ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Viral Video: ಕಣ್ಣಿಲ್ಲದವರಿಗೂ ಫುಟ್‌ಬಾಲ್‌ ಮ್ಯಾಚ್ ಸವಿಯಲು ಅವಕಾಶ ಮಾಡಿಕೊಟ್ಟ ಹೃದಯವಂತ, ಸೂಪರ್ ಅಂತ ಮೆಚ್ಚಿದ ಜನ

Viral Video: ಕಣ್ಣಿಲ್ಲದವರಿಗೂ ಫುಟ್‌ಬಾಲ್‌ ಮ್ಯಾಚ್ ಸವಿಯಲು ಅವಕಾಶ ಮಾಡಿಕೊಟ್ಟ ಹೃದಯವಂತ, ಸೂಪರ್ ಅಂತ ಮೆಚ್ಚಿದ ಜನ

ಇದೊಂದು ಹೃದಯ ಗೆಲ್ಲುವ ವಿಡಿಯೋ. ದೃಷ್ಟಿ ಹೀನ ಗೆಳೆಯನಿಗೆ ಫುಟ್‌ಬಾಲ್‌ ಪಂದ್ಯ ಕಣ್ಣಿಗೆ ಕಟ್ಟುವ ರೀತಿ ತೋರಿಸಿಕೊಟ್ಟ ಮನಮುಟ್ಟಿದ ಪ್ರಸಂಗ. ಅದರ ವಿವರ ಇಲ್ಲಿದೆ.

ಅಂಧ ಸ್ನೇಹಿತನಿಗೆ ಫುಟ್‌ಬಾಲ್‌ ಪಂದ್ಯ ತೋರಿಸುತ್ತಿರುವ ಗೆಳೆಯ.
ಅಂಧ ಸ್ನೇಹಿತನಿಗೆ ಫುಟ್‌ಬಾಲ್‌ ಪಂದ್ಯ ತೋರಿಸುತ್ತಿರುವ ಗೆಳೆಯ.

ಇದೊಂದು ರೀತಿ ಹೃದಯ ತಟ್ಟುವ ಪ್ರಸಂಗ. ಅದು ದೃಷ್ಟಿಯನ್ನು ಕಳೆದುಕೊಂಡು ಗೆಳಯನಿಗೆ ಫುಟ್‌ಬಾಲ್‌ ಪಂದ್ಯವನ್ನು ಕಣ್ಣುಕಟ್ಟುವಂತೆ ಹೇಳುವ ಜತೆಗೆ ಕ್ರೀಡಾಂಗಣದಲ್ಲಿಯೇ ಕೂರಿಸಿಕೊಂಡು ಅನುಭವ ಕಟ್ಟಿಕೊಟ್ಟ ವಿಶಿಷ್ಟ ಸನ್ನಿವೇಶ. ಫುಟ್‌ಬಾಲ್‌ ಪಂದ್ಯವನ್ನು ಸವಿಯಬೇಕು ಎಂದು ಬಂದ ಅಂಧ ಗೆಳೆಯನ ಮೊಗದಲ್ಲಿ ನೈಜವಾಗಿಯೇ ಫುಟ್‌ಬಾಲ್‌ ಪಂದ್ಯ ನೋಡಿದ ಸಂತಸ ಅರಳಿದ ಸಮಯ. ಇದು ನಡೆದಿರುವುದು ದಕ್ಷಿಣ ಅಮೆರಿಕಾದ ಕೊಲಂಬಿಯಾದಲ್ಲಿ. ಸ್ನೇಹಿತನ ಈ ವಿಶಿಷ್ಟ ಅನುಭೂತಿಯ ಕ್ಷಣಗಳ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಇದು ನೆಟ್ಟಿಗರ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ನಿಜವಾಗಿ ಮನುಷ್ಯತ್ವ ಎನ್ನುವುದು ಉಳಿದಿದೆ. ನೈಜ ಸ್ನೇಹ ಎನ್ನುವುದು ಅಳಿದಿಲ್ಲ ಎಂದು ಜನ ವಿಡಿಯೋವನ್ನು ನೋಡಿ ಮನಸಾರೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಕೊಲಂಬಿಯಾದಲ್ಲಿನ ಅನೂಹ್ಯ ಕ್ಷಣ

ದಕ್ಷಿಣ ಅಮೆರಿಕಾದ ಪ್ರಮುಖ ನಗರಿ ಕೊಲಂಬಿಯಾ. ಅಲ್ಲಿನ ಅಟ್ಲೆಟಿಕೊ ಬುಕಾರಮಂಗಾ(Atletico Bucaramanga) ಎನ್ನುವುದು ಪ್ರಮುಖ ಫುಟ್‌ ಬಾಲ್‌ ಫುಟ್‌ಬಾಲ್‌ ಕ್ಲಬ್‌. 1949ರಲ್ಲಿ ಆರಂಭಗೊಂಡಿರುವ ಈ ಕ್ಲಬ್‌ ಈಗ 75 ವರ್ಷದ ಸಂಭ್ರಮದಲ್ಲಿದೆ. ಈ ಸ್ಥಳೀಯ ಕ್ಲಬ್ ನಲ್ಲಿ ಆಡಿ ಬೆಳೆದ ಆಟಗಾರರು ಅದೆಷ್ಟೋ. ಫುಟ್‌ಬಾಲ್‌ನ ಪೀಳಿಗೆಗಳನ್ನೇ ಬೆಳೆಸಿರುವ ಈ ಕ್ಲಬ್‌ನ ಆಟ ನೋಡುವ ಪ್ರೇಕ್ಷಕರು ಅದೆಷ್ಟೋ. ಫುಟ್‌ಬಾಲ್‌ನ ಕ್ಷಣಗಳನ್ನು ಕಣ್ಣಾರೆ ನೋಡುವ ಖುಷಿಯೇ ಬೇರೆ. ಅದನ್ನು ಅನುಭವಿಸಿದವರಿಗೆ ಅದರ ಸವಿ ಗೊತ್ತು.

ಜುವಾನ್ ಡೇವಿಡ್ ಎಂಬ ಜೀವದ ಗೆಳೆಯ

ಕೊಲಂಬಿಯಾದ ಜುವಾನ್ ಡೇವಿಡ್ ಎಂಬಾತ ಫುಟ್‌ಬಾಲ್‌ ಅಭಿಮಾನಿ. ಆತ ಕೂಡ ಆಗಾಗ ಪಂದ್ಯ ವೀಕ್ಷಣೆಗೆ ಹೋಗುತ್ತಲೇ ಇರುತ್ತಾನೆ. ಈ ಬಾರಿ ಕೊಲಂಬಿಯಾದ ಸ್ನೇಹಿತನೊಬ್ಬ ನಾನೂ ಬರುತ್ತೇನೆ ಫುಟ್‌ಬಾಲ್‌ ಪಂದ್ಯ ಸವಿಯಲು ಎಂದ. ಆದರೆ ಜುವಾನ್ ಡೇವಿಡ್‌ಗೆ ಗಲಿಬಿಲಿಯಾಯಿತು. ಬರುತ್ತೇನೆ ಎಂದು ಹೇಳಿದ ಗೆಳೆಯ ದೃಷ್ಟಿಹೀನ. ಆತನಿಗೆ ಎಳವೆಯಿಂದಲೇ ಕಣ್ಣು ಕಾಣುವುದಿಲ್ಲ. ಆಗುವುದಿಲ್ಲ ಎಂದರೆ ಸ್ನೇಹಿತನಿಗೆ ಬೇಸರ. ಆಗಲಿ ಎಂದರೆ ಹೇಗೆ ತೋರಿಸುವುದು ಎನ್ನುವ ಗಲಿಬಿಲಿ. ಗಟ್ಟಿ ಮನಸು ಮಾಡಿ ಆಯಿತು ಎಂದೇ ಬಿಟ್ಟ ಜುವಾನ್ ಡೇವಿಡ್. ಇದಕ್ಕಾಗಿ ತಯಾರಿಯನ್ನು ಮಾಡಿಕೊಂಡ. ಆತನಿಗೆ ವೀಕ್ಷಣೆ ವಿವರಣೆ ನೀಡುವ ಮೂಲಕ ಬೆನ್ನಿನ ಭಾಗದಲ್ಲಿ ಪಂದ್ಯದ ಕ್ಷಣಗಳನ್ನು ತಿಳಿಸುವ ಸಂಜ್ಞೆಗಳನ್ನೂ ಕಲಿತುಕೊಂಡ.

