ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಪ್ರಧಾನಿ ಮೋದಿ ನೇತೃತ್ವದಲ್ಲಿ ಎನ್‌ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದ ಹೊತ್ತಲ್ಲಿ, ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದ ನೆನಪು- ಕಿರು ಅವಲೋಕನ

ಪ್ರಧಾನಿ ಮೋದಿ ನೇತೃತ್ವದಲ್ಲಿ ಎನ್‌ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದ ಹೊತ್ತಲ್ಲಿ, ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದ ನೆನಪು- ಕಿರು ಅವಲೋಕನ

ಪ್ರಧಾನಿ ಮೋದಿ ನೇತೃತ್ವದಲ್ಲಿ ಎನ್‌ಡಿಎ ಸರ್ಕಾರ ನಿನ್ನೆ ರಾತ್ರಿ (ಜೂನ್ 9) ಅಸ್ತಿತ್ವಕ್ಕೆ ಬಂತು. ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ 31 ಕ್ಯಾಬಿನೆಟ್ ಸಚಿವರು ಮತ್ತು 41 ರಾಜ್ಯ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ಈ ಹೊತ್ತಲ್ಲಿ, ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದ ನೆನಪು- ಕಿರು ಅವಲೋಕನ ಇಲ್ಲಿದೆ.

ಪ್ರಧಾನಿ ಮೋದಿ ನೇತೃತ್ವದಲ್ಲಿ ಎನ್‌ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದ ಹೊತ್ತಲ್ಲಿ, ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದ ನೆನಪು- ಕಿರು ಅವಲೋಕನ
ಪ್ರಧಾನಿ ಮೋದಿ ನೇತೃತ್ವದಲ್ಲಿ ಎನ್‌ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದ ಹೊತ್ತಲ್ಲಿ, ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದ ನೆನಪು- ಕಿರು ಅವಲೋಕನ

ನವದೆಹಲಿ: ಎನ್‌ಡಿಎ ನಾಯಕರಾದ ನರೇಂದ್ರ ಮೋದಿ ಅವರು ಇಂದು (ಜೂನ್ 9) ಪ್ರಧಾನಮಂತ್ರಿಯಾಗಿ ಮೂರನೇ ಬಾರಿಗೆ ಅಧಿಕಾರ ಸ್ವೀಕರಿಸಿಕೊಂಡರು. ಇದರೊಂದಿಗೆ ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರ ಮತ್ತೊಮ್ಮೆ ರಚನೆಯಾದಂತೆ ಆಯಿತು. ಇದಕ್ಕೂ ಮೊದಲು ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದಲ್ಲಿ 2004 ರಿಂದ 2009ರ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಪೂರ್ಣ ಅವಧಿ ಆಡಳಿತ ನಡೆಸಿತ್ತು. ಅದಾದ ಬಳಿಕ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಎರಡು ಪೂರ್ಣ ಅವಧಿಗೆ ಆಡಳಿತ ನೀಡಿತ್ತು. ಅದಾಗಿ ಬಿಜೆಪಿಗೆ ಎರಡು ಅವಧಿಗೆ ಪೂರ್ಣ ಬಹುಮತ ಬಂದಿದ್ದರೂ ಮಿತ್ರಪಕ್ಷಗಳನ್ನೂ ಸೇರಿಸಿಕೊಂಡೇ ಆಡಳಿತ ನಡೆಸಿತ್ತು.

ಟ್ರೆಂಡಿಂಗ್​ ಸುದ್ದಿ

ಈ ಸಲ ಲೋಕಸಭೆಯ 543 ಸ್ಥಾನಗಳ ಪೈಕಿ ಬಹುಮತಕ್ಕೆ ಬೇಕಾದ 272 ಗೆಲ್ಲುವಲ್ಲಿ ಬಿಜೆಪಿಗೆ ಸಾಧ್ಯವಾಗಿಲ್ಲ. ಬಿಜೆಪಿ 240 ಸ್ಥಾನ ಗೆದ್ದುಕೊಂಡರೆ, ಮಿತ್ರಪಕ್ಷಗಳು 53 ಸ್ಥಾನಗಳನ್ನು ಗೆದ್ದ ಕಾರಣ, 272ರ ಮ್ಯಾಜಿಕ್ ನಂಬರ್ ದಾಟಿದೆ. ಈ ಸನ್ನಿವೇಶದಲ್ಲಿ ಎನ್‌ಡಿಎ ಮೊದಲ ಪೂರ್ಣ ಅವಧಿಯ ಸರ್ಕಾರದ ಸನ್ನಿವೇಶದ ಹಿನ್ನೋಟ ತಿಳಿವಳಿಕೆಯ ದೃಷ್ಟಿಯಿಂದ ಅನುಕೂಲಕ್ಕೆ ಬಂದೀತು.

