Gold Rate Today: ಗುರುವಾರ ಏರಿತು ಬಂಗಾರದ ಬೆಲೆ, 22 ಕ್ಯಾರೆಟ್ 8 ಗ್ರಾಂ ಚಿನ್ನಕ್ಕೆ 600 ರೂ ಹೆಚ್ಚಳ; ಬೆಳ್ಳಿಯೂ ಏರಿಕೆ
ಚಿನ್ನದ ದರ ಕೊಂಚ ಕಡಿಮೆಯಾಯ್ತು ಎಂದು ನೀವು ನಿಟ್ಟುಸಿರು ಬಿಟ್ಟಿದ್ದರೆ, ಇಂದು ಮತ್ತೆ ಏರಿಕೆಯಾಗುವ ಮೂಲಕ ನಿರಾಸೆ ಮೂಡಿಸಿದೆ. ಆಭರಣ ಪ್ರಿಯರಿಗೆ ಇತ್ತೀಚಿಗೆ ಪ್ರತಿದಿನ ಬೇಸರ ಕಾಡುತ್ತಿದೆ. ಇದಕ್ಕೆ ಕಾರಣ ಚಿನ್ನದ ದರದಲ್ಲಿನ ಏರಿಳಿತ. ಇಂದು (ಏಪ್ರಿಲ್ 4) ಚಿನ್ನ ದರ ಕೂಡ ಹೆಚ್ಚಾಗಿದೆ.
ಬೆಂಗಳೂರು: ಯುಗಾದಿ ಹಬ್ಬದ ಹತ್ತಿರದಲ್ಲೇ ಇದ್ದು, ಚಿನ್ನ ಬೆಳ್ಳಿ ಖರೀದಿ ಮಾಡೋಣ ಎಂದು ನೀವು ಅಂದುಕೊಂಡಿದ್ದರೆ ನಿಮಗೆ ನಿರಾಸೆ ಕಾಡುವುದು ಖಚಿತ. ಯಾಕೆಂದರೆ ಕಳೆದೊಂದು ವಾರದಿಂದ ದಿನಬಿಡದೇ ದಿನ ಚಿನ್ನದ ದರ ಹೆಚ್ಚು ಕಡಿಮೆ ಆಗುತ್ತಲೇ ಇದೆ. ಒಂದು ದಿನ ಏರಿಕೆಯಾದರೆ, ಮತ್ತೊಂದು ದಿನ ಇಳಿಕೆಯಾಗುತ್ತಿದೆ. ಇದರಿಂದ ಆಭರಣ ಪ್ರಿಯರು ಗೊಂದಲಕ್ಕೆ ಸಿಲುಕಿದ್ದಾರೆ. ಬಂಗಾರದ ಬೆಲೆ ಹೆಚ್ಚುವುದೋ, ಕಡಿಮೆಯಾಗುವುದೋ ಎಂಬ ಚಿಂತೆ ಕಾಡುತ್ತಿರುವುದು ಸುಳ್ಳಲ್ಲ. ಈ ನಡುವೆ ಬೆಳ್ಳಿ ದರದಲ್ಲೂ ಏರಿಳಿತ ಸಾಮಾನ್ಯವಾಗಿದೆ.
22 ಕ್ಯಾರೆಟ್ ಚಿನ್ನದ ಬೆಲೆ
ಇಂದು 1 ಗ್ರಾಂ ಚಿನ್ನಕ್ಕೆ 6,140 ರೂ. ಇದೆ. ನಿನ್ನೆ 6,335 ರೂ ಇದ್ದು, ಈ ದರಕ್ಕೆ ಹೋಲಿಸಿದರೆ 75 ರೂ ಏರಿಕೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 51,280 ರೂ. ನೀಡಬೇಕು. ನಿನ್ನೆ 50,680 ರೂ ಇದ್ದು, ನಿನ್ನೆ ದರಕ್ಕೆ ಹೋಲಿಸಿದರೆ ಇಂದು 600 ರೂ. ಹೆಚ್ಚಾಗಿದೆ. 10 ಗ್ರಾಂ ಚಿನ್ನಕ್ಕೆ 64,100 ರೂ ಇದೆ. ನಿನ್ನೆ 63,350 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ 750 ರೂ. ಏರಿಕೆಯಾಗಿದೆ. 100 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 6,41,000 ರೂ. ನೀಡಬೇಕು. ನಿನ್ನೆ 6,33,500 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 7,500 ರೂ. ಹೆಚ್ಚಾಗಿದೆ.
