ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Bald Celebrities: ಬೊಕ್ಕತಲೆಗೆ ಹೇರ್‌ ಫಿಕ್ಸಿಂಗ್‌ ಮಾಡಿಕೊಂಡ ಕನ್ನಡ ನಟರು; ದರ್ಶನ್‌, ರವಿಚಂದ್ರನ್‌ ಸೇರಿದಂತೆ 12 ಸೆಲೆಬ್ರಿಟಿಗಳ ಪಟ್ಟಿ

Bald Celebrities: ಬೊಕ್ಕತಲೆಗೆ ಹೇರ್‌ ಫಿಕ್ಸಿಂಗ್‌ ಮಾಡಿಕೊಂಡ ಕನ್ನಡ ನಟರು; ದರ್ಶನ್‌, ರವಿಚಂದ್ರನ್‌ ಸೇರಿದಂತೆ 12 ಸೆಲೆಬ್ರಿಟಿಗಳ ಪಟ್ಟಿ

  • Top 12 Sandalwood Bald Celebrities: ಕನ್ನಡದ ಹಲವು ಪ್ರತಿಭಾನ್ವಿತ ನಟರು ಹೊರನೋಟಕ್ಕೆ ಅಂದ ಕಾಣುವ ಸಲುವಾಗಿ ಬೊಕ್ಕತಲೆಗೆ ಹೇರ್‌ಫಿಕ್ಸಿಂಗ್‌, ವಿಗ್‌ ಅಥವಾ ಕೂದಲ ಕಸಿ ಮೊರೆಹೋಗಿದ್ದಾರೆ. ಕನ್ನಡ ನಟ ದರ್ಶನ್‌, ರಮೇಶ್‌ ಅರವಿಂದ್‌, ಶರಣ್‌, ರವಿಚಂದ್ರನ್‌ ಮಾತ್ರವಲ್ಲದೆ ಹಲವು ಕಲಾವಿದರು ಬೊಕ್ಕತಲೆಗೆ ಈ ರೀತಿಯ ಪರಿಹಾರ ಕಂಡುಕೊಂಡಿದ್ದಾರೆ. 

ಬೊಕ್ಕತಲೆ ಬಹುತೇಕರ ಸಮಸ್ಯೆ. ಜನಸಾಮಾನ್ಯರಿಂದ ಸೆಲೆಬ್ರಿಟಿಗಳ ವರೆಗೆ ಬೋಳು ತಲೆ ತೊಂದರೆ ಬಿಟ್ಟಿಲ್ಲ. ಹಾಲಿವುಡ್‌, ಬಾಲಿವುಡ್‌, ಟಾಲಿವುಡ್‌, ಸ್ಯಾಂಡಲ್‌ವುಡ್‌, ಕಾಲಿವುಡ್‌ನ ಅನೇಕ ಸುರಸುಂದರಾಂಗ ನಟರ ತಲೆಯ ಹಿಂದೆ ವಿಗ್‌, ಹೇರ್‌ ಫಿಕ್ಸಿಂಗ್‌, ಕೂದಲ ಕಸಿಯ ರಹಸ್ಯ ಇರಬಹುದು. ವಿವಿಧ ವರದಿಗಳು, ವಿವಿಧ ಹೇರ್‌ ಟ್ರಾನ್ಸ್‌ಪ್ಲಾಂಟ್‌ ಸಂಸ್ಥೆಗಳ ವೆಬ್‌ಸೈಟ್‌ಗಳಲ್ಲಿರುವ ಮಾಹಿತಿ ಆಧರಿಸಿ ಕನ್ನಡದ ಯಾವೆಲ್ಲ ನಟರು ವಿಗ್‌, ಕೂದಲ ಕಸಿ ಅಥವಾ ಹೇರ್‌ ಫಿಕ್ಸಿಂಗ್‌ ಮಾಡಿಸಿಕೊಂಡಿದ್ದಾರೆ ಎಂಬ ವಿವರ ಇಲ್ಲಿ ನೀಡಲಾಗಿದೆ. 
icon

(1 / 11)

