ಗೆದ್ದರೂ ಪಾಕಿಸ್ತಾನಕ್ಕಿಂತ ಹಿಂದೆಬಿದ್ದ ಭಾರತ ತಂಡ; ವನಿತೆಯರ ಟಿ20 ವಿಶ್ವಕಪ್ ಅಂಕಪಟ್ಟಿ ಹೀಗಿದೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಗೆದ್ದರೂ ಪಾಕಿಸ್ತಾನಕ್ಕಿಂತ ಹಿಂದೆಬಿದ್ದ ಭಾರತ ತಂಡ; ವನಿತೆಯರ ಟಿ20 ವಿಶ್ವಕಪ್ ಅಂಕಪಟ್ಟಿ ಹೀಗಿದೆ

ಗೆದ್ದರೂ ಪಾಕಿಸ್ತಾನಕ್ಕಿಂತ ಹಿಂದೆಬಿದ್ದ ಭಾರತ ತಂಡ; ವನಿತೆಯರ ಟಿ20 ವಿಶ್ವಕಪ್ ಅಂಕಪಟ್ಟಿ ಹೀಗಿದೆ

  • Women's T20 World Cup Points Table: ಮಹಿಳಾ ಟಿ20 ವಿಶ್ವಕಪ್ 2024ರ ಎ ಗುಂಪಿನ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ರೋಚಕ ಜಯ ಸಾಧಿಸಿದೆ. ಈ ಪಂದ್ಯದ ನಂತರ ಟಿ20 ವಿಶ್ವಕಪ್‌ ಅಂಕಪಟ್ಟಿ ಹೇಗಿದೆ? ಭಾರತ ತಂಡ ಯಾವ ಸ್ಥಾನದಲ್ಲಿದೆ ಎಂಬುದನ್ನು ನೋಡೋಣ.

ಎ ಗುಂಪಿನಲ್ಲಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತ 58 ರನ್‌ಗಳ ಅಂತರದಿಂದ ಸೋಲು ಕಂಡಿತ್ತು. ಹೀಗಾಗಿ ಹರ್ಮನ್ ಪ್ರೀತ್ ಕೌರ್‌ ಪಡೆಗೆ ಪಾಯಿಂಟ್ಸ್ ಟೇಬಲ್‌ನಲ್ಲಿ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಇದೇ ವೇಳೆ, ಭಾರತದ ನೆಟ್ ರನ್ ರೇಟ್ ಕೂಡ ತೀರಾ ಕೆಟ್ಟದಾಗಿತ್ತು. ಪರಿಣಾಮವಾಗಿ, ಭಾರತವು 5 ತಂಡಗಳ ಗುಂಪಿನ ಕೊನೆಯಲ್ಲಿ ಸ್ಥಾನ ಪಡೆಯಿತು. ಆದರೆ, ಪಾಕಿಸ್ತಾನ ವಿರುದ್ಧದ ಗೆಲುವಿನ ಬಳಿಕ ಟೀಮ್ ಇಂಡಿಯಾ ಖಾತೆ ತೆರೆದಿದೆ. ಅಲ್ಲದೆ ತಂಡದ ನೆಟ್ ರನ್ ರೇಟ್ ಕೂಡ ಸ್ವಲ್ಪ ಸುಧಾರಿಸಿದೆ.
icon

(1 / 6)

ಎ ಗುಂಪಿನಲ್ಲಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತ 58 ರನ್‌ಗಳ ಅಂತರದಿಂದ ಸೋಲು ಕಂಡಿತ್ತು. ಹೀಗಾಗಿ ಹರ್ಮನ್ ಪ್ರೀತ್ ಕೌರ್‌ ಪಡೆಗೆ ಪಾಯಿಂಟ್ಸ್ ಟೇಬಲ್‌ನಲ್ಲಿ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಇದೇ ವೇಳೆ, ಭಾರತದ ನೆಟ್ ರನ್ ರೇಟ್ ಕೂಡ ತೀರಾ ಕೆಟ್ಟದಾಗಿತ್ತು. ಪರಿಣಾಮವಾಗಿ, ಭಾರತವು 5 ತಂಡಗಳ ಗುಂಪಿನ ಕೊನೆಯಲ್ಲಿ ಸ್ಥಾನ ಪಡೆಯಿತು. ಆದರೆ, ಪಾಕಿಸ್ತಾನ ವಿರುದ್ಧದ ಗೆಲುವಿನ ಬಳಿಕ ಟೀಮ್ ಇಂಡಿಯಾ ಖಾತೆ ತೆರೆದಿದೆ. ಅಲ್ಲದೆ ತಂಡದ ನೆಟ್ ರನ್ ರೇಟ್ ಕೂಡ ಸ್ವಲ್ಪ ಸುಧಾರಿಸಿದೆ.(AP)

