ನವರಾತ್ರಿ ಉತ್ಸವ, ದುರ್ಗಾ ಪೂಜೆಗೆ ಸಜ್ಜಾಗುತ್ತಿದೆ ಮುಂಬಯಿ, ದುರ್ಗಾ ಪಂಡಾಲ್‌ಗೆ ದೇವಿಯರ ಮೆರವಣಿಗೆ- ಚಿತ್ರನೋಟ
ಮುಂಬಯಿಯಲ್ಲಿ ಗಣೇಶೋತ್ಸವದ ಸಂಭ್ರಮ ಕಡಿಮೆಯಾಗಿ ಅದರ ನೆನಪುಗಳು ಮರೆಯಾಗುತ್ತಿರುವಂತೆಯೇ ಈಗ ನವರಾತ್ರಿ ಉತ್ಸವದ ಸಂಭ್ರಮ ಕಾಣಿಸಿಕೊಂಡಿದೆ. ದುರ್ಗಾ ಪಂಡಾಲ್‌ಗೆ ದುರ್ಗಾದೇವಿಯ ಮೆರವಣಿಗೆ ಗಮನಸೆಳದಿದೆ.
(1 / 7)
ಮುಂಬಯಿಯಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ದುರ್ಗಾ ದೇವಿಯ ಪ್ರತಿಮೆಯನ್ನು ಮೆರವಣಿಗೆ ಮೂಲಕ ಪಂಡಾಲ್‌ಗೆ ಕರೆದೊಯ್ಯುತ್ತಿದ್ದ ದೃಶ್ಯ.(Photo by Bhushan Koyande/HT Photo)
(2 / 7)
ಮುಂಬಯಿಯ ಧಾರಾವಿಯಲ್ಲಿ ಅಷ್ಟ ಭುಜದ ದೇವಿಯ ವಿಗ್ರಹವನ್ನು ಮೆರವಣಿಗೆ ಮೂಲಕ ದುರ್ಗಾ ಪಂಡಾಲ್‌ಗೆ ಕೊಂಡೊಯ್ದ ಸಂದರ್ಭ.(Photo by Bhushan Koyande)
(3 / 7)
ಮುಂಬಯಿಯಲ್ಲಿ ದುರ್ಗಾ ಪಂಡಾಲ್‌ನಲ್ಲಿ ದುರ್ಗಾ ದೇವಿಯ ಬೇರೆ ಬೇರೆ ರೂಪಗಳ ವಿಗ್ರಹಗಳನ್ನು ಕೂರಿಸಲಾಗುತ್ತಿದ್ದು, ಚತುರ್ಭುಜ ದೇವಿಯ ವಿಗ್ರಹವನ್ನು ಮೆರವಣಿಗೆ ಮೂಲಕ ಕೊಂಡೊಯ್ಯುತ್ತಿದ್ದ ದೃಶ್ಯ.(Photo by Bhushan Koyande/HT Photo)
(4 / 7)
ಮುಂಬಯಿಯಲ್ಲಿ ದುರ್ಗಾ ಪಂಡಾಲ್‌ಗೆ ದುರ್ಗಾ ದೇವಿಯ ಮಹಿಷ ಮರ್ದಿನಿ ಅವತಾರದ ಮೂರ್ತಿಯನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುವಾಗ ಬಣ್ಣದ ಪುಡಿ ಎರಚಿ ಸಂಭ್ರಮಿಸಿದ ಪರಿ.(Photo by Bhushan Koyande/HT Photo)
(5 / 7)
ಮುಂಬಯಿಯಲ್ಲಿ ಮನುಷ್ಯ ಶರೀರ, ಸಿಂಹದ ತಲೆ ಗರುಡನ ರೆಕ್ಕೆ ಇದ್ದ ವಾಹನದ ಮೇಲೆ ದಶಭುಜದ ದೇವಿಯ ಮೂರ್ತಿಯನ್ನು ಭಕ್ತರು ಮೆರವಣಿಗೆ ಮೂಲಕ ದುರ್ಗಾ ಪಂಡಾಲ್‌ಗೆ ಕೊಂಡೊಯ್ದ ಸಂದರ್ಭ.(Photo by Bhushan Koyande/HT Photo)
(6 / 7)
ಚತುರ್ಭುಜದ ದೇವಿ ನವಿಲಿನ ಮೇಲೆ ಕುಳಿತ ಮೂರ್ತಿ ಕೂಡ ಮೆರವಣಿಗೆಯ ನಡುವೆ ಗಮನಸೆಳೆಯಿತು.(Photo by Bhushan Koyande/HT Photo)
ಇತರ ಗ್ಯಾಲರಿಗಳು