ಆಗಸ್ಟ್‌ 2024ರ ಬ್ಯಾಂಕ್‌ ರಜೆ; 13 ಸರ್ಕಾರಿ ರಜೆದಿನಾಗಳು, ಸ್ವಾತಂತ್ರ್ಯ ದಿನ, ರಾಖಿ ಹಬ್ಬ ಮತ್ತಿನ್ಯಾವತ್ತು ಬ್ಯಾಂಕು ರಜೆ, ಪೂರ್ಣ ವಿವರ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಆಗಸ್ಟ್‌ 2024ರ ಬ್ಯಾಂಕ್‌ ರಜೆ; 13 ಸರ್ಕಾರಿ ರಜೆದಿನಾಗಳು, ಸ್ವಾತಂತ್ರ್ಯ ದಿನ, ರಾಖಿ ಹಬ್ಬ ಮತ್ತಿನ್ಯಾವತ್ತು ಬ್ಯಾಂಕು ರಜೆ, ಪೂರ್ಣ ವಿವರ

ಆಗಸ್ಟ್‌ 2024ರ ಬ್ಯಾಂಕ್‌ ರಜೆ; 13 ಸರ್ಕಾರಿ ರಜೆದಿನಾಗಳು, ಸ್ವಾತಂತ್ರ್ಯ ದಿನ, ರಾಖಿ ಹಬ್ಬ ಮತ್ತಿನ್ಯಾವತ್ತು ಬ್ಯಾಂಕು ರಜೆ, ಪೂರ್ಣ ವಿವರ

ಆಗಸ್ಟ್‌ ತಿಂಗಳ ಬ್ಯಾಂಕ್‌ ರಜೆ (Bank Holidays in August 2024): ಆಗಸ್ಟ್ ತಿಂಗಳು ರಾಷ್ಟ್ರೀಯ ಹಬ್ಬದ ಜೊತೆಗೆ ಇತರೆ ಧಾರ್ಮಿಕ ಹಬ್ಬ ಹರಿದಿನಗಳೂ ಇರುವ ಕಾರಣ ರಜೆಗಳು ಹೆಚ್ಚು. 13 ಸರ್ಕಾರಿ ರಜೆದಿನಾಗಳು ಇದ್ದು, ಇದರಲ್ಲಿ ಸ್ವಾತಂತ್ರ್ಯ ದಿನ, ರಾಖಿ ಹಬ್ಬಗಳು ಸೇರಿಕೊಂಡಿವೆ. ಇವು ಸೇರಿ ಮತ್ತಿನ್ಯಾವತ್ತು ಬ್ಯಾಂಕು ರಜೆ ಎಂಬುದರ ಪೂರ್ಣ ವಿವರ ಇಲ್ಲಿದೆ.

ಆಗಸ್ಟ್‌ 2024ರ ಬ್ಯಾಂಕ್‌ ರಜೆ; 13 ಸರ್ಕಾರಿ ರಜೆದಿನಾಗಳು; ಸ್ವಾತಂತ್ರ್ಯ ದಿನ, ರಾಖಿ ಹಬ್ಬ ಮತ್ತಿನ್ಯಾವತ್ತು ಬ್ಯಾಂಕು ರಜೆ, ಪೂರ್ಣ ವಿವರ
ಆಗಸ್ಟ್‌ 2024ರ ಬ್ಯಾಂಕ್‌ ರಜೆ; 13 ಸರ್ಕಾರಿ ರಜೆದಿನಾಗಳು; ಸ್ವಾತಂತ್ರ್ಯ ದಿನ, ರಾಖಿ ಹಬ್ಬ ಮತ್ತಿನ್ಯಾವತ್ತು ಬ್ಯಾಂಕು ರಜೆ, ಪೂರ್ಣ ವಿವರ

ನವದೆಹಲಿ: ಸಾಮಾನ್ಯವಾಗಿ ಆಗಸ್ಟ್ ತಿಂಗಳು ಎಂದರೆ ಹಬ್ಬಹರಿದಿನಗಳ ರಜೆಗಳು ನಿರೀಕ್ಷಿತ. ಸರ್ಕಾರಿ ರಜಾದಿನಗಳಾದ ಕಾರಣ ಇದು ಬ್ಯಾಂಕುಗಳ ವಹಿವಾಟಿನ ಮೇಲೂ ಪರಿಣಾಮ ಬೀರುತ್ತದೆ. ಈ ಬಾರಿ ಅಂದರೆ 2024ರ ಆಗಸ್ಟ್‌ ತಿಂಗಳ ಬ್ಯಾಂಕ್‌ ರಜೆ (Bank Holidays in August 2024) ಎಷ್ಟಿರಬಹುದು ಎಂಬ ಲೆಕ್ಕಾಚಾರ ಈಗಲೇ ಶುರುವಾಗಿದೆ.

