Green Hampi: ಮಳೆ ನಿಂತು ಹೋದ ಮೇಲೆ, ಪ್ರವಾಸಿಗ ರವಿಕೀರ್ತಿಗೌಡ ಕಣ್ಣಲ್ಲಿ ಹಂಪಿ ಹಸಿರು ನೋಟ photos
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Green Hampi: ಮಳೆ ನಿಂತು ಹೋದ ಮೇಲೆ, ಪ್ರವಾಸಿಗ ರವಿಕೀರ್ತಿಗೌಡ ಕಣ್ಣಲ್ಲಿ ಹಂಪಿ ಹಸಿರು ನೋಟ Photos

Green Hampi: ಮಳೆ ನಿಂತು ಹೋದ ಮೇಲೆ, ಪ್ರವಾಸಿಗ ರವಿಕೀರ್ತಿಗೌಡ ಕಣ್ಣಲ್ಲಿ ಹಂಪಿ ಹಸಿರು ನೋಟ photos

  • ಹಂಪಿ(Hampi) ಹೇಗೆ ನೋಡಿದರೂ ಸುಂದರ. ಪೂರ್ವ  ಮುಂಗಾರಿನ ಛಾಯೆ ಹಂಪಿಯ ಕಲ್ಲುಗಳು ಹಾಗೂ ನೆಲದ ಮೇಲೂ ಕಾಣುತ್ತಿದೆ. ಹಸಿರು ಮರುಕಳಿಸಿದೆ. ಮೈಸೂರಿನ( Mysuru) ಹವಾಮಾನ ವಿಶ್ಲೇಷಕರಾದ ರವಿಕೀರ್ತಿಗೌಡ( RaviKeerthiGowda) ಹಂಪಿಯ ಪ್ರವಾಸದ ಸಂಜೆ ಹಾಗೂ ಬೆಳಗಿನ ಹಸಿರು ಕ್ಷಣಗಳನ್ನು ಭಿನ್ನವಾಗಿ ಸೆರೆ ಹಿಡಿದಿದ್ದಾರೆ. ಅವುಗಳ ನೋಟ ಇಲ್ಲಿದೆ. 

ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ ಹಾಡು ನೆನಪಿಸೋದು ಹಂಪಿಯನ್ನೇ. ಕರ್ನಾಟಕದ ಭವ್ಯ ಇತಿಹಾಸ ಸಾರುವ ಕೃಷ್ಣದೇವರಾಯನ ರಾಜಧಾನಿ ಹಂಪಿಯಲ್ಲಿ ಈಗ ಮಳೆಯ ಋತುಮಾನ. ಹಸಿರು ಯಾನ
icon

(1 / 11)

ಹಂಪಿಯ ಹದಿನಾರು ಕಾಲು ಮಂಟಪದ ಆವರಣವಂತೂ ಹಚ್ಚ ಹಸುರಾಗಿ ಪ್ರವಾಸಿಗರನ್ನು ಸೆಳೆಯುತ್ತಿದೆ. ಕರ್ನಾಟಕದ ಇತಿಹಾಸದಲ್ಲಿ ಬಂಗಾರದ ಯುಗದ ಕಥೆಯನ್ನು ಕೇಳಿ ಎಂದು ಹೇಳುತ್ತಿದೆ. 
icon

(2 / 11)

ಬಿರುಬಿಸಿಲಿನಿಂದ ಯಾವುದೇ ತಾಣಗಳಿಗೂ ಹೋಗಲು ಕಷ್ಟಪಡಬೇಕಾಗಿದ್ದ ಹಂಪಿಯಲ್ಲಿ ಮೋಡ ಮುಸುಕಿದ ವಾತಾವರಣ, ಮಳೆ ಆಹ್ಲಾದಕರ ಸನ್ನಿವೇಶ ಮರಳಿಸುತ್ತಿದೆ. 
icon

(3 / 11)

