Karnataka Bank: ಕರ್ನಾಟಕ ಬ್ಯಾಂಕ್‌ನ ಹಂಗಾಮಿ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಶೇಖರ್‌ ರಾವ್‌ ನೇಮಕ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Karnataka Bank: ಕರ್ನಾಟಕ ಬ್ಯಾಂಕ್‌ನ ಹಂಗಾಮಿ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಶೇಖರ್‌ ರಾವ್‌ ನೇಮಕ

Karnataka Bank: ಕರ್ನಾಟಕ ಬ್ಯಾಂಕ್‌ನ ಹಂಗಾಮಿ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಶೇಖರ್‌ ರಾವ್‌ ನೇಮಕ

ಶೇಖರ್ ರಾವ್ ಅವರನ್ನು ಹಂಗಾಮಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ನೇಮಿಸಲಾಗಿದೆ ಎಂದು ಕರ್ಣಾಟಕ ಬ್ಯಾಂಕ್ ಶನಿವಾರ ತಿಳಿಸಿದೆ.

ಕರ್ನಾಟಕ ಬ್ಯಾಂಕ್‌ನ ಹಂಗಾಮಿ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಶೇಖರ್‌ ರಾವ್‌  ನೇಮಕ
ಕರ್ನಾಟಕ ಬ್ಯಾಂಕ್‌ನ ಹಂಗಾಮಿ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಶೇಖರ್‌ ರಾವ್‌ ನೇಮಕ

ನವದೆಹಲಿ: ಶೇಖರ್ ರಾವ್ ಅವರನ್ನು ಹಂಗಾಮಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ನೇಮಿಸಲಾಗಿದೆ ಎಂದು ಕರ್ಣಾಟಕ ಬ್ಯಾಂಕ್ ಶನಿವಾರ ತಿಳಿಸಿದೆ. ಹಾಲಿ ಸಿಇಒ ಅವರ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಶೇಖರ್‌ ರಾವ್‌ ಅವರನ್ನು ನೇಮಕ ಮಾಡಲಾಗಿದೆ.

ಕರ್ಣಾಟಕ ಬ್ಯಾಂಕ್‌ನ ಪ್ರಸ್ತುತ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (MD & CEO) ಮಹಾಬಲೇಶ್ವರ ಎಂಎಸ್‌ ಅವರು ತಮ್ಮ ಮೂರು ವರ್ಷಗಳ ಎರಡನೇ ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಅವರು ಏಪ್ರಿಲ್ 14 ರಂದು ಕಚೇರಿಯನ್ನು ತೊರೆದರು ಎಂದು ಕರ್ನಾಟಕ ಬ್ಯಾಂಕ್‌ ತನ್ನ ರೆಗ್ಯುಲೇಟರಿ ಫೈಲಿಂಗ್‌ ಸಮಯದಲ್ಲಿ ಮಾಹಿತಿ ನೀಡಿದೆ.

ಎಕ್ಸಿಕ್ಯುಟಿವ್‌ ನಿರ್ದೇಶಕರಾಗಿದ್ದ ಶೇಖರ್ ರಾವ್ ಅವರು ಏಪ್ರಿಲ್ 12, 2023 ರ ಆರ್‌ಬಿಐ ಅನುಮೋದನೆಯ ಪ್ರಕಾರ ಏಪ್ರಿಲ್ 15, 2023 ರಿಂದ ಜಾರಿಗೆ ಬರುವಂತೆ ಮಧ್ಯಂತರ ಎಂಡಿ ಮತ್ತು ಸಿಇಒ ಆಗಿ ಅಧಿಕಾರ ವಹಿಸಿಕೊಂಡರು ಎಂದು ಕರ್ನಾಟಕ ಬ್ಯಾಂಕ್‌ ತಿಳಿಸಿದೆ

ರಾವ್‌ ಅವರನ್ನು ಮೂರು ತಿಂಗಳ ಅವಧಿಗೆ ಅಥವಾ ನಿಯಮಿತ ಎಂಡಿ ಮತ್ತು ಸಿಇಒ ನೇಮಕದವರೆಗೆ ಯಾವುದು ಮೊದಲೋ ಅಲ್ಲಿಯವರೆಗೆ ನೇಮಕ ಮಾಡಲಾಗಿದೆ ಎಂದು ಕರ್ನಾಟಕ ಬ್ಯಾಂಕ್‌ ತಿಳಿಸಿದೆ.

