ಕನ್ನಡ ರಾಜ್ಯೋತ್ಸವ 2024: ಕರ್ನಾಟಕದ 10 ಪ್ರಸಿದ್ಧ ಊರುಗಳು, ವಿಶಿಷ್ಠ ಮಹತ್ವ ಇರುವ ಅವುಗಳ ಹಿನ್ನೆಲೆ ಏನು
- ಕನ್ನಡ ರಾಜ್ಯೋತ್ಸವ 2024 (karnataka rajyotsava 2024) ಪ್ರಯುಕ್ತ ಹಿಂದೂಸ್ತಾನ್ ಟೈಮ್ಸ್ ಕನ್ನಡವು ಕರ್ನಾಟಕದ ಪ್ರಮುಖ ಹತ್ತು ಊರುಗಳ ವಿಶೇಷತೆಯ ಮಾಹಿತಿ ನೀಡಿದೆ.
- ಕನ್ನಡ ರಾಜ್ಯೋತ್ಸವ 2024 (karnataka rajyotsava 2024) ಪ್ರಯುಕ್ತ ಹಿಂದೂಸ್ತಾನ್ ಟೈಮ್ಸ್ ಕನ್ನಡವು ಕರ್ನಾಟಕದ ಪ್ರಮುಖ ಹತ್ತು ಊರುಗಳ ವಿಶೇಷತೆಯ ಮಾಹಿತಿ ನೀಡಿದೆ.
(1 / 11)
ಕರ್ನಾಟಕದ ಹಲವು ಊರುಗಳು ತನ್ನ ವಿಭಿನ್ನತೆಯಿಂದ ಗಮನ ಸೆಳೆಯುತ್ತದೆ. ಅದರಲ್ಲಿ ಸಂಸ್ಕೃತಿ, ಆಹಾರ, ವಿಚಾರ, ಉದ್ಯಮ ಸಹಿತ ನಾನಾ ಕಾರಣಗಳಿಂದ ಆ ಊರಿಗೆ ಗೌರವ ಬಂದಿದೆ. ಅಂತಹ ಊರುಗಳ ವಿಶೇಷತೆ ಇಲ್ಲಿದೆ. ಚಿತ್ರ: ಎಸ್.ಪ್ರೀತಂ
(3 / 11)
ಬಸವಕಲ್ಯಾಣ//ಬೀದರ್ ಜಿಲ್ಲೆಯ ಬಸವಕಲ್ಯಾಣ ಹನ್ನೆರಡನೇ ಶತಮಾನದಲ್ಲಿಯೇ ಬಸವಣ್ಣನ ಅನುಭವಮಂಟಪ ನಿರ್ಮಿಸಿ ಕ್ರಾಂತಿಗೆ ನಾದಿ ಹಾಡಿದ ಊರು.
(4 / 11)
ದಾವಣಗೆರೆ//ಒಂದು ಕಾಲಕ್ಕೆ ಹತ್ತಿ ಗಿರಣಿಗಳ ಮೂಲಕ ಹೆಸರುವಾಸಿಯಾಗಿದ್ದ ದಾವಣಗೆರೆ ಈಗ ಬೆಣ್ಣೆ ದೋಸೆ ಮೂಲಕವೇ ಬಹು ಜನಪ್ರಿಯವಾಗಿದೆ.
(5 / 11)
ಬ್ಯಾಡಗಿ//ಮೆಣಸಿಕಾಯಿಯಿಂದಲೇ ಬ್ಯಾಡಗಿ ಎನ್ನುವ ಹೆಸರು ಜನಪ್ರಿಯವಾಗಿದೆ. ಹಾವೇರಿ ಜಿಲ್ಲೆಯ ಈ ಊರಿನಲ್ಲಿ ಬೆಳೆಯುವ ಖಾರದ ಮೆಣಸಿನ ಕಾಯಿಗೆ ಎಲ್ಲಿಲ್ಲದ ಬೇಡಿಕೆ.
(6 / 11)
ಉಡುಪಿ//ಕೃಷ್ಣ ನಗರಿ. ಅಷ್ಟ ಮಠಗಳ ತವರು. ದೇಗುಲ ಪ್ರವಾಸೋದ್ಯಮದ ಮೂಲಕ ಧಾರ್ಮಿಕ ಜಾಗೃತಿಗೆ ಒತ್ತು ಕೊಟ್ಟ ಊರು. ಚಿತ್ರ: ಸೂರಜ್ ಜೋಗಿ
(7 / 11)
ರಾಮನಗರ// ರೇಷ್ಮೆಯಿಂದಲೇ ಪ್ರಖ್ಯಾತವಾಗಿದೆ ರಾಮನಗರ. ದೇಶದ ಅತಿ ದೊಡ್ಡ ರೇಷ್ಮೆ ಮಾರುಕಟ್ಟೆ ಇಲ್ಲಿದೆ. ಶೋಲೆ ಬೆಟ್ಟವೂ ಉಂಟು.
(8 / 11)
ಮೈಸೂರು//ಅರಮನೆಗಳ ನಗರಿ. ಕರ್ನಾಟಕದಲ್ಲಿಯೇ ಅತಿ ಹೆಚ್ಚು ಅರಮನೆಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿದೆ. ನಾಡದೇವತೆ ಚಾಮುಂಡೇಶ್ವರಿ ತಾಣ
(9 / 11)
ತುಮಕೂರು//ದಾಸೋಹಕ್ಕೆ ಹೆಸರುವಾಸಿಯಾದ ಸಿದ್ದಗಂಗಾ ಮಠ ಇರುವ ಊರು ತುಮಕೂರು. ಇಲ್ಲಿ ಲಕ್ಷಾಂತರ ಮಂದಿ ಅನ್ನದೊಂದಿಗೆ ಅಕ್ಷರ ದಾಸೋಹವನ್ನೂ ಪಡೆದಿದ್ದಾರೆ.
(10 / 11)
ಇಳಕಲ್//ವಿಭಿನ್ನ ಇಳಕಲ್ ಸೀರೆಗಳ ಮೂಲಕ ಪ್ರಖ್ಯಾತ ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ನಗರ. ಇಳಕಲ್ ಸೀರೆಯ ದೊಡ್ಡ ವಹಿವಾಟೇ ಇಲ್ಲಿ ನಡೆಯುತ್ತದೆ.
ಇತರ ಗ್ಯಾಲರಿಗಳು