ಜಿಯೋ ಸಿನಿಮಾ ಅಣಕು ಹರಾಜಿನಲ್ಲಿ ರಿಷಭ್ ಪಂತ್ ದಾಖಲೆಯ 33 ಕೋಟಿ ರೂಪಾಯಿಗೆ ಸೇಲ್; ಯಾರು ಎಷ್ಟಕ್ಕೆ ಬಿಕರಿಯಾದ್ರು?
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಜಿಯೋ ಸಿನಿಮಾ ಅಣಕು ಹರಾಜಿನಲ್ಲಿ ರಿಷಭ್ ಪಂತ್ ದಾಖಲೆಯ 33 ಕೋಟಿ ರೂಪಾಯಿಗೆ ಸೇಲ್; ಯಾರು ಎಷ್ಟಕ್ಕೆ ಬಿಕರಿಯಾದ್ರು?

ಜಿಯೋ ಸಿನಿಮಾ ಅಣಕು ಹರಾಜಿನಲ್ಲಿ ರಿಷಭ್ ಪಂತ್ ದಾಖಲೆಯ 33 ಕೋಟಿ ರೂಪಾಯಿಗೆ ಸೇಲ್; ಯಾರು ಎಷ್ಟಕ್ಕೆ ಬಿಕರಿಯಾದ್ರು?

  • IPL Mock Auction 2025: ಐಪಿಎಲ್ 2025ರ ಮೆಗಾ ಹರಾಜಿಗೂ ಮುನ್ನ ಜಿಯೋ ಸಿನಿಮಾ ನಡೆಸಿದ ಅಣಕು ಹರಾಜಿನಲ್ಲಿ ಸ್ಟಾರ್​​ ಆಟಗಾರರು ದೊಡ್ಡ ಮೊತ್ತಕ್ಕೆ ವಿವಿಧ ತಂಡಗಳ ಪಾಲಾದರು. ಯಾರಿಗೆಷ್ಟು ಸಿಕ್ಕಿದೆ ನೋಡಿ.

ಐಪಿಎಲ್ 2025ರ ಮೆಗಾ ಹರಾಜು ನವೆಂಬರ್ 24 ಮತ್ತು 25 ರಂದು ಅಂದರೆ ಭಾನುವಾರ ಮತ್ತು ಸೋಮವಾರ ನಡೆಯಲಿದೆ. ಐಪಿಎಲ್ ಹರಾಜು ಸೌದಿ ಅರೇಬಿಯಾದಲ್ಲಿ ನಡೆಯಲಿದೆ. ಅದಕ್ಕೂ ಮೊದಲು ಅಧಿಕೃತ ಪ್ರಸಾರಕರು ಅಣಕು ಹರಾಜನ್ನು ಆಯೋಜಿಸಿದ್ದರು. ಜಿಯೋ ಸಿನೆಮಾದ ಅಣಕು ಹರಾಜಿನಲ್ಲಿ ಆಕಾಶ್ ಚೋಪ್ರಾ ಡೆಲ್ಲಿ ಕ್ಯಾಪಿಟಲ್ಸ್ ಪ್ರತಿನಿಧಿಸಿದ್ದರು. ಸಿಎಸ್​ಕೆ ತಂಡವನ್ನು ಸುರೇಶ್ ರೈನಾ, ದೀಪ್ ದಾಸ್ ಗುಪ್ತಾ ಲಕ್ನೋವನ್ನು ಪ್ರತಿನಿಧಿಸಿದ್ದರು. ಮೈಕ್ ಹೆಸ್ಸನ್ ಆರ್​ಸಿಬಿ ಟೇಬಲ್​ನಲ್ಲಿದ್ದರು. ಇಯಾನ್ ಮಾರ್ಗನ್ ಪಂಜಾಬ್, ಸಂಜಯ್ ಬಂಗಾರ್ ಕೋಲ್ಕತಾ ತಂಡವನ್ನು ಪ್ರತಿನಿಧಿಸಿದ್ದರು.
icon

(1 / 9)

ಜಿಯೋ ಸಿನೆಮಾದ ಅಣಕು ಹರಾಜಿನಲ್ಲಿ ರಿಷಭ್ ಪಂತ್ ಭಾರಿ ಮೊತ್ತಕ್ಕೆ ಖರೀದಿಯಾದರು. ಮೆಗಾ ಹರಾಜಿನಲ್ಲೂ ಪಂತ್ ಬೆಲೆ ಗಗನಕ್ಕೇರಲಿದೆ ಎಂಬುದು ಎಲ್ಲರ ಅಂದಾಜು. ಅದರಂತೆ ಅಣುಕು ಹರಾಜಿನಲ್ಲಿ ರಿಷಭ್ 33 ಕೋಟಿ ರೂಪಾಯಿಗೆ ಪಂಜಾಬ್ ಕಿಂಗ್ಸ್​ ಸೇಲಾದರು.
icon