ಕರ್ಣಾಟಕ ಬ್ಯಾಂಕ್ ಲಿಮಿಟೆಡ್ ಭಾರತದ ಖಾಸಗಿ ಬ್ಯಾಂಕ್‌ಗಳಲ್ಲಿ ಒಂದಾಗಿದೆ. ಬಿ.ಆರ್. ವ್ಯಾಸರಾಯಾಚಾರ್ ಅವರ ಅಧ್ಯಕ್ಷತೆಯಲ್ಲಿ 18 ಫೆಬ್ರವರಿ 1924ರಂದು ಮಂಗಳೂರಿನಲ್ಲಿ ತನ್ನ ನೋಂದಾಯಿತ ಕಚೇರಿ ತೆರೆದ ಬ್ಯಾಂಕಿನ ಬಂಡವಾಳ ಕೇವಲ ರೂ. 11,580/-. ಒಂದು ರೀತಿಯಲ್ಲಿ ಕಾಲದೊಂದಿಗೆ ಬೆಳೆದು ಬಂದ ಕರ್ನಾಟಕ ಬ್ಯಾಂಕು, ಇಂದು ಅಗಾಧ ವಿಸ್ತಾರಕ್ಕೆ ಬೆಳೆದಿದೆ ಎಂದು ವಿಕಿಪೀಡಿಯಾದಲ್ಲಿ ತಿಳಿಸಲಾಗಿದೆ.

ಕರ್ಣಾಟಕ ಬ್ಯಾಂಕ್ ಲಿಮಿಟೆಡ್, ಭಾರತದಲ್ಲಿ ಪ್ರಮುಖ 'ಎ' ವರ್ಗದ ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕ್. 20 ನೇ ಶತಮಾನದ ಭಾರತದ ಸ್ವಾತಂತ್ರ್ಯ ಚಳುವಳಿಯ ಸಮಯದಲ್ಲಿ ರಾಷ್ಟ್ರವನ್ನು ಆವರಿಸಿದ ದೇಶಭಕ್ತಿಯ ಉತ್ಸಾಹದ ನಂತರ ಬ್ಯಾಂಕ್ ರೂಪುಗೊಂಡಿತು. ವರ್ಷಗಳಲ್ಲಿ ಬ್ಯಾಂಕ್ ಶೃಂಗೇರಿ ಶಾರದಾ ಬ್ಯಾಂಕ್ ಲಿಮಿಟೆಡ್, ಚಿತ್ರದುರ್ಗ ಬ್ಯಾಂಕ್ ಲಿಮಿಟೆಡ್ ಮತ್ತು ಬ್ಯಾಂಕ್ ಆಫ್ ಕರ್ನಾಟಕ ವಿಲೀನದೊಂದಿಗೆ ಬೆಳೆಯಿತು. 9 ದಶಕಗಳ ಅನುಭವದೊಂದಿಗೆ, ಈಗ 22 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಹರಡಿರುವ 901 ಶಾಖೆಗಳ ನೆಟ್‌ವರ್ಕ್‌ನೊಂದಿಗೆ ರಾಷ್ಟ್ರೀಯ ಉಪಸ್ಥಿತಿಯನ್ನು ಕರ್ನಾಟಕ ಬ್ಯಾಂಕ್‌ ಹೊಂದಿದೆ. 8,220 ಉದ್ಯೋಗಿಗಳು, 1,46,000 ಷೇರುದಾರರು ಮತ್ತು 10.21 ಮಿಲಿಯನ್ ಗ್ರಾಹಕರನ್ನು ಹೊಂದಿದೆ ಎಂಬ ಮಾಹಿತಿಯು ಕರ್ನಾಟಕ ಬ್ಯಾಂಕ್‌ನ ವೆಬ್‌ಸೈಟ್‌ನಲ್ಲಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.