ಮಧ್ಯಮ ವರ್ಗದವರನ್ನು ಮೆಚ್ಚಿಸಲು ಬರ್ತಿದೆ ಒಬೆನ್‌ ರೋರ್ ಇಝೆಡ್ ಇ ಬೈಕ್‌; ಬಿಡುಗಡೆ ದಿನಾಂಕ, ಫೀಚರ್ಸ್ ಮತ್ತು ಇತರೆ ವಿವರ ಹೀಗಿದೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಮಧ್ಯಮ ವರ್ಗದವರನ್ನು ಮೆಚ್ಚಿಸಲು ಬರ್ತಿದೆ ಒಬೆನ್‌ ರೋರ್ ಇಝೆಡ್ ಇ ಬೈಕ್‌; ಬಿಡುಗಡೆ ದಿನಾಂಕ, ಫೀಚರ್ಸ್ ಮತ್ತು ಇತರೆ ವಿವರ ಹೀಗಿದೆ

ಮಧ್ಯಮ ವರ್ಗದವರನ್ನು ಮೆಚ್ಚಿಸಲು ಬರ್ತಿದೆ ಒಬೆನ್‌ ರೋರ್ ಇಝೆಡ್ ಇ ಬೈಕ್‌; ಬಿಡುಗಡೆ ದಿನಾಂಕ, ಫೀಚರ್ಸ್ ಮತ್ತು ಇತರೆ ವಿವರ ಹೀಗಿದೆ

Oben Electric Rorr EZ: ಬೆಂಗಳೂರು ಮೂಲದ ಒಬೆನ್ ಎಲೆಕ್ಟ್ರಿಕ್‌, ಇ ಬೈಕ್ ಮಾರುಕಟ್ಟೆ ಹೊಸ ಇ ಬೈಕ್ ಪರಿಚಯಿಸಲು ಮುಂದಾಗಿದೆ. ಮಧ್ಯಮ ವರ್ಗದವರನ್ನು ಮೆಚ್ಚಿಸಲು ಒಬೆನ್‌ ರೋರ್ ಇಝೆಡ್ ಇ ಬೈಕ್‌ ಬರ್ತಿದೆ. ಬಿಡುಗಡೆ ದಿನಾಂಕ, ಫೀಚರ್ಸ್, ದರ ಮತ್ತು ಇತರೆ ವಿವರ ಇಲ್ಲಿದೆ.

ಒಬೆನ್‌ ರೋರ್ ಇಝೆಡ್ ಇ ಬೈಕ್‌: ಮಧ್ಯಮ ವರ್ಗದವರನ್ನು ಮೆಚ್ಚಿಸಲು ಹೊಸ ಇ ಬೈಕ್‌ ಬರ್ತಿದೆ. ಇದರ ಟೀಸರ್ ಬಿಡುಗಡೆಯಾಗಿದ್ದು, ಗ್ರಾಹಕರ ಮನಸೆಳೆದಿದೆ.
ಒಬೆನ್‌ ರೋರ್ ಇಝೆಡ್ ಇ ಬೈಕ್‌: ಮಧ್ಯಮ ವರ್ಗದವರನ್ನು ಮೆಚ್ಚಿಸಲು ಹೊಸ ಇ ಬೈಕ್‌ ಬರ್ತಿದೆ. ಇದರ ಟೀಸರ್ ಬಿಡುಗಡೆಯಾಗಿದ್ದು, ಗ್ರಾಹಕರ ಮನಸೆಳೆದಿದೆ.

