ಕನ್ನಡ ಸುದ್ದಿ  /  Nation And-world  /  Delhi News Delhi Cm Aravind Kejriwal Arrest Social Activist Anna Hajare Says Its Because Of His Own Deeds Kub

ಕೇಜ್ರಿವಾಲ್‌ ಬಂಧನ, ಲೋಕಪಾಲ್‌ ನೀತಿಗೆ ಜತೆಯಾಗಿಯೇ ಹೋರಾಡಿದ್ದ ಅಣ್ಣಾ ಹಜಾರೆ ಪ್ರತಿಕ್ರಿಯೆ ಏನು

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಬಂಧನದ ಕುರಿತು ಅವರ ಒಂದು ಕಾಲದ ಒಡನಾಡಿ ಅಣ್ಣಾಹಜಾರೆ ಅಸಮಾಧಾನದಿಂದಲೇ ಪ್ರತಿಕ್ರಿಯಿಸಿದ್ದಾರೆ.

ದಶಕದ ಹಿಂದೆ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಅಣ್ಣಾ ಹಜಾರೆ, ಅರವಿಂದ ಕೇಜ್ರಿವಾಲ್‌.
ದಶಕದ ಹಿಂದೆ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಅಣ್ಣಾ ಹಜಾರೆ, ಅರವಿಂದ ಕೇಜ್ರಿವಾಲ್‌.

ದೆಹಲಿ: ದೆಹಲಿ ಮುಖ್ಯಮಂತ್ರಿ ಹಾಗೂ ಒಂದು ಕಾಲದಲ್ಲಿ ಲೋಕಪಾಲನೀತಿ ಜಾರಿಗೆ ತರಲು ಜತೆಯಾಗಿಯೇ ಹೋರಾಡಿದ್ದ ಅರವಿಂದ ಕೇಜ್ರಿವಾಲ್‌ ಅವರ ಬಂಧನದ ಬಗ್ಗೆ ಸಾಮಾಜಿಕ ಹೋರಾಟಗಾರ ಅಣ್ಣಾಹಜಾರೆ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. 2010 ರ ದಶಕದ ಆರಂಭದಲ್ಲಿ ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ಲೋಕಪಾಲ್ ಚಳವಳಿಯ ನೇತೃತ್ವ ವಹಿಸಿದ್ದ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಇದು ಅವರೇ ಮಾಡಿದ ಕೆಲಸಗಳಿಂದಾಗಿ ಅನುಭವಿಸುತ್ತಿರುವ ಫಲ. ಅದಕ್ಕಾಗಿಯೇ ಜಾರಿ ನಿರ್ದೇಶನಾಲಯವು ಬಂಧಿಸಿದೆ ಎಂದು ಅಣ್ಣಾ ಹಜಾರೆ ಹೇಳಿದ್ದಾರೆ.

ಕೇಜ್ರಿವಾಲ್‌ ಭ್ರಷ್ಟಾಚಾರದ ವಿರುದ್ದ ಹೋರಾಟಗಳನ್ನು ಮಾಡುವಾಗ ಮದ್ಯದ ವಿರುದ್ದವೂ ಮಾತನಾಡುತ್ತಿದ್ದರು. ಈ ಬಗ್ಗೆಯೂ ಹೋರಾಟಗಳು ಆಗಬೇಕು ಎಂದು ಹೇಳುತ್ತಿದ್ದರು. ಆದರೆ ಆಡಳಿತಕ್ಕೆ ಬರುತ್ತಿದ್ದಂತೆ ಮದ್ಯಕ್ಕೆ ಸಂಬಂಧಿಸಿದ ನೀತಿಗಳನ್ನು ರೂಪಿಸಲು ಶುರು ಮಾಡಿದರು. ಇದು ನನಗೆ ಬೇಸರ ತಂದಿತ್ತು. ಆ ಮೂಲಕ ತಮ್ಮ ಸ್ವಂತ ಕಾರ್ಯಗಳಿಂದಾಗಿಯೇ ಈಗ ಬಂಧನಕ್ಕೆ ಒಳಗಾಗಿದ್ದಾರೆ ಎಂದು ಹಜಾರೆ ಮಹಾರಾಷ್ಟ್ರದ ಅಹಮದ್‌ನಗರ ಜಿಲ್ಲೆಯ ರಾಲೇಂಗಾವ್‌ ಸಿದ್ದಿಯಲ್ಲಿ ಪ್ರತಿಕ್ರಿಯಿಸಿದರು.

