Budget Day Stocks: ಕೇಂದ್ರ ಬಜೆಟ್‌ ದಿನವಾದ ಇಂದು ಖರೀದಿಸಬಹುದಾದ 5 ಷೇರುಗಳು; ಮಾರುಕಟ್ಟೆ ತಜ್ಞರ ಶಿಫಾರಸು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Budget Day Stocks: ಕೇಂದ್ರ ಬಜೆಟ್‌ ದಿನವಾದ ಇಂದು ಖರೀದಿಸಬಹುದಾದ 5 ಷೇರುಗಳು; ಮಾರುಕಟ್ಟೆ ತಜ್ಞರ ಶಿಫಾರಸು

Budget Day Stocks: ಕೇಂದ್ರ ಬಜೆಟ್‌ ದಿನವಾದ ಇಂದು ಖರೀದಿಸಬಹುದಾದ 5 ಷೇರುಗಳು; ಮಾರುಕಟ್ಟೆ ತಜ್ಞರ ಶಿಫಾರಸು

Stocks to buy today: ಬಜೆಟ್‌ ದಿನವಾದ ಇಂದು ಷೇರು ಮಾರುಕಟ್ಟೆಯ ಪರಿಣಿತರು ಈ ಐದು ಷೇರುಗಳನ್ನು ಖರೀದಿಸಬಹುದೆಂದು ಶಿಫಾರಸು ಮಾಡಿದ್ದಾರೆ. ಎಸ್‌ಬಿಐ ಕಾರ್ಡ್‌, ರೈಟ್ಸ್‌, ಒಬೆರಾಯ್‌ ರಿಯಾಲಿಟಿ, ಕೆಪಿಐಟಿ ಟೆಕ್‌ ಮತ್ತು ಎಚ್‌ಬಿಎಲ್‌ ಪವರ್‌ ಷೇರುಗಳನ್ನು ಖರೀದಿಸಬಹುದೆಂದು ಶಿಫಾರಸು ಮಾಡಿದ್ದಾರೆ. (ಪೂರಕ ಮಾಹಿತಿ: ಲೈವ್‌ ಮಿಂಟ್‌)

Budget Day Stocks: ಕೇಂದ್ರ ಬಜೆಟ್‌ ದಿನವಾದ ಇಂದು ಖರೀದಿಸಬಹುದಾದ 5 ಷೇರುಗಳು
Budget Day Stocks: ಕೇಂದ್ರ ಬಜೆಟ್‌ ದಿನವಾದ ಇಂದು ಖರೀದಿಸಬಹುದಾದ 5 ಷೇರುಗಳು (Photo: ANI)

India Stock market strategy for Budget 2024: ಅಮೆರಿಕ-ಚೀನಾ ಟ್ರೇಡ್‌ ವಾರ್‌ ನಡುವೆ ದುರ್ಬಲ ಜಾಗತಿಕ ಮಾರುಕಟ್ಟೆ ಸೂಚನೆಗಳಿಂದ ಇತ್ತೀಚೆಗೆ ಭಾರತೀಯ ಷೇರುಪೇಟೆ ಕುಸಿತಗೊಂಡಿತ್ತು. ಈ ಕುಸಿತದ ನಡುವೆಯೂ ಷೇರುಪೇಟೆ ಏರುಮುಖವಾಗುವ ಎಲ್ಲಾ ಸೂಚನೆ ಇದೆ. ನಿಫ್ಟಿ 50 ಸೂಚ್ಯಂಕವು 125 ಪಾಯಿಂಟ್‌ಗಳಿಗಿಂತಲೂ ಕಡಿಮೆಯಾಗಿದೆ, ಬಿಎಸ್‌ಇ ಸೆನ್ಸೆಕ್ಸ್ ಸುಮಾರು 400 ಪಾಯಿಂಟ್‌ಗಳನ್ನು ಕಳೆದುಕೊಂಡಿದೆ. ಹೀಗಿದ್ದರೂ ಇದು ಭಯಪಡುವ ಸಮಯವಲ್ಲ. ಹೂಡಿಕೆದಾರರಿಗೆ ಇದು ಕಾರ್ಯತಂತ್ರಕ್ಕೆ ಇರುವ ಅವಕಾಶವಾಗಿದೆ.