ಬೆಂಗಳೂರು: ಎಲೆಕ್ಟ್ರಿಕ್ ದ್ವಿಚಕ್ರ ಬೈಕು ಮಾರುಕಟ್ಟೆ ಪ್ರವೇಶಿಸುವುದಕ್ಕೆ ಹೊಸ ಇ ಬೈಕ್ ಸಜ್ಜಾಗಿದೆ. ಬೆಂಗಳೂರು ಮೂಲದ ಒಬೆನ್ ಎಲೆಕ್ಟ್ರಿಕ್ ಕಂಪನಿಯು ತನ್ನ ಹೊಸ ರೋರ್ ಇಝಡ್ ಬೈಕ್‌ನ ಟೀಸರ್ ಅನ್ನು ಬಿಡುಗಡೆ ಮಾಡಿದೆ. ಒಬೆನ್ ಎಲೆಕ್ಟ್ರಿಕ್‌ ರೋರ್ ಇಝಡ್ (Oben Electric Rorr EZ) ಬೈಕ್‌ ಅನ್ನು ನವೆಂಬರ್ 7 ರಂದು ಬಿಡುಗಡೆ ಮಾಡುವುದಾಗಿ ಕಂಪನಿ ಖಚಿತಪಡಿಸಿದೆ. ದೈನಂದಿನ ಪ್ರಯಾಣದ ಅನುಭವವನ್ನು ಸುಖಮಯವಾಗಿ ಪರಿವರ್ತಿಸುವ ಗುರಿ, ನವೀನ ಫೀಚರ್‌ಗಳನ್ನು ಪರಿಚಯಿಸುವುದರೊಂದಿಗೆ ವಿದ್ಯುತ್‌ ಚಾಲಿತ ವಾಹನಗಳ ಸಾಲಿನಲ್ಲಿ ಹೊಸತನ ಪರಿಚಯಿಸುವ ಗುರಿ ಹೊಂದಿದೆ. 2025 ಮಾರ್ಚ್‌ ಒಳಗೆ ಮಾರುಕಟ್ಟೆಗೆ ಬರಲಿರುವ ರೋರ್‌ ಇಝೆಡ್‌ ಬೈಕ್‌ಗಳ ಸರಣಿಯಲ್ಲಿ ಇದು ಮೊದಲನೇಯದು ಎಂದು ಕಂಪನಿ ಹೇಳಿಕೊಂಡಿದೆ.

ಹೊಸ ಮಾದರಿಯ ಎಲೆಕ್ಟ್ರಿಕ್ ಬೈಕ್ ಒಬೆನ್ ಎಲೆಕ್ಟ್ರಿಕ್‌ ರೋರ್ ಇಝಡ್; ನಿರೀಕ್ಷೆಗಳೇನು

ಹೊಸ ಒಬೆನ್ ರೋರ್ ಇಝಡ್ ಬೈಕ್‌ ನಿಂತ ನೀರಿನಂತೆ ಇರುವ ಎಲೆಕ್ಟ್ರಿಕ್ ಮೊಬಿಲಿಟಿ ವಿಭಾಗದ ಯಥಾಸ್ಥಿತಿಗೆ ಸವಾಲು ಹಾಕುವಂತೆ ಬರುವಂತಹ ಭರವಸೆ ಹುಟ್ಟಿಸಿದೆ. ಸದ್ಯ ಕಂಪನಿಯು ಹೊಸ ಬೈಕ್‌ನ ಯಾವುದೆ ವಿವರಗಳನ್ನು ಬಹಿರಂಗಪಡಿಸಿಲ್ಲ. ಆದರೆ ಟೀಸರ್‌ನಲ್ಲಿ ರೌಂಡ್ ಹೆಡ್‌ಲ್ಯಾಂಪ್, ಸ್ಲಿಮ್ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಫಾಕ್ಸ್ ಟ್ಯಾಂಕ್ ಹೊರ ಕವರ್‌ಗಳನ್ನು ಒಳಗೊಂಡಂತೆ ಆರ್‌ಆರ್‌ ಅನ್ನು ಹೋಲುವ ವಿನ್ಯಾಸ ಇರುವ ಸುಳಿವು ನೀಡಿದೆ.

ಹೊಸ ರೋರ್ ಇಝಡ್ ಬೈಕ್‌ ಹೆಚ್ಚಿನ ಕಾರ್ಯಕ್ಷಮತೆಯ ಎಲ್‌ಎಫ್‌ಪಿ ಬ್ಯಾಟರಿ ತಂತ್ರಜ್ಞಾನವನ್ನು ಬಳಸಲಿದೆ ಎಂದು ಕಂಪನಿ ಖಚಿತಪಡಿಸಿದೆ. ಬ್ಯಾಟರಿ, ಮೋಟಾರ್‌, ವಾಹನ ನಿಯಂತ್ರಣ ಘಟಕ ಮತ್ತು ಫಾಸ್ಟ್ ಚಾರ್ಜರ್ ಮುಂತಾದ ಪ್ರಮುಖ ಘಟಕಗಳನ್ನು ಒಳಗೊಂಡಂತೆ ತನ್ನದೇ ಆದ ವ್ಯವಸ್ಥೆಯನ್ನು ಕಂಪನಿಯು ಅಭಿವೃದ್ಧಿಪಡಿಸುತ್ತಿದೆ. ಅಡ್ಡಿ ಆತಂಕಗಳಿಲ್ಲದೇ ಈ ಬೈಕ್‌ ನಿರ್ವಹಿಸುವುದಕ್ಕಾಗಿ ರೋರ್ ಇಝಡ್ ಗ್ರಾಹಕರ ಗ್ರಾಹಕಸೇವೆಗೆ ಒಬೆನ್‌ ಕೇರ್ ಎಂಬ ಮಾರಾಟ ನಂತರದ ಸಪೋರ್ಟ್‌ ಕೂಡ ಇರಲಿದೆ ಎಂದು ಕಂಪನಿ ಘೋಷಿಸಿದೆ.