ಸಮ್ಮಿಶ್ರ ಸರ್ಕಾರಗಳು ಭಾರತಕ್ಕೆ ಹೊಸದಲ್ಲ. 1952 ರಲ್ಲಿ ನಡೆದ ಮೊದಲ ಲೋಕಸಭಾ ಚುನಾವಣೆಯಿಂದ, ಇತ್ತೀಚಿನ ವರೆಗೆ ಭಾರತವು ಸುಮಾರು 32 ವರ್ಷಗಳ ಕಾಲ ಸಮ್ಮಿಶ್ರ ಸರ್ಕಾರಗಳನ್ನು ಕಂಡಿದೆ.

ವಾಸ್ತವವಾಗಿ 2014 ರಲ್ಲಿ, ಬಿಜೆಪಿಯೇ ಸ್ವತಃ ಬಹುಮತಕ್ಕಿಂತ 10 ಹೆಚ್ಚು ಅಂದರೆ 282 ಸ್ಥಾನಗಳನ್ನು ಗೆದ್ದಾಗ ಭಾರತವು 25 ವರ್ಷಗಳ ನಂತರ ಸ್ಪಷ್ಟ ಬಹುಮತದ ಏಕಪಕ್ಷ ಸರ್ಕಾರದ ಆಡಳಿತವನ್ನು ನೋಡಿತು. ಅದಕ್ಕೂ ಮೊದಲು 1984-1989ರಲ್ಲಿ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷವು 541 ಸದಸ್ಯ ಬಲದ ಲೋಕಸಭೆಯಲ್ಲಿ 414 ಸ್ಥಾನಗಳನ್ನು ಗಳಿಸುವ ಮೂಲಕ ಬಹುಮತದೊಂದಿಗೆ ಸರ್ಕಾರವನ್ನು ಕಂಡಿತ್ತು.

ಭಾರತದಲ್ಲಿ ಮೈತ್ರಿ ಸರ್ಕಾರ ಯುಗ 1989 ರಿಂದ 2014

ಭಾರತದಲ್ಲಿ 1989 ರ ಲೋಕಸಭಾ ಚುನಾವಣೆಯ ಫಲಿತಾಂಶದೊಂದಿಗೆ ಸಮ್ಮಿಶ್ರ ಸರ್ಕಾರ ಯುಗದ ರಾಜಕೀಯ ಶುರುವಾಯಿತು. ಲೋಕಸಭೆ 197 ಸ್ಥಾನಗಳೊಂದಿಗೆ ಕಾಂಗ್ರೆಸ್ ಇನ್ನೂ ಏಕೈಕ ದೊಡ್ಡ ಪಕ್ಷವಾಗಿದ್ದರೂ ಸಹ, ರಾಜೀವ್ ಗಾಂಧಿ ನೇತೃತ್ವದ ಸರ್ಕಾರವು ಆ ವರ್ಷದ ಸಾರ್ವತ್ರಿಕ ಚುನಾವಣೆಯಲ್ಲಿ ತನ್ನ ಜನಾದೇಶವನ್ನು ಕಳೆದುಕೊಂಡಿತು.

ಆ ಚುನಾವಣೆಯಲ್ಲಿ 143 ಸ್ಥಾನಗಳನ್ನು ಹೊಂದಿರುವ ಎರಡನೇ ಅತಿದೊಡ್ಡ ಪಕ್ಷವಾದ ಜನತಾ ದಳದ ನಾಯಕ ವಿಪಿ ಸಿಂಗ್ ಅವರನ್ನು ಸರ್ಕಾರ ರಚಿಸಲು ಭಾರತದ ರಾಷ್ಟ್ರಪತಿಯವರು ಆಹ್ವಾನಿಸಿದರು. 1989ರ ಡಿಸೆಂಬರ್ 2 ರಂದು, ಬಿಜೆಪಿ ಮತ್ತು ಕಮ್ಯುನಿಸ್ಟ್ ಪಕ್ಷಗಳ ಬಾಹ್ಯ ಬೆಂಬಲದೊಂದಿಗೆ ಸಿಂಗ್ ಏಳನೇ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಆದಾಗ್ಯೂ, ಈ ಮೈತ್ರಿ ಹೆಚ್ಚು ಕಾಲ ಉಳಿಯಲಿಲ್ಲ. 1990ರ ಅಕ್ಟೋಬರ್ 23 ರಂದು ಅಯೋಧ್ಯೆಯ ಬಾಬರಿ ಮಸೀದಿ ಸ್ಥಳಕ್ಕೆ ತೆರಳುತ್ತಿದ್ದಾಗ ಬಿಜೆಪಿ ನಾಯಕ ಎಲ್‌ಕೆ ಅಡ್ವಾಣಿಯನ್ನು ಬಂಧಿಸಿ, ಅವರ ರಾಮ ರಥಯಾತ್ರೆಯನ್ನು ನಿಲ್ಲಿಸಲು ಬಿಹಾರದ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರ ಕ್ರಮವನ್ನು ವಿಪಿ ಸಿಂಗ್ ಅವರನ್ನು ಬೆಂಬಲಿಸಿದರು. ವಿಪಿ ಸಿಂಗ್ ಸರ್ಕಾರಕ್ಕೆ ಬಿಜೆಪಿ ತನ್ನ ಬೆಂಬಲವನ್ನು ಹಿಂತೆಗೆದುಕೊಂಡಿತು. 1990ರ ನವೆಂಬರ್ 7 ರಂದು ವಿಪಿ ಸಿಂಗ್ ಅವರು ವಿಶ್ವಾಸ ಮತವನ್ನು ಕಳೆದುಕೊಂಡರು.

