ಆಗಸ್ಟ್‌ ತಿಂಗಳ ರಜಾದಿನಗಳನ್ನು ಗಮನಿಸಿದ್ರಾ; ವಾರಾಂತ್ಯ ರಜೆ ಸೇರಿಸಿ 3 ದಿನ ಮತ್ತು 5 ದಿನಗಳ ಪ್ರವಾಸ ಪ್ಲಾನ್ ಮಾಡಬಹುದು ನೋಡಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಆಗಸ್ಟ್‌ ತಿಂಗಳ ರಜಾದಿನಗಳನ್ನು ಗಮನಿಸಿದ್ರಾ; ವಾರಾಂತ್ಯ ರಜೆ ಸೇರಿಸಿ 3 ದಿನ ಮತ್ತು 5 ದಿನಗಳ ಪ್ರವಾಸ ಪ್ಲಾನ್ ಮಾಡಬಹುದು ನೋಡಿ

ಆಗಸ್ಟ್‌ ತಿಂಗಳ ರಜಾದಿನಗಳನ್ನು ಗಮನಿಸಿದ್ರಾ; ವಾರಾಂತ್ಯ ರಜೆ ಸೇರಿಸಿ 3 ದಿನ ಮತ್ತು 5 ದಿನಗಳ ಪ್ರವಾಸ ಪ್ಲಾನ್ ಮಾಡಬಹುದು ನೋಡಿ

Long Weekends In August 2024; ಆಗಸ್ಟ್ ತಿಂಗಳ ರಜೆ ಈ ಬಾರಿ ಎರಡು ಸಲ ಕಿರು ಪ್ರವಾಸಕ್ಕೆ ಅವಕಾಶ ನೀಡುತ್ತದೆ. ಹಬ್ಬದ ರಜೆಗಳು ಇರುವ ಕಾರಣ ವಾರಾಂತ್ಯದ ರಜೆ ವಿಸ್ತರಣೆಗೆ ಅವಕಾಶವಿದೆ. ಅದಕ್ಕೇ ಕೇಳಿದ್ದು ಆಗಸ್ಟ್‌ ತಿಂಗಳ ರಜಾದಿನಗಳನ್ನು ಗಮನಿಸಿದ್ರಾ ಅಂತ. ವಾರಾಂತ್ಯ ರಜೆ ಸೇರಿಸಿ 3 ದಿನ ಮತ್ತು 5 ದಿನಗಳ ಪ್ರವಾಸವನ್ನು ಪ್ಲಾನ್ ಮಾಡಬಹುದು ನೋಡಿ. ತಡ ಯಾಕೆ

ಆಗಸ್ಟ್‌ ತಿಂಗಳ ರಜಾದಿನಗಳನ್ನು ಗಮನಿಸಿದ್ರಾ; ವಾರಾಂತ್ಯ ರಜೆ ಸೇರಿಸಿ 3 ದಿನ ಮತ್ತು 5 ದಿನಗಳ ಪ್ರವಾಸ ಪ್ಲಾನ್ ಮಾಡಬಹುದು.
ಆಗಸ್ಟ್‌ ತಿಂಗಳ ರಜಾದಿನಗಳನ್ನು ಗಮನಿಸಿದ್ರಾ; ವಾರಾಂತ್ಯ ರಜೆ ಸೇರಿಸಿ 3 ದಿನ ಮತ್ತು 5 ದಿನಗಳ ಪ್ರವಾಸ ಪ್ಲಾನ್ ಮಾಡಬಹುದು.