ಕೈಗೆಟಕುವ ದರದಲ್ಲಿ ಒಬೆನ್ ಎಲೆಕ್ಟ್ರಿಕ್ ರೋರ್ ಈಝೆಡ್‌ ಬೈಕ್‌ ಎರಡು ಮಾದರಿಗಳಲ್ಲಿ ಸಿಗುವ ನಿರೀಕ್ಷೆ ಇದೆ. ಗ್ರಾಹಕರಿಗೆ ತಗಲುವ ಒಟ್ಟಾರೆ ವೆಚ್ಚವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಅಗತ್ಯ ಫೀಚರ್ಸ್‌ ಅನ್ನು ಕೂಡ ಹೊಂದಿರುವ ನಿರೀಕ್ಷೆ ಇದೆ. ಪ್ರಯಾಣಿಕರ ಅಗತ್ಯಕ್ಕೆ ತಕ್ಕಂತೆ ಮೋಟಾರ್ ಅನ್ನು ಡಿಟ್ಯೂನ್ ಮಾಡುವ ವ್ಯವಸ್ಥೆಯೂ ಇದರಲ್ಲಿ ಇರಲಿದೆ. ಆರ್‌ಆರ್‌, ಎಝೆಡ್‌ ವೆಚ್ಚ ನಿಯಂತ್ರಿಸುವಲ್ಲಿ ಸಣ್ಣ ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ ನೆರವಾಗಲಿವೆ.

ಒಬೆನ್ ಎಲೆಕ್ಟ್ರಿಕ್‌ ರೋರ್ ಇಝಡ್; ಫೀಚರ್‌ಗಳು

ಒಬೆನ್ ರೋರ್ 8 ಕಿಲೋವ್ಯಾಟ್ (10.7 ಬಿಹೆಚ್ ಪಿ) ಮಿಡ್-ಡ್ರೈವ್ ಮೋಟಾರ್‌ ಮತ್ತು 4.4 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಹೊಂದಿದೆ. ಒಮ್ಮೆ ಚಾರ್ಜ್‌ ಮಾಡಿದರೆ 187 ಕಿ.ಮೀ (ಐಡಿಸಿ) ಸಂಚರಿಸಬಲ್ಲದು. ಈ ಎಲೆಕ್ಟ್ರಿಕ್ ಬೈಕ್ ಕೇವಲ 3 ಸೆಕೆಂಡುಗಳಲ್ಲಿ 0-40 ಕಿ.ಮೀ ವೇಗವನ್ನು ತಲುಪುತ್ತದೆ. ಸವಾರಿ, ರಿಮೋಟ್ ಡಯಾಗ್ನೋಸ್ಟಿಕ್ಸ್, ಜಿಯೋಫೆನ್ಸಿಂಗ್ ಮತ್ತು ಚಾಲಕರ ಎಚ್ಚರಿಕೆ ವ್ಯವಸ್ಥೆ ಗಮಸೆಳೆಯುವಂತಿದೆ.

ಭಾರತದಲ್ಲಿ ಒಬೆನ್ ಎಲೆಕ್ಟ್ರಿಕ್‌ ರೋರ್ ಬೆಲೆ 1.49 ಲಕ್ಷ ರೂಪಾಯಿ (ಎಕ್ಸ್‌ ಶೋರೂಂ ದರ). ಹಾಗೆಯೇ, ಬೆನ್ ಎಲೆಕ್ಟ್ರಿಕ್‌ ರೋರ್ ಇಝಡ್ ಬೆಲೆ 1 ಲಕ್ಷ ರೂಪಾಯಿ ಎಂದು ನಿರೀಕ್ಷಿಸಲಾಗಿದೆ. ಒಬೆನ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯು ಈ ವರ್ಷದ ಅಂತ್ಯದ ವೇಳೆಗೆ ದೇಶಾದ್ಯಂತ 50 ಮಳಿಗೆಗಳನ್ನು ತೆರೆಯಲು ಯೋಜಿಸಿದೆ. ಇದು ಪ್ರಸ್ತುತ ಬೆಂಗಳೂರು, ದೆಹಲಿ, ಕೊಚ್ಚಿ, ತಿರುವನಂತಪುರ, ಪುಣೆ ಮತ್ತು ಇನ್ನೂ ಅನೇಕ ಪ್ರಮುಖ ಮೆಟ್ರೋಗಳಲ್ಲಿ ವಹಿವಾಟನ್ನು ಹೊಂದಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.