shiva statue rajasthan: ರಾಜಸ್ಥಾನದಲ್ಲಿ ಶಿವನ ಬೃಹತ್ ಪ್ರತಿಮೆ ಇಂದು ಉದ್ಘಾಟನೆ, ಇದನ್ನು ನೋಡಲು 4 ಗಂಟೆ ಸಾಲದು, ಅಚ್ಚರಿಯ 10 ಸಂಗತಿಗಳು
ರಾಜಸ್ಥಾನದ ರಾಜ್ ಸಮಂದ್ ಜಿಲ್ಲೆಯ ನಾಥದ್ವಾರ ಪಟ್ಟಣದಲ್ಲಿ "ವಿಶ್ವಾಸ್ ಸ್ವರೂಪಂ" ಎಂಬ 369 ಅಡಿ ಎತ್ತರದ ಭವ್ಯ ಶಿವನ ಪ್ರತಿಮೆಯು ಇಂದು ಉದ್ಘಾಟನೆಗೊಳ್ಳಲಿದೆ. ಒಂದು ಸಣ್ಣ ಊರಿನ ಜನರೆಲ್ಲರು ವಾಸಿಸಬಹುದಾದ ಸ್ಥಳವನ್ನು ತನ್ನೊಳಗೆ ಇಟ್ಟುಕೊಂಡಿರುವ ಈ ಪ್ರತಿಮೆಯ ಕುರಿತು ಸೋಜಿಗದ ಸಂಗತಿಗಳು ಸಾಕಷ್ಟು ಇವೆ. "ಜಗತ್ತಿನಲ್ಲೇ ಅತ್ಯಧಿಕ ಎತ್ತರದ ಪ್ರತಿಮೆʼʼ ಎನ್ನಲಾದ ಈ ಪ್ರತಿಮೆಯ ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ.
ರಾಜಸ್ಥಾನದ ರಾಜ್ ಸಮಂದ್ ಜಿಲ್ಲೆಯ ನಾಥದ್ವಾರ ಪಟ್ಟಣದಲ್ಲಿ "ವಿಶ್ವಾಸ್ ಸ್ವರೂಪಂ" ಎಂಬ 369 ಅಡಿ ಎತ್ತರದ ಭವ್ಯ ಶಿವನ ಪ್ರತಿಮೆಯು ಇಂದು ಉದ್ಘಾಟನೆಗೊಳ್ಳಲಿದೆ. ಒಂದು ಸಣ್ಣ ಊರಿನ ಜನರೆಲ್ಲರು ವಾಸಿಸಬಹುದಾದ ಸ್ಥಳವನ್ನು ತನ್ನೊಳಗೆ ಇಟ್ಟುಕೊಂಡಿರುವ ಈ ಪ್ರತಿಮೆಯ ಕುರಿತು ಸೋಜಿಗದ ಸಂಗತಿಗಳು ಸಾಕಷ್ಟು ಇವೆ.
- ಈ ಬೃಹತ್ ಶಿವನ ಪ್ರತಿಮೆಯೊಳಗೆ ಸಾಕಷ್ಟು ಸ್ಥಳಾವಕಾಶವಿದೆ. ಅದರ ಒಳಗೆ ಸಭಾಂಗಣವನ್ನು ನಿರ್ಮಿಸಲಾಗಿದೆ. ಈ ಸಭಾಂಗಣದಲ್ಲಿ ಹತ್ತು ಸಾವಿರ ಜನರು ಸೇರಬಹುದು!
- 369 ಅಡಿ ಎತ್ತರ ಹೊಂದಿರುವ ಈ ಪ್ರತಿಮೆಯನ್ನು ಸಂಪೂರ್ಣವಾಗಿ ವೀಕ್ಷಿಸಲು ಬರೋಬ್ಬರಿ ನಾಲ್ಕು ಗಂಟೆಗಳು ಬೇಕು. ಈ ಪ್ರತಿಮೆಯೊಳಗೆ ವಿವಿಧ ಎತ್ತರಗಳನ್ನು ತಲುಪಲು 4 ಲಿಫ್ಟ್‌ಗಳಿವೆ. ಇಲ್ಲಿಗೆ ಭೇಟಿ ನೀಡಲು ಬರುವ ಜನರಿಗೆ 20 ಅಡಿ ಎತ್ತರದಿಂದ 351 ಅಡಿವರೆಗೆ ಪ್ರಯಾಣಿಸಲು ಅವಕಾಶ ದೊರಕಲಿದೆ. ಹೀಗಾಗಿ, ಇಲ್ಲಿಗೆ ಭೇಟಿ ನೀಡಿದವರಿಗೆ ಅನನ್ಯ ಅನುಭೂತಿ ದೊರಕಲಿದೆ.
- ಶಿವನ ಪ್ರತಿಮೆಯಲ್ಲಿ ಲಿಫ್ಟ್ ಮೂಲಕ 270 ಅಡಿ ಎತ್ತರಕ್ಕೆ ಹೋದರೆ ಶಿವನ ಎಡ ಭುಜದ ಮೇಲಿರುವ ತ್ರಿಶೂಲವನ್ನು ಕಾಣಬಹುದು. ಇಲ್ಲಿಂದ ಪದಮ್ ಉಪ್ವಾನ್ ಅನ್ನು ನೋಡಬಹುದು. ಇಲ್ಲಿಂದ ಸುತ್ತಲಿನ ಪ್ರದೇಶಗಳು ಸುಂದರವಾಗಿ ಕಾಣಿಸುತ್ತದೆ.