ಇಂದು (ಭಾನುವಾರ) ನಡೆದ ಎರಡನೇ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನವನ್ನು 6 ವಿಕೆಟ್‌ಗಳಿಂದ ಸೋಲಿಸಿತು. ಇದರೊಂದಿಗೆ ಭಾರತ 2 ಪಂದ್ಯಗಳಿಂದ 2 ಅಂಕ ಗಳಿಸಿದೆ. ಅದರಂತೆ ಅಂಕಪಟ್ಟಿಯಲ್ಲಿ ಒಂದು ಸ್ಥಾನ ಮೇಲೇರಿ ಐದನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಜಿಗಿದಿದೆ. ಟೀಮ್ ಇಂಡಿಯಾದ ನೆಟ್ ರನ್ ರೇಟ್ ಪ್ರಸ್ತುತ -1.217 ಆಗಿದೆ. ಸೋಲಿನ ಬಳಿಕವೂ ಪಾಕಿಸ್ತಾನವು ಭಾರತಕ್ಕಿಂತ ಮೇಲಿದೆ.
icon

(2 / 6)

ಇಂದು (ಭಾನುವಾರ) ನಡೆದ ಎರಡನೇ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನವನ್ನು 6 ವಿಕೆಟ್‌ಗಳಿಂದ ಸೋಲಿಸಿತು. ಇದರೊಂದಿಗೆ ಭಾರತ 2 ಪಂದ್ಯಗಳಿಂದ 2 ಅಂಕ ಗಳಿಸಿದೆ. ಅದರಂತೆ ಅಂಕಪಟ್ಟಿಯಲ್ಲಿ ಒಂದು ಸ್ಥಾನ ಮೇಲೇರಿ ಐದನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಜಿಗಿದಿದೆ. ಟೀಮ್ ಇಂಡಿಯಾದ ನೆಟ್ ರನ್ ರೇಟ್ ಪ್ರಸ್ತುತ -1.217 ಆಗಿದೆ. ಸೋಲಿನ ಬಳಿಕವೂ ಪಾಕಿಸ್ತಾನವು ಭಾರತಕ್ಕಿಂತ ಮೇಲಿದೆ.

ಮೊದಲ ಪಂದ್ಯದಲ್ಲಿ ಶ್ರೀಲಂಕಾವನ್ನು ಸೋಲಿಸಿದ್ದ ಪಾಕಿಸ್ತಾನ, ಎರಡನೇ ಪಂದ್ಯದಲ್ಲಿ ಭಾರತದ ವಿರುದ್ಧ ಸೋತಿದೆ. ಇದರೊಂದಿಗೆ ಪಾಕಿಸ್ತಾನ 2 ಪಂದ್ಯಗಳಲ್ಲಿ 2 ಅಂಕ ಗಳಿಸಿದೆ. ತಂಡದ ನೆಟ್ ರನ್ ರೇಟ್ +0.555 ಆಗಿದೆ. ಹೀಗಾಗಿ 'ಎ' ಗುಂಪಿನ ಅಂಕಪಟ್ಟಿಯಲ್ಲಿ ಪಾಕಿಸ್ತಾನ ಮೂರನೇ ಸ್ಥಾನದಲ್ಲಿದೆ. ನೆಟ್ ರನ್ ರೇಟ್ ಆಧಾರದಲ್ಲಿ ಪಾಕಿಸ್ತಾನ ಭಾರತಕ್ಕಿಂತ ಮುಂದಿದೆ.
icon

(3 / 6)

ಮೊದಲ ಪಂದ್ಯದಲ್ಲಿ ಶ್ರೀಲಂಕಾವನ್ನು ಸೋಲಿಸಿದ್ದ ಪಾಕಿಸ್ತಾನ, ಎರಡನೇ ಪಂದ್ಯದಲ್ಲಿ ಭಾರತದ ವಿರುದ್ಧ ಸೋತಿದೆ. ಇದರೊಂದಿಗೆ ಪಾಕಿಸ್ತಾನ 2 ಪಂದ್ಯಗಳಲ್ಲಿ 2 ಅಂಕ ಗಳಿಸಿದೆ. ತಂಡದ ನೆಟ್ ರನ್ ರೇಟ್ +0.555 ಆಗಿದೆ. ಹೀಗಾಗಿ 'ಎ' ಗುಂಪಿನ ಅಂಕಪಟ್ಟಿಯಲ್ಲಿ ಪಾಕಿಸ್ತಾನ ಮೂರನೇ ಸ್ಥಾನದಲ್ಲಿದೆ. ನೆಟ್ ರನ್ ರೇಟ್ ಆಧಾರದಲ್ಲಿ ಪಾಕಿಸ್ತಾನ ಭಾರತಕ್ಕಿಂತ ಮುಂದಿದೆ.(AFP)

