Karnataka Exit Poll Live: ಕರ್ನಾಟಕದಲ್ಲಿ 20 ದಾಟಲಿದೆ ಬಿಜೆಪಿ, ಕಾಂಗ್ರೆಸ್‌ಗೆ ಸಮೀಕ್ಷೆಗಳಿಂದ ಆಘಾತದ ಎಚ್ಚರಿಕೆ; ಎಕ್ಸಿಟ್ ಪೋಲ್ ಲೈವ್
ಕನ್ನಡ ಸುದ್ದಿ  /  ಚುನಾವಣೆಗಳು  /  Karnataka Exit Poll Live: ಕರ್ನಾಟಕದಲ್ಲಿ 20 ದಾಟಲಿದೆ ಬಿಜೆಪಿ, ಕಾಂಗ್ರೆಸ್‌ಗೆ ಸಮೀಕ್ಷೆಗಳಿಂದ ಆಘಾತದ ಎಚ್ಚರಿಕೆ; ಎಕ್ಸಿಟ್ ಪೋಲ್ ಲೈವ್

Karnataka Exit Poll Live: ಕರ್ನಾಟಕದಲ್ಲಿ 20 ದಾಟಲಿದೆ ಬಿಜೆಪಿ, ಕಾಂಗ್ರೆಸ್‌ಗೆ ಸಮೀಕ್ಷೆಗಳಿಂದ ಆಘಾತದ ಎಚ್ಚರಿಕೆ; ಎಕ್ಸಿಟ್ ಪೋಲ್ ಲೈವ್

Karnataka Exit Poll Live: ಕರ್ನಾಟಕ ಲೋಕಸಭಾ ಚುನಾವಣೆ ಫಲಿತಾಂಶದ ಇಣುಕು ನೋಟವನ್ನು ಮತಗಟ್ಟೆ ಸಮೀಕ್ಷೆಗಳು ಕೊಟ್ಟಿವೆ. ಈ ಬಾರಿಯೂ ಕರ್ನಾಟಕದಲ್ಲಿ ಬಿಜೆಪಿಯೇ ನಿಚ್ಚಳ ಮೇಲುಗೈ ಸಾಧಿಸಬಹುದು. ಕಾಂಗ್ರೆಸ್‌ಗೆ ತೀವ್ರ ಹಿನ್ನಡೆ ಆಗಬಹುದು ಎಂದು ಹಲವು ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಜೆಡಿಎಸ್‌ ಅಭ್ಯರ್ಥಿಗಳು ಈ ಬಾರಿಯೂ ಗೆಲ್ಲಬಹುದು ಎನ್ನುವ ಮುನ್ಸೂಚನೆ ಸಿಕ್ಕಿದೆ.

ಕರ್ನಾಟಕದಲ್ಲಿ 20 ದಾಟಲಿದೆ ಬಿಜೆಪಿ, ಕಾಂಗ್ರೆಸ್‌ಗೆ ಸಮೀಕ್ಷೆಗಳಿಂದ ಆಘಾತದ ಎಚ್ಚರಿಕೆ; ಎಕ್ಸಿಟ್ ಪೋಲ್ ಲೈವ್
ಕರ್ನಾಟಕದಲ್ಲಿ 20 ದಾಟಲಿದೆ ಬಿಜೆಪಿ, ಕಾಂಗ್ರೆಸ್‌ಗೆ ಸಮೀಕ್ಷೆಗಳಿಂದ ಆಘಾತದ ಎಚ್ಚರಿಕೆ; ಎಕ್ಸಿಟ್ ಪೋಲ್ ಲೈವ್ (PC: Manjunath Kotagunasi)