- ಈ ಶಿವನ ಪ್ರತಿಮೆಯು ವಿಶ್ವದ ಅತಿ ಎತ್ತರದ ಶಿವನ ವಿಗ್ರಹವಾಗಿದ್ದು, ಇದರಲ್ಲಿ ಲಿಫ್ಟ್‌ಗಳು, ಮೆಟ್ಟಿಲುಗಳು ಇವೆ. ಭಕ್ತರಿಗಾಗಿ ಸಭಾಂಗಣವನ್ನು ನಿರ್ಮಿಸಲಾಗಿದೆ. ಒಳಗೆ ಹೋಗಲು 4 ಲಿಫ್ಟ್‌ಗಳು ಮತ್ತು 3 ಕಡೆಯಿಂದ ಮೆಟ್ಟಿಲುಗಳಿವೆ.
- ಈ ಶಿವನ ಪ್ರತಿಮೆ ನಿರ್ಮಾಣಕ್ಕೆ ಹತ್ತು ವರ್ಷ ತೆಗೆದುಕೊಳ್ಳಲಾಗಿದೆ. ನಿರ್ಮಾಣಕ್ಕೆ 3 ಸಾವಿರ ಟನ್ ಉಕ್ಕು ಮತ್ತು ಕಬ್ಬಿಣ, 2.5 ಲಕ್ಷ ಕ್ಯೂಬಿಕ್ ಟನ್ ಕಾಂಕ್ರೀಟ್ ಮತ್ತು ಮರಗಳನ್ನು ಬಳಸಲಾಗಿದೆ.
- 2012ರ ಆಗಸ್ಟ್‌ನಲ್ಲಿ ಆಗ ಸಿಎಂ ಆಗಿದ್ದ ಅಶೋಕ್ ಗೆಹ್ಲೋಟ್ ಮತ್ತು ಮೊರಾರಿ ಬಾಪು ಅವರ ಸಮ್ಮುಖದಲ್ಲಿ ಈ ಯೋಜನೆಗೆ ಅಡಿಪಾಯ ಹಾಕಲಾಗಿತ್ತು. ಇದೀಗ ವಿಶ್ವದ ಅತಿಎತ್ತರದ ಶಿವನ ಪ್ರತಿಮೆ ಎಂದು ಹೇಳಲಾದ ಈ ಪ್ರತಿಮೆಯನ್ನು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ವಿಧಾನ ಸಭಾ ಸ್ಪೀಕರ್ ಸಿ.ಪಿ. ಜೋಷಿ ಮತ್ತು ಇತರರ ಸಮ್ಮುಖದಲ್ಲಿ ಧರ್ಮ ಗ್ರಂಥ ಬೋಧಕ ಮೊರಾರಿ ಬಾಪು ಉದ್ಘಾಟಿಸಲಿದ್ದಾರೆ.
- ಈ ಶಿವನ ಪ್ರತಿಮೆಯ ಸುತ್ತಮುತ್ತಲಿನ ಸ್ಥಳಗಳನ್ನು ಪ್ರವಾಸಿ ಆಕರ್ಷಣೆಗಾಗಿ ವಿನ್ಯಾಸಗೊಳಿಸಲಾಗಿದೆ. ಬಂಗೀ ಜಂಪಿಂಗ್, ಜಿಪ್ ಲೈನ್ ಮತ್ತು ಗೋ-ಕಾರ್ಟ್‌ನಂತಹ ಚಟುವಟಿಕೆಗಳನ್ನು ಈ ಪ್ರತಿಮೆಯ ಸುತ್ತಮುತ್ತ ಮಾಡಬಹುದು.
- ಈ ಪ್ರತಿಮೆಯ ಮೇಲೆ 270ರಿಂದ 280 ಅಡಿ ಎತ್ತರಕ್ಕೆ ಹೋಗಲು ಸಣ್ಣ ಸೇತುವೆಯನ್ನು ನಿರ್ಮಿಸಲಾಗಿದೆ. ಇದು ಗಾಜಿನ ಸೇತುವೆ. ಇದರ ಮೇಲೆ ನಡೆದಾಡುತ್ತ ಹೋಗುವಾಗ ಭಯ, ರೋಮಾಂಚನ ಗ್ಯಾರಂಟಿ.ಗಾಜಿನಿಂದ ಮಾಡಿದ ಮೆಟ್ಟಿಲುಗಳಿಂದ ಬಗ್ಗಿದರೆ ನೆಲ ಮಹಡಿಯನ್ನು ನೋಡಬಹುದು. ಶಿವನ ಬಲ ಭುಜವು 280 ಅಡಿ ಎತ್ತರದಲ್ಲಿದೆ. ಇಲ್ಲಿಂದ ನೀವು ಶಿವನ ಸರ್ಪವನ್ನು ಸುಲಭವಾಗಿ ನೋಡಬಹುದು ಎಂದು ವರದಿಗಳು ತಿಳಿಸಿವೆ.
- ಶಿವನು ಧ್ಯಾನಭಂಗಿಯಲ್ಲಿರುವ ಶಿವನ ಪ್ರತಿಮೆ ಇದಾಗಿದೆ. ಈ ಶಿವನ ಪ್ರತಿಮೆಯು 20 ಕಿ.ಮೀ. ದೂರದವರೆಗೆ ಕಾಣಿಸುತ್ತದೆ.
-ಈ ಶಿವನ ಪ್ರತಿಮೆಗೆ ವಿಶೇಷ ಬೆಳಕಿನ ವ್ಯವಸ್ಥೆ ಮಾಡಿರುವುದರಿಂ ರಾತ್ರಿ ಹೊತ್ತಿನಲ್ಲೂ ಕಾಣಿಸಲಿದೆ