BYD eMax 7 MPV: ಇದು ಬರೀ ಕಾರಲ್ಲ, ಕರೆಂಟ್‌ ಇಲ್ಲದೆ ಇರುವಾಗ ವಿದ್ಯುತ್‌ ನೀಡುತ್ತೆ! ಬಿವೈಡಿ ಇಮ್ಯಾಕ್ಸ್‌ ಎಂಪಿವಿಯ ಚಿತ್ರ ಲಹರಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Byd Emax 7 Mpv: ಇದು ಬರೀ ಕಾರಲ್ಲ, ಕರೆಂಟ್‌ ಇಲ್ಲದೆ ಇರುವಾಗ ವಿದ್ಯುತ್‌ ನೀಡುತ್ತೆ! ಬಿವೈಡಿ ಇಮ್ಯಾಕ್ಸ್‌ ಎಂಪಿವಿಯ ಚಿತ್ರ ಲಹರಿ

BYD eMax 7 MPV: ಇದು ಬರೀ ಕಾರಲ್ಲ, ಕರೆಂಟ್‌ ಇಲ್ಲದೆ ಇರುವಾಗ ವಿದ್ಯುತ್‌ ನೀಡುತ್ತೆ! ಬಿವೈಡಿ ಇಮ್ಯಾಕ್ಸ್‌ ಎಂಪಿವಿಯ ಚಿತ್ರ ಲಹರಿ

  • BYD eMax 7 MPV: ವಿದ್ಯುತ್‌ ಸಂಪರ್ಕ ಇಲ್ಲದ ತಾಣಕ್ಕೆ ಪ್ರವಾಸ ಹೋದಾಗ ಅಲ್ಲಿ ಬಲ್ಪ್‌, ಸ್ಪೀಕರ್‌ ಸೇರಿದಂತೆ ವಿವಿಧ ಸಾಧನಗಳಿಗೆ ಈ ಕಾರಿನ ವಿದ್ಯುತ್‌ ಬಳಸಬಹುದು. ಇತ್ತೀಚೆಗೆ ಭಾರತದಲ್ಲಿ ಬಿಡುಗಡೆಯಾದ ಬಿವೈಡಿ ಇಮ್ಯಾಕ್ಸ್‌ ಎಂಬ ಆರು/ಏಳು ಸೀಟಿನ ಎಂಪಿವಿಯ ಚಿತ್ರಗಳೊಂದಿಗೆ ಹೆಚ್ಚಿನ ವಿವರ ಇಲ್ಲಿ ನೀಡಲಾಗಿದೆ.

BYD eMax 7 MPV: ಕಾರಿನಲ್ಲಿ ದೂರ ಪ್ರಯಾಣ ಹೋಗುವುದು ಎಲ್ಲರಿಗೂ ಇಷ್ಟ. ಇಂತಹ ಸಮಯದಲ್ಲಿ ರಾತ್ರಿ ಎಲ್ಲಾದರೂ ಪ್ರಶಾಂತ ವಾತಾವರಣದಲ್ಲಿ ಕುಟುಂಬದ ಜತೆ ಕಾಲ ಕಳೆಯಲು ಬಯಸುವವರಿಗೆ ಬೆಳಕಿನ ವ್ಯವಸ್ಥೆ ನೀಡುವ ಕೆಲವು ಕಾರುಗಳಿವೆ. ಸಾಮಾನ್ಯವಾಗಿ ಪ್ರಮುಖ ಎಲೆಕ್ಟ್ರಿಕ್‌ ಕಾರುಗಳಲ್ಲಿ ಎಕ್ಸ್‌ಟರ್ನಲ್‌ ಪವರ್‌ ವ್ಯವಸ್ಥೆ ಇರುತ್ತದೆ. ಅಂದರೆ, ಕಾರಿನ ಬ್ಯಾಟರಿಯ ವಿದ್ಯುತ್‌ ಬಳಸಿಕೊಂಡು ಬಾಹ್ಯಾ ವಿದ್ಯುತ್‌ ಸಂಪರ್ಕ ಕಲ್ಪಿಸಿಕೊಳ್ಳಬಹುದು. ಇತ್ತೀಚೆಗೆ ಬಿಡುಗಡೆಯಾದ ಬಿವೈಡಿ ಇಮ್ಯಾಕ್ಸ್‌ ಎಂಪಿವಿಯಲ್ಲೂ ಈ ಸೌಕರ್ಯವಿದೆ. ಈ ಕಾರಿನ ಕುರಿತು ಹೆಚ್ಚಿನ ವಿವರ ತಿಳಿಯೋಣ ಬನ್ನಿ. 
icon

