ಯುಜಿಸಿ ನೆಟ್‌ ಡಿಸೆಂಬರ್‌ 2024ರ ಪರೀಕ್ಷೆಗೆ ನೋಂದಣಿ ಆರಂಭ, ಜನವರಿ 1-19ರಂದು ಎಗ್ಸಾಮ್‌, ಅರ್ಜಿ ಸಲ್ಲಿಸುವ ಮುನ್ನ ಇಲ್ಲಿ ವಿವರ ಪಡೆಯಿರಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಯುಜಿಸಿ ನೆಟ್‌ ಡಿಸೆಂಬರ್‌ 2024ರ ಪರೀಕ್ಷೆಗೆ ನೋಂದಣಿ ಆರಂಭ, ಜನವರಿ 1-19ರಂದು ಎಗ್ಸಾಮ್‌, ಅರ್ಜಿ ಸಲ್ಲಿಸುವ ಮುನ್ನ ಇಲ್ಲಿ ವಿವರ ಪಡೆಯಿರಿ

ಯುಜಿಸಿ ನೆಟ್‌ ಡಿಸೆಂಬರ್‌ 2024ರ ಪರೀಕ್ಷೆಗೆ ನೋಂದಣಿ ಆರಂಭ, ಜನವರಿ 1-19ರಂದು ಎಗ್ಸಾಮ್‌, ಅರ್ಜಿ ಸಲ್ಲಿಸುವ ಮುನ್ನ ಇಲ್ಲಿ ವಿವರ ಪಡೆಯಿರಿ

UGC NET December 2024: ಯುಜಿಸಿ ನೆಟ್‌ 2024 ಡಿಸೆಂಬರ್‌ ಪರೀಕ್ಷೆಯ ಅಧಿಸೂಚನೆ ಪ್ರಕಟವಾಗಿದೆ. ಡಿಸೆಂಬರ್‌ 11ರ ಮೊದಲು ನಿಗದಿತ ಅರ್ಜಿ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಬಹುದು. 85 ವಿಷಯಗಳಿಗೆ ಜನವರಿ 1-19, 2025ರಲ್ಲಿ ನೆಟ್‌ ಎಗ್ಸಾಮ್‌ ನಡೆಯಲಿದೆ. ನೆಟ್‌ ಎಗ್ಸಾಮ್‌ ಬರೆಯಲು ಉದ್ದೇಶಿಸಿರುವವರು ugcnet.nta.ac.in ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಯುಜಿಸಿ ನೆಟ್‌ ಡಿಸೆಂಬರ್‌ 2024ರ ಪರೀಕ್ಷೆಗೆ ನೋಂದಣಿ ಆರಂಭ
ಯುಜಿಸಿ ನೆಟ್‌ ಡಿಸೆಂಬರ್‌ 2024ರ ಪರೀಕ್ಷೆಗೆ ನೋಂದಣಿ ಆರಂಭ

UGC NET December 2024: ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು (ಎನ್‌ಟಿಎ) ಯುಜಿಸಿ ನೆಟ್‌ ಡಿಸೆಂಬರ್‌ 2024 ಪರೀಕ್ಷೆಯ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಿಸಿದೆ. ನೆಟ್‌ ಎಗ್ಸಾಮ್‌ ಬರೆಯಲು ಉದ್ದೇಶಿಸಿರುವವರು ugcnet.nta.ac.in ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು

  1. ನೆಟ್‌ ಎಗ್ಸಾಮ್‌ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಡಿಸೆಂಬರ್‌ 10, 2024, ರಾತ್ರಿ 11:50 ಗಂಟೆ
  2. ಅರ್ಜಿ ಶುಲ್ಕ ಪಾವತಿಗೆ ಕೊನೆಯ ದಿನಾಂಕ: ಡಿಸೆಂಬರ್‌ 11, 2024, ರಾತ್ರಿ 11:50 ಗಂಟೆ
  3. ಕರೆಕ್ಷನ್‌ ವಿಂಡೋ ಸಮಯ: ಡಿಸೆಂಬರ್‌ 12-13, 2024, ರಾತ್ರಿ 11:50 ಗಂಟೆ
  4. ಪರೀಕ್ಷೆ ನಡೆಯುವ ನಗರಗಳು: ಮಾಹಿತಿ ಮುಂದಿನ ದಿನಗಳಲ್ಲಿ ಪ್ರಕಟವಾಗಲಿದೆ
  5. ಅಡ್ಮಿಟ್‌ ಕಾರ್ಡ್‌ ಡೌನ್‌ಲೋಡ್‌ ಮಾಡುವ ಸಮಯ: ಮುಂದಿನ ದಿನಗಳಲ್ಲಿ ಪ್ರಕಟವಾಗಲಿದೆ
  6. ಪರೀಕ್ಷೆ ದಿನಾಂಕ: ಜನವರಿ 1-19, 2025

ಅರ್ಜಿ ಶುಲ್ಕ ಎಷ್ಟು?

ಜನರಲ್‌/ ಅನ್‌ರಿಸರ್ವ್ಡ್‌ ವಿಭಾಗ: 1,150 ರೂ, ಜನರಲ್‌- ಇಡಬ್ಲ್ಯುಎಸ್‌, ಒಬಿಸಿ- ಎನ್‌ಸಿಎಲ್‌ಗೆ 600 ರೂ ಮತ್ತು ಎಸ್‌ಸಿ, ಎಸ್‌ಟಿ, ಪಿಡಬ್ಲ್ಯುಡಿ, ತೃತೀಯ ಲಿಂಗ ಅಭ್ಯರ್ಥಿಗಳಿಗೆ 325 ರೂಪಾಯಿ.

ಅರ್ಜಿ ಸಲ್ಲಿಸುವುದು ಹೇಗೆ?

ಯುಜಿಸಿ ನೆಟ್‌ 2024 ಡಿಸೆಂಬರ್‌ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಬಯಸುವವರು https://ugcnetdec2024.ntaonline.in/site/login ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಒಬ್ಬರು ಒಂದು ಅರ್ಜಿ ನಮೂನೆ ಭರ್ತಿ ಮಾಡಲು ಮಾರತ್ರ ಅವಕಾಶವಿರುತ್ತದೆ. ಅರ್ಜಿ ಸಲ್ಲಿಸುವ ಹಂತಹಂತದ ಪ್ರಕ್ರಿಯೆ ಈ ಮುಂದೆ ನೀಡಲಾಗಿದೆ.

  • ಮೊದಲಿಗೆ ugcnet.nta.ac.in ವೆಬ್‌ಸೈಟ್‌ಗೆ ಭೇಟಿ ನೀಡಿ
  • ಮುಖಪುಟದ ಕೆಳಗೆ ಯುಜಿಸಿ ಅಪ್ಲಿಕೇಷನ್‌ ಫಾರ್ಮ್‌ ಲಿಂಕ್‌ ಕಾಣಿಸುತ್ತದೆ. ಅದನ್ನು ಕ್ಲಿಕ್‌ ಮಾಡಿ
  • ನ್ಯೂ ರಿಜಿಸ್ಟ್ರೇಷನ್‌ ಕ್ಲಿಕ್‌ ಮಾಡಿ
  • ಅರ್ಜಿ ನಮೂನೆ ಭರ್ತಿ ಮಾಡಿ.
  • ಪಾಸ್‌ಪೋರ್ಟ್‌ ಫೋಟೋಗ್ರಾಫ್‌, ಸಿಗ್ನೇಚರ್‌ ಅಪ್ಲೋಡ್‌ ಮಾಡಿ.
  • ಅರ್ಜಿ ಶುಲ್ಕ ಪಾವತಿಸಿ
  • ಅರ್ಜಿ ಸಲ್ಲಿಸಿ, ಅರ್ಜಿ ಸಲ್ಲಿಕೆ ಮಾಡಿದ ಪ್ರತಿಯನ್ನು ಡೌನ್‌ಲೋಡ್‌ ಮಾಡಿಡಿ.

ಏನಿದು ಯುಜಿಸಿ ಪರೀಕ್ಷೆ?

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ಯುನಿವರ್ಸಿಟಿ ಗ್ರಾಂಟ್ಸ್ ಕಮಿಷನ್ (ಯುಜಿಸಿ) ಯುಜಿಸಿ ನೆಟ್‌ ಪರೀಕ್ಷೆ ನಡೆಸುತ್ತದೆ. 'ಸಹಾಯಕ ಪ್ರೊಫೆಸರ್ ' ಮತ್ತು 'ಜೂನಿಯರ್ ರಿಸರ್ಚ್ ಫೆಲೋಶಿಪ್'ಗಾಗಿ ಅರ್ಹತೆ ಪರೀಕ್ಷೆ ನಡೆಸುತ್ತಿದೆ. 2018ರವರೆಗೆ ಯುಜಿಸಿ ಪರೀಕ್ಷೆಯಲ್ಲಿ ಮೂರು ಪೇಪರ್‌ಗಳಿದ್ದವು. 2019ರಲ್ಲಿ ಇದನ್ನು ಎರಡು ಪೇಪರ್‌ ಮಾಡಲಾಯಿತು. ಯುಜಿಸಿ ನೆಟ್‌ ಪರೀಕ್ಷೆಯು ವರ್ಷದಲ್ಲಿ ಎರಡು ಬಾರಿ ನಡೆಸಲಾಗುತ್ತದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.