ಪ್ರತಿದಿನ ಈ ಐದು ಕೆಲಸ ಮಾಡಿ ದೇಹದಲ್ಲಿರುವ ಕೆಟ್ಟ ಕೊಬ್ಬಿನಾಂಶ ಬೆಣ್ಣೆಯಂತೆ ಕರಗದಿದ್ದರೆ ಕೇಳಿ!-how to reduce bad cholesterol to dissolve bad cholesterol in body just do these five things every day prs ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಪ್ರತಿದಿನ ಈ ಐದು ಕೆಲಸ ಮಾಡಿ ದೇಹದಲ್ಲಿರುವ ಕೆಟ್ಟ ಕೊಬ್ಬಿನಾಂಶ ಬೆಣ್ಣೆಯಂತೆ ಕರಗದಿದ್ದರೆ ಕೇಳಿ!

ಪ್ರತಿದಿನ ಈ ಐದು ಕೆಲಸ ಮಾಡಿ ದೇಹದಲ್ಲಿರುವ ಕೆಟ್ಟ ಕೊಬ್ಬಿನಾಂಶ ಬೆಣ್ಣೆಯಂತೆ ಕರಗದಿದ್ದರೆ ಕೇಳಿ!

Bad Cholesterol: ದೇಹದಲ್ಲಿ ಹೆಚ್ಚಿದ ಕೆಟ್ಟ ಕೊಬ್ಬಿನಾಂಶದ ಮಟ್ಟ ಕಡಿಮೆ ಮಾಡಲು ತುಂಬಾ ಔಷಧಿಗಳಿವೆ. ಆದರೆ ಯಾವುದೇ ಔಷಧಿಗಳನ್ನು ಬಳಸದೆಯೇ ನಿಮ್ಮ ಜೀವನಶೈಲಿ ಹಾಗೂ ಆಹಾರ ಪದ್ದತಿ ಮೂಲಕವೇ ಕೆಟ್ಟ ಕೊಬ್ಬಿನಾಂಶವನ್ನು ದೇಹದಿಂದ ಹೊರದಬ್ಬಬಹುದು.

ಕೆಟ್ಟ ಕೊಬ್ಬಿನಾಂಶ
ಕೆಟ್ಟ ಕೊಬ್ಬಿನಾಂಶ

ದೇಹದೊಳಗಿನ ಕೆಟ್ಟ ಕೊಲೆಸ್ಟ್ರಾಲ್ ಕಾಣದೆ ಹೊರನೋಟಕ್ಕೆ ನಾವು ಆರೋಗ್ಯವಾಗಿಯೇ ಕಂಡರೂ ಒಳಭಾಗದಲ್ಲಿ ಕೆಲವು ಮಾರಣಾಂತಿಕ ಪರಿಸ್ಥಿತಿ ಉಂಟಾಗುವ ಅವಕಾಶ ಹೆಚ್ಚಿದೆ. ಕೆಟ್ಟ ಚಟಗಳಿಂದ ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ದುಪ್ಪಟ್ಟಾಗುತ್ತಿದೆ. ಕೊಬ್ಬಿನಾಂಶದಲ್ಲಿ 2 ವಿಧಗಳಿವೆ. ಒಂದು ಒಳ್ಳೆಯ ಕೊಬ್ಬಿನಾಂಶ, ಇನ್ನೊಂದು ಕೆಟ್ಟ ಕೊಬ್ಬಿನಾಂಶ. ಆದರೆ, ಕೆಟ್ಟ ಕೊಬ್ಬಿನಾಂಶ ಹೃದಯದ ಸಮಸ್ಯೆಗಳಿಗೆ ಕಾರಣವಾಗಲಿದೆ.