ನ್ಯೂಜಿಲೆಂಡ್ ತಂಡವು ಪ್ರಸ್ತುತ 'ಎ' ಗುಂಪಿನಲ್ಲಿ ನಂ.1 ಸ್ಥಾನದಲ್ಲಿದೆ. ತಂಡವು ಭಾರತ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದೆ 2 ಅಂಕಗಳನ್ನು ಗಳಿಸಿದೆ. ತಂಡದ ನೆಟ್ ರನ್ ರೇಟ್ ಗುಂಪಿನಲ್ಲಿ ಅತ್ಯುತ್ತಮವಾಗಿದೆ. +2.900 ನೆಟ್‌ ರನ್‌ ರೇಟ್‌ನೊಂದಿಗೆ ತಂಡ ಅಗ್ರಸ್ಥಾನದಲ್ಲಿದೆ.
icon

(4 / 6)

ನ್ಯೂಜಿಲೆಂಡ್ ತಂಡವು ಪ್ರಸ್ತುತ 'ಎ' ಗುಂಪಿನಲ್ಲಿ ನಂ.1 ಸ್ಥಾನದಲ್ಲಿದೆ. ತಂಡವು ಭಾರತ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದೆ 2 ಅಂಕಗಳನ್ನು ಗಳಿಸಿದೆ. ತಂಡದ ನೆಟ್ ರನ್ ರೇಟ್ ಗುಂಪಿನಲ್ಲಿ ಅತ್ಯುತ್ತಮವಾಗಿದೆ. +2.900 ನೆಟ್‌ ರನ್‌ ರೇಟ್‌ನೊಂದಿಗೆ ತಂಡ ಅಗ್ರಸ್ಥಾನದಲ್ಲಿದೆ.(AP)

ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡ 'ಎ' ಗುಂಪಿನ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಕಾಂಗರೂ ಬಳಗ 1 ಪಂದ್ಯದಲ್ಲಿ 2 ಅಂಕಗಳನ್ನು ಗಳಿಸಿದೆ. ಆಸ್ಟ್ರೇಲಿಯಾದ ನೆಟ್ ರನ್ ರೇಟ್ ಪ್ರಸ್ತುತ +1.908 ಆಗಿದೆ. ಎ ಗುಂಪಿನಲ್ಲಿರುವ ನಾಲ್ಕು ತಂಡಗಳು ತಲಾ ಎರಡು ಅಂಕಗಳನ್ನು ಗಳಿಸಿವೆ. ಆದರೆ ನೆಟ್ ರನ್ ರೇಟ್ ಆಧಾರದ ಮೇಲೆ ಸ್ಥಾನಗಳಲ್ಲಿ ವ್ಯತ್ಯಾಸವಿದೆ.
icon

(5 / 6)

ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡ 'ಎ' ಗುಂಪಿನ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಕಾಂಗರೂ ಬಳಗ 1 ಪಂದ್ಯದಲ್ಲಿ 2 ಅಂಕಗಳನ್ನು ಗಳಿಸಿದೆ. ಆಸ್ಟ್ರೇಲಿಯಾದ ನೆಟ್ ರನ್ ರೇಟ್ ಪ್ರಸ್ತುತ +1.908 ಆಗಿದೆ. ಎ ಗುಂಪಿನಲ್ಲಿರುವ ನಾಲ್ಕು ತಂಡಗಳು ತಲಾ ಎರಡು ಅಂಕಗಳನ್ನು ಗಳಿಸಿವೆ. ಆದರೆ ನೆಟ್ ರನ್ ರೇಟ್ ಆಧಾರದ ಮೇಲೆ ಸ್ಥಾನಗಳಲ್ಲಿ ವ್ಯತ್ಯಾಸವಿದೆ.(AP)

'ಎ' ಗುಂಪಿನಲ್ಲಿ ಶ್ರೀಲಂಕಾ ಮಾತ್ರ ಈವರೆಗೆ ಖಾತೆ ತೆರೆಯಲು ಸಾಧ್ಯವಾಗಿಲ್ಲ. ಆಡಿದ ಮೊದಲ ಎರಡೂ ಪಂದ್ಯಗಳಲ್ಲಿ ಸೋತಿರುವ ಶ್ರೀಲಂಕಾ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಶ್ರೀಲಂಕಾದ ನೆಟ್ ರನ್ ರೇಟ್ ಪ್ರಸ್ತುತ -1.667 ಆಗಿದೆ.
icon

(6 / 6)

'ಎ' ಗುಂಪಿನಲ್ಲಿ ಶ್ರೀಲಂಕಾ ಮಾತ್ರ ಈವರೆಗೆ ಖಾತೆ ತೆರೆಯಲು ಸಾಧ್ಯವಾಗಿಲ್ಲ. ಆಡಿದ ಮೊದಲ ಎರಡೂ ಪಂದ್ಯಗಳಲ್ಲಿ ಸೋತಿರುವ ಶ್ರೀಲಂಕಾ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಶ್ರೀಲಂಕಾದ ನೆಟ್ ರನ್ ರೇಟ್ ಪ್ರಸ್ತುತ -1.667 ಆಗಿದೆ.(AP)


ಇತರ ಗ್ಯಾಲರಿಗಳು