Karnataka Exit Poll Live: ಕರ್ನಾಟಕದಲ್ಲಿ ಬಿಜೆಪಿ ಮತ್ತೊಮ್ಮೆ ಗಣನೀಯ ಸಾಧನೆ ಮಾಡಲಿದೆ ಎನ್ನುವ ಮುನ್ನೋಟವನ್ನು ಮತಗಟ್ಟೆ ಸಮೀಕ್ಷೆಗಳು ನೀಡಿವೆ. ಮೊದಲ ಹಂತದ ಮತದಾನಕ್ಕೆ ಕೆಲ ದಿನಗಳಿಗೆ ಮೊದಲು ಬಹಿರಂಗಗೊಂಡ ಹಾಸನದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣವು ಮತ ಚಲಾವಣೆಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎನ್ನುವುದನ್ನು ಮತಗಟ್ಟೆ ಸಮೀಕ್ಷೆಗಳು ಸಾರಿ ಹೇಳಿವೆ. ಜೆಡಿಎಸ್‌ನೊಂದಿಗೆ ಮೈತ್ರಿಯ ಮೂಲಕ ಬಿಜೆಪಿ ನಾಯಕರು ರೂಪಿಸಲು ಯತ್ನಿಸಿದ 'ಸೋಷಿಯಲ್ ಎಂಜಿನಿಯರಿಂಗ್' ಪ್ರಯತ್ನವೂ ಫಲ ಕೊಟ್ಟಿವೆ ಎಂದು ಸಮೀಕ್ಷೆಗಳು ತಿಳಿಸಿವೆ. ಐದೂ ಗ್ಯಾರೆಂಟಿಗಳ ಅನುಷ್ಠಾನವನ್ನು ಪ್ರಚಾರ ಸಭೆಗಳಲ್ಲಿ ಪ್ರಸ್ತಾಪಿಸಿ ಮತ ಸೆಳೆಯಲು ಕಾಂಗ್ರೆಸ್ ನಾಯಕರು ಮಾಡಿದ ಪ್ರಯತ್ನಕ್ಕೆ ಫಲ ಸಿಕ್ಕಿಲ್ಲ. ಕಾಂಗ್ರೆಸ್‌ ಆಡಳಿತವಿರುವ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರಂಥ ಪ್ರಭಾವಿ ನಾಯಕರಿರುವ ಕರ್ನಾಟಕದಲ್ಲಿ ಕಾಂಗ್ರೆಸ್ ಹಿನ್ನಡೆ ಅನುಭವಿಸಲಿದೆ ಎನ್ನುವ ಮುನ್ಸೂಚನೆಯನ್ನೂ ಮತಗಟ್ಟೆ ಸಮೀಕ್ಷೆಗಳು ನೀಡಿವೆ. 'ಕರ್ನಾಟಕಕ್ಕೆ ಸಿದ್ದರಾಮಯ್ಯ, ಭಾರತಕ್ಕೆ ನರೇಂದ್ರ ಮೋದಿ' ಎಂದು ಹಲವು ಮತದಾರರು ಈ ಮೊದಲು ಮಾಧ್ಯಮಗಳಿಗೆ ಪ್ರತಿಕ್ರಿಯಿಸುವಾಗ ಹೇಳುತ್ತಿದ್ದರು. ಅಂತಿಮ ಫಲಿತಾಂಶದ ಮುನ್ಸೂಚನೆಯಲ್ಲಿ ಮತಗಟ್ಟೆ ಸಮೀಕ್ಷೆಗಳು ಕರ್ನಾಟಕದ ವಿಚಾರದಲ್ಲಿ ಈ ಅಂಶ ನಿಜವಾಗಬಹುದು ಎಂಬ ಮುನ್ಸೂಚನೆ ಕೊಟ್ಟಿವೆ.

(ಗಮನಿಸಿ: ಚುನಾವಣೆ ಫಲಿತಾಂಶ ಎಕ್ಸಿಟ್‌ ಪೋಲ್ ಸಂಖ್ಯೆಗಳಿಗಿಂತ ಭಿನ್ನವಾಗಿ ಇರಬಹುದು)

8:10 PM

ಎಕ್ಸಿಟ್‌ ಪೋಲ್‌ನಲ್ಲಿ ನಂಬಿಕೆ ಇಲ್ಲ ಎಂದ ಡಿಕೆಶಿ

ಕರ್ನಾಟಕದಲ್ಲಿ ಬಿಜೆಪಿ 20 ಕಾಂಗ್ರೆಸ್‌ಗೆ 5 ಹಾಗೂ ಜೆಡಿಎಸ್‌ಗೆ 2 ಸ್ಥಾನಗಳು ದೊರೆಯಬಹುದು ಎಂದು ವಿವಿಧ ಸಂಸ್ಥೆಗಳು ನಡೆಸಿರುವ ಚುನಾವಣೋತ್ತರ ಸಮೀಕ್ಷೆ ಹೇಳಿವೆ. ಆದರೆ ಇದರ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿಕೆ ಶಿವಕುಮಾರ್‌ ನನಗೆ ಎಕ್ಸಿಟ್‌ ಪೋಲ್‌ ಬಗ್ಗೆ ನಂಬಿಕೆ ಇಲ್ಲ. ಫಲಿತಾಂಶದಲ್ಲಿ ಕಾಂಗ್ರೆಸ್‌ 2 ಅಂಕಿ ಗಳಿಸುತ್ತದೆ ಎಂದಿದ್ದಾರೆ.

