ಇನ್‌ಸ್ಟಾಗ್ರಾಮ್ ದಿಢೀರ್ ಸ್ಥಗಿತ, ಖಾತೆಗಳು ತನ್ನಷ್ಟಕ್ಕೆ ತಾನೇ ಲಾಗೌಟ್, ಪಾಸ್​ವರ್ಡ್ ಮರೆತವರು ಪರದಾಟ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಇನ್‌ಸ್ಟಾಗ್ರಾಮ್ ದಿಢೀರ್ ಸ್ಥಗಿತ, ಖಾತೆಗಳು ತನ್ನಷ್ಟಕ್ಕೆ ತಾನೇ ಲಾಗೌಟ್, ಪಾಸ್​ವರ್ಡ್ ಮರೆತವರು ಪರದಾಟ

ಇನ್‌ಸ್ಟಾಗ್ರಾಮ್ ದಿಢೀರ್ ಸ್ಥಗಿತ, ಖಾತೆಗಳು ತನ್ನಷ್ಟಕ್ಕೆ ತಾನೇ ಲಾಗೌಟ್, ಪಾಸ್​ವರ್ಡ್ ಮರೆತವರು ಪರದಾಟ

Instagram Down: ವಿಶ್ವದ ಪ್ರಸಿದ್ಧ ಸಾಮಾಜಿಕ ಜಾಲತಾಣಗಳಾದ ಇನ್‌ಸ್ಟಾಗ್ರಾಮ್ ಸರ್ವರ್​ಡೌನ್ ಆಗಿದ್ದು, ಸಾವಿರಾರು ಬಳಕೆದಾರರು ಸಮಸ್ಯೆ ಎದುರಿಸಿದ್ದಾರೆ. ಇಂದು ಸಂಜೆ ಸರ್ವರ್ ಡೌನ್ ಆಗಿದ್ದು, ಇದೀಗ ಸಮಸ್ಯೆ ಬಗೆಹರಿದಿದೆ.

ಇನ್​ಸ್ಟಾಗ್ರಾಂನಲ್ಲಿ ಸರ್ವರ್​ ಡೌನ್
ಇನ್​ಸ್ಟಾಗ್ರಾಂನಲ್ಲಿ ಸರ್ವರ್​ ಡೌನ್

ನವದೆಹಲಿ: ಜನಪ್ರಿಯ ಜಾಲತಾಣಗಳಾದ ಇನ್​ಸ್ಟಾಗ್ರಾಂ (Instagram) ಸರ್ವರ್ ಡೌನ್ ಆಗಿದೆ. ಜಗತ್ತಿನಾದ್ಯಂತ ಖಾತೆಗಳು ಏಕಾಏಕಿ ಲಾಗೌಟ್ ಆಗಿದ್ದು, ಬಳಕೆದಾರರು ಪರದಾಟ ನಡೆಸುವಂತಾಗಿದೆ. ಹೌದು ಇಂದು (ಅಕ್ಟೋಬರ್ 29) ಸಂಜೆ 5ರ ಸುಮಾರಿಗೆ ಇನ್ಸ್ಟಾಗ್ರಾಮ್ ಖಾತೆಗಳು ಏಕಾಏಕಿ ತನ್ನಷ್ಟಕ್ಕೆ ತಾನೇ ಲಾಗೌಟ್ ಆಗಿವೆ. ​ಇದರಿಂದ ಪಾಸ್​ವರ್ಡ್​ ಮರೆತವರು ಪುನಃ ಲಾಗಿನ್ ಆಗಲು ಪರದಾಡಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು, ಬಳಕೆದಾರರು ಸಂದೇಶಗಳನ್ನು ಕಳುಹಿಸಲು ಸಮಸ್ಯೆ ಎದುರಿಸಿದ್ದಾರೆ. ಇದೀಗ ಸಮಸ್ಯೆ ಬಗೆಹರಿದಿದೆ.

