Worlds Fatty Cat: ಬರೋಬ್ಬರಿ 17 ಕೆಜಿ ತೂಕದ ದೈತ್ಯ ಬೆಕ್ಕು; ಮಾಂಸ, ವಿಸ್ಕಿ ಎಂದರೆ ಇದಕ್ಕೆ ಬಹು ಇಷ್ಟ, ಎಲ್ಲಿದೆ ಈ ಫ್ಯಾಟಿ ಕ್ಯಾಟ್‌ !
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Worlds Fatty Cat: ಬರೋಬ್ಬರಿ 17 ಕೆಜಿ ತೂಕದ ದೈತ್ಯ ಬೆಕ್ಕು; ಮಾಂಸ, ವಿಸ್ಕಿ ಎಂದರೆ ಇದಕ್ಕೆ ಬಹು ಇಷ್ಟ, ಎಲ್ಲಿದೆ ಈ ಫ್ಯಾಟಿ ಕ್ಯಾಟ್‌ !

Worlds Fatty Cat: ಬರೋಬ್ಬರಿ 17 ಕೆಜಿ ತೂಕದ ದೈತ್ಯ ಬೆಕ್ಕು; ಮಾಂಸ, ವಿಸ್ಕಿ ಎಂದರೆ ಇದಕ್ಕೆ ಬಹು ಇಷ್ಟ, ಎಲ್ಲಿದೆ ಈ ಫ್ಯಾಟಿ ಕ್ಯಾಟ್‌ !

Viral News ವಿಶ್ವದ ಅತಿ ದಪ್ಪ ಬೆಕ್ಕುಗಳ ಪೈಕಿ ಒಂದು ರಷ್ಯಾದಲ್ಲಿ ಕಂಡು ಬಂದಿದೆ. ರುಚಿಕರ ಆಹಾರ ಪ್ರಿಯ ಬೆಕ್ಕು ಕ್ರೋಶಿಕ್‌ ದೇಹ ಭಾರ ಇಳಿಸಲು ಇನ್ನಿಲ್ಲದ ಕಸರತ್ತು ಕೂಡ ನಡೆದಿದೆ. ಆಸಕ್ತಿದಾಯಕ ಮಾಹಿತಿ ಇಲ್ಲಿದೆ.

ಹೇಗಿದೆ ನೋಡಿ ವಿಶ್ವದ ಅತಿ ದಪ್ಪನೆಯ ಬೆಕ್ಕು.
ಹೇಗಿದೆ ನೋಡಿ ವಿಶ್ವದ ಅತಿ ದಪ್ಪನೆಯ ಬೆಕ್ಕು.

ಮಾಸ್ಕೋ: ಇದರ ಹೆಸರು ಕ್ರೋಶಿಕ್‌. ಇದು ಮನೆಯೊಂದರ ಪ್ರೀತಿಯ ಬೆಕ್ಕು. ಅದಕ್ಕೆ ಮಾಂಸ ಎಂದರೆ ಇಷ್ಟ. ಬಗೆಬಗೆಯ ಬಿಸ್ಕೆಟ್‌ಗಳು ಎಂದರೆ ಪಂಚಪ್ರಾಣ. ವಿಸ್ಕಿ ಎಂದರೆ ಬಲುವೇ ಇಷ್ಟ. ಇನ್ನೂ ಕೆಲವು ರುಚಿಕರ ಆಹಾರ ಹಾಕಿಕೊಟ್ಟರೆ ಮರು ಮಾತನಾಡದೇ ತಿಂದು ಕುಳಿತುಕೊಳ್ಳುತ್ತದೆ ಈ ಬೆಕ್ಕು. ಇದು ಮನೆಯವರಿಗೆ ಮಾತ್ರವಲ್ಲದೇ ಅಕ್ಕಪಕ್ಕದವರು, ಕುಟುಂದವರ ಮುದ್ದು. ಆದರೆ ಈ ಬೆಕ್ಕು ಸಾಮಾನ್ಯವಾಗಿಲ್ಲ. ಇದರ ತೂಕವೇ ಬರೋಬ್ಬರಿ 17 ಕೆಜಿ. ವಿಶ್ವದ ಅತಿ ಹೆಚ್ಚು ತೂಗುವ ಬೆಕ್ಕುಗಳ ಪಟ್ಟಿಯಲ್ಲಿ ಇದಕ್ಕೂ ಸ್ಥಾನ ಸಿಕ್ಕಿದೆ. ಅಷ್ಟರ ಮಟ್ಟಿಗೆ ಈ ಡುಮ್ಮ ಬೆಕ್ಕು ಖ್ಯಾತಿ ಪಡೆದಿದೆ. ಹುಟ್ಟಿದಾಗ ಸಾಮಾನ್ಯವಾಗಿಯೇ ಇದ್ದ, ಆನಂತರದಲ್ಲಿ ತೂಕ ಹೆಚ್ಚಿಸಿಕೊಂಡು ಫ್ಯಾಟಿ ಕ್ಯಾಟ್‌ ಆದ ಕಥಾನಕವೂ ವಿಶೇಷವಾಗಿಯೇ ಇದೆ.