ಚಂದ್ರಶೇಖರ್ 64 ಸಂಸದರೊಂದಿಗೆ ಜನತಾ ದಳದಿಂದ ಬೇರ್ಪಟ್ಟು 1990 ರಲ್ಲಿ ಸಮಾಜವಾದಿ ಜನತಾ ಪಕ್ಷವನ್ನು ಸ್ಥಾಪಿಸಿದರು. ಅವರು ಕಾಂಗ್ರೆಸ್ (ಐ) ನಿಂದ ಬಾಹ್ಯ ಬೆಂಬಲವನ್ನು ಪಡೆದುಕೊಂಡು 1990ರ ನವೆಂಬರ್ 10 ರಂದು ಭಾರತದ ಎಂಟನೇ ಪ್ರಧಾನ ಮಂತ್ರಿಯಾದರು. ಆದರೆ ಅವರು ಕೂಡ 1991ರ ಜೂನ್ 21 ರಂದು ರಾಜೀನಾಮೆ ನೀಡಬೇಕಾಯಿತು. ಚಂದ್ರಶೇಖರ್ ಸರ್ಕಾರವು ರಾಜೀವ್ ಗಾಂಧಿಯವರ ಮೇಲೆ ಬೇಹುಗಾರಿಕೆ ನಡೆಸುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್(ಐ) ತನ್ನ ಬೆಂಬಲವನ್ನು ಹಿಂತೆಗೆದುಕೊಂಡ ಕಾರಣ ಬಹುಮತ ಕಳೆದುಕೊಂಡದ್ದು ಇದಕ್ಕೆ ಕಾರಣ.

ಇದಾಗಿ, 1991 ರ ಚುನಾವಣೆಯಲ್ಲಿ, ಕಾಂಗ್ರೆಸ್ ನಾಯಕ ಪಿವಿ ನರಸಿಂಹ ರಾವ್ ಜನತಾ ದಳದ ಬಾಹ್ಯ ಬೆಂಬಲದೊಂದಿಗೆ ಸ್ಪಷ್ಟ ಬಹುಮತ ಇಲ್ಲದ ಸರ್ಕಾರದ ಪ್ರಧಾನಿಯಾದರು. ಅಷ್ಟೇ ಅಲ್ಲ, ಈ ಸಮ್ಮಿಶ್ರ ಸರ್ಕಾರ ಐದು ವರ್ಷ ಪೂರೈಸಿತು ಕೂಡ.

ವಾಜಪೇಯಿ ಸರ್ಕಾರದಿಂದ 13 ದಿನದ ಆಡಳಿತ

ಬಿಜೆಪಿ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರು ಮೊದಲ ಬಾರಿಗೆ 1996ರ ಮೇ 16 ರಿಂದ ಜೂನ್ 1 ರ ತನಕ 13 ದಿನಗಳ ಕಾಲ ಪ್ರಧಾನಿಯಾಗಿದ್ದರು. ವಾಜಪೇಯಿ ಅವರ ನಂತರ ಎಚ್ ಡಿ ದೇವೇಗೌಡ, ಐ ಕೆ ಗುಜ್ರಾಲ್ ಅವರ ಸರ್ಕಾರ ರಚನೆಯಾಯಿತು ಈ ಎರಡೂ ಸರ್ಕಾರಗಳು ಅಲ್ಪಾವಧಿಯದ್ದಾಗಿದ್ದವು.

