Sadhguru Jaggi Health updates: ಅಧ್ಯಾತ್ಮಿಕ ಗುರು ಜಗ್ಗಿ ವಾಸುದೇವ್‌ ಆರೋಗ್ಯದಲ್ಲಿ ಚೇತರಿಕೆ, ವೈದ್ಯರು, ಪುತ್ರಿಯಿಂದ ಹೇಳಿಕೆ ಬಿಡುಗಡೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Sadhguru Jaggi Health Updates: ಅಧ್ಯಾತ್ಮಿಕ ಗುರು ಜಗ್ಗಿ ವಾಸುದೇವ್‌ ಆರೋಗ್ಯದಲ್ಲಿ ಚೇತರಿಕೆ, ವೈದ್ಯರು, ಪುತ್ರಿಯಿಂದ ಹೇಳಿಕೆ ಬಿಡುಗಡೆ

Sadhguru Jaggi Health updates: ಅಧ್ಯಾತ್ಮಿಕ ಗುರು ಜಗ್ಗಿ ವಾಸುದೇವ್‌ ಆರೋಗ್ಯದಲ್ಲಿ ಚೇತರಿಕೆ, ವೈದ್ಯರು, ಪುತ್ರಿಯಿಂದ ಹೇಳಿಕೆ ಬಿಡುಗಡೆ

ತೀವ್ರ ತಲೆನೋವಿನಿಂದ ಬಳಲಿ, ಮೆದುಳು ರಕ್ತಸ್ರಾವದಿಂದ ದೆಹಲಿಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಆಧ್ಯಾತ್ಮಿಕ ಗುರು ಜಗ್ಗಿ ವಾಸುದೇವ್‌ (Sadhguru Jaggi Vasudev) ಆರೋಗ್ಯದಲ್ಲಿ ಗಣನೀಯ ಸುಧಾರಣೆ ಕಂಡು ಬಂದಿದೆ.

ಜಗ್ಗಿ ವಾಸುದೇವ್‌ ಅವರ ಆರೋಗ್ಯದ ಕುರಿತು ಮಗಳು ರಾಧೆ ಜಗ್ಗಿ ಮಾಹಿತಿ ನೀಡಿದ್ದಾರೆ.
ಜಗ್ಗಿ ವಾಸುದೇವ್‌ ಅವರ ಆರೋಗ್ಯದ ಕುರಿತು ಮಗಳು ರಾಧೆ ಜಗ್ಗಿ ಮಾಹಿತಿ ನೀಡಿದ್ದಾರೆ.

ದೆಹಲಿ: ತಲೆಬುರುಡೆ ಹಾಗೂ ಮೆದುಳಿನಲ್ಲಿ ಉಂಟಾಗಿದ್ದ ಮಾರಣಾಂತಿಕ ರಕ್ತಸ್ರಾವದಿಂದ ಬಳಲಿ ದೆಹಲಿಯ ಇಂದ್ರಪ್ರಸ್ಥ ಅಪೊಲೊ ಆಸ್ಪತ್ರೆಯಲ್ಲಿ ತುರ್ತು ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಖ್ಯಾತ ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್(Sadhguru Jaggi Vasudev) ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ಗುರುವಾರ ಮಾಹಿತಿ ನೀಡಿದ್ದಾರೆ. ಇದರೊಟ್ಟಿಗೆ ಜಗ್ಗಿ ವಾಸುದೇವ್‌ ಅವರ ಪುತ್ರಿ ರಾಧೆ ಜಗ್ಗಿ( Radhe Jaggi) ಕೂಡ ತಮ್ಮ ತಂದೆಯ ಆರೋಗ್ಯದ ಕುರಿತು ಮಾಹಿತಿ ನೀಡಿದ್ದು. ಆತಂಕ ಪಡುವ ಅಗತ್ಯವಿಲ್ಲ. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಕೂಡ ಜಗ್ಗಿ ಅವರೊಂದಿಗೆ ಮಾತನಾಡಿ ಆರೋಗ್ಯದ ಕುರಿತು ವಿಚಾರಿಸಿದ್ದಾರೆ. ಬೇಗನೇ ಗುಣಮುಖವಾಗುವಂತೆ ಹಾರೈಸಿದ್ದಾರೆ. ಇದನ್ನು ಎಕ್ಸ್‌ನಲ್ಲಿ ಮೋದಿ ಹಾಗೂ ಸದ್ಗುರು ಪೋಸ್ಟ್‌ ಮಾಡಿದ್ದಾರೆ.