7:25 PM

ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಗೆಲುವು ಸಾಧ್ಯತೆ ಭವಿಷ್ಯ ನುಡಿದ ಮತಗಟ್ಟೆ ಸಮೀಕ್ಷೆಗಳು

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಪೈನ್‌ ಡ್ರೈವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯಕ್ಕೆ ಎಸ್‌ಐಟಿ ವಶದಲ್ಲಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಈ ನಡುವೆ ಚುನಾವಣಾಪೂರ್ವ ಸಮೀಕ್ಷೆಗಳು ಹಾಸನದಲ್ಲಿ ಪ್ರಜ್ವಲ್‌ ರೇವಣ್ಣ ಗೆಲುವಿನ ಸಾಧ್ಯತೆ ಭವಿಷ್ಯ ನುಡಿದಿವೆ.

6:40 PM

ಕರ್ನಾಟಕದಲ್ಲಿ ಬಿಜೆಪಿಗೆ 20 ಸ್ಥಾನ, ಕಾಂಗ್ರೆಸ್‌ಗೆ 3: ಇಂಡಿಯಾ ಟುಡೇ, ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ

ಕರ್ನಾಟಕದಲ್ಲಿ ಬಿಜೆಪಿ 20-22, ಜೆಡಿಎಸ್‌ 2-3, ಕಾಂಗ್ರೆಸ್‌ 3-5, ಇತರರು 0 ಸ್ಥಾನಗಳನ್ನು ಗಳಿಸಬಹುದು ಎಂದು ಇಂಡಿಯಾ ಟುಡೇ, ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ಮುನ್ಸೂಚನೆಯಲ್ಲಿ ಅಂದಾಜಿಸಿದೆ. ಈ ಸಮೀಕ್ಷೆ ನೀಡಿರುವ ವಿವರಗಳ ಪ್ರಕಾರ ಮತ ಗಳಿಕೆಯಲ್ಲಿಯೂ ಬಿಜೆಪಿಯೇ ಮುಂದಿದೆ. ಬಿಜೆಪಿ ಶೇ 48, ಇತರರು ಶೇ 4, ಜೆಡಿಎಸ್ ಶೇ 7, ಕಾಂಗ್ರೆಸ್ ಶೇ 41 ರಷ್ಟು ಮತ ಪಡೆಯಬಹುದು ಎಂದು ಸಮೀಕ್ಷೆ ತಿಳಿಸಿದೆ.

6:35 PM

ಟಿವಿ9 ಪೋಲ್‌ಸ್ಟಾರ್ ಪೀಪಲ್ಸ್ ಇನ್‌ಸೈಟ್ ಸಮೀಕ್ಷೆ

ಟಿವಿ 9 ಪೋಲ್‌ ಸ್ಟಾರ್‌ ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿಗೆ 18, ಕಾಂಗ್ರೆಸ್ ಪಕ್ಷಕ್ಕೆ - 8 ಹಾಗೂ ಜೆಡಿಎಸ್‌ಗೆ 2 ಸ್ಥಾನಗಳು ದೊರೆಯಲಿವೆ.

6:15 PM

2019ರ ಎಕ್ಸಿಟ್‌ ಪೋಲ್‌ ವರದಿ ಹೇಗಿತ್ತು?

ಕಳೆದ ಲೋಕಸಭೆ ಚುನಾವಣೆಯಲ್ಲಿ ಟುಡೇಸ್‌ ಚಾಣಕ್ಯ, ಇಂಡಿಯಾ ಟುಡೇ ಹಾಗೂ ಆಕ್ಸಿಸ್‌ ಮೈ ಇಂಡಿಯಾ ನಡೆಸಿದ್ದ ಎಕ್ಸಿಟ್‌ ಪೋಲ್‌ ಸಮೀಕ್ಷೆಗಳು ಫಲಿತಾಂಶಕ್ಕೆ ಬಹಳ ಹತ್ತಿರವಾಗಿದ್ದವು. ಎನ್‌ಡಿಎ ಮೈತ್ರಿಕೂಟ 339 ಸ್ಥಾನಗಳನ್ನು ಪಡೆಯಬಹುದು ಎಂದು ವರದಿ ಮಾಡಿದ್ದವು.

5:40 PM

ಕೆಲವೇ ಕ್ಷಣಗಳಲ್ಲಿ ಮತದಾನೋತ್ತರ ಚುನಾವಣಾ ಸಮೀಕ್ಷೆ ಬಹಿರಂಗ

ಇಂದು 7 ರಾಜ್ಯಗಳಿಗೆ ಚುನಾವಣೆ ನಡೆಯುವ ಮೂಲಕ ಕೊನೆಯ ಹಂತದ ಮತದಾನ ಮುಕ್ತಾಯಗೊಳ್ಳುತ್ತಿದೆ. ಸಂಜೆ 6ವರೆಗೆ ಮತದಾನಕ್ಕೆ ಅವಕಾಶವಿದ್ದು ನಂತರ ವಿವಿಧ ಸಂಸ್ಥೆಗಳು ನಡೆಸಿರುವ ಮತದಾನೋತ್ತರ ಚುನಾವಣಾ ಸಮೀಕ್ಷೆ ಬಹಿರಂಗಗೊಳ್ಳಲಿದೆ.

2.21 PM

ಲೋಕಸಭೆ ಚುನಾವಣೆ ಎಕ್ಸಿಟ್‌ ಪೋಲ್‌; ಕರ್ನಾಟಕದ ಮಾಹಿತಿ ಎಲ್ಲಿ ಸಿಗಲಿದೆ

2024ರ ಲೋಕಸಭಾ ಚುನಾವಣೆ ಎಕ್ಸಿಟ್‌ ಪೋಲ್‌ಗೆ ಕ್ಷಣಗಣನೆ ಆರಂಭವಾಗಿದ್ದು ಕರ್ನಾಟಕಕ್ಕೆ ಸಂಬಂಧಿಸಿದ ಮಾಹಿತಿ ಎಲ್ಲಿ ಸಿಗಬಹುದು ಎಂಬ ಕುತೂಹಲ ನಿಮ್ಮಲ್ಲೂ ಇರಬಹುದು. ಸಂಜೆಯ 5 ರಿಂದ 6 ಗಂಟೆಯ ಹೊತ್ತಿಗೆ ಎಕ್ಸಿಟ್‌ ಪೋಲ್‌ ಫಲಿತಾಂಶ ಹೊರ ಬೀಳಲಿದ್ದು ಕರ್ನಾಟಕದ ಮಾಹಿತಿ ಎಲ್ಲಿ ಸಿಗಲಿದೆ ಎಂಬುದನ್ನ ತಿಳಿಯಲು ಈ ಲಿಂಕ್‌ ಕ್ಲಿಕ್‌ ಮಾಡಿ.

12: 30 PM

ಲೋಕಸಭಾ ಚುನಾವಣೆ; ಕರ್ನಾಟಕದ ಮತಗಟ್ಟೆ ಸಮೀಕ್ಷೆ ಸಂಜೆ 6.30ಕ್ಕೆ ಶುರು

ಇಂದು (ಜೂನ್ 1) ಅಂತಿಮ ಹಂತದ ಮತದಾನ ಮುಕ್ತಾಯವಾದ ನಂತರ ಮುಸ್ಸಂಜೆ 6.30ರ ಬಳಿಕ ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ 2024 ರ ಮತಗಟ್ಟೆ ಸಮೀಕ್ಷೆಯ ಫಲಿತಾಂಶ ಪ್ರಕಟವಾಗಲಿದೆ. ಆದಾಗ್ಯೂ, 2024 ರ ಲೋಕಸಭಾ ಚುನಾವಣೆಯ ಅಧಿಕೃತ ಫಲಿತಾಂಶ ಜೂನ್ 4 ರಂದು ಪ್ರಕಟವಾಗಲಿದೆ. ಹೆಚ್ಚಿನ ವಿವರಕ್ಕೆ ಇಲ್ಲಿ ಕ್ಲಿಕ್‌ ಮಾಡಿ- ಲೋಕಸಭಾ ಚುನಾವಣೆ; ಕರ್ನಾಟಕದ ಮತಗಟ್ಟೆ ಸಮೀಕ್ಷೆ ಎಷ್ಟು ಗಂಟೆಗೆ ಪ್ರಸಾರವಾಗಲಿದೆ, ಎಲ್ಲಿ ನೋಡಬೇಕು- ಇಲ್ಲಿದೆ ವಿವರ

11: 15 AM

ಲೋಕಸಭಾ ಚುನಾವಣೆ; ಕರ್ನಾಟಕದ ಮತಗಟ್ಟೆ ಸಮೀಕ್ಷೆ ಸಂಜೆ 6.30ಕ್ಕೆ ಶುರು

ಲೋಕಸಭೆ ಚುನಾವಣೆಯ ಅಂತಿಮ ಹಂತದ ಮತದಾನ ಇಂದು (ಜೂನ್ 1) ಮುಕ್ತಾಯದ ನಂತರ ಮುಸ್ಸಂಜೆ 6.30ರ ಬಳಿಕ ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ 2024 ರ ಮತಗಟ್ಟೆ ಸಮೀಕ್ಷೆಯ ಫಲಿತಾಂಶ ಪ್ರಕಟವಾಗಲಿದೆ. ಆದಾಗ್ಯೂ, 2024 ರ ಲೋಕಸಭಾ ಚುನಾವಣೆಯ ಅಧಿಕೃತ ಫಲಿತಾಂಶ ಜೂನ್ 4 ರಂದು ಪ್ರಕಟವಾಗಲಿದೆ.

 

10.30 AM

ಎಸ್‌ಐಟಿ ತನಿಖೆ ಎದುರಿಸುತ್ತಿರುವ ಪ್ರಜ್ವಲ್‌ ರೇವಣ್ಣ

ರಾಜ್ಯದಲ್ಲಿ ಸದ್ಯಕ್ಕೆ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಪೆನ್‌ ಡ್ರೈವ್‌ ಭಾರೀ ಸದ್ದು ಮಾಡುತ್ತಿದೆ. ಇದು ಚುನಾವಣೆ ಫಲಿತಾಂಶದ ಮೇಲೆ ಪ್ರಭಾವ ಬೀರಬಹುದಾ ಎಂಬ ಕುತೂಹಲ ಕಾಡುತ್ತಿದೆ. ಸದ್ಯಕ್ಕೆ ಪ್ರಜ್ವಲ್‌ ರೇವಣ್ಣ ಎಸ್‌ಐಟಿ ತನಿಖೆ ಎದುರಿಸುತ್ತಿದ್ದಾರೆ. ರಾಜ್ಯದಲ್ಲಿ ಜೆಡಿಎಸ್‌ ಹಿಂದುಳಿಯು

10.00 AM

ಇಂದು ಸಂಜೆ ಎಕ್ಸಿಟ್‌ ಪೋಲ್‌ ವರದಿ ರಿವೀಲ್

ಇಂದು ಸಂಜೆ ಸೀ ಓಟರ್‌, ಇಂಡಿಯಾ ಟುಡೇ ಆಕ್ಸಿಸ್‌, ಟುಡೇಸ್‌ ಚಾಣಕ್ಯ ಸೇರಿದಂತೆ ವಿವಿಧ ಸುದ್ದಿ ಸಂಸ್ಥೆಗಳು ಮತ್ತು ಕಂಪನಿಗಳು ಚುನಾವಣೋತ್ತರ ಸಮೀಕ್ಷೆ ವರದಿಯನ್ನು ರಿವೀಲ್‌ ಮಾಡಲಿದೆ.

9.45 AM

ಇಂದು ಅಂತಿಮ ಹಂತದ ಮತದಾನ

ಉತ್ತರ ಪ್ರದೇಶ, ಬಿಹಾರ, ಹಿಮಾಚಲ ಪ್ರದೇಶ, ಪಂಜಾಬ್, ಒಡಿಶಾ, ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ಚಂಡೀಗಢಗಳಲ್ಲಿ ಇಂದು ಅಂತಿಮ ಹಂತದ ಮತದಾನ ಆರಂಭವಾಗಿದೆ.

Whats_app_banner