ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಐಪಿಎಲ್​ 2025ರಲ್ಲಿ ಆರ್​ಸಿಬಿಗೆ ಹೊಸ ನಾಯಕನಾಗಿ ಫಾಫ್ ಡು ಪ್ಲೆಸಿಸ್ ಸ್ಥಾನ ತುಂಬಲು ಸಮರ್ಥರು ಇವರೇ

ಐಪಿಎಲ್​ 2025ರಲ್ಲಿ ಆರ್​ಸಿಬಿಗೆ ಹೊಸ ನಾಯಕನಾಗಿ ಫಾಫ್ ಡು ಪ್ಲೆಸಿಸ್ ಸ್ಥಾನ ತುಂಬಲು ಸಮರ್ಥರು ಇವರೇ

  • RCB New Captain: 2024ರ ಐಪಿಎಲ್ ಮುಗಿಸಿರುವ ಆರ್​ಸಿಬಿ 2025ರ ಆವೃತ್ತಿಗೆ ಈಗಿನಿಂದಲೇ ಸಿದ್ಧತೆ ನಡೆಸುತ್ತಿದೆ. ಅದರಂತೆ ನೂತನ ನಾಯಕನ ಹುಟುಕಾಟ ನಡೆಸುತ್ತಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಬುಧವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಹೃದಯವಿದ್ರಾವಕ ಸೋಲಿನ ನಂತರ ಐಪಿಎಲ್ 2024 ರಿಂದ ಹೊರಬಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಟ್ರೋಫಿ ಕನಸನ್ನು ಮುಂದಿನ ವರ್ಷಕ್ಕೆ ಹಾಕಿದೆ.
icon

(1 / 9)

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಬುಧವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಹೃದಯವಿದ್ರಾವಕ ಸೋಲಿನ ನಂತರ ಐಪಿಎಲ್ 2024 ರಿಂದ ಹೊರಬಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಟ್ರೋಫಿ ಕನಸನ್ನು ಮುಂದಿನ ವರ್ಷಕ್ಕೆ ಹಾಕಿದೆ.(PTI)

ಆರ್​ಸಿಬಿ ಸ್ಪರ್ಧೆಯಿಂದ ಹೊರಗುಳಿದಿದ್ದು, ದಕ್ಷಿಣ ಭಾರತದ ಫ್ರಾಂಚೈಸಿಗೆ ಮುಂದೇನು? ಅವರು ಹೊಸ ನಾಯಕನನ್ನು ಹುಡುಕುತ್ತಾರೆಯೇ? ಆರ್​ಸಿಬಿ ಜರ್ಸಿಯಲ್ಲಿ ಫಾಫ್ ಡು ಪ್ಲೆಸಿಸ್ ಅವರು ಮತ್ತೊಮ್ಮೆ ಐಪಿಎಲ್ ಆಡುತ್ತಾರೆಯೇ ಎಂಬ ಪ್ರಶ್ನೆ ಮೂಡಿದೆ.
icon

(2 / 9)

ಆರ್​ಸಿಬಿ ಸ್ಪರ್ಧೆಯಿಂದ ಹೊರಗುಳಿದಿದ್ದು, ದಕ್ಷಿಣ ಭಾರತದ ಫ್ರಾಂಚೈಸಿಗೆ ಮುಂದೇನು? ಅವರು ಹೊಸ ನಾಯಕನನ್ನು ಹುಡುಕುತ್ತಾರೆಯೇ? ಆರ್​ಸಿಬಿ ಜರ್ಸಿಯಲ್ಲಿ ಫಾಫ್ ಡು ಪ್ಲೆಸಿಸ್ ಅವರು ಮತ್ತೊಮ್ಮೆ ಐಪಿಎಲ್ ಆಡುತ್ತಾರೆಯೇ ಎಂಬ ಪ್ರಶ್ನೆ ಮೂಡಿದೆ.(PTI)

2025ರ ಐಪಿಎಲ್​ಗೂ ಮುನ್ನ ಮೆಗಾ ಹರಾಜು ನಡೆಯಲಿದೆ. ಆದರೆ ನೂತನ ತಂಡವನ್ನು ಕಟ್ಟಲು ಆರ್​ಸಿಬಿ, ಫಾಫ್ ಡು ಪ್ಲೆಸಿಸ್ ಸೇರಿದಂತೆ ಹಲವರನ್ನು ತಂಡದಿಂದ ಕೈಬಿಡುವುದು ಖಚಿತವಾಗಿದೆ. ವಿರಾಟ್ ಕೊಹ್ಲಿ ತಂಡದಲ್ಲೇ ಉಳಿದುಕೊಳ್ಳಲಿದ್ದಾರೆ.
icon

(3 / 9)

2025ರ ಐಪಿಎಲ್​ಗೂ ಮುನ್ನ ಮೆಗಾ ಹರಾಜು ನಡೆಯಲಿದೆ. ಆದರೆ ನೂತನ ತಂಡವನ್ನು ಕಟ್ಟಲು ಆರ್​ಸಿಬಿ, ಫಾಫ್ ಡು ಪ್ಲೆಸಿಸ್ ಸೇರಿದಂತೆ ಹಲವರನ್ನು ತಂಡದಿಂದ ಕೈಬಿಡುವುದು ಖಚಿತವಾಗಿದೆ. ವಿರಾಟ್ ಕೊಹ್ಲಿ ತಂಡದಲ್ಲೇ ಉಳಿದುಕೊಳ್ಳಲಿದ್ದಾರೆ.(PTI)

