ಭಾರತದಲ್ಲಿ ನಿರ್ಮಾಣವಾಗಲಿವೆ 12 ಕೈಗಾರಿಕಾ ಸ್ಮಾರ್ಟ್‌ ಸಿಟಿಗಳು; 1.5 ಲಕ್ಷ ಕೋಟಿ ರೂ ಹೂಡಿಕೆ, 40 ಲಕ್ಷ ಉದ್ಯೋಗ ಸೃಷ್ಟಿ-india news central govt set to build 12 new industrial smart cities in 10 states with 40 lakh jobs narendra modi jra ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಭಾರತದಲ್ಲಿ ನಿರ್ಮಾಣವಾಗಲಿವೆ 12 ಕೈಗಾರಿಕಾ ಸ್ಮಾರ್ಟ್‌ ಸಿಟಿಗಳು; 1.5 ಲಕ್ಷ ಕೋಟಿ ರೂ ಹೂಡಿಕೆ, 40 ಲಕ್ಷ ಉದ್ಯೋಗ ಸೃಷ್ಟಿ

ಭಾರತದಲ್ಲಿ ನಿರ್ಮಾಣವಾಗಲಿವೆ 12 ಕೈಗಾರಿಕಾ ಸ್ಮಾರ್ಟ್‌ ಸಿಟಿಗಳು; 1.5 ಲಕ್ಷ ಕೋಟಿ ರೂ ಹೂಡಿಕೆ, 40 ಲಕ್ಷ ಉದ್ಯೋಗ ಸೃಷ್ಟಿ

  • ಆರು ಕೈಗಾರಿಕಾ ಕಾರಿಡಾರ್‌ಗಳು, 10 ರಾಜ್ಯಗಳಲ್ಲಿ 12 ಹೊಸ ಕೈಗಾರಿಕಾ ಸ್ಮಾರ್ಟ್‌ ಸಿಟಿ ಸೇರಿದಂತೆ ದೇಶೀಯ ಕೈಗಾರಿಕಾ ಬೆಳವಣಿಗೆಗೆ ಮತ್ತಷು ವೇಗ ತುಂಬಲು ಬರೋಬ್ಬರಿ 28,602 ಕೋಟಿ ರೂ.ಗಳ ಯೋಜನೆಗಳಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಇದು 1.5 ಲಕ್ಷ ಕೋಟಿ ರೂಪಾಯಿ ಹೂಡಿಕೆಗೆ ಕಾರಣವಾಗಬಹುದು. ಜೊತೆಗೆ 40 ಲಕ್ಷ ಉದ್ಯೋಗ ಸೃಷ್ಟಿಸುವ ನಿರೀಕ್ಷೆ ಇದೆ.

ದೇಶಾದ್ಯಂತ 10 ರಾಜ್ಯಗಳ ಆರು ಕೈಗಾರಿಕಾ ಕಾರಿಡಾರ್‌ಗಳಲ್ಲಿ 12 ಹೊಸ ಕೈಗಾರಿಕಾ ನಗರಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಆಗಸ್ಟ್‌ 28ರ ಬುಧವಾರ ನಡೆದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯ ಸಭೆಯಲ್ಲಿ ಈ ಪ್ರಸ್ತಾಪಕ್ಕೆ ಅನುಮೋದನೆ ನೀಡಲಾಯಿತು. ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾ ಮತ್ತು ಗುಜರಾತ್‌ಮ ಧೋಲೆರಾ ಮಾದರಿಯಲ್ಲಿ 10 ರಾಜ್ಯಗಳಲ್ಲಿ 12 ಕೈಗಾರಿಕಾ ಎಸ್ಟೇಟ್‌ಳನ್ನು ಸ್ಥಾಪಿಸಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ. (ಚಿತ್ರ ಕೃಪೆ: ಬ್ಲೂಮ್‌ಬರ್ಗ್)
icon

(1 / 6)

ಆದರೆ, ಕರ್ನಾಟಕ ರಾಜ್ಯಕ್ಕೆ ಒಂದೂ ಸ್ಮಾರ್ಟ್‌ ಸಿಟಿ ಸಿಕ್ಕಿಲ್ಲ. ಆದರೆ ನೆರೆಯ ಕೇರಳ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರ ಸೇರಿದಂತೆ ಒಟ್ಟು 10 ರಾಜ್ಯಗಳಿಗೆ ಪ್ರಯೋಜನ ಸಿಕ್ಕಿದೆ.(ಚಿತ್ರ ಕೃಪೆ: ರಾಯಿಟರ್ಸ್)
icon

(2 / 6)