ಈ ಬೆಕ್ಕು ಇರುವುದು ರಷ್ಯಾದಲ್ಲಿ. ಕಳೆದ ವಾರ ರಷ್ಯಾದ ಆಸ್ಪತ್ರೆಯೊಂದರ ನೆಲಮಾಳಿಗೆಯಲ್ಲಿ ಮಾನವ ಮಗುವಿನಷ್ಟು ತೂಕದ ಬೃಹತ್ ಬೆಕ್ಕು ವಾಸಿಸುತ್ತಿರುವುದು ಕಂಡುಬಂದಿತು. ಇದನ್ನು ಗಮನಿಸಿದ ಸಿಬ್ಬಂದಿ ಬೆಕ್ಕಿನ ದೈತ್ಯಾಕಾರವನ್ನು ಕಂಡು ಹೌಹಾರಿದರು. 

ಇದು ಎಲ್ಲಿಂದ ತಪ್ಪಿಸಿಕೊಂಡು ಬಂದಿದೆ ಎನ್ನುವ ಮಾಹಿತಿ ಪಡೆದಾಗ ಸಮೀಪದಲ್ಲೇ ಇರುವ ಮನೆಯೊಂದರದ್ದು ಎನ್ನುವುದು ತಿಳಿಯಿತು. ಅದಕ್ಕೆ ಚಿಕಿತ್ಸೆ ಕೊಡಿಸಲು ಶುರು ಮಾಡಿದಾಗ ಮನೆಯಿಂದ ಬಂದು ಸೇರಿಕೊಂಡಿತ್ತು. ಸಮೀಪದ ಬೆಕ್ಕುಗಳ ಆಸ್ಪತ್ರೆಯಲ್ಲಿ ಇದಕ್ಕೆ ಚಿಕಿತ್ಸೆ ನಡೆದಿದೆ.

ರಷ್ಯಾದ ಪೆರ್ಮಾನ್‌ ನಗರದ ಈ ಬೆಕ್ಕಿನ ಮಾಲೀಕರು ಸಾಹಿತ್ಯ ಪ್ರಿಯರು. ಸಾಹಿತ್ಯ ಓದುತ್ತಲೇ ಅದಕ್ಕೆ ಕ್ರೋಶಿಕ್‌ ಎಂದು ನಾಮಕರಣ ಮಾಡಿದ್ದರು. ರಷ್ಯನ್ ಭಾಷೆಯಲ್ಲಿ "ಕ್ರೋಶಿಕ್" ಎಂಬ ಪದವು ತುಣುಕುಗಳು ಎನ್ನುವ ಅರ್ಥ ನೀಡುತ್ತದೆ. ಮನೆಯಲ್ಲಿ ಇದ್ದುಕೊಂಡೇ ಮನೆಯವರಂತೆಯೇ ಭರ್ಜರಿ ಊಟ ಮಾಡಲು ಕಲಿಯಿತು ಕ್ರೋಶಿಕ್‌.
 

ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಕ್ರೋಶಿಕ್‌ ಸೂಪ್, ವಿಸ್ಕಿ ಮತ್ತು ಮಾಂಸವನ್ನು ನಿಯಮಿತವಾಗಿ ಸೇವಿಸಿತು. ಇದರಿಂದ ಸ್ಥಿರ ಆಹಾರ ತೂಕವನ್ನು ಹೆಚ್ಚಿಸಿತು. ಅಂತಿಮವಾಗಿ ಅದು ನಡೆಯಲು ತುಂಬಾ ಭಾರವಾಗುವ ಸನ್ನಿವೇಶ ಎದುರಾಯಿತು. ಕೊನೆಗೆ ಮನೆಯವರು ಅದಕ್ಕೆ ಚಿಕಿತ್ಸೆ ಕೊಡಿಸಲು ಕರೆತಂದರು. ಮ್ಯಾಟ್ರೊಸ್ಕಿನ್ ಶೆಲ್ಟರ್ನ ಪಶುವೈದ್ಯರು ಕ್ರೋಶಿಕ್ ಗೆ ಅಲ್ಟ್ರಾಸೌಂಡ್ ಚಿಕಿತ್ಸೆಗೆ ಮುಂದಾದರೂ ಅದು ಸಾಧ್ಯವಾಗಲಿಲ್ಲ.

ಏಕೆಂದರೆ ಸಂವೇದಕವು ಬೆಕ್ಕಿನ ಕೊಬ್ಬಿನ ಪದರಗಳನ್ನು ಭೇದಿಸಲು ಸಾಧ್ಯವಾಗಲಿಲ್ಲ. ಕೊನೆಗೆ ತೂಕ ಇಳಿಸಲು ಅನಿವಾರ್ಯವಾಗಿ ಕ್ರೌಶಿಕ್‌ ನನನ್ನು ಸಮೀಪದ ಪುನರ್‌ ವಸತಿ ಕೇಂದ್ರಕ್ಕೆ ಹಾಕಿದರು.

ಈಗ ನಿಧಾನವಾಗಿ ಬೆಕ್ಕು ತೂಕ ಇಳಿಸಿಕೊಳ್ಳುತ್ತಿದೆ ಒಂದೊಂದೆ ಹೆಜ್ಜೆ ಹಾಕುತ್ತಿದೆ. ಚಿಕಿತ್ಸೆ ಮೂಲಕವೂ ಕೊಬ್ಬನ್ನು ಕರಗಿಸಿ ಬೆಕ್ಕಿನ ತೂಕವನ್ನು ಸಾಮಾನ್ಯ ಸ್ಥಿತಿಗೆ ಇಳಿಸಲು ತಯಾರಿಗಳು ನಡೆದಿವೆ.

ಇದಕ್ಕೆ ಕೆಲ ಸಮಯ ಬೇಕಾಗುತ್ತದೆ ಎಂದು ಬೆಕ್ಕಿನ ಪುನರ್‌ ವಸತಿ ಕೇಂದ್ರದ ಪಶು ವೈದ್ಯಾಧಿಕಾರಿಗಳು ಹೇಳಿದ್ದಾರೆ.

ಕ್ರೋಶಿಕ್‌ಗೆ ಚಿಕಿತ್ಸೆ ನೀಡುತ್ತಿರುವ ಹಾಗೂ ಈಗ ನಡೆಯುತ್ತಿರುವ ವಿಡಿಯೋವನ್ನು ಇನ್‌ಸ್ಟಾದಲ್ಲಿ ಹಂಚಿಕೊಳ್ಳಲಾಗಿದ್ದು ಭಾರೀ ವೈರಲ್‌ ಆಗಿದೆ.

 

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.