Coloring for Hair: ಬಿಳಿ ಕೂದಲು ಮರೆ ಮಾಚಲು ಮೆಹಂದಿ ಅಥವಾ ಡೈ ಯಾವುದು ಬಳಸುತ್ತೀರಿ..ನಿಮಗಾಗಿ ಒಂದಿಷ್ಟು ಟಿಪ್ಸ್
- ಬಹುತೇಕ ಎಲ್ಲರೂ ತಮ್ಮ ಬಿಳಿ ಕೂದಲನ್ನು ಮರೆ ಮಾಚಲು ಕೂದಲಿಗೆ ಬಣ್ಣ ಹಚ್ಚುತ್ತಾರೆ. ಕೆಲವರು ಹೇರ್ ಡೈ ಬಳಸಿದರೆ, ಇನ್ನೂ ಕೆಲವರು ಮೆಹಂದಿ ಅಥವಾ ಗೋರಂಟಿ ಬಳಸುತ್ತಾರೆ. ಆದರೆ ಎಲ್ಲರಿಗೂ ಎಲ್ಲವೂ ಹೊಂದುವುದಿಲ್ಲ. ನಿಮ್ಮ ಕೂದಲಿಗೆ ಯಾವುದು ಮುಖ್ಯ ಎಂಬುದನ್ನು ನೀವು ಮೊದಲು ಅರ್ಥ ಮಾಡಿಕೊಳ್ಳಬೇಕು.
- ಬಹುತೇಕ ಎಲ್ಲರೂ ತಮ್ಮ ಬಿಳಿ ಕೂದಲನ್ನು ಮರೆ ಮಾಚಲು ಕೂದಲಿಗೆ ಬಣ್ಣ ಹಚ್ಚುತ್ತಾರೆ. ಕೆಲವರು ಹೇರ್ ಡೈ ಬಳಸಿದರೆ, ಇನ್ನೂ ಕೆಲವರು ಮೆಹಂದಿ ಅಥವಾ ಗೋರಂಟಿ ಬಳಸುತ್ತಾರೆ. ಆದರೆ ಎಲ್ಲರಿಗೂ ಎಲ್ಲವೂ ಹೊಂದುವುದಿಲ್ಲ. ನಿಮ್ಮ ಕೂದಲಿಗೆ ಯಾವುದು ಮುಖ್ಯ ಎಂಬುದನ್ನು ನೀವು ಮೊದಲು ಅರ್ಥ ಮಾಡಿಕೊಳ್ಳಬೇಕು.
(1 / 7)
ಕೆಲವರಿಗೆ ಮೆಹಂದಿ ಸುಲಭವಾಗಿ ಹೊಂದುತ್ತದೆ. ಅದರೆ ಕೆಲವರಿಗೆ ಮೆಹಂದಿ ಸ್ವಲ್ಪವೂ ಹೊಂದುವುದಿಲ್ಲ. ಹಾಗೇ ಕೆಲವರಿಗೆ ಡೈ ಹೊಂದುವುದಿಲ್ಲ, ಹಾಗೇ ಇನ್ನೂ ಕೆಲವರಿಗೆ ಡೈ ಬಿಟ್ಟು ಬೇರೆ ಯಾವುದೂ ಹೊಂದುವುದಿಲ್ಲ.
(2 / 7)
ಒಬ್ಬರ ಕೂದಲಿನ ಪ್ರಕಾರವನ್ನು ಅವಲಂಬಿಸಿ, ಒಬ್ಬರು ಒಂದನ್ನು ಬಳಸಬಹುದು. ಕೂದಲಿನ ಬಣ್ಣ ಕೆಲವರಿಗೆ ಒಳ್ಳೆಯದು. ಕೆಲವರಿಗೆ ಮೆಹಂದಿ ಉತ್ತಮ. ನಿಮಗೆ ಯಾವುದು ಉತ್ತಮ? ಈ ಎರಡರ ಅನುಕೂಲಗಳು ಮತ್ತು ಅನಾನುಕೂಲಗಳು ಯಾವುವು?ಎಂಬುದನ್ನು ನೀವು ಮೊದಲು ತಿಳಿದುಕೊಳ್ಳಬೇಕು.
(3 / 7)
ಹೆನ್ನಾ ಅಥವಾ ಮೆಹಂದಿಯ ಪ್ರಯೋಜನಗಳು: ಮೆಹಂದಿ ಅಥವಾ ಹೆನ್ನಾವನ್ನು ಬಹಳ ಹಿಂದಿನಿಂದ ಭಾರತದಲ್ಲಿ ಕೂದಲಿನ ಆರೈಕೆಗಾಗಿ ಬಳಸಲಾಗುತ್ತದೆ. ಕೂದಲಿಗೆ ನೈಸರ್ಗಿಕ ಕೆಂಪು ಬಣ್ಣವನ್ನು ಪಡೆಯಲು ಮೆಹಂದಿ ಹಚ್ಚುವ ಅಭ್ಯಾಸವಿದೆ, ಅದರ ಹೊರತಾಗಿ, ಕೂದಲು ಆರೋಗ್ಯಕರ ಮತ್ತು ಬಲವಾಗಿರಲು ಗೋರಂಟಿ ತುಂಬಾ ಉಪಯುಕ್ತವಾಗಿದೆ. ಹೆನ್ನಾ ಕೂದಲಿಗೆ ಹೆಚ್ಚುವರಿ ಹೊಳಪನ್ನು ನೀಡುತ್ತದೆ.