ಭಾರತೀಯ ಷೇರುಪೇಟೆಯು ಶುಕ್ರವಾರ ತೀವ್ರ ಮಾರಾಟದ ಟ್ರೆಂಡ್‌ಗೆ ಸಾಕ್ಷಿಯಾಗಿದ್ದು, ಬಳಿಕ ಪರಿಸ್ಥಿತಿ ರಿವರ್ಸಲ್‌ ಆಗಿತ್ತು. ಅಂದರೆ, ಬಜೆಟ್‌ ಮೇಲೆ ನಿರೀಕ್ಷೆಯಿಂದ ಖರೀದಿ ಕಂಡುಬಂದಿದೆ. ಮೋದಿ 3.0 ಸರ್ಕಾರದ ಕೇಂದ್ರ ಬಜೆಟ್ 2024 ಮೇಲೆ ನಿರೀಕ್ಷೆಯಿಂದ ಮಂಗಳವಾರದವರೆಗೆ ಈ ಪ್ರವೃತ್ತಿ ಮುಂದುವರೆಯಬಹುದು ಎಂದು ತಜ್ಞರು ಹೇಳಿದ್ದಾರೆ. ಮುಂಬರುವ ವರ್ಷಕ್ಕೆ ಸರ್ಕಾರದ ಹಣಕಾಸಿನ ನೀತಿಗಳು ಮತ್ತು ಖರ್ಚು ಯೋಜನೆಗಳನ್ನು ವಿವರಿಸುವ ಕಾರಣ 2024ರ ಹಣಕಾಸು ವರ್ಷದಲ್ಲಿ ಕೇಂದ್ರ ಬಜೆಟ್‌ ಮಹತ್ವದ ಘಟನೆ. ಅಮೆರಿಕ-ಚೀನಾದ ವ್ಯಾಪಾರ ಯುದ್ಧವು ಮಾರುಕಟ್ಟೆಗೆ ಹಿತಕಾರಿಯಾಗಿಲ್ಲ. ಇದೇ ಸಂದರ್ಭದಲ್ಲಿ ತಮ್ಮ ಕಾಪೆಕ್ಷ್‌ ವಿಸ್ತರಿಸುತ್ತಿರುವ ಕಂಪನಿಗಳತ್ತ ಹೂಡಿಕೆದಾರರು ಗಮನ ನೀಡಬಹುದು. ಕೇಂದ್ರ ಬಜೆಟ್‌ ಬೆಳವಣಿಗೆ ಆಧರಿತ ಬಜೆಟ್‌ ಆಗಿ ಉಳಿಯುವ ನಿರೀಕ್ಷೆಯಿದೆ. ಅಂದರೆ ರೈಲ್ವೆ, ಮೂಲಸೌಕರ್ಯ, ಇಂಧನ, ತೈಲ ಮತ್ತು ವಿದ್ಯುತ್, ಆಟೋ ಮತ್ತು ಬ್ಯಾಂಕಿಂಗ್ ಪ್ರಮುಖ ವಿಭಾಗಗಳಾಗಿದ್ದು, ಅಂತಹ ಲಿಸ್ಟೆಡ್ ಕಂಪನಿಗಳ ಷೇರುಗಳನ್ನು ಖರೀದಿಸಲು ಹೂಡಿಕೆದಾರರು ಆದ್ಯತೆ ನೀಡಬಹುದು ಎಂದು ತಜ್ಞರು ಹೇಳಿದ್ದಾರೆ.

ಇಂದು ಯಾವ ಷೇರುಗಳನ್ನು ಖರೀದಿಸಬಹುದು?

ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದ ಸಹೋದರ ಪತ್ರಿಕೆ ಲೈವ್‌ ಮಿಂಟ್‌ಗೆ ವಿವಿಧ ಮಾರುಕಟ್ಟೆ ತಜ್ಞರು ಸಾಕಷ್ಟು ಷೇರುಗಳ ಸಲಹೆ ನೀಡಿದ್ದಾರೆ. ಪ್ರಾಫಿಟ್‌ ಮಾರ್ಟ್‌ನ ಅವಿನಾಶ್‌ ಗೋರಕ್ಸರ್‌ ಪ್ರಕಾರ "ಇಂದು ಆಟೋಮೊಬೈಲ್ಸ್‌ ವಿಭಾಗದಲ್ಲಿ ಮಹೀಂದ್ರ ಆಂಡ್‌ ಮಹೀಂದ್ರ ಮತ್ತು ಟಾಟಾ ಮೋಟಾರ್ಸ್‌, ಬ್ಯಾಂಕಿಂಗ್‌ ವಿಭಾಗದಲ್ಲಿ ಎಸ್‌ಬಿಐ, ಐಸಿಐಸಿಐ ಬ್ಯಾಂಕ್‌ ಮತ್ತು ಆಕ್ಸಿಸ್‌ ಬ್ಯಾಂಕ್‌ ಷೇರುಗಳನ್ನು ಹೂಡಿಕೆದಾರರು ಗಮನಿಸಬಹುದು".

ಎಸ್‌ಎಸ್‌ ವೆಲ್ತ್‌ ಸ್ಟ್ರೀಟ್‌ನ ಸುಗಂಧ ಸಚ್‌ದೇವ್‌ ಕೂಡ ವಿವಿಧ ಷೇರುಗಳನ್ನು ಶಿಫಾರಸು ಮಾಡಿದ್ದಾರೆ.