ನವದೆಹಲಿ: ದೇಶಾದ್ಯಂತ ಆಗಸ್ಟ್ ತಿಂಗಳಲ್ಲಿ ಹಬ್ಬಹರಿದಿನಗಳ ಸಾಲು. ರಾಷ್ಟ್ರೀಯ ಹಬ್ಬವೂ ಸೇರಿ 13 ರಜಾದಿನಗಳು ಸಿಗುತ್ತವೆ. ಆಗಸ್ಟ್ ತಿಂಗಳ ಬ್ಯಾಂಕ್ ರಜಾದಿನಗಳ ಪಟ್ಟಿ ಗಮನಿಸಿರುತ್ತೀರಿ. ಅದೇ ರೀತಿ ಈ ರಜಾದಿನಗಳನ್ನು ಬಳಸಿಕೊಂಡು ವಾರಾಂತ್ಯದ ರಜೆ ಸೇರಿಸಿಕೊಂಡರೆ ದೀರ್ಘ ವಾರಾಂತ್ಯ (ಲಾಂಗ್ ವೀಕೆಂಡ್) ರಜೆ ಹೊಂದಿಸಿಕೊಳ್ಳಬಹುದು. ರಜೆ ಹೊಂದಿಸಿಕೊಂಡು ಕಿರು ಪ್ರವಾಸವನ್ನೂ ಕೈಗೊಳ್ಳಬಹುದು.

ಯಾವುದಕ್ಕೂ ಮೊದಲು ಆಗಸ್ಟ್ ತಿಂಗಳ ರಜಾದಿನಗಳನ್ನೊಮ್ಮೆ ಗಮನಿಸಿ. ಎರಡು ವಾರಾಂತ್ಯ ರಜೆ ವಿಸ್ತರಣೆ ಅವಕಾಶ ಆಗಸ್ಟ್‌ ತಿಂಗಳಲ್ಲಿ ಇದೆ. ಮೊದಲನೇ ವಾರಾಂತ್ಯದ ರಜೆ ವಿಸ್ತರಣೆ ಅವಕಾಶ ಸಿಗುವುದು ಸ್ವಾತಂತ್ರ್ಯ ದಿನಾಚರಣೆ ಆಸುಪಾಸಿನಲ್ಲಿ.

ಆಗಸ್ಟ್ ತಿಂಗಳ ರಜಾದಿನಗಳು; ಮೊದಲ ದೀರ್ಘ ವಾರಾಂತ್ಯದಲ್ಲಿ 5 ರಜಾದಿನ

ಆಗಸ್ಟ್ 15 ಸ್ವಾತಂತ್ರ್ಯ ದಿನ (ಗುರುವಾರ). ಅದೇ ದಿನ ಪಾರ್ಸಿಗಳ ಹೊಸ ವರ್ಷಾಚರಣೆ. ಮಾರನೇ ದಿನ ಶುಕ್ರವಾರ, ಅದಾಗಿ ಶನಿವಾರ. ಈ ಎರಡು ದಿನಗಳ ಪೈಕಿ ಕೆಲವು ಒಂದು ರಜೆ ಹಾಕಿದರೆ ಸಾಕು. ಇನ್ನು ಕೆಲವರು ಎರಡು ದಿನ ರಜೆ ಹಾಕಬೇಕಾಗಬಹುದು. ಆಗಸ್ಟ್ 19ಕ್ಕೆ ರಕ್ಷಾ ಬಂಧನ. ಅದಕ್ಕೂ ರಜೆ. ಹೀಗಾಗಿ ಒಟ್ಟು 5 ದಿನ ರಜೆ ಸಿಕ್ಕಂತಾಗುತ್ತದೆ.

ಆಗಸ್ಟ್ 15 (ಗುರುವಾರ); ಸ್ವಾತಂತ್ರ್ಯ ದಿನಾಚರಣೆ ಮತ್ತು ಪಾರ್ಸಿಗಳ ಹೊಸ ವರ್ಷ

ಆಗಸ್ಟ್ 16 (ಶುಕ್ರವಾರ) : ರಜೆ ಹಾಕಬೇಕಷ್ಟೆ

ಆಗಸ್ಟ್ 17 (ಶನಿವಾರ): ಕೆಲವರಿಗೆ ವಾರಾಂತ್ಯದ ರಜೆ, ಇನ್ನು ಕೆಲವರು ರಜೆ ಹಾಕಬಹುದು.