ಬ್ಯಾಂಕ್ ರಜಾದಿನಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತವೆ ಎಂಬುದನ್ನು ಗ್ರಾಹಕರು ಗಮನಿಸಬೇಕು. ಈ ಮಾಹಿತಿ ತಿಳಿದುಕೊಳ್ಳಲು ನಿಮ್ಮ ಸ್ಥಳೀಯ ಬ್ಯಾಂಕುಗಳ ಕ್ಯಾಲೆಂಡರ್‌ಗಳನ್ನೊಮ್ಮೆ ಪರಿಶೀಲಿಸಬಹುದು. ಹಬ್ಬಗಳು ಮತ್ತು ರಾಷ್ಟ್ರೀಯ ರಜಾದಿನಗಳ ಹೊರತಾಗಿ, ಪ್ರಾದೇಶಿಕ ಮತ್ತು ಧಾರ್ಮಿಕ ಹಬ್ಬಗಳೊಂದಿಗೆ ಒಟ್ಟು ಎರಡು ಶನಿವಾರಗಳು ಮತ್ತು ನಾಲ್ಕು ಭಾನುವಾರಗಳಂದು ಬ್ಯಾಂಕ್ ರಜೆ ಇದೆ.

ಆಗಸ್ಟ್ 2024ರ ಬ್ಯಾಂಕ್ ರಜಾದಿನಗಳ ವಿವರ

ಭಾರತದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಆಗಸ್ಟ್‌ 2024ರ ಬ್ಯಾಂಕ್ ರಜಾದಿನಗಳನ್ನು ಗಮನಿಸಿದರೆ, ಅದರಲ್ಲಿ ಕನಿಷ್ಠ ಒಂಬತ್ತು ಪಟ್ಟಿ ಮಾಡದ ರಜಾದಿನಗಳು (ವಾರದ ರಜೆಗಳು ಸೇರಿ) ಇವೆ. ವಿಶೇಷ ಎಂದರೆ ತಿಂಗಳ ಕೊನೆಗೆ ದೀರ್ಘ ವಾರಾಂತ್ಯದ ರಜೆಗಳೂ ಇರುವ ಕಾರಣ ಬ್ಯಾಂಕ್ ವಹಿವಾಟುಗಳನ್ನು ಮುಂಚಿತವಾಗಿ ಯೋಜಿಸುವುದು ಉತ್ತಮ. ಇದರಂತೆ, ಆಗಸ್ಟ್ 2024 ರ ಬ್ಯಾಂಕ್ ರಜಾದಿನಗಳ ವಿವರ ಹೀಗಿದೆ.

ಆಗಸ್ಟ್ 4 - ಭಾನುವಾರ - ರಾಷ್ಟ್ರೀಯ ರಜಾದಿನ

ಆಗಸ್ಟ್ 10 - ಎರಡನೇ ಶನಿವಾರ - ರಾಷ್ಟ್ರೀಯ ರಜಾದಿನ

ಆಗಸ್ಟ್ 11 - ಭಾನುವಾರ - ರಾಷ್ಟ್ರೀಯ ರಜಾದಿನ

ಆಗಸ್ಟ್ 15 - ಸ್ವಾತಂತ್ರ್ಯ ದಿನ / ಪಾರ್ಸಿ ಹೊಸ ವರ್ಷ - ರಾಷ್ಟ್ರೀಯ ರಜಾದಿನ

ಆಗಸ್ಟ್ 18 - ಭಾನುವಾರ - ರಾಷ್ಟ್ರೀಯ ರಜಾದಿನ

ಆಗಸ್ಟ್ 19 - ರಾಖಿ - ಉತ್ತರ ಪ್ರದೇಶ, ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಹರಿಯಾಣಗಳಲ್ಲಿ ರಜಾದಿನ