ವಾಸ್ತವ ಏನೆಂದರೆ ದೇಹದಲ್ಲಿ ಕೆಟ್ಟ ಕೊಬ್ಬಿನಾಂಶದ ಮಟ್ಟ ಅಧಿಕ ಪ್ರಮಾಣವಾದಾಗ, ಅದು ರಕ್ತನಾಳಗಳಲ್ಲಿ ಸಂಗ್ರಹವಾಗುತ್ತದೆ. ಇದು ಅಪಧಮನಿಗಳಲ್ಲಿಯೂ ಅಡೆತಡೆಗಳನ್ನು ಉಂಟುಮಾಡುತ್ತದೆ. ಜತೆಗೆ ಪಾರ್ಶ್ವವಾಯು ಮತ್ತು ಹೃದಯಾಘಾತದಂತಹ ಗಂಭೀರ ಕಾಯಿಲೆಗಳ ಸಮಸ್ಯೆಗಳನ್ನೂ ತಂದೊಡ್ಡುತ್ತದೆ. ಹೀಗಿದ್ದಾಗ ಕೆಟ್ಟ ಕೊಬ್ಬಿನಾಂಶ ಮಟ್ಟ ನಿಯಂತ್ರಿಸುವುದು ಬಹಳ, ಬಹಳ ಮುಖ್ಯ. ಇದನ್ನು ಕಡಿಮೆ ಮಾಡಲು ಕೆಲವು ಸರಳ ಹಂತಗಳನ್ನು ಅನುಸರಿಸಬಹುದು.

1. ಆಹಾರದಲ್ಲಿ ಫೈಬರ್

ನಾರಿನಂಶ ಹೆಚ್ಚಿರುವ ಆಹಾರಗಳನ್ನು ಸೇವಿಸಬೇಕು. ಫೈಬರ್‌ಗಾಗಿ ಬಾರ್ಲಿ, ಗೋಧಿ ಹಿಟ್ಟು, ಅಗಸೆ ಬೀಜಗಳು, ಬಾದಾಮಿ, ಸೂರ್ಯಕಾಂತಿ, ಪಿಸ್ತಾದಂತಹ ಬೀಜಗಳನ್ನು ಸೇವಿಸುವ ಮೂಲಕ ದೇಹದ ಕೊಬ್ಬನ್ನು ದೂರ ಮಾಡಬಹುದು. ಬೀನ್ಸ್, ಬ್ರಸೆಲ್ಸ್ ಮೊಗ್ಗುಗಳು, ಓಟ್ಮೀಲ್, ಸೇಬು ಮತ್ತು ಪೇರಳೆಗಳಂತಹ ಹೆಚ್ಚಿನ ಆಹಾರಗಳನ್ನು ಸೇವಿಸಬೇಕು. ಇದು ರಕ್ತ ನಾಳಗಳಲ್ಲಿ ಕೊಲೆಸ್ಟ್ರಾಲ್ ಹೀರಿಕೊಳ್ಳುವಿಕೆ ಕಡಿಮೆ ಮಾಡಲು ನೆರವಾಗುತ್ತದೆ.

2. ಧೂಮಪಾನ ಮಾಡಬೇಡಿ

ಅತಿ ಮುಖ್ಯವಾಗಿ ಧೂಮಪಾನ ತ್ಯಜಿಸುವುದರಿಂದ ನಿಮ್ಮ ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸಬಹುದು. ಧೂಮಪಾನಿಗಳು ಹೃದಯಾಘಾತ, ಶ್ವಾಸಕೋಶದ ಕ್ಯಾನ್ಸರ್ ಮತ್ತು ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆಯ ಅಪಾಯ ಹೊಂದುತ್ತಾರೆ. ಹಾಗಾಗಿ ಧೂಮಪಾನ ಸಂಪೂರ್ಣವಾಗಿ ನಿಲ್ಲಿಸಬೇಕು. ಜೊತೆಗೆ ಧೂಮಪಾನ ಮಾಡುವವರ ಹತ್ತಿರವೂ ಸುಳಿಯಬೇಡಿ.

