ರೂಪಾಯಿ.
ಮಂಗಳೂರು- 64,440 ರೂಪಾಯಿ.
ಮೈಸೂರು-64,440 ರೂಪಾಯಿ.
ಚೆನ್ನೈ- 64,440 ರೂಪಾಯಿ.
ಮುಂಬೈ- 64,440 ರೂಪಾಯಿ.
ದೆಹಲಿ- 64,590 ರೂಪಾಯಿ.
ಕೋಲ್ಕತ- 64,440 ರೂಪಾಯಿ.
ಹೈದರಾಬಾದ್- 63,440 ರೂಪಾಯಿ.
ಕೇರಳ- 64,440 ರೂಪಾಯಿ.
ಪುಣೆ- 64,440 ರೂಪಾಯಿ.
ಬೆಂಗಳೂರು, ಮಂಗಳೂರು, ಮೈಸೂರಿಗಳಲ್ಲಿ ಇಂದು ಅಪರಂಜಿ ಚಿನ್ನ (24 carat gold rate)ದ ದರ
ಬೆಂಗಳೂರು- 70,300 ರೂಪಾಯಿ.
ಮಂಗಳೂರು- 70,300 ರೂಪಾಯಿ.
ಮೈಸೂರು- 70,300 ರೂಪಾಯಿ.
ಚೆನ್ನೈ- 70,300 ರೂಪಾಯಿ.
ಮುಂಬೈ- 70,300 ರೂಪಾಯಿ.
ದೆಹಲಿ- 70,450 ರೂಪಾಯಿ.
ಕೋಲ್ಕತ- 70,300 ರೂಪಾಯಿ.
ಹೈದರಾಬಾದ್- 70,300 ರೂಪಾಯಿ.
ಕೇರಳ- 70,300 ರೂಪಾಯಿ.
ಪುಣೆ- 70,300 ರೂಪಾಯಿ.
ದೇಶದ ಪ್ರಮುಖ ನಗರಗಳಲ್ಲಿ ಒಂದು ಕಿಲೋ ಬೆಳ್ಳಿಯ ದರ (Silver Rate Today): ನಾಡಿನ ವಿವಿಧ ನಗರಗಳಲ್ಲಿ ಒಂದು ಕಿಲೋ ಬೆಳ್ಳಿ ದರ ಇಂದು (ಆಗಸ್ಟ್ 12) 100 ರೂಪಾಯಿ ಇಳಿಕೆಯಾಗಿದ್ದು, ಅದರ ವಿವರ ಹೀಗಿದೆ. ಬೆಂಗಳೂರು- 80,550 ರೂಪಾಯಿ, ಮೈಸೂರು- 80,550 ರೂಪಾಯಿ, ಮಂಗಳೂರು- 80,550 ರೂಪಾಯಿ, ಮುಂಬೈ- 83,000 ರೂಪಾಯಿ, ಚೆನ್ನೈ- 88,000 ರೂಪಾಯಿ, ದೆಹಲಿ- 83,000 ರೂಪಾಯಿ, ಹೈದರಾಬಾದ್- 88,000 ರೂಪಾಯಿ, ಕೋಲ್ಕತ್ತ-83,000 ರೂಪಾಯಿ ಇದೆ.