ಇಬ್ಬರು ಫುಟ್‌ಬಾಲ್‌ ಅಂಕಣಕ್ಕೆ ಹೋದರು. ಮುಂದೆ ದೃಷ್ಟಿಹೀನಗೆಳಯ ಹಿಂದೆ ಜುವಾನ್ ಡೇವಿಡ್. ಪಂದ್ಯ ಶುರುವಾಯಿತು. ಆತನಿಗೆ ಅಲ್ಲಿ ಕೇಳುತ್ತಿದ್ದುದು ಇತರರ ಸದ್ದು. ಖುಷಿ, ಸಡಗರವಷ್ಟೇ. ಆಗ ಜುವಾನ್ ಡೇವಿಡ್ ಆತನಿಗೆ ಪಂದ್ಯದ ಕ್ಷಣಗಳನ್ನು ಹೇಳುತ್ತಾ ಹೋದರು. ಬೆನ್ನ ಮೇಲೆ ಸಂಙ್ಞೆಗಳನ್ನು ವಿವರಿಸುತ್ತಾ ಹೋದರು. ಸ್ನೇಹಿತನಿಗೂ ಖುಷಿಗೆ ಪಾರವೇ ಇರಲಿಲ್ಲ. ಈತನಿಗೂ ನಿರಾಳತೆ.

ವಿಡಿಯೋ ವೈರಲ್‌

ಈ ಇಡೀ ಕ್ಷಣದ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ದೃಷ್ಟಿಹೀನ ಸ್ನೇಹಿತನಿಗೆ ಫುಟ್ಬಾಲ್ ಪಂದ್ಯವನ್ನು ಆನಂದಿಸಲು ಸಹಾಯ ಮಾಡಲು ಮನುಷ್ಯ ಅಸಾಮಾನ್ಯ ಮಾರ್ಗವನ್ನು ಬಳಸುತ್ತಾನೆ. ಈ ವೀಡಿಯೊ ವೈರಲ್ ಆಗಿದೆ. ಸಣ್ಣ ಆದರೆ ಚಿಂತನಶೀಲ ಸನ್ನೆಗಳು ಒಬ್ಬ ವ್ಯಕ್ತಿಯು ತನ್ನ ಸ್ನೇಹಿತನ ಬಗ್ಗೆ ಹೇಗೆ ಕಾಳಜಿ ವಹಿಸುತ್ತಾನೆ ಎಂಬುದನ್ನು ತೋರಿಸುತ್ತದೆ. ಸ್ನೇಹಕ್ಕೆ ವಿಶಿಷ್ಟ ಮತ್ತು ಹೃದಯಸ್ಪರ್ಶಿ ವಿಧಾನವನ್ನು ಪ್ರದರ್ಶಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಮೆಚ್ಚುಗೆ ಪಡೆದಿದೆ. ತನ್ನ ದೃಷ್ಟಿಹೀನ ಸ್ನೇಹಿತನಿಗೆ ಫುಟ್ಬಾಲ್ ಪಂದ್ಯವನ್ನು ಅನುಭವಿಸಲು ಸಹಾಯ ಮಾಡಲು ವ್ಯಕ್ತಿಯ ನವೀನ ವಿಧಾನವನ್ನು ತುಣುಕು ಬಹಿರಂಗಪಡಿಸುತ್ತದೆ . ಇದು ನಿಮ್ಮ ಕುತೂಹಲವನ್ನು ಕೆರಳಿಸುವ, ಹೃದಯದಲ್ಲಿ ಬೆಚ್ಚಗಿನ ಭಾವನೆಯನ್ನು ಉಂಟುಮಾಡುವ ವೀಡಿಯೊಗಳಲ್ಲಿ ಒಂದು ಎನ್ನಿಸಿಬಿಡುತ್ತದೆ.ಈ ವರ್ಷದ ಜನವರಿಯಲ್ಲಿ ಹಂಚಿಕೊಳ್ಳಲಾದ ಈ ವೀಡಿಯೊವನ್ನು ಇನ್ಸ್ಟಾಗ್ರಾಮ್ ಪುಟದಲ್ಲಿ ಮರುಹಂಚಿಕೊಂಡ ನಂತರ ಮತ್ತೊಮ್ಮೆ ವೀಕ್ಷಕರ ಹೃದಯವನ್ನು ಗೆದ್ದಿದೆ. ಮತ್ತೆ ಮತ್ತೆ ನೋಡುವಂತೆ ಮಾಡುತ್ತದೆ.