ಆಗಸ್ಟ್ 18 (ಭಾನುವಾರ): ರಾಷ್ಟ್ರೀಯ ರಜಾದಿನ, ವಾರಾಂತ್ಯದ ರಜೆ

ಆಗಸ್ಟ್ 19 (ಸೋಮವಾರ): ರಕ್ಷಾ ಬಂಧನ

ಆಗಸ್ಟ್ ತಿಂಗಳ ರಜಾದಿನಗಳು; ಎರಡನೇ ದೀರ್ಘ ವಾರಾಂತ್ಯ ರಜೆ 3 ದಿನ

ಆಗಸ್ಟ್ ತಿಂಗಳ ರಜಾದಿನಗಳ ಪಟ್ಟಿ ಗಮನಿಸುವುದಾದರೆ ಎರಡನೇ ದೀರ್ಘ ರಜಾದಿನಗಳು ಬರುವುದು ತಿಂಗಳ ಕೊನೆಗೆ. ಒಟ್ಟು ಮೂರು ದಿನ ರಜೆ ಒಟ್ಟಿಗೆ ಸಿಗುತ್ತದೆ. ಇದು ಆಗಸ್ಟ್ 24 ಶನಿವಾರ ಶುರುವಾಗುತ್ತದೆ. ಭಾನುವಾರ, ಸೋಮವಾರ ಕೊನೆಗೊಳ್ಳುತ್ತದೆ. ಇದು ಕಿರು ಪ್ರವಾಸಕ್ಕೆ ಹೇಳಿ ಮಾಡಿಸಿದಂತಿದೆ.

ಆಗಸ್ಟ್ 24 (ಶನಿವಾರ): ವಾರಾಂತ್ಯದ ರಜೆ

ಆಗಸ್ಟ್ 25 (ಭಾನುವಾರ): ವಾರಾಂತ್ಯದ ರಜೆ

ಆಗಸ್ಟ್ 26 (ಸೋಮವಾರ): ಶ್ರೀಕೃಷ್ಣ ಜನ್ಮಾಷ್ಟಮಿ

ಭಾರತದಲ್ಲಿ ದೀರ್ಘ ವಾರಾಂತ್ಯ ಎರಡು ಬಾರಿ ಆಗಸ್ಟ್‌ನಲ್ಲಿ ಸಿಗುತ್ತಿದ್ದು, ಸಣ್ಣ ಪ್ರವಾಸಗಳು, ಮನೆಯಲ್ಲಿ ವಿಶ್ರಾಂತಿ ಪಡೆಯುವುದಕ್ಕೆ ಎರಡಕ್ಕೂ ಈ ದಿನಗಳು ಸೂಕ್ತವಾಗಿದೆ. ಸರಿಯಾದ ಯೋಜನೆಯೊಂದಿಗೆ, ನೀವು ಈ ರಜಾದಿನಗಳಲ್ಲಿ ಪ್ರವಾಸ ಹೋಗಿ ಬರಬಹುದು. ವಿರಾಮ ದಿನಗಳನ್ನು ಧನಾತ್ಮಕವಾಗಿ ಗುಣಾತ್ಮಕವಾಗಿ ಆನಂದಿಸಬಹುದು.

(ಕನ್ನಡದಲ್ಲಿ ಸ್ಪಷ್ಟ ಸುದ್ದಿ, ನಿಖರ ವಿಶ್ಲೇಷಣೆ, ಸಮಗ್ರ ಮಾಹಿತಿಗೆಎಚ್‌ಟಿ ಕನ್ನಡ ಬೆಸ್ಟ್‌.ಕರ್ನಾಟಕದ ತಾಜಾ ವಿದ್ಯಮಾನ, ಅದೇ ರೀತಿರಾಜಕೀಯ ವಿಶ್ಲೇಷಣೆ, ದೇಶ ಮತ್ತು ಜಗತ್ತಿನ ವಿದ್ಯಮಾನಗಳ ವರದಿಗಳನ್ನು ಓದಲುkannada.hindustantimes.com/nation-and-world ಕ್ಕೆ ಭೇಟಿ ನೀಡಿ.)

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.