ಸೆಹ್ವಾಗ್ ಸಿಡಿಲಬ್ಬರ ನೆನಪಿಸಿದ ಹ್ಯಾರಿ ಬ್ರೂಕ್; ಪಾಕಿಸ್ತಾನ ವಿರುದ್ಧ ದಾಖಲೆಯ ತ್ರಿಶತಕ ಸಿಡಿಸಿದ ಇಂಗ್ಲೆಂಡ್ ಬ್ಯಾಟರ್
- ಪಾಕಿಸ್ತಾನ ವಿರುದ್ಧದ ಮುಲ್ತಾನ್ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಬ್ಯಾಟರ್ ಹ್ಯಾರಿ ಬ್ರೂಕ್ ಸ್ಫೋಟಕ ತ್ರಿಶತಕ ಬಾರಿಸಿದ್ದಾರೆ. ವೇಗದ ಆಟವಾಡಿದ ಅವರು, ಜೋ ರೂಟ್ ಜೊತೆಗೆ ದಾಖಲೆಯ ಜೊತೆಯಾಟವಾಡುವುದು ಮಾತ್ರವಲ್ಲದೆ, ಮೊದಲ ತ್ರಿಶತಕ ಗಳಿಸಿದರು. ಅಂತಿಮವಾಗಿ ಕೇವಲ 322 ಎಸೆತಗಳಲ್ಲಿ 317 ರನ್ ಗಳಿಸಿ ಔಟಾದರು.

(1 / 5)
ಮುಲ್ತಾನ್ ಟೆಸ್ಟ್‌ನಲ್ಲಿ ಹ್ಯಾರಿ ಬ್ರೂಕ್ ತ್ರಿಶತಕ ಬಾರಿಸಿದರು. 310 ಎಸೆತಗಳಲ್ಲಿ ತ್ರಿಶತಕ ಗಡಿ ದಾಟಿದ ಅವರು, ಅಂತಿಮವಾಗಿ 322 ಎಸೆತಗಳಲ್ಲಿ 317 ರನ್ ಗಳಿಸಿ ಔಟಾದರು.(AFP)
(2 / 5)
ಇಂಗ್ಲೆಂಡ್ ಬ್ಯಾಟ್ಸ್ಮನ್ ಬ್ರೂಕ್ ಕೇವಲ 310 ಎಸೆತಗಳಲ್ಲಿ ತ್ರಿಶತಕ ಪೂರೈಸಿದರು. ಪಾಕಿಸ್ತಾನ ವಿರುದ್ಧ ತ್ರಿಶತಕ ಬಾರಿಸಿದ ವಿಶ್ವದ ಐದನೇ ಹಾಗೂ ಇಂಗ್ಲೆಂಡ್‌ನ ಮೊದಲನೇ ಬ್ಯಾಟರ್ ಬ್ರೂಕ್. ಅತ್ತ ವಿದೇಶಿ ನೆಲದಲ್ಲಿ ತ್ರಿಶತಕ ಬಾರಿಸಿದ ಇಂಗ್ಲೆಂಡ್‌ನ ಮೂರನೇ ಬ್ಯಾಟರ ಎಂಬ ಹೆಗ್ಗಳಿಕೆಯೂ ಇವರದ್ದು,(AP)
(3 / 5)
ಮುಲ್ತಾನ್ ಮೈದಾನವು ಪಾಕಿಸ್ತಾನಕ್ಕೆ ಕಹಿ ಫಲಿತಾಂಶ ಕೊಟ್ಟಿದ್ದೆ ಹೆಚ್ಚು. ಏಕೆಂದರೆ ಇದೇ ಮೈದಾನದಲ್ಲಿ ಭಾರತೀಯ ವೀರೇಂದ್ರ ಸೆಹ್ವಾಗ್ 2004ರಲ್ಲಿ ಪಾಕಿಸ್ತಾನದ ಬೌಲರ್‌ಗಳನ್ನು ದಂಡಿಸಿ ತ್ರಿಶತಕ ಬಾರಿಸಿದ್ದರು. ಆಗಿನಿಂದ ವೀರೂ ಅವರನ್ನು ಮುಲ್ತಾನ್ ಸುಲ್ತಾನ್ ಎಂದು ಕರೆಯಲಾಗುತ್ತಿದೆ. ಇದೀಗ ಸುಮಾರು ಎರಡು ದಶಕಗಳ ನಂತರ, ಇಂಗ್ಲಿಷ್ ಬ್ಯಾಟರ್ ಹ್ಯಾರಿ ಬ್ರೂಕ್ ಇದೇ ಮೈದಾನದಲ್ಲಿ ಮುನ್ನೂರು ದಾಟಿದ್ದಾರೆ.(AFP)
(4 / 5)
ಇದೇ ಪಂದ್ಯದಲ್ಲಿ ಜೋ ರೂಟ್ ಆಕರ್ಷಕ ದ್ವಿಶತಕ ಸಿಡಿಸಿದರು. ಆ ನಂತರ ಬ್ರೂಕ್ ತ್ರಿಶತಕ ಗಳಿಸಿದ್ದಾರೆ. ಈ ವರೆಗೆ ಇಂಗ್ಲೆಂಡ್‌ನ 6 ಕ್ರಿಕೆಟಿಗರು ತ್ರಿಶತಕ ಬಾರಿಸಿದ್ದಾರೆ.(AFP)
ಇತರ ಗ್ಯಾಲರಿಗಳು