1998ರಲ್ಲಿ ನಡೆದ 12ನೇ ಲೋಕಸಭಾ ಚುನಾವಣೆಯಲ್ಲೂ ಯಾವ ಪಕ್ಷಕ್ಕೂ ಬಹುಮತ ಸಿಕ್ಕಿರಲಿಲ್ಲ. ಇದರಲ್ಲಿ ಬಿಜೆಪಿಗೆ 182 ಸ್ಥಾನಗಳು ಬಂದಿದ್ದವು. ಕಾಂಗ್ರೆಸ್ ಪಕ್ಷಕ್ಕೆ 114 ಸ್ಥಾನಗಳು ಸಿಕ್ಕಿದ್ದವು. ಸಿಪಿಐಎಂ 32 ಸ್ಥಾನಗಳಲ್ಲಿ ಗೆಲುವು ಕಂಡಿತ್ತು. ಆ ಸಂದರ್ಭದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಮೈತ್ರಿ ಸರ್ಕಾರ ರಚಿಸುವಲ್ಲಿ ಸಫಲರಾದರು. 1998ರ ಮಾರ್ಚ್ 19 ರಂದು ಎರಡನೇ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. 543 ಸದಸ್ಯ ಬಲದ ಲೋಕಸಭೆಯಲ್ಲಿ ಈ ಮೈತ್ರಿಗೆ 272 ಸ್ಥಾನಗಳಿದ್ದವು. ಆದರೆ ಒಂದು ವರ್ಷ ವಾದ ಕೂಡಲೇ ಎಐಎಡಿಎಂಕೆ ತನ್ನ ಬೆಂಬಲ ಹಿಂಪಡೆಯಿತು. ಹೀಗಾಗಿ ಬಹುಮತ ಕಳೆದುಕೊಂಡ ವಾಜಪೇಯಿ ಸರ್ಕಾರ ಪತನವಾಯಿತು. ವಿಶ್ವಾಸಮತದಲ್ಲಿ ಕೇವಲ ಒಂದು ಮತ ಕಡಿಮೆಯಾಗಿ ಸರ್ಕಾರ ಪತನವಾಗಿರುವುದು ಭಾರತದ ಸಂಸತ್ ಇತಿಹಾಸದಲ್ಲಿ ಅದೇ ಮೊದಲನೇ ಸಲ.

ಎನ್‌ಡಿಎ ಸರ್ಕಾರ ಮೊದಲ ಅವಧಿ 1999-2004

13ನೇ ಲೋಕಸಭೆಗೆ 1999ರ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಹೊಸ ಚುನಾವಣೆಗಳು ನಡೆದವು. ಬಿಜೆಪಿ ಮತ್ತೆ 182 ಸ್ಥಾನಗಳನ್ನು ಗೆದ್ದುಕೊಂಡಿತು. ಕಾಂಗ್ರೆಸ್ 114 ಸ್ಥಾನಗಳನ್ನು ಮತ್ತು ಸಿಪಿಎಂ 33 ಸ್ಥಾನಗಳನ್ನು ಗೆದ್ದಿದೆ. ಡಿಎಂಕೆ, ಟಿಎಂಸಿ, ಬಿಜೆಡಿ, ನ್ಯಾಷನಲ್ ಕಾನ್ಫರೆನ್ಸ್ ಸೇರಿದಂತೆ ಕನಿಷ್ಠ 13 ಮೈತ್ರಿ ಪಾಲುದಾರರ ಬೆಂಬಲದೊಂದಿಗೆ ವಾಜಪೇಯಿ ಅವರು 1999ರ ಅಕ್ಟೋಬರ್ 13 ರಂದು ಮತ್ತೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇದೇ ಮೊದಲ ಸಲ ಕಾಂಗ್ರೆಸ್‌ ಪಕ್ಷದ ಹೊರತಾದ ಪಕ್ಷಗಳ ಸರ್ಕಾರ ಪೂರ್ಣ ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು.

ಅದಾಗಿ, 2004ರಲ್ಲಿ ಮತ್ತೊಂದು ಅವಧಿಗೆ ಎನ್‌ಡಿಎ ಸರ್ಕಾರವೇ ಬರಲಿದೆ ಎಂಬ ವಿಶ್ವಾಸದಲ್ಲಿದ್ದರು ಬಿಜೆಪಿ ಮತ್ತು ಮಿತ್ರಪಕ್ಷಗಳ ನಾಯಕರು. ಚುನಾವಣಾ ಪ್ರಚಾರಕ್ಕೆ ಇಂಡಿಯಾ ಶೈನಿಂಗ್ ಅಭಿಯಾನ ನಡೆಸಿದರು. ಆದರೆ, ಮತದಾರರ ನಿರ್ಣಯ ಕಾಂಗ್ರೆಸ್ ನೇತೃತ್ವದ ಯುಪಿಎ ಪರವಾಗಿ ಹೋಯಿತು. ಹಾಗೆ, ಕಾಂಗ್ರೆಸ್ ನೇತೃತ್ವದ ಪ್ರಧಾನ ಮಂತ್ರಿ ಡಾ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ಎರಡು ಅವಧಿಗೆ ಸರ್ಕಾರ ನಡೆಸಿತು.

ಟಿ20 ವರ್ಲ್ಡ್‌ಕಪ್ 2024