(1 / 11)

ಬಿವೈಡಿ ಇ6 ಎಲೆಕ್ಟ್ರಿಕ್ ಎಂಪಿವಿಯ ಉತ್ತರಾಧಿಕಾರಿಯಾದ ಬಿವೈಡಿ ಇಮ್ಯಾಕ್ಸ್ 7  ಪರಿಷ್ಕೃತ ವಿನ್ಯಾ, ಹಲವು ಫೀಚರ್‌ಗಳೊಂದಿಗೆ ಆಗಮಿಸಿದೆ. ಈ ಎಂಪಿವಿ ಭಾರತದ ಎಕ್ಸ್‌ಶೋರಂ ದರ 26.90 ಲಕ್ಷ ರೂಪಾಯಿ ಆಗಿದೆ. 
icon

(2 / 11)

ಬಿವೈಡಿ ಇಮ್ಯಾಕ್ಸ್ 7 ಬಿವೈಡಿ ಇ 6ನ ಮುಂದುವರೆದ ಆವೃತ್ತಿಯಾಗಿದೆ. ಈ ಎಂಪಿವಿಯು ಹಲವು ಫೀಚರ್‌ಗಳನ್ನು ಹೊಂದಿದೆ. ಇದರ ವಿದ್ಯುತ್‌ ಅನ್ನು ಬಾಹ್ಯಾ ಬೆಳಕಿಗೂ ಬಳಸಬಹುದು. 
icon

(3 / 11)

ಹೊಸ ಇಮ್ಯಾಕ್ಸ್ 7 6 ಸೀಟರ್ ಮತ್ತು 7 ಸೀಟರ್ ಎಂಬ ಎರಡು ಆಸನ ಆಯ್ಕೆಗಳಲ್ಲಿ ದೊರಕುತ್ತದೆ. ಹೊಸ ಮಾದರಿಯು ಹಿಂದಿನ ತಲೆಮಾರಿನ ಮಾದರಿಗಿಂತ ಸುಧಾರಿತ ವೈಶಿಷ್ಟ್ಯಗಳು, ವಿನ್ಯಾಸ ಮತ್ತು  ತಂತ್ರಜ್ಞಾನವನ್ನು ಹೊಂದಿದೆ. 
icon

(4 / 11)

ಈ ಕಾರಿನ ವಿನ್ಯಾಸ ಗಮನ ಸೆಳೆಯುತ್ತದೆ. ಇದರ ತೀಕ್ಷ್ಣ ರೇಖೆಗು, ಕ್ರೋಮ್ ಸ್ಟ್ರಿಪ್‌ನಿಂದ ಸ್ಲಿಮ್‌ ಆದ ಎಲ್‌ಇಡಿ ಹೆಡ್‌ಲೈಟ್‌ಗಳು ಈ ಕಾರಿಗೆ ಹೊಸ ಆಕರ್ಷಣೆ ನೀಡಿದೆ. 
icon

(5 / 11)

ಈ ಎಲೆಕ್ಟ್ರಿಕ್ ಎಂಪಿವಿ  ಎರಡು ವಿಭಿನ್ನ ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಆಗಮಿಸಿದೆ.  420 ಕಿ.ಮೀ ವ್ಯಾಪ್ತಿಯ  55.4 ಕಿಲೋವ್ಯಾಟ್ ಬ್ಯಾಟರಿ ಮತ್ತು 530 ಕಿ.ಮೀ  ವ್ಯಾಪ್ತಿಯ 71.8 ಕಿಲೋವ್ಯಾಟ್ ಬ್ಯಾಟರಿ ಆಯ್ಕೆಗಳಲ್ಲಿ ದೊರಕುತ್ತದೆ. 
icon

(6 / 11)

ಇದು ಹೊಸ 18-ಇಂಚಿನ ಅಲಾಯ್ ವೀಲ್‌ಗಳನ್ನು ಹೊಂದಿದೆ. ಎಲ್ಇಡಿ ಕನೆಕ್ಟೆಡ್-ಟೈಪ್  ಟೈಲ್-ಲೈಟ್‌ಗಳು ಇವೆ. ಈ ಎಂಪಿವಿಯು ಟೊಯೊಟಾ ಇನ್ನೋವಾ ಹೈಕ್ರಾಸ್ ಮತ್ತು ಮಾರುತಿ ಸುಜುಕಿ ಇನ್ವಿಕ್ಟೋದೊಂದಿಗೆ ಸ್ಪರ್ಧಿಸುತ್ತದೆ. ಆದರೆ,  ಇವಿ ವಿಭಾಗದಲ್ಲಿ ನೇರ ಪ್ರತಿಸ್ಪರ್ಧಿಯನ್ನು ಹೊಂದಿಲ್ಲ. 
icon