ನಮ್ಮ ತಂದೆ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಅವರು ಎಲ್ಲಾ ರೀತಿಯ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಬೇಗನೇ ಗುಣಮುಖರಾಗುತ್ತಿದ್ದಾರೆ. ಸದ್ಗುರು ಅವರ ಆರೋಗ್ಯದ ಬಗ್ಗೆ ಕಳಕಳಿಯಿಂದ ಕೇಳುತ್ತಿರುವ ಎಲ್ಲರಿಗೂ ಇದನ್ನು ತಿಳಿಸುತ್ತಿದ್ದೇನೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ರಾಧೆ ಜಗ್ಗೆ ಬರೆದುಕೊಂಡಿದ್ದಾರೆ.

ಆಗಿದ್ದೇನು?

ಮಾರ್ಚ್ 15 ರಂದು ಮಧ್ಯಾಹ್ನ 3:45 ರ ಸುಮಾರಿಗೆ ದೆಹಲಿಯ ಇಂದ್ರಪ್ರಸ್ಥ ಅಪೊಲೊ ಆಸ್ಪತ್ರೆಯ ಹಿರಿಯ ಸಲಹೆಗಾರ, ನರವಿಜ್ಞಾನಿ ಡಾ.ವಿನೀತ್ ಸೂರಿ ಅವರನ್ನು ಸಂಪರ್ಕಿಸಿದಾಗ ಸದ್ಗುರು ಅವರ ತಲೆನೋವು ತೀವ್ರ ತೀವ್ರವಾಗಿತ್ತು.

ಡಾ.ವಿನೀತ್ ಸೂರಿ ತಕ್ಷಣ ಸಬ್-ಡ್ಯೂರಲ್ ಹೆಮಟೋಮಾವನ್ನು ಶಂಕಿಸಿ ತುರ್ತು ಎಂಆರ್‌ ಐಗೆ ಸಲಹೆ ನೀಡಿದರು. ಅದೇ ದಿನ ಸಂಜೆ 4:30 ಕ್ಕೆ ಇಂದ್ರಪ್ರಸ್ಥ ಅಪೊಲೊ ಆಸ್ಪತ್ರೆಯಲ್ಲಿ ಸದ್ಗುರು ಮೆದುಳಿನ ಎಂಆರ್ಐಗೆ ಒಳಗಾಗಿದ್ದರು ಮತ್ತು ಅದು ಮೆದುಳಿನಲ್ಲಿ ಭಾರಿ ರಕ್ತಸ್ರಾವ ತಿಳಿಯಿತು.

3-4 ವಾರಗಳ ಅವಧಿಯ ದೀರ್ಘಕಾಲದ ರಕ್ತಸ್ರಾವದ ಪುರಾವೆಗಳು ಮತ್ತು 24-48 ಗಂಟೆಗಳ ಅವಧಿಯ ಮತ್ತೊಂದು ಹೊಸ ರಕ್ತಸ್ರಾವದ ಮಾಹಿತಿ ದೊರೆಯಿತು. ಸದ್ಗುರುಗಳಿಗೆ ತಕ್ಷಣ ಆಸ್ಪತ್ರೆಗೆ ದಾಖಲಾಗುವಂತೆ ಸಲಹೆ ನೀಡಲಾಯಿತು, ಆದರೆ ಮಾರ್ಚ್ 15 ರಂದು ಸಂಜೆ 6 ಗಂಟೆಗೆ ಮತ್ತು ಮಾರ್ಚ್ 16 ರಂದು ಇಂಡಿಯಾ ಟುಡೇ ಕಾನ್ಕ್ಲೇವ್ ನಲ್ಲಿ ಪ್ರಮುಖ ಸಭೆಗಳನ್ನು ನಿಗದಿಪಡಿಸಲಾಗಿತ್ತು. ಆ ಸಭೆ ಮುಗಿಸಿಕೊಂಡು ಸದ್ಗುರು ಆಸ್ಪತ್ರೆಗೆ ದಾಖಲಾದರು.