ಫಾಫ್​ ಡು ಪ್ಲೆಸಿಸ್ ಅವರನ್ನು ಕೈಬಿಟ್ಟರೆ ಆರ್​ಸಿಬಿ ನೂತನ ನಾಯಕನ ಹುಡುಕಾಟ ನಡೆಸಲಿದೆ. ಹಾಗಾದರೆ, ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗನ ಸ್ಥಾನವನ್ನು ತುಂಬುವ ಸಮರ್ಥ ಆಟಗಾರರು ಯಾರಿದ್ದಾರೆ? ಡು ಪ್ಲೆಸಿಸ್​​ನನ್ನು ಬದಲಿಸಲು ಸಾಧ್ಯವಿರುವ ಆಯ್ಕೆಗಳು ಯಾರು?
icon

(4 / 9)

ಕೆಎಲ್ ರಾಹುಲ್: ಪ್ರಸ್ತುತ ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಬೆಂಗಳೂರಿನವರು. ಈ ಹಿಂದೆ ಎರಡು ಬಾರಿ ಆರ್​ಸಿಬಿ ತಂಡವನ್ನು ಪ್ರತಿನಿಧಿಸಿದ್ದ ಕೆಎಲ್ ರಾಹುಲ್, ಪಂಜಾಬ್ ಕಿಂಗ್ಸ್ ನಾಯಕರೂ ಆಗಿದ್ದಾರೆ. ಆದರೆ ಎಲ್​ಎಸ್​ಜಿ ತಂಡದಿಂದ ಅವರನ್ನು ಕೈಬಿಡುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ.
icon

(5 / 9)

ಎಲ್​ಎಸ್​ಜಿ ಮಾಲೀಕರು ಮತ್ತು ಕೆಎಲ್ ರಾಹುಲ್ ನಡುವೆ ಎಲ್ಲವೂ ಸರಿ ಇಲ್ಲ ಎಂದು ಹೇಳಲಾಗುತ್ತಿದೆ. ಹಾಗಾಗಿ ಅವರನ್ನು ಕೈಬಿಟ್ಟರೆ, ನಾಯಕನ ಹುಡುಕಾಟದಲ್ಲಿರುವ ಆರ್​ಸಿಬಿ, ಕೆಎಲ್​ರನ್ನು ಉತ್ತಮ ಆಯ್ಕೆಯಾಗಿ ತಂಡಕ್ಕೆ ಸೇರಿಸಿಕೊಳ್ಳಬಹುದು.
icon

(6 / 9)

ಎಲ್​ಎಸ್​ಜಿ ಮಾಲೀಕರು ಮತ್ತು ಕೆಎಲ್ ರಾಹುಲ್ ನಡುವೆ ಎಲ್ಲವೂ ಸರಿ ಇಲ್ಲ ಎಂದು ಹೇಳಲಾಗುತ್ತಿದೆ. ಹಾಗಾಗಿ ಅವರನ್ನು ಕೈಬಿಟ್ಟರೆ, ನಾಯಕನ ಹುಡುಕಾಟದಲ್ಲಿರುವ ಆರ್​ಸಿಬಿ, ಕೆಎಲ್​ರನ್ನು ಉತ್ತಮ ಆಯ್ಕೆಯಾಗಿ ತಂಡಕ್ಕೆ ಸೇರಿಸಿಕೊಳ್ಳಬಹುದು.

ರೋಹಿತ್ ಶರ್ಮಾ: ರೋಹಿತ್ ಶರ್ಮಾ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಜಗಜ್ಜಾಹೀರಾಗಿದೆ. ಹಾರ್ದಿಕ್​ಗೆ ನಾಯಕತ್ವ ನೀಡಿದ ನಂತರ 2025ರ ಐಪಿಎಲ್​ಗೂ ರೋಹಿತ್​ರನ್ನು ತನ್ನ ತಂಡದಿಂದ ಕೈಬಿಡುವ ಸಾಧ್ಯತೆ ಹೆಚ್ಚಿದೆ. ಹಿಟ್​ಮ್ಯಾನ್ ಸಹ ಎಂಐ ತಂಡದಲ್ಲೇ ಮುಂದುವರೆಯಲು ಇಚ್ಛಿಸುತ್ತಿಲ್ಲ.
icon

(7 / 9)

ಒಂದು ರೋಹಿತ್​ ಶರ್ಮಾ ಮುಂಬೈ ತೊರೆದರೆ ಆರ್​ಸಿಬಿ ಅವರನ್ನು ತಂಡಕ್ಕೆ ಖರೀದಿಸಬಹುದು. ನಾಯಕನಾಗಿ ಅಪಾರ ಅನುಭವ ಮತ್ತು ಐಪಿಎಲ್​ನಲ್ಲಿ 5 ಟ್ರೋಫಿ ಗೆದ್ದಿರುವ ಹಿಟ್​ಮ್ಯಾನ್​, ಆರ್​ಸಿಬಿಗೂ ಯಶಸ್ವಿ ನಾಯಕನಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ.
icon

(8 / 9)

ಒಂದು ರೋಹಿತ್​ ಶರ್ಮಾ ಮುಂಬೈ ತೊರೆದರೆ ಆರ್​ಸಿಬಿ ಅವರನ್ನು ತಂಡಕ್ಕೆ ಖರೀದಿಸಬಹುದು. ನಾಯಕನಾಗಿ ಅಪಾರ ಅನುಭವ ಮತ್ತು ಐಪಿಎಲ್​ನಲ್ಲಿ 5 ಟ್ರೋಫಿ ಗೆದ್ದಿರುವ ಹಿಟ್​ಮ್ಯಾನ್​, ಆರ್​ಸಿಬಿಗೂ ಯಶಸ್ವಿ ನಾಯಕನಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ.

ಕ್ಷಣಕ್ಷಣದ ಅಪ್ಡೇಟ್ಸ್​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ.
icon

(9 / 9)

ಕ್ಷಣಕ್ಷಣದ ಅಪ್ಡೇಟ್ಸ್​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ.

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು