ಕನ್ನಡ ಸುದ್ದಿ  /  Nation And-world  /  Fraud Alert Scamsters Using Google Pay Phonepe To Con You Check Details

Fraud alert!: ಹೊಸ ನಮೂನೆ ಸೈಬರ್‌ ವಂಚನೆ; ಯಾಮಾರಿದರೆ ನಿಮ್ಮ ಬ್ಯಾಂಕ್‌ ಖಾತೆ ಖಾಲಿ!- ಗೂಗಲ್‌ಪೇ, ಫೋನ್‌ಪೇ ಬಳಕೆದಾರರೇ ಟಾರ್ಗೆಟ್

Fraud alert!: ಹಲೋ… ತಪ್ಪಿ ಹೋಗಿ ನಿಮ್ಮ ಖಾತೆಗೆ 50 ರೂಪಾಯಿ ಜಮೆ ಆಗಿದೆ. ಗೂಗಲ್‌ ಪೇ ಅಥವಾ ಫೋನ್‌ಪೇ ಬಳಸ್ತಿದ್ದೀರಾ? ಅದರ ಮೂಲಕ ವಾಪಸ್‌ ಮಾಡ್ತೀರಾ ಪ್ಲೀಸ್..‌ ಹೀಗಂತ ಯಾರಾದರೂ ಫೋನ್‌ ಮಾಡಿದರೆ ಹಣ ವಾಪಸ್‌ ಮಾಡಬೇಡಿ -ಹೊಸ ಮಾದರಿಯ ಸೈಬರ್‌ ವಂಚನೆ ಇದು.

ಸೈಬರ್‌ ವಂಚನೆ (ಸಾಂಕೇತಿಕ ಚಿತ್ರ)
ಸೈಬರ್‌ ವಂಚನೆ (ಸಾಂಕೇತಿಕ ಚಿತ್ರ) (LiveMint)

“ಹಲೋ… ತಪ್ಪಿ ಹೋಗಿ ನಿಮ್ಮ ಖಾತೆಗೆ 10 ರೂಪಾಯಿ ಜಮೆ ಆಗಿದೆ. ಗೂಗಲ್‌ ಪೇ ಅಥವಾ ಫೋನ್‌ಪೇ ಮೂಲಕ ವಾಪಸ್‌ ಮಾಡ್ತೀರಾ ಪ್ಲೀಸ್..‌” ಹೀಗಂತ ಯಾರಾದರೂ ಫೋನ್‌ ಮಾಡಿದರೆ ಹಣ ವಾಪಸ್‌ ಮಾಡಬೇಡಿ. ಮಾಡಿದ್ರೆ ನಿಮ್ಮ ಬ್ಯಾಂಕ್‌ ಖಾತೆಯಲ್ಲಿರುವ ಹಣ ಖಾಲಿ ಆಗಲಿದೆ ಜೋಕೆ! -ಹೊಸ ಮಾದರಿಯ ಸೈಬರ್‌ ವಂಚನೆ ಇದು- ಇಲ್ಲಿದೆ ವಿವರ.

ಬ್ಯಾಂಕ್ ಕೆವೈಸಿ, ಪ್ಯಾನ್‌ ಹಗರಣದ ಮೂಲಕ 16 ದಿನಗಳಲ್ಲಿ 81 ಮುಂಬೈವಾಸಿಗಳಿಂದ 1 ಕೋಟಿ ರೂಪಾಯಿಯನ್ನು ಸೈಬರ್ ಕ್ರಿಮಿನಲ್‌ಗಳು ಲೂಟಿ ಮಾಡಿದ ಸುದ್ದಿಯ ನಡುವೆ, ಹೊಸ ರೀತಿಯ ಆನ್‌ಲೈನ್ ಬ್ಯಾಂಕ್ ವಂಚನೆ ಬೆಳಕಿಗೆ ಬಂದಿದೆ. ಇದರಲ್ಲಿ, ವಂಚಕನು Google Pay ಅಥವಾ PhonePe ಗೇಟ್‌ವೇ ಬಳಸಿ ನಿಮ್ಮ ಖಾತೆಗೆ ಉದ್ದೇಶಪೂರ್ವಕವಾಗಿ ಹಣವನ್ನು ಕಳುಹಿಸುತ್ತಾನೆ.

