ಟೀಮ್ ಇಂಡಿಯಾ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ನ್ಯೂಜಿಲೆಂಡ್ ನಾಯಕತ್ವ ತೊರೆದ ಟಿಮ್ ಸೌಥಿ; ಮತ್ತೆ ಈತನೇ ಕ್ಯಾಪ್ಟನ್
- Tim Southee: ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್ ಹೀನಾಯ ಸೋಲು ಅನುಭವಿಸಿದ ಕಾರಣ ಟಿಮ್ ಸೌಥಿ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಅಲ್ಲದೆ, ನೂತನ ನಾಯಕನನ್ನೂ ನೇಮಿಸಲಾಗಿದೆ.
- Tim Southee: ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್ ಹೀನಾಯ ಸೋಲು ಅನುಭವಿಸಿದ ಕಾರಣ ಟಿಮ್ ಸೌಥಿ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಅಲ್ಲದೆ, ನೂತನ ನಾಯಕನನ್ನೂ ನೇಮಿಸಲಾಗಿದೆ.
(1 / 6)
ಶ್ರೀಲಂಕಾ ವಿರುದ್ಧದ ಸರಣಿ ಸೋಲಿನ ಬಳಿಕ ಟಿಮ್ ಸೌಥಿ ನ್ಯೂಜಿಲೆಂಡ್ ಟೆಸ್ಟ್ ತಂಡದ ನಾಯಕ ಸ್ಥಾನದಿಂದ ಕೆಳಗಿಳಿದಿದ್ದಾರೆ. ತಂಡದ ಹಿತದೃಷ್ಟಿಯಿಂದ ದೂರ ಸರಿಯಲು ನಿರ್ಧರಿಸಿದ್ದೇನೆ ಎಂದು ಸ್ಟಾರ್ ವೇಗಿ ಹೇಳಿದ್ದಾರೆ. ಟೀಮ್ ಇಂಡಿಯಾ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನವೇ ಈ ನಿರ್ಧಾರ ಕೈಗೊಂಡಿದ್ದು ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಮತ್ತು ತಂಡಕ್ಕೆ ಆಘಾತವಾದಂತಾಗಿದೆ.
(2 / 6)
ಶ್ರೀಲಂಕಾ ವಿರುದ್ಧ ಆಡಿದ 2 ಟೆಸ್ಟ್ ಪಂದ್ಯಗಳಲ್ಲೂ ಹೀನಾಯವಾಗಿ ಸೋಲನುಭವಿಸಿದ ಕಿವೀಸ್, ವಿಶ್ವಮಟ್ಟದಲ್ಲಿ ತೀವ್ರ ಮುಖಭಂಗಕ್ಕೆ ಒಳಗಾಯಿತು. ಮೊದಲ ಟೆಸ್ಟ್ನಲ್ಲಿ 63 ರನ್ಗಳಿಂದ ಸೋತ ನ್ಯೂಜಿಲೆಂಡ್, ಎರಡನೇ ಟೆಸ್ಟ್ನಲ್ಲಿ ಇನ್ನಿಂಗ್ಸ್ ಮತ್ತು 154 ರನ್ಗಳಿಂದ ಶರಣಾಯಿತು. ಪ್ರಮುಖ ಬ್ಯಾಟರ್ಗಳೇ ಇದ್ದರೂ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು.
(3 / 6)
ಶ್ರೀಲಂಕಾ ಎದುರು ಟೆಸ್ಟ್ ಸರಣಿ ಸೋತ ಕಾರಣ ನ್ಯೂಜಿಲೆಂಡ್ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಟೇಬಲ್ನಲ್ಲಿ 6ನೇ ಸ್ಥಾನದಲ್ಲಿದೆ. ಇದರೊಂದಿಗೆ ಫೈನಲ್ ತಲುಪುವ ಕನಸು ಭಗ್ನವಾಗಿದೆ. ಶ್ರೀಲಂಕಾ ಸರಣಿಗೂ ಮುನ್ನ ನ್ಯೂಜಿಲೆಂಡ್, ಈ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿತ್ತು. ಸತತ ಎರಡು ಟೆಸ್ಟ್ಗಳನ್ನು ಸೋತ ನಂತರ 7ನೇ ಸ್ಥಾನಕ್ಕೆ ಕುಸಿದಿತ್ತು. ಆದರೆ ಬಾಂಗ್ಲಾದೇಶ ತಂಡವು ಭಾರತ ತಂಡದ ವಿರುದ್ಧ ಸೋತ ನಂತರ ನ್ಯೂಜಿಲೆಂಡ್ 6ನೇ ಸ್ಥಾನಕ್ಕೇರಿತು.
(4 / 6)
ಟಿಮ್ ಸೌಥಿ ನ್ಯೂಜಿಲೆಂಡ್ ತಂಡವನ್ನು 14 ಟೆಸ್ಟ್ ಪಂದ್ಯಗಳಲ್ಲಿ ಮುನ್ನಡೆಸಿದ್ದು, 6 ಟೆಸ್ಟ್ ಪಂದ್ಯಗಳಲ್ಲಿ ಗೆಲುವು ತಂದುಕೊಟ್ಟಿದ್ದಾರೆ. ಉಳಿದ 6 ಟೆಸ್ಟ್ ಪಂದ್ಯಗಳಲ್ಲಿ ಸೋಲು ಕಂಡಿದ್ದು, 2 ಪಂದ್ಯಗಳು ಸೋತಿವೆ. 2022ರಲ್ಲಿ ಕೇನ್ ವಿಲಿಯಮ್ಸನ್ ಕೆಳಗಿಳಿದ ನಂತರ ಸೌಥಿ, ನ್ಯೂಜಿಲೆಂಡ್ ಟೆಸ್ಟ್ ನಾಯಕತ್ವ ವಹಿಸಿಕೊಂಡರು.
(5 / 6)
ಟಿಮ್ ಸೌಥಿ ನಾಯಕತ್ವ ತೊರೆದ ನಂತರ ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟಾಮ್ ಲಾಥಮ್ ನ್ಯೂಜಿಲೆಂಡ್ ತಂಡವನ್ನು ಮುನ್ನಡೆಸಲಿದ್ದಾರೆ. ಲಾಥಮ್ ಈ ಹಿಂದೆ ನ್ಯೂಜಿಲೆಂಡ್ ಟೆಸ್ಟ್ ತಂಡವನ್ನು ಮುನ್ನಡೆಸಿದ್ದಾರೆ. 2020ರಿಂದ 2022ರ ಅವಧಿಯಲ್ಲಿ ಲಾಥಮ್ ನಾಯಕತ್ವದಲ್ಲಿ ನ್ಯೂಜಿಲೆಂಡ್ 9 ಟೆಸ್ಟ್ ಪಂದ್ಯಗಳನ್ನಾಡಿತ್ತು. ಈ 9 ಟೆಸ್ಟ್ ಪಂದ್ಯಗಳಲ್ಲಿ ನ್ಯೂಜಿಲೆಂಡ್ 4 ಟೆಸ್ಟ್ ಪಂದ್ಯಗಳನ್ನು ಗೆದ್ದಿದೆ ಮತ್ತು 5 ಟೆಸ್ಟ್ಗಳಲ್ಲಿ ಸೋತಿದೆ.
ಇತರ ಗ್ಯಾಲರಿಗಳು