ಸರ್ವರ್​ ಡೌನ್ ಆದ ಬೆನ್ನಲ್ಲೇ ಸಾವಿರಾರು ಜನರು ದೂರು ಸಲ್ಲಿಸಿದ್ದಾರೆ. ಕೇವಲ ಮೊಬೈಲ್ ಮಾತ್ರವಲ್ಲ, ಕಂಪ್ಯೂಟರ್​​ನಲ್ಲಿ ನೋಡನೋಡುತ್ತಿದ್ದಂತೆ ಲಾಗೌಟ್ ಆಗಿವೆ. ಇದನ್ನು ಕಂಡ ಬಳಕೆದಾರರು, ಏಕಾಏಕಿ ಖಾತೆಗಳು ಲಾಗೌಟ್ ಆಗಿದ್ದೇಕೆ? ಹ್ಯಾಕ್ ಆಗಿರಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಸಾವಿರಾರು ಮಂದಿ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, ಪಾಸ್​ವರ್ಡ್​ ಮರೆತವರಂತೂ ಕಂಗಾಲಾಗಿದ್ದಾರೆ. ಸಾವಿರಾರು ಜನರು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಬೇಸರ ಹೊರಹಾಕುತ್ತಿದ್ದಾರೆ.

ಹ್ಯಾಕ್ ಆಗಿರಬಹುದು ಎಂಬ ಆತಂಕ

ಇನ್‌ಸ್ಟಾಗ್ರಾಮ್ ಸರ್ವರ್‌ ಡೌನ್‌ ಆದ ಬೆನ್ನಲ್ಲೇ ಬಗೆಬಗೆಯ ಮೀಮ್ಸ್​​ ಮತ್ತು ಫನ್ನಿ ವಿಡಿಯೋಗಳು ವಿಡಿಯೊಗಳು​ ಎಕ್ಸ್‌ನಲ್ಲಿ ವೈರಲ್ ಆಗುತ್ತಿವೆ. ಇನ್ನು ಯಾಕೆ ಈ ಸಮಸ್ಯೆ ಉಂಟಾಗಿದೆ ಎಂಬುದರ ಕುರಿತು ಇನ್‌ಸ್ಟಾಗ್ರಾಂ ಯಾವುದೇ ಸ್ಪಷ್ಟನೆ ನೀಡಿಲ್ಲ. ಎಕ್ಸ್​ನಲ್ಲಿ ಕೆಲವೊಬ್ಬರು ಪೋಸ್ಟ್ ಹಾಕಿದ್ದು, ನನಗೆ ಮಾತ್ರವೇ ಅಥವಾ ಎಲ್ಲರಿಗೂ ಇನ್​ಸ್ಟಾಗ್ರಾಂ ಸಮಸ್ಯೆ ಉಂಟಾಗಿದೆಯೇ ಎಂದು ಪ್ರಶ್ನಿಸಿದ್ದಾರೆ. ಸಂದೇಶಗಳನ್ನು ಕಳುಹಿಸಲು ಸಾಧ್ಯವಾಗುತ್ತಿಲ್ಲ, ನಿಮಗೂ ಇದೇ ಸಮಸ್ಯೆ ಇದೆಯೇ ಎಂದು ಕೇಳಿದ್ದಾರೆ. ತಾಂತ್ರಿಕ ತೊಂದರೆಗಳಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ.

ಅಕ್ಟೋಬರ್ 15 ರಂದು ಫೇಸ್​ಬುಕ್ ಮತ್ತು ಇನ್​ಸ್ಟಾಗ್ರಾಂ ಸರ್ವರ್​ ಡೌನ್ ಆಗಿತ್ತು. ಇದು ಯುಎಸ್​​ನಲ್ಲಿ ಸಾವಿರಾರು ಜನರ ಮೇಲೆ ಪರಿಣಾಮ ಬೀರಿತ್ತು. ಅಂದು ಫೇಸ್​ಬುಕ್​ ಸಮಸ್ಯೆಗೆ ಸಂಬಂಧಿಸಿ 12,000 ಕ್ಕೂ ಹೆಚ್ಚು ದೂರು ಮತ್ತು ಇನ್​ಸ್ಟಾಗ್ರಾಂನಲ್ಲಿ 5,000 ಕ್ಕೂ ಹೆಚ್ಚು ದೂರುಗಳು ಬಂದಿದ್ದವು. ಈ ವರ್ಷದ ಆರಂಭದಲ್ಲಿ ತಾಂತ್ರಿಕ ಸಮಸ್ಯೆಯಿಂದ ಉಂಟಾದ ಸ್ಥಗಿತದಿಂದ ಜಾಗತಿಕವಾಗಿ ಲಕ್ಷಾಂತರ ಫೇಸ್​ಬುಕ್ ಮತ್ತು ಇನ್​ಸ್ಟಾಗ್ರಾಂ ಬಳಕೆದಾರರು 2 ಗಂಟೆಗಳಿಗಿಂತ ಹೆಚ್ಚು ಕಾಲ ಪರಿಣಾಮ ಬೀರಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.