3. ತೂಕವನ್ನು ಕಳೆದುಕೊಳ್ಳಿ

ನೀವು ಅಧಿಕ ತೂಕ ಹೊಂದಿದ್ದರೆ ತಕ್ಷಣವೇ ತೂಕವನ್ನು ಇಳಿಸಿಬಿಡಿ. ಏಕೆಂದರೆ ಬೊಜ್ಜು ಇರುವವರಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚುತ್ತದೆ. ಅಧಿಕ ತೂಕವು ಮೆಟಬಾಲಿಕ್ ಸಿಂಡ್ರೋಮ್ ಅಪಾಯ ಹೆಚ್ಚಿಸುತ್ತದೆ. ಆದ್ದರಿಂದ ತಕ್ಷಣವೇ ನಿಮ್ಮ ತೂಕವನ್ನು ನಿಮ್ಮ ಎತ್ತರಕ್ಕಿಂತ ಕಡಿಮೆ ಇರಿಸುವುದು ಉತ್ತಮ. ಪ್ರತಿದಿನ ನಡೆದಾಡುವುದನ್ನು ರೂಢಿಸಿಕೊಳ್ಳಿ.

4. ಪ್ರೋಟೀನ್ ಬೀಜಗಳನ್ನು ಸೇವಿಸಿ

ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಲು ನೇರ ಪ್ರೋಟೀನ್, ಒಮೆಗಾ3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿರುವ ಆಹಾರ ಸೇವಿಸಬೇಕು. ಒಮೆಗಾ-3 ಕೊಬ್ಬಿನಾಮ್ಲಗಳು, ವಾಲ್ನಟ್ಸ್, ಬಾದಾಮಿಗಳಂತಹ ಬೀಜಗಳನ್ನು ಹೊಂದಿರುವ ಪ್ರೋಟೀನ್​​ಗಳನ್ನು ಆರಿಸುವುದು ಉತ್ತಮ.

5. ಆರೋಗ್ಯಕರ ಕೊಬ್ಬುಗಳು

ಡೈರಿ ಉತ್ಪನ್ನಗಳು, ಬೆಣ್ಣೆ, ತೆಂಗಿನ ಎಣ್ಣೆ, ಪೂರ್ವ-ಪ್ಯಾಕ್ ಮಾಡಿದ ಕುಕೀಸ್, ಕ್ರ್ಯಾಕರ್ಸ್ ಮತ್ತು ಕೇಕ್​​ಗಳಲ್ಲಿ ಕೊಬ್ಬಿನಾಂಶ ಕಡಿಮೆ ಇರುವ ಪದಾರ್ಥಗಳನ್ನು ಸೇವಿಸುವುದು ಉತ್ತಮ. ಕ್ಯಾನೋಲಾ, ಕಾರ್ನ್ ಮತ್ತು ಆಲಿವ್ ಎಣ್ಣೆಯನ್ನು ಸೇವಿಸುವುದರಿಂದ ಉತ್ತಮ ಕೊಬ್ಬಿನಾಂಶ ದೇಹ ಸೇರಲಿದೆ ಎಂದು ವರದಿಯಾಗಿದೆ.

ನೀವು ಹಣ್ಣುಗಳನ್ನು ಹೆಚ್ಚಿನ ಮಟ್ಟದಲ್ಲಿ ಸೇವಿಸಿದರೆ ದೇಹದಲ್ಲಿ ಕೊಬ್ಬಿನಾಂಶ ಬಹುತೇಕ ಕಡಿಮೆಯಾಗುತ್ತದೆ. ನಿಯಮಿತವಾಗಿ ವಾಕಿಂಗ್ ಮತ್ತು ಈಜುವುದರಿಂದ ರಕ್ತನಾಳಗಳಲ್ಲಿ ಕೆಟ್ಟ ಕೊಬ್ಬಿನಾಂಶ ತಡೆಯಬಹುದು. ಯಾವುದೇ ಔಷಧಿಗಳನ್ನು ಬಳಸದೆಯೇ ನಿಮ್ಮ ಜೀವನಶೈಲಿ ಹಾಗೂ ಆಹಾರ ಪದ್ದತಿ ಮೂಲಕವೇ ಕೆಟ್ಟ ಕೊಬ್ಬಿನಾಂಶವನ್ನು ದೇಹದಿಂದ ಹೊರದಬ್ಬಬಹುದು.