ನಟ ದರ್ಶನ್‌: ಸದ್ಯ ಪ್ರಕರಣವೊಂದರಲ್ಲಿ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಕಾಟೇರ ನಟ ದರ್ಶನ್‌ ಅವರು ತಲೆಯ ಮುಂಭಾಗದ ಕೂದಲನ್ನು ಕಳೆದುಕೊಂಡಿದ್ದು, ಹೇರ್‌ ಫಿಕ್ಸಿಂಗ್‌ ಮೊರೆ ಹೋಗಿದ್ದಾರೆ. ಜೈಲಿನಲ್ಲಿ ದರ್ಶನ್‌ಗೆ ವಿಗ್‌/ಹೇರ್‌ ಫಿಕ್ಸಿಂಗ್‌ ಸಿಸ್ಟಮ್‌ ಅನ್ನು ನಿರ್ವಹಿಸುವುದೇ ದೊಡ್ಡ ಸವಾಲಾಗಲಿದೆ. 
icon

(2 / 11)

ರಮೇಶ್‌ ಅರವಿಂದ್‌: ಕನ್ನಡ ನಟ ರಮೇಶ್‌ ಅರವಿಂದ್‌ಗೆ ಈಗ 59 ವರ್ಷ ವಯಸ್ಸು ಎಂದರೆ ನಂಬಲು ಕಷ್ಟವಾಗಬಹುದು. ಅವರ ಯೌವನದ ಗುಟ್ಟು ಹೇರ್‌ ವಿಗ್‌ ಎಂದರೆ ತಪ್ಪಾಗದು. ಹೊರನೋಟದ ಸೌಂದರ್ಯಕ್ಕೆ ಹೇರ್‌ ವಿಗ್‌ ಬಳಸಿದರೂ ಇವರು ತನ್ನ ಅಭಿನಯ ಕೌಶಲದಿಂದಲೇ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. 
icon

(3 / 11)

ರವಿಚಂದ್ರನ್‌: ಕನ್ನಡದ ಇನ್ನೊಬ್ಬ ಪ್ರತಿಭಾನ್ವಿತ ನಟ ರವಿಚಂದ್ರನ್‌ ಈಗ ಬಹುತೇಕ ಸಮಾರಂಭಗಳಿಗೆ ಟೋಪಿ ಧರಿಸಿಕೊಂಡು ಭಾಗವಹಿಸುತ್ತಾರೆ. ಇವರು ಕೂಡ ಹೇರ್‌ ಫಿಕ್ಸಿಂಗ್‌ ಮಾಡಿಸಿಕೊಂಡಿದ್ದಾರೆ.  
icon

(4 / 11)

ಶರಣ್‌: ನಟಿ ಶ್ರುತಿಯ ಸಹೋದರ ಶರಣ್‌ ಕೂಡ ಹೇರ್‌ ಫಿಕ್ಸಿಂಗ್‌ ಮಾಡಿಕೊಂಡಿದ್ದಾರೆ. ರಾಂಬೋ 2, ಗುರು ಶಿಷ್ಯರು, ಗಾನಾ ಬಜಾನ, ಕೆಂಪೇ ಗೌಡ, ಪೊರ್ಕಿ, ಮಾಣಿಕ್ಯ ಸೇರಿದಂತೆ ಹತ್ತು ಹಲವು ಸಿನಿಮಾಗಳ ಮೂಲಕ ಶರಣ್‌ ಜನಪ್ರಿಯತೆ ಪಡೆದಿದ್ದಾರೆ. 
icon

(5 / 11)

ಸುನಿಲ್‌ ರಾವ್‌: ಎಕ್ಸ್‌ಕ್ಯೂಸ್‌ ಮೀ, ಚಪ್ಪಾಳೆ, ಬೆಳ್ಳಿ ಬೆಟ್ಟ, ವಯಸು ಪಿಲಿಚಿಂಡಿ, ತುರ್ತು ನಿರ್ಗಮನ, ಬಾ ಬಾರೋ ರಸಿಕ, ಸಖಸಖಿ, ಮಸಾಲ, ಪ್ರೀತಿಪ್ರೇಮ ಪ್ರಣಯ, ಏಳು ಸುತ್ತಿನ ಕೋಟೆ, ಪ್ರೇಮಿಸಂ ಚಿತ್ರಗಳ ಮೂಲಕ ಜನಪ್ರಿಯತೆ ಪಡೆದಿರುವ ನಟ ಸುನಿಲ್‌ ರಾವ್‌ ಕೂಡ ಹೇರ್‌ ಫಿಕ್ಸಿಂಗ್‌ ಮಾಡಿಕೊಂಡಿದ್ದಾರೆ.
icon

(6 / 11)

