ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Aadhaar-pan Link: ಮೇ 31ರೊಳಗೆ ಆಧಾರ್‌-ಪ್ಯಾನ್‌ ಲಿಂಕ್‌ ಮಾಡದಿದ್ರೆ ದುಪ್ಪಟ್ಟು ತೆರಿಗೆ ಕಡಿತದ ಜತೆ ಈ ಸಮಸ್ಯೆಯೂ ಎದುರಾಗುತ್ತೆ

Aadhaar-PAN link: ಮೇ 31ರೊಳಗೆ ಆಧಾರ್‌-ಪ್ಯಾನ್‌ ಲಿಂಕ್‌ ಮಾಡದಿದ್ರೆ ದುಪ್ಪಟ್ಟು ತೆರಿಗೆ ಕಡಿತದ ಜತೆ ಈ ಸಮಸ್ಯೆಯೂ ಎದುರಾಗುತ್ತೆ

ಮೇ 31ರ ಒಳಗೆ ಆಧಾರ್‌-ಪ್ಯಾನ್‌ ಲಿಂಕ್‌ ಮಾಡದೇ ಇದ್ದರೆ ಹೆಚ್ಚು ತೆರಿಗೆ ಪಾವತಿಸಬೇಕಾಗುತ್ತದೆ. ಆಧಾರ್‌-ಪ್ಯಾನ್‌ ಲಿಂಕ್‌ ಮಾಡದೇ ಇದ್ದರೆ ಟಿಡಿಎಸ್‌ ಕಡಿತದ ಪ್ರಮಾಣ ಏರಿಕೆಯಾಗುವ ಜೊತೆಗೆ ಆಧಾರ್‌ ಲಿಂಕ್‌ ಮಾಡದ ಪ್ಯಾನ್‌ ಕಾರ್ಡ್‌ಗಳು ನಿಷ್ಕ್ರೀಯಗೊಳ್ಳುತ್ತವೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.

ಮೇ 31ರೊಳಗೆ ಆಧಾರ್‌-ಪ್ಯಾನ್‌ ಲಿಂಕ್‌ ಮಾಡದಿದ್ರೆ ದುಪ್ಪಟ್ಟು ತೆರಿಗೆ ಕಡಿತದ ಜತೆ ಈ ಸಮಸ್ಯೆಯೂ ಎದುರಾಗುತ್ತೆ
ಮೇ 31ರೊಳಗೆ ಆಧಾರ್‌-ಪ್ಯಾನ್‌ ಲಿಂಕ್‌ ಮಾಡದಿದ್ರೆ ದುಪ್ಪಟ್ಟು ತೆರಿಗೆ ಕಡಿತದ ಜತೆ ಈ ಸಮಸ್ಯೆಯೂ ಎದುರಾಗುತ್ತೆ

ಬೆಂಗಳೂರು: ನೀವು ಆದಾಯ ತೆರಿಗೆ ಪಾವತಿ ಮಾಡುವವರಾಗಿದ್ದರೆ ಈ ಸುದ್ದಿ ನಿಮಗೆ ತಿಳಿದಿರಲೇಬೇಕು. ನೀವು ಆಧಾರ್‌-ಪ್ಯಾನ್‌ ಲಿಂಕ್‌ ಮಾಡದೇ ಇದ್ದರೆ ಇಂದೇ ಮಾಡಿ. ಇಲ್ಲದಿದ್ದಲ್ಲಿ ನಿಮ್ಮ ಜೇಬಿಗೆ ಕತ್ತರಿ ಬೀಳುವುದು ಖಂಡಿತ. ಟಿಡಿಎಸ್‌ ಹಾಗೂ ಟಿಸಿಎಸ್‌ ಕಡಿತವನ್ನು ಕಡಿಮೆ ಮಾಡಲು ಮೇ 31ರ ಒಳಗೆ ಆಧಾರ್‌-ಪ್ಯಾನ್‌ ಲಿಂಕ್‌ ಮಾಡಲೇಬೇಕು ಎಂದು ಆದಾಯ ತೆರಿಗೆ ಇಲಾಖೆ ಸೂಚಿಸಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮೇ 28 ರಂದು ಪೋಸ್ಟ್‌ ಹಾಕಿದ್ದು ʼತೆರಿಗೆದಾರರೇ ಗಮನಿಸಿ, ಇದೇ ಮೇ 31ರ ಒಳಗೆ ನಿಮ್ಮ ಆಧಾರ-ಪ್ಯಾನ್‌ ಲಿಂಕ್‌ ಮಾಡಿʼ ಎಂದು ಬರೆದುಕೊಂಡಿದೆ.

ಟ್ರೆಂಡಿಂಗ್​ ಸುದ್ದಿ

ʼಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್‌ 206AA ಮತ್ತು 260CC ಅಡಿಯಲ್ಲಿ ಟ್ಯಾಕ್ಸ್‌ ಹೆಚ್ಚು ಕಟ್‌ ಆಗುವುದು ಹಾಗೂ ಹೆಚ್ಚಿನ ತೆರಿಗೆ ಸಂಗ್ರಹವನ್ನು ತಡೆಯಲು ಇದೇ ಮೇ 31ರ ಒಳಗೆ ನಿಮ್ಮ ಪ್ಯಾನ್‌ನೊಂದಿಗೆ ಆಧಾರ್‌ ಲಿಂಕ್‌ ಮಾಡುವುದು ಕಡ್ಡಾಯವಾಗಿದೆ. ಇಲ್ಲಿದಿದ್ದಲ್ಲಿ ಮಾರ್ಚ್‌ 31, 2024ರ ನಂತರ ವಹಿವಾಟುಗಳಿಗೆ ಪ್ಯಾನ್‌ ನಿಷ್ಕ್ರೀಯವಾಗುತ್ತದೆʼ ಎಂದು ತಿಳಿಸಿದೆ.