ಅಮೃತಸರ-ಕೋಲ್ಕತಾ ಕೈಗಾರಿಕಾ ಕಾರಿಡಾರ್‌ನಲ್ಲಿ ಐದು ಕೈಗಾರಿಕಾ ನಗರಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಉತ್ತರಾಖಂಡದ ಖುರಾಪಿಯಾ (1,002 ಕೋಟಿ ರೂ.), ಪಂಜಾಬ್‌ನ ರಾಜ್ಪುರ-ಪಟಿಯಾಲ (1,099 ಕೋಟಿ ರೂ.), ಉತ್ತರ ಪ್ರದೇಶದ ಆಗ್ರಾ (1,058 ಕೋಟಿ ರೂ.), ಉತ್ತರ ಪ್ರದೇಶದ ಪ್ರಯಾಗ್ರಾಜ್ (352 ಕೋಟಿ ರೂ.) ಮತ್ತು ಬಿಹಾರದ ಗಯಾ (1,670 ಕೋಟಿ ರೂ.) (ಚಿತ್ರ ಕೃಪೆ ಪಿಟಿಐ)
icon

(3 / 6)

ದೆಹಲಿ-ಮುಂಬೈ ಕೈಗಾರಿಕಾ ಕಾರಿಡಾರ್‌ನಲ್ಲಿ ಮಹಾರಾಷ್ಟ್ರದ ಡಿಘಿ (6,056 ಕೋಟಿ ರೂ.) ಮತ್ತು ರಾಜಸ್ಥಾನದ ಜೋಧಪುರ-ಪಾಲಿ (1,578 ಕೋಟಿ ರೂ.) ಸೇರಿವೆ. ಆಂಧ್ರಪ್ರದೇಶದ ಕೊಪ್ಪರತಿ (2,596 ಕೋಟಿ ರೂ.) ಮತ್ತು ಓರ್ವಕಲ್ (2,821 ಕೋಟಿ ರೂ.), ತೆಲಂಗಾಣದ ಜಹೀರಾಬಾದ್ (3,245 ಕೋಟಿ ರೂ.) ಮತ್ತು ಕೇರಳದ ಪಾಲಕ್ಕಾಡ್ (1,710 ಕೋಟಿ ರೂ.) ಇತರ ಐದು ಪ್ರಸ್ತಾವಿತ ಕೈಗಾರಿಕಾ ನಗರಗಳಾಗಿವೆ (ಚಿತ್ರ ಕೃಪೆ: ಸುನಿಲ್ ಘೋಷ್/ಹಿಂದೂಸ್ತಾನ್ ಟೈಮ್ಸ್)
icon

(4 / 6)

12 ಕೈಗಾರಿಕಾ ನಗರಗಳಿಗೆ ಕೇಂದ್ರ ಸರ್ಕಾರ 28,602 ಕೋಟಿ ರೂ ವ್ಯಯಿಸುವ ಲೆಕ್ಕ ಹಾಕಿದೆ. ತದನಂತರ ಬರೋಬ್ಬರಿ 1.52 ಲಕ್ಷ ಕೋಟಿ ಹೂಡಿಕೆಯಾಗುವ ಸಾಧ್ಯತೆ ಇದೆ. ಈ ಯೋಜನೆಯು ನೇರವಾಗಿ 9.39 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿದರೆ, ಪರೋಕ್ಷವಾಗಿ, 30 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಸಾಧ್ಯತೆ ಇದೆ ಎಂದು ಕೇಂದ್ರ ತಿಳಿಸಿದೆ. (ಚಿತ್ರ ಕೃಪೆ: ಸುನಿಲ್ ಘೋಷ್/ಹಿಂದೂಸ್ತಾನ್ ಟೈಮ್ಸ್)
icon

(5 / 6)

ಈ ಯೋಜನೆಯಿಂದ ವಿವಿಧ ಕಂಪನಿಗಳು ವಿದೇಶದಿಂದ ಭಾರತಕ್ಕೆ ಬರಲಿವೆ. ಅದು ಆರ್ಥಿಕ ಬೆಳವಣಿಗೆ ಮತ್ತು ಜಾಗತಿಕ ಸ್ಪರ್ಧಾತ್ಮಕತೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಎಂದು ಸರ್ಕಾರ ಹೇಳಿದೆ. (ಚಿತ್ರ ಕೃಪೆ: ಸುನಿಲ್ ಘೋಷ್/ಹಿಂದೂಸ್ತಾನ್ ಟೈಮ್ಸ್)
icon

(6 / 6)

ಇತರ ಗ್ಯಾಲರಿಗಳು