(7 / 11)

ಕಾರಿನ ಹೊಸ ಡ್ಯಾಶ್‌ಬೋರ್ಡ್‌ನ  ಬಿವೈಡಿಯ ಸಿಗ್ನೇಚರ್ ರೊಟೇಶನ್ ಫೀಚರ್‌ನ 12.8-ಇಂಚಿನ ಇನ್ಫೋಟೈನ್ ಮೆಂಟ್ ಸ್ಕ್ರೀನ್ ಹೊದಿದೆ. ಇಮ್ಯಾಕ್ಸ್ 7 ಮರುವಿನ್ಯಾಸಗೊಳಿಸಿದ ಸೆಂಟರ್ ಕನ್ಸೋಲ್ ಕಂಟ್ರೋಲ್‌ಗಳು, ಮೂರು ಹಂತದ ಸ್ಟಿಯರಿಂಗ್‌ ವೀಲ್‌ ಹೊಂದಿದೆ. 
icon

(8 / 11)

ವೈರ್‌ಲೆಸ್‌ ಫೋನ್‌ ಚಾರ್ಜರ್‌ಗಳು, ಐಷಾರಾಮಿ ಗಿಯರ್‌ ಸೆಲೆಕ್ಟರ್‌ ಕೂಡ ಇದೆ. ಆರು ಏರ್‌ ಬ್ಯಾಗ್‌ಗಳು, 360 ಡಿಗ್ರಿ ಕ್ಯಾಮೆರಾ, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (ಟಿಪಿಎಂಎಸ್) ಮುಂತಾದ ಹಲವು ಸುರಕ್ಷತಾ ಫೀಚರ‌ಗಳು ಹೊಂದಿವೆ. 
icon

(9 / 11)

ಮೂರು ಸಾಲಿನ ಎಂಪಿವಿಯಲ್ಲಿ ವೆಂಟಿಲೇಟೆಡ್ ಲೆದರ್‌ ಸೀಟುಗಳು, ಪನೋರಮಿಕ್ ಸನ್ ರೂಫ್, ರೂಫ್-ಮೌಂಟೆಡ್ ಎಸಿ ವೆಂಟ್ ಗಳು ಮತ್ತು ಎನ್ ಎಫ್ ಸಿ ಕೀ ಕಾರ್ಡ್ ಚಾಲಿತ ಟೈಲ್ ಗೇಟ್ ಅನ್ನು ಹೊಂದಿದೆ. 
icon

(10 / 11)

ಟೈಲ್ ಗೇಟ್ ಎನ್‌ಎಫ್‌ಸಿ ಕೀ ಕಾರ್ಡ್‌ ಫೀಚರ್‌ ಹೊಂದಿದೆ. ಮೂರನೇ ಸಾಲಿನ ಸೀಟುಗಳು 50:50 ಸ್ಪ್ಲಿಟ್ ಫೋಲ್ಡಿಂಗ್ ಫಂಕ್ಷನಾಲಿಟಿಯನ್ನು ಪಡೆಯುತ್ತವೆ. ಇದಲ್ಲದೆ ಇದು ವೆಹಿಕಲ್-ಟು-ಲೋಡ್ (ವಿ 2 ಎಲ್) ತಂತ್ರಜ್ಞಾನವನ್ನು ಸಹ ಹೊಂದಿದೆ̤ ಇದು ಎಲೆಕ್ಟ್ರಿಕ್ ಎಂಪಿವಿಯನ್ನು ಬಾಹ್ಯ ಎಲೆಕ್ಟ್ರಾನಿಕ್ ಸಾಧನಗಳಿಗೆ ವಿದ್ಯುತ್ ಮೂಲವಾಗಲು ಅನುವು ಮಾಡಿಕೊಡುತ್ತದೆ. ಕುಟುಂಬದ ಜತೆ ಪ್ರವಾಸ, ಹೊರಗಡೆ ಆಫೀಸ ಮೀಟಿಂಗ್‌, ಕ್ಯಾಂಪಿಂಗ್‌ಗೆ ಇದು ಸಹಕರಿಸುತ್ತದೆ. 
icon

(11 / 11)

ಇತರ ಗ್ಯಾಲರಿಗಳು