ಪ್ಯಾನ್‌ ಅನ್ನು ಆಧಾರ್‌ನೊಂದಿಗೆ ಲಿಂಕ್‌ ಮಾಡದೇ ಇದ್ದಾಗ, ಟಿಡಿಎಸ್‌ ಕಡಿತ ಪ್ರಮಾಣ ಏರಿಕೆಯಾಗುತ್ತದೆ, ಅಲ್ಲದೇ ಲಿಂಕ್‌ ಆಗದ ಪ್ಯಾನ್‌ ನಿಷ್ಕ್ರೀಯಗೊಳ್ಳುತ್ತದೆ.

ಯಾರು ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡಬೇಕು?

ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 139AA ಜುಲೈ 1, 2017 ರಂತೆ ಶಾಶ್ವತ ಖಾತೆ ಸಂಖ್ಯೆ (PAN) ಅನ್ನು ನಿಗದಿಪಡಿಸಿದ ಮತ್ತು ಆಧಾರ್ ಸಂಖ್ಯೆಯನ್ನು ಪಡೆಯಲು ಅರ್ಹರಾಗಿರುವ ಪ್ರತಿಯೊಬ್ಬ ವ್ಯಕ್ತಿಯು ತನ್ನ ಆಧಾರ್ ಸಂಖ್ಯೆಯನ್ನು ನಿಗದಿತ ನಮೂನೆ ಮತ್ತು ವಿಧಾನದಲ್ಲಿ ತಿಳಿಸಬೇಕು. 30ನೇ ಜೂನ್ 2023 ರವರೆಗೆ ನಿಮ್ಮ ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ ನಿಮ್ಮ ಪ್ಯಾನ್ ನಿಷ್ಕ್ರಿಯವಾಗುತ್ತದೆ. ಆದಾಗ್ಯೂ, ವಿನಾಯಿತಿ ಪಡೆದ ವರ್ಗದ ಅಡಿಯಲ್ಲಿ ಬರುವ ಜನರು PAN ನಿಷ್ಕ್ರಿಯಗೊಳ್ಳುವ ಪರಿಣಾಮಗಳಿಗೆ ಒಳಪಡುವುದಿಲ್ಲ.

ಪ್ಯಾನ್‌ನೊಂದಿಗೆ ಆಧಾರ್‌ ಲಿಂಕ್‌ ಮಾಡುವುದು ಹೇಗೆ?

ಹಂತ 1: ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ ಆದ https://www.incometax.gov.in/iec/foportal ಗೆ ಭೇಟಿ ನೀಡಿ.

ಹಂತ 2: ಅಲ್ಲಿರುವ ಕ್ವಿಕ್‌ ಲಿಂಕ್ಸ್‌ ಅಡಿಯಲ್ಲಿ ಲಿಂಕ್‌ ಆಧಾರ್‌ ಮೇಲೆ ಕ್ಲಿಕ್‌ ಮಾಡಿ. ಅಲ್ಲಿ ಪ್ಯಾನ್‌, ಆಧಾರ್‌ ಸಂಖ್ಯೆ ಹಾಗೂ ಆಧಾರ್‌ ಕಾರ್ಡ್‌ನಲ್ಲಿ ಇರುವಂತೆ ನಿಮ್ಮ ಹೆಸರು ಟೈಪ್‌ ಮಾಡಿ.

ಹಂತ 3: ನಂತರ ನಿಮ್ಮ ಪ್ಯಾನ್‌ ನಂಬರ್‌, ಆಧಾರ್‌ ನಂಬರ್‌, ಹೆಸರು, ಮೊಬೈಲ್‌ ಸಂಖ್ಯೆ, ಆಧಾರ್‌ನಲ್ಲಿ ನಮೂದಿಸಿರುವಂತೆ ಜನ್ಮದಿನಾಂಕ ಎಲ್ಲವನ್ನೂ ನಮೂದಿಸಿ. ಎಲ್ಲವೂ ವ್ಯಾಲಿಡೇಟ್‌ ಆದ ಮೇಲೆ ಲಿಂಕ್‌ ಆಧಾರ್‌ ಮೇಲೆ ಕ್ಲಿಕ್‌ ಮಾಡಿ.

ಹಂತ 4: ನಂತರ ಕ್ಯಾಪ್ಚಾ ಕೋಡ್‌ ಎಂಟರ್‌ ಮಾಡಿ. ನಿಮ್ಮ ಮೊಬೈಲ್‌ಗೆ ಒಟಿಪಿ ಬರುತ್ತದೆ. ಅದನ್ನು ನಮೂದಿಸಿ.

ಆದರೆ ಒಂದು ವಿಚಾರ ನೆನಪಿಡಿ ನೀವು 1000 ರೂ ದಂಡ ಪಾವತಿಸಿದ ನಂತರವಷ್ಟೇ ಆಧಾರ್‌-ಪ್ಯಾನ್‌ ಲಿಂಕ್‌ ಮಾಡಲು ಸಾಧ್ಯ.

ಟಿ20 ವರ್ಲ್ಡ್‌ಕಪ್ 2024