ಯಾವುದೇ ಪ್ರತಿಭಟನೆ ರಾಜಕೀಯವಲ್ಲ ಎಂದು ಹೇಳುತ್ತಿದ್ದ ಅಣ್ಣಾ ಹಜಾರೆ, ಎಎಪಿ ರೂಪಿಸುತ್ತಿದ್ದ ಕೆಲವು ಕಾರ್ಯಕ್ರಮಗಳು ಹಾಗೂ ಕೇಜ್ರಿವಾಲ್ ಅವರ ಕ್ರಮದ ಬಗ್ಗೆ ಈ ಹಿಂದೆಯೂ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬಾರಿ ಅವರ ಬಂಧನವಾಗಿರುವ ಬಗ್ಗೆಯೂ ಅಸಮಾಧಾನದಿಂದಲೇ ಹೇಳಿಕೆ ನೀಡಿದ್ದಾರೆ.

ಕೇಂದ್ರದಲ್ಲಿನ ಕಾಂಗ್ರೆಸ್ ಸರ್ಕಾರದಿಂದ ಭ್ರಷ್ಟಾಚಾರ ವಿರೋಧಿ ಒಂಬುಡ್ಸ್ಮನ್ ಲೋಕಪಾಲಕ್ಕೆ ಒತ್ತಾಯಿಸಿ ಹಜಾರೆ ಮತ್ತು ಕೇಜ್ರಿವಾಲ್ ಆಂದೋಲನದ ಸಮಯದಲ್ಲಿ ಅನೇಕ ಆಮರಣಾಂತ ಉಪವಾಸಗಳನ್ನು ಆಚರಿಸಿದ್ದರು. ಇಬ್ಬರು ನಾಯಕರ ಹಿಂದೆ ಲಕ್ಷಾಂತರ ಜನರು ಜಮಾಯಿಸಿದ್ದರು. ಆದಾಗ್ಯೂ, ಪ್ರತಿಭಟನೆ ವಿಫಲವಾದ ನಂತರ, ಕೇಜ್ರಿವಾಲ್ ಆಮ್ ಆದ್ಮಿ ಪಕ್ಷವನ್ನು ರಚಿಸಿದ್ದರು.

ದೆಹಲಿ ಅಬಕಾರಿ ನೀತಿ ರೂಪಿಸುವ ಹಗರಣದಲ್ಲಿ ಅರವಿಂದ ಕೇಜ್ರೀವಾಲ್‌ ಅವರನ್ನು ಗುರುವಾರ ರಾತ್ರಿಯೇ ಬಂಧಿಸಲಾಗಿದೆ. ಬಂಧನ ಪ್ರಶ್ನಿಸಿ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದ ಕೇಜ್ರಿವಾಲ್‌ ಅವರು ಅರ್ಜಿ ವಾಪಾಸ್‌ ಪಡೆದಿದ್ದು, ಕೆಳ ಹಂತದ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಈ ನಡುವೆ ದೆಹಲಿ ಮಾತ್ರವಲ್ಲದೇ ಹಲವು ರಾಜ್ಯಗಳಲ್ಲಿ ಆಮ್‌ ಆದ್ಮೀ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಕೇಜ್ರಿವಾಲ್‌ ಬಂಧನ ವಿರೋಧಿ ಪ್ರತಿಭಟನೆ ನಡೆಸಿದ್ದಾರೆ. ದೆಹಲಿಯ ಇಡಿ ಕಚೇರಿಯಲ್ಲಿ ಆಪ್‌ ಪ್ರಮುಖರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿಯೂ ನಡೆಯಿತು. ಕೇಜ್ರಿವಾಲ್‌ ಇಡಿ ಕಚೇರಿಯಲ್ಲಿದ್ದುದರಿಂದ ಅಲ್ಲಿ ಪ್ರಮುಖರು, ಕಾರ್ಯಕರ್ತರು ಜಮಾಯಿಸಿದ್ದರು. ಈ ವೇಳೆ ಸಚಿವೆ ಅತಿಶಿ ಸಹಿತ ಹಲವರನ್ನು ದೆಹಲಿ ಪೊಲೀಸರು ಬಂಧಿಸಿದರು.

IPL_Entry_Point

ವಿಭಾಗ