ಆಗಸ್ಟ್ 24 - ನಾಲ್ಕನೇ ಶನಿವಾರ - ರಾಷ್ಟ್ರೀಯ ರಜಾದಿನ

ಆಗಸ್ಟ್ 25 - ಭಾನುವಾರ - ರಾಷ್ಟ್ರೀಯ ರಜಾದಿನ

ಆಗಸ್ಟ್ 26 - ಕೃಷ್ಣ ಜನ್ಮಾಷ್ಟಮಿ - ಕರ್ನಾಟಕವೂ ಸೇರಿ ಹೆಚ್ಚಿನ ರಾಜ್ಯಗಳಲ್ಲಿ ಬ್ಯಾಂಕುಗಳಿಗೆ ರಜಾದಿನ

ಆನ್‌ಲೈನ್‌ ಸೇವೆಗಳಿಗೆ ರಜಾದಿನಗಳು ಅನ್ವಯವಲ್ಲ

ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳು ನಗದು ತುರ್ತು ಪರಿಸ್ಥಿತಿಗಳ ನಿರ್ವಹಣೆಗಾಗಿ ಎಲ್ಲಾ ಬ್ಯಾಂಕುಗಳು ವಾರಾಂತ್ಯ ಅಥವಾ ಇತರ ರಜೆಗಳನ್ನು ಲೆಕ್ಕಿಸದೆ ತಮ್ಮ ಆನ್‌ಲೈನ್ ವೆಬ್‌ಸೈಟ್‌ಗಳು ಮತ್ತು ಮೊಬೈಲ್ ಬ್ಯಾಂಕಿಂಗ್ ಸೇವೆಗಳ ಅಪ್ಲಿಕೇಶನ್‌ಗಳನ್ನು ನಿರ್ವಹಿಸುತ್ತವೆ. ನಿರ್ದಿಷ್ಟ ಕಾರಣಗಳಿಗಾಗಿ ಬಳಕೆದಾರರಿಗೆ ಮುಂಚಿತವಾಗಿ ಸೂಚಿಸಿದರಷ್ಟೆ ಈ ಆನ್‌ಲೈನ್ ಸೇವೆಗಳಲ್ಲಿ ವ್ಯತ್ಯಯವಾಗುತ್ತದೆ. ನಗದು ಹಣ ಪಡೆಯಲು ಯಾವುದೇ ಬ್ಯಾಂಕಿನ ಎಟಿಎಂಗಳನ್ನು ಬಳಸಬಹುದು.

ಚೆಕ್‌ಗಳು ಮತ್ತು ಪ್ರಾಮಿಸರಿ ನೋಟ್‌ಗಳ ವಿತರಣೆಯೊಂದಿಗೆ ವ್ಯವಹರಿಸುವ ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್‌ನ ನಿಬಂಧನೆಗಳ ಅಡಿಯಲ್ಲಿ ಬ್ಯಾಂಕ್‌ನ ಎಲ್ಲಾ ವಾರ್ಷಿಕ ರಜಾ ಕ್ಯಾಲೆಂಡರ್ ಅನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ಮುಂಚಿತವಾಗಿ ಪ್ರಕಟಿಸುತ್ತದೆ. ಈ ಪಟ್ಟಿ ಮಾಡಲಾದ ರಜಾದಿನಗಳಲ್ಲಿ ಬ್ಯಾಂಕ್ ಕೇಂದ್ರ ಕಚೇರಿ ಮತ್ತು ಶಾಖೆಗಳಲ್ಲಿ ನಡೆಯುವ ವಹಿವಾಟುಗಳು ಲಭ್ಯವಿರುವುದಿಲ್ಲ.

(ಕನ್ನಡದಲ್ಲಿ ಸ್ಪಷ್ಟ ಸುದ್ದಿ, ನಿಖರ ವಿಶ್ಲೇಷಣೆ, ಸಮಗ್ರ ಮಾಹಿತಿಗೆ ಎಚ್‌ಟಿ ಕನ್ನಡ ಬೆಸ್ಟ್‌. ಕರ್ನಾಟಕದ ತಾಜಾ ವಿದ್ಯಮಾನ, ಅದೇ ರೀತಿ ರಾಜಕೀಯ ವಿಶ್ಲೇಷಣೆ, ದೇಶ ಮತ್ತು ಜಗತ್ತಿನ ವಿದ್ಯಮಾನಗಳ ವರದಿಗಳನ್ನು ಓದಲು kannada.hindustantimes.com/nation-and-world ಕ್ಕೆ ಭೇಟಿ ನೀಡಿ.)

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.