ಗುರ್ಗಾಂವ್: ಮಹಿಳೆಯ ಹೊಟ್ಟೆಯಿಂದ 9 ಕೆಜಿ ಫುಟ್ಬಾಲ್ ಗಾತ್ರದ ಕ್ಯಾನ್ಸರ್ ಗೆಡ್ಡೆ ಹೊರತೆಗೆದ ವೈದ್ಯರು!
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಗುರ್ಗಾಂವ್: ಮಹಿಳೆಯ ಹೊಟ್ಟೆಯಿಂದ 9 ಕೆಜಿ ಫುಟ್ಬಾಲ್ ಗಾತ್ರದ ಕ್ಯಾನ್ಸರ್ ಗೆಡ್ಡೆ ಹೊರತೆಗೆದ ವೈದ್ಯರು!

ಗುರ್ಗಾಂವ್: ಮಹಿಳೆಯ ಹೊಟ್ಟೆಯಿಂದ 9 ಕೆಜಿ ಫುಟ್ಬಾಲ್ ಗಾತ್ರದ ಕ್ಯಾನ್ಸರ್ ಗೆಡ್ಡೆ ಹೊರತೆಗೆದ ವೈದ್ಯರು!

Cancerous Tumour: ಗುರ್ಗಾಂವ್​ನ ವೈದ್ಯರು 55 ವರ್ಷದ ಮಹಿಳೆಯ ಹೊಟ್ಟೆಯಿಂದ 9 ಕೆಜಿ ಕ್ಯಾನ್ಸರ್ ಗೆಡ್ಡೆ ಹೊರತೆಗೆಯುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ. ಆ ಮೂಲಕ ತೀವ್ರ ನೋವು ನಿವಾರಿಸಿ, ಮಾರಣಾಂತಿಕ ತೊಡಕುಗಳನ್ನು ತಡೆಗಟ್ಟಿದೆ.

ಮಹಿಳೆಯ ಹೊಟ್ಟೆಯಿಂದ 9 ಕೆಜಿ ಫುಟ್ಬಾಲ್ ಗಾತ್ರದ ಕ್ಯಾನ್ಸರ್ ಗೆಡ್ಡೆ ಹೊರತೆಗೆದ ವೈದ್ಯರು
ಮಹಿಳೆಯ ಹೊಟ್ಟೆಯಿಂದ 9 ಕೆಜಿ ಫುಟ್ಬಾಲ್ ಗಾತ್ರದ ಕ್ಯಾನ್ಸರ್ ಗೆಡ್ಡೆ ಹೊರತೆಗೆದ ವೈದ್ಯರು (Pixabay)

ನವದೆಹಲಿ: ಹರಿಯಾಣದ ಗುರ್ಗಾಂವ್​​ನ ಫೋರ್ಟಿಸ್ ಮೆಮೋರಿಯಲ್ ರಿಸರ್ಚ್ ಇನ್ಸ್ಟಿಟ್ಯೂಟ್​​​ನ ವೈದ್ಯರು ಆಫ್ರಿಕಾದ 55 ವರ್ಷದ ಮಹಿಳೆಯ ಹೊಟ್ಟೆಯಿಂದ 9 ಕೆಜಿ ತೂಕದ ಬೃಹತ್ ಕ್ಯಾನ್ಸರ್ ಗೆಡ್ಡೆಯನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಮೂರು ಗಂಟೆಗಳ ಕಾಲ ನಡೆದ ಈ ಶಸ್ತ್ರಚಿಕಿತ್ಸೆಯ ನೇತೃತ್ವವನ್ನು ಆಸ್ಪತ್ರೆಯ ಜಠರಗರುಳಿನ ಆಂಕೊಲಾಜಿ ನಿರ್ದೇಶಕ ಡಾ.ಅಮಿತ್ ಜಾವೇದ್ ವಹಿಸಿದ್ದರು. ಗೆಡ್ಡೆಯ ಗಾತ್ರ ಫುಟ್ಬಾಲ್ ಗಾತ್ರದಷ್ಟಿತ್ತು. ಇದು ಪ್ರಮುಖ ಅಂಗಗಳ ಮೇಲೆ ಪರಿಣಾಮ ಬೀರಿತ್ತು. ಹೀಗಾಗಿ ಹೊರ ತೆಗೆಯಲು ಸಮಯ ಹಿಡಿದಿತ್ತು.