ಹಂಪಿಯ ಪ್ರಧಾನ ದೇಗುಲ ವಿರೂಪಾಕ್ಷೇಶ್ವರನ ಅಕ್ಕಪಕ್ಕದ ಗುಡ್ಡದ ಸಾಲುಗಳಲ್ಲೂ ನಿಧಾನವಾಗಿ ಹಸಿರು ಮರಳಿ ಬೇಸಿಗೆ ಮುಗಿಯುವುದನ್ನು ಹೇಳುತ್ತಿದೆ. 
icon

(4 / 11)

ಹಂಪಿಯ ಹಲವು ಕಡೆಗಳಲ್ಲಿ ಹಸಿರು ವಾತಾವರಣ ಇರುವುದರಿಂದ ಒಂದು ಸುತ್ತು ಖುಷಿಯಿಂದಲೇ ಹಾಕಿ ಬರುವ ಮನಸಾಗುತ್ತದೆ.
icon

(5 / 11)

ಹಂಪಿಯಲ್ಲಿ ಮಳೆಯಿಲ್ಲದೇ ಸೊರಗಿದ್ದ ಕಲ್ಯಾಣಿ ಕೂಡ ಮೂರ್ನಾಲ್ಕು ಮಳೆಯಿಂದ ಒಂದಿಷ್ಟು ನೀರು ಕಂಡಿದೆ. ಇಡೀ ವಾತಾವರಣವನ್ನು ಕೂಲ್‌ ಆಗಿಸಿದೆ.
icon

(6 / 11)

ಹಂಪಿಯ ಉಗ್ರನರಸಿಂಹ ದೇಗುಲದ ಆವರಣದಲ್ಲಿ ಸೂರ್ಯ ಬಿಸಿಲು ಕಡಿಮೆಯಾಗಿರುವ ನಡುವೆಯೇ ಹಸಿರು ಕೂಡ ಇಣುಕುತ್ತದೆ.
icon

(7 / 11)

ಹಂಪಿಯ ಸುಂದರ ಸಂಜೆ. ಕೆಮ್ಮುಗಿಲಿನ ಕ್ಯಾನ್ವಾಸ್‌ನ ಅತ್ಯುತ್ತಮ ಕ್ಷಣ,
icon

(8 / 11)

ಹಂಪಿಯ ಸುಂದರ ಸಂಜೆ. ಕೆಮ್ಮುಗಿಲಿನ ಕ್ಯಾನ್ವಾಸ್‌ನ ಅತ್ಯುತ್ತಮ ಕ್ಷಣ,

ಹಂಪಿಯ ಬೆಟ್ಟದ ಮೇಲೆ ನಿಂತರೇ ತುಂಗಭದ್ರಾ ನದಿ ಕಣಿವೆ. ಕಲ್ಲುಗಳ ನಡುವೆ ಸೂರ್ಯಾಸ್ತದ ಸನ್ನಿವೇಶ. ಹಸಿರು ಕೂಡ ಮಳೆ ಬರುತ್ತಿರುವುದನ್ನು ಸಾರುತ್ತದೆ.
icon

(9 / 11)

ಹಂಪಿಯ ಸಂಜೆಯ ಸುಂದರ ನೋಟ. ತುಂಗಭದ್ರಾ ನದಿ, ಹಸಿರು ಬೆಟ್ಟದ ನಡುವೆ ಬಂದು ನೋಡಿ ಹಂಪಿ ಎಂದು ಕರೆಯುತ್ತಿರುವಂತೆಯೇ ಇದೆ.
icon

(10 / 11)

ರವಿಕೀರ್ತಿಗೌಡ ಅವರು ಮೈಸೂರಿನವರು. ಪ್ರವಾಸ ಮಾಡುವುದು ಅವರ ಆಸಕ್ತಿ. ಛಾಯಾಗ್ರಾಹಣವೂ ಹವ್ಯಾಸ. ಹವಾಮಾನದ ಕುರಿತು ನಿಖರ ಮಾಹಿತಿ ಒದಗಿಸುವವರು. ಹಂಪಿಯ ಕ್ಷಣಗಳನ್ನು ಇವರೇ ಸೆರೆ ಹಿಡಿದಿರುವಂತದ್ದು.
icon

(11 / 11)

ಇತರ ಗ್ಯಾಲರಿಗಳು