24 ಕ್ಯಾರೆಟ್ ಚಿನ್ನದ ಬೆಲೆ
24 ಕ್ಯಾರೆಟ್ ಚಿನ್ನಕ್ಕೆ 1 ಗ್ರಾಂಗೆ 6,987 ರೂ. ಇದೆ. ನಿನ್ನೆ 6,911 ರೂ. ಇದು ಈ ದರಕ್ಕೆ ಹೋಲಿಸಿದರೆ 76 ರೂ ಹೆಚ್ಚಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 55,896 ರೂ. ನೀಡಬೇಕು. ನಿನ್ನೆ 55,288 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 608 ರೂ. ಏರಿಕೆಯಾಗಿದೆ. ಇಂದು 10 ಗ್ರಾಂ ಚಿನ್ನಕ್ಕೆ 69,870 ನೀಡಬೇಕು. ನಿನ್ನೆ 69,110 ರೂ. ಇದ್ದು, ಈ ದರಕ್ಕೆ ಹೋಲಿಸಿದರೆ 760 ರೂ ಏರಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ 6,98,700 ರೂ. ಇದೆ. ನಿನ್ನೆ 6,91,100 ರೂ ಇತ್ತು. ಈ ದರಕ್ಕೆ ಹೋಲಿಸಿದರೆ 7,600 ರೂ ಹೆಚ್ಚಾಗಿದೆ.
ಕರ್ನಾಟಕದಲ್ಲಿ ಚಿನ್ನದ ಬೆಲೆ (10 ಗ್ರಾಂ)
ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್ಗೆ 64,100 ರೂ. ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ 69,870 ರೂ. ಇದೆ. ಮೈಸೂರು, ಮಂಗಳೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.
ಹೊರ ರಾಜ್ಯಗಳಲ್ಲಿ ಚಿನ್ನದ ದರ (10 ಗ್ರಾಂ)
ಚೆನ್ನೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 65,000 ರೂ. 24 ಕ್ಯಾರೆಟ್ಗೆ 70,910 ರೂ. ಇದೆ. ಮುಂಬೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 64,100 ರೂ. 24 ಕ್ಯಾರೆಟ್ಗೆ 69,870 ರೂ. ಇದೆ. ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 64,100 ರೂ. 24 ಕ್ಯಾರೆಟ್ಗೆ 70,020 ರೂ. ಇದೆ. ಕೊಲ್ಕತ್ತಾದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 64,100 ರೂ. 24 ಕ್ಯಾರೆಟ್ಗೆ 69,870 ರೂ. ಇದೆ. ಹೈದರಾಬಾದ್ನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 64,100 ರೂ. ಇದ್ದರೆ, 24 ಕ್ಯಾರೆಟ್ಗೆ 69,870 ರೂ. ಇದೆ. ಕೇರಳದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 64,100 ರೂ. 24 ಕ್ಯಾರೆಟ್ಗೆ 69,870 ರೂ. ಆಗಿದೆ.
ಬೆಳ್ಳಿ ದರ
ಇಂದು ಬೆಳ್ಳಿ ದರ ಕೂಡ ಹೆಚ್ಚಾಗಿದೆ. ಒಂದು ಗ್ರಾಂ ಬೆಳ್ಳಿಗೆ 78.25 ರೂ. ಇದೆ. 8 ಗ್ರಾಂಗೆ 626 ರೂ ಇದ್ದರೆ, 10 ಗ್ರಾಂಗೆ 782.50 ರೂ. ಇದೆ. 100 ಗ್ರಾಂಗೆ 7,825 ರೂ. ಹಾಗೂ 1 ಕಿಲೋಗೆ 78,250 ರೂ. ಬೆಲೆ ನಿಗದಿ ಆಗಿದೆ.