ರೋಗಿಯು ಕಳೆದ ಆರೇಳು ತಿಂಗಳಿನಿಂದ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಆಫ್ರಿಕಾದ ಹಲವಾರು ಆಸ್ಪತ್ರೆಗಳಲ್ಲಿ ವೈದ್ಯಕೀಯ ಸಹಾಯವನ್ನು ಕೋರಿದರೂ, ಗೆಡ್ಡೆಯ ಗಾತ್ರ ಮತ್ತು ಸ್ಥಳಕ್ಕೆ ಸಂಬಂಧಿಸಿದ ಹೆಚ್ಚಿನ ಅಪಾಯಗಳಿಂದಾಗಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಲು ಸಾಧ್ಯವಾಗಲಿಲ್ಲ. ಗಡ್ಡೆಯು ಹಲವಾರು ಪ್ರಮುಖ ಅಂಗಗಳ ಮೇಲೆ ಒತ್ತುವುದರೊಂದಿಗೆ ನೋವು ಹೆಚ್ಚಿಸಿತ್ತು. ಗುರ್ಗಾಂವ್​​ಗೆ ಆಗಮಿಸಿದ ನಂತರ, ರೋಗಿಯು ಸಿಟಿ ಆಂಜಿಯೋಗ್ರಫಿ ಮತ್ತು ಪಿಇಟಿ ಸ್ಕ್ಯಾನ್ ಸೇರಿದಂತೆ ಸಂಪೂರ್ಣ ಇಮೇಜಿಂಗ್ ಪರೀಕ್ಷೆಗಳಿಗೆ ಒಳಗಾಗಿದ್ದರು.

ಈ ಸ್ಕ್ಯಾನ್​ಗಳು ಗೆಡ್ಡೆಯ ನಾಳೀಯ ಸ್ವರೂಪ, ಮೂತ್ರಪಿಂಡ ಮತ್ತು ಮೂತ್ರದ ಮಾರ್ಗಗಳಂತಹ ನಿರ್ಣಾಯಕ ಅಂಗಗಳಿಗೆ ಅಡ್ಡಿಯಾಗಿತ್ತು ಎಂಬುದನ್ನು ಬಹಿರಂಗಪಡಿಸಿದವು. ಫುಟ್ಬಾಲ್ ಗಾತ್ರದಷ್ಟಿದ್ದ ಗೆಡ್ಡೆಯ ಮೂಲ ಹುಡುಕುವುದು ಕಷ್ಟವಾಯಿತು. ಗೆಡ್ಡೆಯ ಗಾತ್ರ 9.1 ಕೆಜಿ ಇತ್ತು. ಗೆಡ್ಡೆಯ ಮೂಲವನ್ನು ಹುಡುಕುವುದು ನಿಜವಾಗಿಯೂ ಸವಾಲಿನದಾಯಕವಾಗಿತ್ತು. ಆದಾಗ್ಯೂ, ನಾವು ಅದನ್ನು ಯಶಸ್ವಿಯಾಗಿ ತೆಗೆದುಹಾಕಲು ಸಾಧ್ಯವಾಯಿತು ಎಂದು ಡಾ.ಜಾವೇದ್ ವಿವರಿಸಿದ್ದಾರೆ.

ಅಪರೂಪದ ರೋಗ

ಶಸ್ತ್ರಚಿಕಿತ್ಸೆಯ ನಂತರ ವೈದ್ಯಕೀಯ ತಂಡವು ಗೆಡ್ಡೆಯನ್ನು ಜಠರಗರುಳಿನ ಸ್ಟ್ರೋಮಲ್ ಟ್ಯೂಮರ್ (GIST) ಎಂಬ ಅಪರೂಪದ ರೋಗ ಎಂದು ಗೊತ್ತಾಯಿತು. ಇದು ಹೊಟ್ಟೆಯ ವಾಲ್​ನಲ್ಲಿ ಹುಟ್ಟುವ ಕ್ಯಾನ್ಸರ್​ ಅಪರೂಪದ ರೂಪವಾಗಿದೆ. ಚಿಕಿತ್ಸೆ ನೀಡದಿದ್ದರೆ, ಜಿಐಎಸ್​ಟಿಗಳು ಮಾರಣಾಂತಿಕ ಆಂತರಿಕ ರಕ್ತಸ್ರಾವ ಸೇರಿದಂತೆ ತೀವ್ರ ತೊಡಕುಗಳಿಗೆ ಕಾರಣವಾಗಬಹುದು.

ಸಕಾರಾತ್ಮಕ ಚೇತರಿಕೆ

ಅದೃಷ್ಟವಶಾತ್ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ರೋಗಿ ಈಗ ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಡಾ.ಜಾವೇದ್ ಮತ್ತು ಅವರ ತಂಡವು ಮತ್ತಷ್ಟು ಹಾನಿಯನ್ನುಂಟುಮಾಡುವ ಮೊದಲು ಗೆಡ್ಡೆಯನ್ನು ತೆಗೆದುಹಾಕುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ. ಆರೋಗ್ಯವನ್ನು ಮೇಲ್ವಿಚಾರಣೆ ಮಾಡಲು ನಡೆಯುತ್ತಿರುವ ವೈದ್ಯಕೀಯ ಆರೈಕೆಯೊಂದಿಗೆ ಅವರು ಸಂಪೂರ್ಣ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.