ಹೃದಯ ಗೆದ್ದ ಜನರ ಅಭಿಪ್ರಾಯ

ಹಂಚಿಕೊಂಡಾಗಿನಿಂದ, ವೀಡಿಯೊ 7.8 ದಶಲಕ್ಷಕ್ಕೂ ಹೆಚ್ಚು ಜನರನ್ನು ಇದು ತಲುಪಿದೆ. ಕಾಮೆಂಟ್‌ಗಳು ಕೂಡ ಭಾರೀ ಸಂಖ್ಯೆಯಲ್ಲಿವೆ.

"ಅವರು ತಮ್ಮ ಬೆನ್ನಿನ ಮೇಲೆ ಚೆಂಡಿನ ಚಲನೆಗಳನ್ನು ಸಹ ಪತ್ತೆಹಚ್ಚುತ್ತಿದ್ದಾರೆ" ಎಂದು ಇನ್ಸ್ಟಾಗ್ರಾಮ್ ಬಳಕೆದಾರರು ಬರೆದಿದ್ದಾರೆ.

"ಅವರು ವರ್ಷದ ಅಭಿಮಾನಿಗಳ ಪ್ರಶಸ್ತಿಗೆ ಅರ್ಹರು" ಎಂದು ಇನ್ನೊಬ್ಬರು ಪೋಸ್ಟ್ ಮಾಡಿದರೆ "ಇದು ನಿಜವಾದ ಸ್ನೇಹ. ಎಷ್ಟು ಸುಂದರವಾಗಿದೆ!" ಎಂದು ಮೂರನೆಯವರು ಕಾಮೆಂಟ್ ಮಾಡಿದ್ದಾರೆ.

"ಪುರುಷರು ನೋಡುತ್ತಾರೆ, ಪುರುಷರು ಸಂತೋಷವಾಗಿರುತ್ತಾರೆ, ಪುರುಷರು ಅಳುತ್ತಾರೆ" ಎಂಬುದು ನಾಲ್ಕನೆಯವರ ಅಭಿಮತ.

"ಶುದ್ಧ ಸ್ನೇಹ, ಶ್ರೇಷ್ಠತೆಯ ನಿಜವಾದ ಉದಾಹರಣೆ! ನಾವೆಲ್ಲರೂ ಅವರಂತೆ ಇರಬೇಕು" ಎಂದು ಹೃದಯಂಗಮವಾಗಿಯೆ ಒಬ್ಬರು ಬರೆದಿದ್ದಾರೆ.

IPL_Entry_Point