(2 / 9)

ಕೆಕೆಆರ್ ತಂಡವು ಶ್ರೇಯಸ್ ಅಯ್ಯರ್ ಅವರನ್ನು ಮತ್ತೆ ಖರೀದಿಸಬಹುದು ಎಂದು ಅಂದಾಜಿದೆ. ಆದರೆ ಇದಕ್ಕಾಗಿ, ದೊಡ್ಡ ಮೊತ್ತ ಖರ್ಚು ಮಾಡಬೇಕಾಗುತ್ತದೆ. ಅಣಕು ಹರಾಜಿನಲ್ಲಿ ಶ್ರೇಯಸ್​ಗೆ 21 ಕೋಟಿ ರೂಪಾಯಿಗೆ ಬಿಕರಿಯಾಗಿದ್ದಾರೆ.
icon

(3 / 9)

ಮಿನಿ ಹರಾಜಿನಲ್ಲಿ ಮಿಚೆಲ್ ಸ್ಟಾರ್ಕ್​ರನ್ನು ಕೆಕೆಆರ್ 24.75 ಕೋಟಿ ರೂಪಾಯಿಗೆ ಖರೀದಿಸಿತ್ತು. ಐಪಿಎಲ್ ಇತಿಹಾಸದಲ್ಲಿ ಸ್ಟಾರ್ಕ್ ಈಗಲೂ ಅತ್ಯಂತ ದುಬಾರಿ ಆಟಗಾರ. ಆದರೆ, ಅಣಕು ಹರಾಜಿನಲ್ಲಿ ಸ್ಟಾರ್ಕ್ ಅವರನ್ನು ಮುಂಬೈ ಇಂಡಿಯನ್ಸ್ 18 ಕೋಟಿ ರೂ.ಗೆ ಖರೀದಿಸಿದೆ.
icon

(4 / 9)

ಅಣಕು ಹರಾಜಿನಲ್ಲಿ ಜೋಸ್ ಬಟ್ಲರ್ ಅವರನ್ನು 13.5 ಕೋಟಿ ರೂಪಾಯಿಗೆ ಪಂಜಾಬ್ ಕಿಂಗ್ಸ್ ಖರೀದಿಸಿತು. ಆದರೆ, ಉಳಿದ ತಂಡಗಳು ಆತನ ಖರೀದಿಗೆ ಹೆಚ್ಚು ಒಲವು ತೋರಲಿಲ್ಲ.
icon

(5 / 9)

ಜಿಯೋ ಸಿನೆಮಾದ ಅಣಕು ಹರಾಜಿನಲ್ಲಿ ಕ್ವಿಂಟನ್ ಡಿ ಕಾಕ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ 6.5 ಕೋಟಿ ರೂ.ಗೆ ಖರೀದಿಸಿತು. 
icon

(6 / 9)

ಯಜುವೇಂದ್ರ ಚಹಲ್ ಅವರನ್ನು ಸನ್​ರೈಸರ್ಸ್​ ಹೈದರಾಬಾದ್ 15 ಕೋಟಿ ರೂ.ಗೆ ಖರೀದಿಸಿದೆ.
icon

(7 / 9)

ಕೆಎಲ್ ರಾಹುಲ್ ಅವರನ್ನು ಆರ್​​ಸಿಬಿ 29.5 ಕೋಟಿ ರೂ.ಗೆ ಖರೀದಿಸಿದೆ.
icon

(8 / 9)

ಕೆಎಲ್ ರಾಹುಲ್ ಅವರನ್ನು ಆರ್​​ಸಿಬಿ 29.5 ಕೋಟಿ ರೂ.ಗೆ ಖರೀದಿಸಿದೆ.

ಡೆಲ್ಲಿ ಕ್ಯಾಪಿಟಲ್ಸ್ ಇಶಾನ್ ಕಿಶನ್ ಅವರನ್ನು 15.5 ಕೋಟಿ ರೂ.ಗೆ ಖರೀದಿಸಿದೆ.  
icon

(9 / 9)

ಇತರ ಗ್ಯಾಲರಿಗಳು