Google Pay ಅಥವಾ PhonePe ಮೂಲಕ ನಿಮ್ಮ ಬ್ಯಾಂಕ್ ಖಾತೆಗೆ ಹಣವನ್ನು ಕಳುಹಿಸಿದ ನಂತರ, ವಂಚಕನು ತಪ್ಪಾಗಿ ಕಳುಹಿಸಿದ ಹಣವನ್ನು ಮರುಪಾವತಿಸಲು ಕೇಳುತ್ತಾನೆ. ಉತ್ತಮ ನಡವಳಿಕೆ ಎಂದುಕೊಳ್ಳುತ್ತ, ನೀವು ಆತ ಕಳುಹಿಸಿದ 10 ರೂಪಾಯಿ ಅಥವಾ 50 ರೂಪಾಯಿ ಮೊತ್ತವನ್ನು ತತ್‌ಕ್ಷಣವೇ Google Pay ಅಥವಾ PhonePe ಸಂಖ್ಯೆಗೆ ಮರುಪಾವತಿಸುತ್ತೀರಿ. ಇಷ್ಟು ಮಾಡಿದ ಕೂಡಲೇ ನಿಮ್ಮ ಡಿವೈಸ್‌ ಮಾಲ್‌ವೇರ್ ದಾಳಿಗೆ ಬಲಿಯಾಗುತ್ತದೆ.

Google Pay ಮತ್ತು PhonePe ಬಳಕೆದಾರರನ್ನು ಗುರಿಯಾಗಿಟ್ಟುಕೊಂಡು ಇಂತಹ ಆನ್‌ಲೈನ್ ವಂಚನೆಗಳನ್ನು ಕಾರ್ಯಗತಗೊಳಿಸಲಾಗುತ್ತದೆ. ದೆಹಲಿ ಮೂಲದ ಸೈಬರ್ ಕ್ರೈಮ್ ತಜ್ಞ ಪವನ್ ದುಗ್ಗಲ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, "ಈ ಮಾಲ್‌ವೇರ್ ಮತ್ತು ಹ್ಯುಮನ್‌ ಇಂಜಿನಿಯರಿಂಗ್ ಹಗರಣದಲ್ಲಿ, ಯಾರಾದರೂ Google Pay ಅಥವಾ PhonePe ಗೇಟ್‌ವೇ ಮೂಲಕ ನಿಮ್ಮ ಖಾತೆಗೆ ಉದ್ದೇಶಪೂರ್ವಕವಾಗಿ ಹಣವನ್ನು ಕಳುಹಿಸುತ್ತಾರೆ. ನಿಮ್ಮ ಖಾತೆಗೆ ತಪ್ಪಾಗಿ ಹಣವನ್ನು ಕಳುಹಿಸಲಾಗಿದೆ ಎಂದು ಅವರು ಬಳಿಕ ಕರೆ ಮಾಡಿ ಆ ಹಣವನ್ನು ಅವರ ಸಂಖ್ಯೆಗೆ ಹಿಂತಿರುಗಿಸಲು ವಿನಂತಿಸುತ್ತಾರೆ. ನೀವು ಉತ್ತಮ ನಡವಳಿಕೆ ತೋರಿಸುತ್ತ ನೀವು ಹಣವನ್ನು ಹಿಂತಿರುಗಿಸಿದರೆ, ನಿಮ್ಮ ಖಾತೆಯನ್ನು ಹ್ಯಾಕ್ ಮಾಡಲಾಗುತ್ತದೆ" ಎಂದು ವಂಚಕರ ಕಾರ್ಯವೈಖರಿಯನ್ನು ವಿವರಿಸಿದ್ದಾರೆ.