ಶಸ್ತ್ರ ಚಿಕಿತ್ಸೆ

ಮಾರ್ಚ್ 17 ರಂದು ಸದ್ಗುರು ಅವರ ನರವೈಜ್ಞಾನಿಕ ಸ್ಥಿತಿ ಕ್ಷಿಪ್ರವಾಗಿ ಹದಗೆಟ್ಟಿತ್ತು. ಮೆದುಳಿನ ಊತದಲ್ಲಿ ಗಮನಾರ್ಹ ಹೆಚ್ಚಳ ಮತ್ತು ಮೆದುಳಿನ ಒಂದು ಬದಿಗೆ ಮಾರಣಾಂತಿಕ ಸನ್ನಿವೇಶ ಇರುವುದು ಕಂಡು ಬಂದಿತ್ತು.

ಡಾ.ವಿನೀತ್ ಸೂರಿ, ಡಾ.ಪ್ರಣವ್ ಕುಮಾರ್, ಡಾ.ಸುಧೀರ್ ತ್ಯಾಗಿ ಮತ್ತು ಡಾ.ಎಸ್.ಚಟರ್ಜಿ ಅವರನ್ನೊಳಗೊಂಡ ವೈದ್ಯರ ತಂಡವು ಸದ್ಗುರು ಅವರ ತಲೆಬುರುಡೆಯಲ್ಲಿನ ರಕ್ತಸ್ರಾವವನ್ನು ತೆಗೆದುಹಾಕಲು ಆಸ್ಪತ್ರೆಗೆ ದಾಖಲಾದ ಕೆಲವೇ ಗಂಟೆಗಳಲ್ಲಿ ತುರ್ತು ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಪಡಿಸಿತು. ಶಸ್ತ್ರಚಿಕಿತ್ಸೆಯ ನಂತರ ಸದ್ಗುರುಗಳನ್ನು ವೆಂಟಿಲೇಟರ್ ನಿಂದ ಬಿಡುಗಡೆ ಮಾಡಲಾಯಿತು.

ಸದ್ಗುರುಗಳು ಸ್ಥಿರವಾದ ಪ್ರಗತಿಯನ್ನು ತೋರಿಸಿದ್ದಾರೆ. ಅವರ ಮೆದುಳು, ದೇಹದ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ. ಆತಂಕ ಪಡುವ ಅಗತ್ಯವಿಲ್ಲ ಎಂದು ತಜ್ಞ ವೈದ್ಯ ಡಾ. ವಿನೀತ್‌ ಸೂರಿ ಮಾಹಿತಿ ನೀಡಿದ್ದಾರೆ.

ನನ್ನ ಕಳೆದ 40 ವರ್ಷಗಳಲ್ಲಿ ನಾನು ಒಂದೇ ಒಂದು ಸದ್ಗುರು ಅವರ ಸಭೆಯನ್ನು ತಪ್ಪಿಸಿಕೊಳ್ಳಲಿಲ್ಲ. ತೀವ್ರ ಮತ್ತು ಯಾತನಾಮಯ ರೋಗಲಕ್ಷಣಗಳ ಹೊರತಾಗಿಯೂ, ಅವರು ನೋವು ನಿವಾರಕಗಳ ಬೆಂಬಲದೊಂದಿಗೆ ಮೇಲಿನ ಸಭೆಯನ್ನು ಪೂರ್ಣಗೊಳಿಸಿದರು. ಅವರ ಧೀಶಃಕ್ತಿ ಗಟ್ಟಿಯಾಗಿದೆ ಎಂದು ಉಲ್ಲೇಖಿಸಿದ್ದಾರೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.