ಎಸ್‌ಬಿಐ ಕಾರ್ಡ್‌, ರೈಟ್ಸ್‌, ಒಬೆರಾಯ್‌ ರಿಯಾಲಿಟಿ, ಕೆಪಿಐಟಿ ಟೆಕ್‌ ಮತ್ತು ಎಚ್‌ಬಿಎಲ್‌ ಪವರ್‌ ಷೇರುಗಳನ್ನು ಈ ಮುಂದಿನ ಅಂಶಗಳ ಆಧಾರದಲ್ಲಿ ಖರೀದಿ ಮತ್ತು ಮಾರಾಟ ಮಾಡಬಹುದು ಎಂದು ಎಸ್‌ಎಸ್‌ ವೆಲ್ತ್‌ಸ್ಟ್ರೀಟ್‌ನ ಸುಗಂಧ ಸಚ್‌ದೇವ್‌ ಶಿಫಾರಸು ಮಾಡಿದ್ದಾರೆ.

1] ಎಸ್‌ಬಿಐ ಕಾರ್ಡ್: ಸುಮಾರು 680 ರಿಂದ 685 ರೂಗೆ ಖರೀದಿಸಬಹುದು., ಟಾರ್ಗೆಟ್‌ 840 , ಸ್ಟಾಪ್ ಲಾಸ್‌ 595 ರೂಪಾಯಿ;

2] ಒಬೆರಾಯ್ ರಿಯಾಲ್ಟಿ: 1570 ರಿಂದ 1580 ಕ್ಕೆ ರೂ ಖರೀದಿಸಬಹುದು, 2050 ರೂ ಟಾರ್ಗೆಟ್‌, 1280 ರೂ ಸ್ಟಾಪ್‌ ಲಾಸ್‌;

3] ರೈಟ್ಸ್: 650 ರಿಂದ 660 ರೂಗೆ ಖರೀದಿಸಬಹುದು, 880 ರೂ ಟಾರ್ಗೆಟ್‌, 520 ರೂಪಾಯಿ ಸ್ಟಾಪ್‌ಲಾಸ್‌;

4] ಕೆಪಿಐಟಿ ಟೆಕ್: 1690 ರಿಂದ 1695 ರೂ.ಗೆ ಖರೀದಿಸಬಹುದು. 2080 ರೂ ಟಾರ್ಗೆಟ್‌, ಸ್ಟಾಪ್ ಲಾಸ್ 1500 ರೂ ;

5] ಎಚ್‌ಬಿಎಲ್ ಪವರ್: ರೂ 540 ರಿಂದ ರೂ 550 ಕ್ಕೆ ಖರೀದಿಸಿ, ರೂ 765 ಟಾರ್ಗೆಟ್‌, 460 ರೂ ಸ್ಟಾಪ್‌ಲಾಸ್‌

Infographic:  ಕೃಪೆ ಎಸ್‌ಎಸ್‌ ವೆಲ್ತ್‌ ಸ್ಟ್ರೀಟ್‌
Infographic: ಕೃಪೆ ಎಸ್‌ಎಸ್‌ ವೆಲ್ತ್‌ ಸ್ಟ್ರೀಟ್‌

ಡಿಸ್ಕ್ಲೈಮರ್‌: ಇದು ‌ ಲೈವ್‌ ಮಿಂಟ್‌ ಲೇಖನ ಆಧರಿತ ಬರಹ. ಷೇರುಪೇಟೆಯ ಕುರಿತು ಜ್ಞಾನ ಹೆಚ್ಚಿಸುವ ಸಲುವಾಗಿ ಈ ಲೇಖನ ಪ್ರಕಟಿಸಲಾಗಿದೆ. ಇಲ್ಲಿ ನೀಡಲಾದ ಅಭಿಪ್ರಾಯಗಳು ಷೇರುಪೇಟೆಯ ತಜ್ಞರು ಅಥವಾ ಬ್ರೋಕರಿಂಗ್‌ ಕಂಪನಿಗಳದ್ದಾಗಿದೆ. ಈ ಅಭಿಪ್ರಾಯ ಎಚ್‌ಟಿ ಕನ್ನಡದ್ದು ಆಗಿರುವುದಿಲ್ಲ.  ಷೇರುಪೇಟೆಯಲ್ಲಿ ಹೂಡಿಕೆ ಮಾಡುವುದು ಹಣಕಾಸು ನಷ್ಟದ ಅಪಾಯಗಳನ್ನು ಒಳಗೊಂಡಿರುತ್ತದೆ. ಮಾರುಕಟ್ಟೆಯ ಅಪಾಯಗಳನ್ನು ಗಮನದಲ್ಲಿಟ್ಟುಕೊಂಡು ಹೂಡಿಕೆದಾರರು ಸ್ವಯಂ ವಿವೇಚನೆಯಿಂದ ಸ್ವತಃ ನಿರ್ಧಾರ ತೆಗೆದುಕೊಳ್ಳಬೇಕು)

 

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.