ಅಭಿಜಿತ್‌: ಸಿನಿಮಾ ಮತ್ತು ಸೀರಿಯಲ್‌ ನಟ ಅಭಿಜಿತ್‌ ಕೂಡ ತನ್ನ ಬೊಕ್ಕತಲೆಗೆ ವಿಗ್‌/ಹೇರ್‌ ಫಿಕ್ಸಿಂಗ್‌ ಮೂಲಕ ಪರಿಹಾರ ಕಂಡುಕೊಂಡಿದ್ದಾರೆ. 
icon

(7 / 11)

ಶ್ರೀ ಮುರಳಿ: ನಟ ಶ್ರೀ ಮುರಳಿ ಕೂಡ ತನ್ನ ಮುಂಭಾಗದ ತಲೆ ಕೂದಲನ್ನು ಕಳೆದುಕೊಂಡಿದ್ದು, ಕೂದಲ ಕಸಿ ಮಾಡಿಕೊಂಡಿದ್ದಾರೆ ಎಂದು ಹೇರ್‌ ಟ್ರಾನ್ಸ್‌ಪ್ಲಾಂಟ್‌ ಸಂಸ್ಥೆಯೊಂದರ ವೆಬ್‌ಸೈಟ್‌ ಮಾಹಿತಿ ನೀಡಿದೆ. 
icon

(8 / 11)

ಪ್ರೇಮ್‌: ಕನ್ನಡ ನಟ ಪ್ರೇಮ್‌ ಕೂಡ ಹೇರ್‌ ಟ್ರಾನ್ಸ್‌ಪ್ಲಾಂಟ್‌ ಮೂಲಕ ಬೊಕ್ಕತಲೆಗೆ ಪರಿಹಾರ ಕಂಡುಕೊಂಡಿದ್ದಾರೆ. ಇವರು ಅಪ್ಪ ಐ ಲವ್‌ ಯು, ಪ್ರೇಮಂ ಪೂಜ್ಯಂ, ಯಜಮಾನ, ಲೈಪ್‌ ಜತೆ ಒಂದು ಸೆಲ್ಫಿ, ದಳಪತಿ, ಚೌಕ, ಮಸ್ತ್‌ ಮೊಹಬತ್‌, ರಿಂಗ್‌ ರೋಡ್‌, ಮಳೆ, ಫೇರ್‌ ಆಂಡ್‌ ಲವ್ಲಿ, ಅತಿ ಅಪರೂಪ, ಅಧ್ಯಕ್ಷ, ಶತ್ರು, ಚಂದ್ರ, ಚಾರ್‌ಮಿನಾರ್‌ ಮುಂತಾದ ಹತ್ತು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.  
icon

(9 / 11)

ಇನ್ನುಳಿದಂತೆ ಸತೀಶ್‌ ನೀನಾಸಂ, ಶರತ್ ಲೋಹಿತಾಶ್ವ, ಪ್ರಶಾಂತ್ ನೀಲ್, ಕೃಷ್ಣ ಚೈತನ್ಯ, ಸೀರಿಯಲ್‌ ನಟ ರಕ್ಷಿತ್‌ ಗೌಡ, ಮಯೂರ ರಾಘವೇಂದ್ರ, ಪುಷ್ಕರ ಮಲ್ಲಿಕಾರ್ಜುನಯ್ಯ ಮುಂತಾದವರು ಕೂದಲ ಕಸಿ, ಹೇರ್‌ ಫಿಕ್ಸಿಂಗ್‌, ವಿಗ್‌ ಮುಂತಾದವುಗಳ ಮೂಲಕ ಬೊಕ್ಕತಲೆಗೆ ಪರಿಹಾರ ಕಂಡುಕೊಂಡಿದ್ದಾರೆ.
icon

(10 / 11)

ಡಿಸ್‌ಕ್ಲೈಮರ್‌: ವಿವಿಧ ಹೇರ್‌ ಟ್ರಾನ್ಸ್‌ಪ್ಲಾಂಟ್‌ ಸಂಸ್ಥೆಗಳ ವೆಬ್‌ಸೈಟ್‌ಗಳು, ವಿವಿಧ ವರದಿಗಳನ್ನು ಆಧರಿಸಿದ ಬರಹ ಇದಾಗಿದೆ. 
icon

(11 / 11)

ಇತರ ಗ್ಯಾಲರಿಗಳು