(4 / 7)
ಮೆಹಂದಿಯ ಅನಾನುಕೂಲಗಳು: ಕೆಲವರಿಗೆ ಮೆಹಂದಿ ಬಹಳ ಅಲರ್ಜಿ ಉಂಟು ಮಾಡುತ್ತದೆ. ಮೆಹಂದಿಯಲ್ಲಿ ದೇಹವನ್ನು ತಂಪು ಮಾಡುವ ಗುಣ ಇದೆ. ಆದರೆ ಇದನ್ನು ನೀವು ಚಳಿಗಾಲ ಅಥವಾ ಮಳೆಗಾಲದಲ್ಲಿ ಬಳಸಿದರೆ ನೀವು ಶೀತ ಹಾಗೂ ಇನ್ನಿತರ ಸಮಸ್ಯೆಗಳಿಂದ ಬಳಲುವ ಸಾಧ್ಯತೆ ಇದೆ. ಹಾಗೇ ಇದನ್ನು ನಿಯಮಿತವಾಗಿ ಬಳಸುವುದರಿಂದ ಕೂದಲು ಡ್ರೈ ಆಗುವ ಸಾಧ್ಯತೆ ಇದೆ. ಮಾರುಕಟ್ಟೆಯಲ್ಲಿ ದೊರೆಯುವ ಕಪ್ಪು ಮೆಹಂದಿಯಲ್ಲಿ ಯಾವುದೇ ನೈಸರ್ಗಿಕ ಗುಣಗಳಿರುವುದಿಲ್ಲ. ಹಾಗೇ ಮೆಹಂದಿ ಬಳಸಿ ನೀವು ನಿಮಗಿಷ್ಟವಾದ ರಂಗನ್ನು ಪಡೆಯಲು ಸಾಧ್ಯವಿಲ್ಲ. ಬಿಳಿ ಕೂದಲು ಇರುವವರು ಮೆಹಂದಿ ಹಚ್ಚಿಕೊಂಡರೆ ಕೂದಲು ಕೆಂಪಾಗುವುದೇ ಹೊರತು ಕಪ್ಪಾಗುವುದಿಲ್ಲ. ಕೂದಲಿಗೆ ಮೆಹಂದಿ ಹಚ್ಚುವುದು ಹೆಚ್ಚು ಸಮಯ ಬೇಕು. ಇದನ್ನು ಹಚ್ಚಿ ತೊಳೆಯಲು ಕನಿಷ್ಠ 4-5 ಗಂಟೆ ಸಮಯ ವ್ಯಯಿಸಬೇಕು.
(5 / 7)
ಪ್ಯಾಕೆಟ್ ಬಣ್ಣದ ಪ್ರಯೋಜನಗಳು: ಕಪ್ಪು, ನ್ಯಾಚುರಲ್ ಬ್ಲಾಕ್, ಕಂದು, ಹೀಗೆ ರಾಸಾಯನಿಕ ಹೇರ್ ಕಲರ್‌ನಿಂದ ನಿಮ್ಮ ಕೂದಲಿಗೆ ಬೇಕಾದ ಬಣ್ಣ ಪಡೆಯಬಹುದು. ಈಗ ಮಾರುಕಟ್ಟೆಯಲ್ಲಿ ಇನ್‌ಸ್ಟಂಟ್ ಹೇರ್ ಕಲರ್ ದೊರೆಯುತ್ತದೆ. ನಿಮಗೆ ಸಮಯದ ಅಭಾವ ಇದ್ದಲ್ಲಿ ನೀವು ಅರ್ಧ ಗಂಟೆಯಲ್ಲಿ ನಿಮ್ಮ ಬಿಳಿ ಕೂದಲಿಗೆ ಕಪ್ಪು ಬಣ್ಣ ನೀಡಬಹುದು. ಆದರೆ ಮಾರುಕಟ್ಟೆಯಲ್ಲಿ ದೊರೆಯುವ ಕಡಿಮೆ ಬೆಲೆಯ ಹೇರ್ ಕಲರ್ ಖರೀದಿಸುವ ಬದಲಿಗೆ ಪ್ರೊಫೆಷನಲ್ ಹೇರ್ ಕಲರ್ ಬಳಸಿದರೆ ಉತ್ತಮ.
(6 / 7)
ಪ್ಯಾಕೆಟ್ ಬಣ್ಣದ ಅನಾನುಕೂಲಗಳು: ರಾಸಾಯನಿಕ ಬಣ್ಣಗಳು ವಿವಿಧ ಅಡ್ಡ ಪರಿಣಾಮಗಳು ಅಥವಾ ಅಲರ್ಜಿಗಳನ್ನು ಉಂಟುಮಾಡಬಹುದು. ಹೇರ್ ಡೈಗಳನ್ನು ಪದೇ ಪದೇ ಬಳಸುವುದರಿಂದ ಕೂದಲಿನ ಹೊರ ಪೊರೆ ಒಡೆಯುತ್ತದೆ. ಇದು ಕೂದಲಿನ ಗುಣಮಟ್ಟವನ್ನು ಹದಗೆಡಿಸುತ್ತದೆ. ಅದರ ಹೊರತಾಗಿ, ಈ ಬಣ್ಣವನ್ನು ಬಳಸುವುದರಿಂದ ಹೆಚ್ಚು ವೆಚ್ಚವಾಗುತ್ತದೆ.
ಇತರ ಗ್ಯಾಲರಿಗಳು