ಈ ಫಿಶಿಂಗ್ ಅನ್ನು ಹೇಗೆ ಕಾರ್ಯಗತಗೊಳಿಸಲಾಗುತ್ತದೆ ಎಂಬುದನ್ನು ವಿವರಿಸಿದ ಪವನ್ ದುಗ್ಗಲ್, "Google Pay ಅಥವಾ PhonePe ಬಳಕೆದಾರರು ಹಣವನ್ನು ಮರುಪಾವತಿಸಿದಾಗ, ಬ್ಯಾಂಕಿಂಗ್ ಮತ್ತು ಇತರ ಕೆವೈಸಿ ಡಾಕ್ಯುಮೆಂಟ್‌ಗಳಾದ PAN, Aadhaar, ಇತ್ಯಾದಿ ಸೇರಿ ಬಳಕೆದಾರರ ಸಂಪೂರ್ಣ ಡೇಟಾವು ವಂಚಕನಿಗೆ ಲಭ್ಯವಾಗುತ್ತದೆ. ಆತನಿಗೆ ಬಳಕೆದಾರರ ಬ್ಯಾಂಕ್‌ ಖಾತೆ ಹ್ಯಾಕ್‌ ಮಾಡಲು ಈ ದಾಖಲೆಗಳು ಸಾಕು.

ಗೂಗಲ್‌ ಪೇ, ಫೋನ್‌ಪೇ ಬಳಕೆದಾರರು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು

ಪವನ್‌ ದುಗ್ಗಲ್‌ ಅವರು cyberlaw.com ನ ಅಧ್ಯಕ್ಷರೂ ಆಗಿದ್ದು, ಗೂಗಲ್‌ ಪೇ, ಫೋನ್‌ಪೇ ಬಳಕೆದಾರರು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ವಿವರಿಸಿದ್ದಾರೆ.

ಮೊದಲೇ ಹೇಳಿದಂತೆ, ಇದು ಮಾಲ್‌ವೇರ್ ಫಿಶಿಂಗ್ ಮತ್ತು ಹ್ಯುಮನ್‌ ಎಂಜಿನಿಯರಿಂಗ್‌ ಸ್ಕ್ಯಾಮ್‌. ಆದ್ದರಿಂದ ಮಾಲ್‌ವೇರ್ ವಿರೋಧಿ ಸಾಫ್ಟ್‌ವೇರ್ ಇನ್‌ಸ್ಟಾಲ್‌ ಮಾಡಿಕೊಂಡರೆ ಸಾಲದು. ಈ ಆನ್‌ಲೈನ್‌ ವಂಚನೆಯಿಂದ Google Pay ಮತ್ತು PhonePe ಬಳಕೆದಾರರನ್ನು ಮಾಲ್‌ವೇರ್‌ ಸಾ‍ಫ್ಟ್‌ವೇರ್‌ ರಕ್ಷಿಸದು.

ಆದ್ದರಿಂದ, Google Pay ಅಥವಾ PhonePe ಬಳಕೆದಾರರು ಈ ರೀತಿ ವಂಚಕರ ಕರೆ ಬಂದರೆ ಅದಕ್ಕೆ ಪ್ರತ್ಯುತ್ತರ ನೀಡಬೇಕು. ಬ್ಯಾಂಕ್‌ಗೆ ಹೋಗಿ ನಿಯಮಾನುಸಾರ ಹಣ ತಪ್ಪಾಗಿ ಬೇರೆ ಖಾತೆಗೆ ವರ್ಗಾವಣೆ ಆಗಿದೆ ಎಂದು ಅರ್ಜಿ ಸಲ್ಲಿಸುವಂತೆ ಕೇಳಿಕೊಳ್ಳಬೇಕು. ಈ ರೀತಿ ಕರೆಮಾಡಿದವರಿಗೆ ನೇರವಾಗಿ ಹಣ ಹಿಂತಿರುಗಿಸಬೇಡಿ. ಸಮೀಪದ ಪೊಲೀಸ್‌ ಠಾಣೆಗೆ ಬಂದು ಹಣ ಸ್ವೀಕರಿಸುವಂತೆ ಕರೆ ಮಾಡಿದ ವಂಚಕರಿಗೆ ವಿನಂತಿ ಮಾಡಬೇಕು ಎಂದು ಪವನ್‌ ದುಗ್ಗಲ್‌ ಸಲಹೆ ನೀಡಿದ್ದಾರೆ.

IPL_Entry_Point