ಅಫ್ಘನ್ ವಿರುದ್ಧ ಸೌತ್ ಆಫ್ರಿಕಾಗೆ ಭರ್ಜರಿ ಗೆಲುವು; ಅಂಕಪಟ್ಟಿಯಲ್ಲಾದ ಬದಲಾವಣೆಯೇನು?
- World Cup 2023 Points Table: ಏಕದಿನ ವಿಶ್ವಕಪ್ ಟೂರ್ನಿಯಿಂದ ಮತ್ತೊಂದು ಹೊರ ಬಿದ್ದಿದೆ. ಸೌತ್ ಆಫ್ರಿಕಾ ವಿರುದ್ಧ ಸೋತ ಅಫ್ಘಾನಿಸ್ತಾನ ಟೂರ್ನಿಯಿಂದ ಹೊರಬಿದ್ದಿದೆ. ಅಂಕಪಟ್ಟಿಯಲ್ಲಿ ಆಗಿರುವ ಬದಲಾವಣೆ ಏನು?
- World Cup 2023 Points Table: ಏಕದಿನ ವಿಶ್ವಕಪ್ ಟೂರ್ನಿಯಿಂದ ಮತ್ತೊಂದು ಹೊರ ಬಿದ್ದಿದೆ. ಸೌತ್ ಆಫ್ರಿಕಾ ವಿರುದ್ಧ ಸೋತ ಅಫ್ಘಾನಿಸ್ತಾನ ಟೂರ್ನಿಯಿಂದ ಹೊರಬಿದ್ದಿದೆ. ಅಂಕಪಟ್ಟಿಯಲ್ಲಿ ಆಗಿರುವ ಬದಲಾವಣೆ ಏನು?
(1 / 6)
ವಿಶ್ವಕಪ್ ಲೀಗ್‌ನ ತಮ್ಮ ಕೊನೆಯ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಕಾಯ್ದುಕೊಂಡಿದೆ. ಆದರೆ, ಆಸೀಸ್ ತನ್ನ ಮುಂದಿನ ಪಂದ್ಯದಲ್ಲಿ ಭಾರಿ ಅಂತರದಿಂದ ಗೆದ್ದರೆ 2ನೇ ಸ್ಥಾನಕ್ಕೇರುವ ಸಾಧ್ಯತೆ ಇದೆ. ಆಗ ಟೆಂಬಾ ಬವುಮಾ ಪಡೆ ಮೂರನೇ ಸ್ಥಾನಕ್ಕಿಳಿದರೂ ಅಚ್ಚರಿ ಇಲ್ಲ. 9 ಪಂದ್ಯಗಳಲ್ಲಿ 7 ಗೆಲುವಿನೊಂದಿಗೆ 14 ಅಂಕ ಕಲೆ ಹಾಕಿದೆ. ದಕ್ಷಿಣ ಆಫ್ರಿಕಾ ನೆಟ್ ರನ್-ರೇಟ್ +1.261. ಅಂಕಪಟ್ಟಿಯಲ್ಲಿ 2 ಅಥವಾ 3ನೇ ಸ್ಥಾನದಲ್ಲಿರುವ ಈ ತಂಡಗಳೇ ಸೆಮಿಫೈನಲ್‌ನಲ್ಲಿ ಸೆಣಸಾಟ ನಡೆಸಲಿವೆ.
(2 / 6)
ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿನೊಂದಿಗೆ ಅಫ್ಘಾನಿಸ್ತಾನ ತನ್ನ ವಿಶ್ವಕಪ್ ಅಭಿಯಾನ ಮುಗಿಸಿದೆ. ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲೇ ಉಳಿದಿರುವ ಅಫ್ಘನ್, 9 ಪಂದ್ಯಗಳಲ್ಲಿ 4ರಲ್ಲಿ ಗೆದ್ದು, 5ರಲ್ಲಿ ಸೋತಿದೆ. 8 ಅಂಕ ಸಂಪಾದಿಸಿರುವ ಅಫ್ಘನ್, ಪಾಕಿಸ್ತಾನ ಮುಂದಿನ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರುವ ಸಾಧ್ಯತೆ ಇದೆ.
(3 / 6)
ಭಾರತ 8 ಪಂದ್ಯಗಳಿಂದ 16 ಅಂಕ ಕಲೆಹಾಕಿದೆ. ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಕೊನೆಯ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡವನ್ನು ಸೋಲಿಸಿದರೆ, ಭಾರತ ಅಜೇಯವಾಗಿ ಸೆಮಿಫೈನಲ್ ಪ್ರವೇಶಿಸಲಿದೆ. ನೆಟ್ ರನ್-ರೇಟ್ +2.456.
(4 / 6)
ಆಸ್ಟ್ರೇಲಿಯಾ 8 ಪಂದ್ಯಗಳಿಂದ 12 ಅಂಕ ಕಲೆಹಾಕಿದೆ. ಅಂಕಪಟ್ಟಿಯಲ್ಲಿ ಆಸೀಸ್ 3ನೇ ಸ್ಥಾನದಲ್ಲಿದೆ. ಸತತ 6 ಪಂದ್ಯಗಳಿಂದ ಗೆದ್ದಿರುವ ಆಸೀಸ್, ಲೀಗ್ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರುವ ಅವಕಾಶ ಇದೆ. ಆದಾಗ್ಯೂ, ಆಸ್ಟ್ರೇಲಿಯಾ ಲೀಗ್ ಅಭಿಯಾನವನ್ನು ಎರಡನೇ ಅಥವಾ ಮೂರನೇ ಸ್ಥಾನದಲ್ಲಿ ಪೂರ್ಣಗೊಳಿಸಿದರೂ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ನೆಟ್ ರನ್-ರೇಟ್ +0.861.
(5 / 6)
ನ್ಯೂಜಿಲೆಂಡ್ 9 ಪಂದ್ಯಗಳಿಂದ 10 ಅಂಕಗಳೊಂದಿಗೆ ಲೀಗ್ ಅಭಿಯಾನ ಮುಕ್ತಾಯಗೊಳಿಸಿದೆ. ಬಹುತೇಕ ಸೆಮಿ-ಫೈನಲ್ ಟಿಕೆಟ್ ಖಚಿತವಾಗಿದೆ. ಮೊದಲ ಸೆಮಿಫೈನಲ್‌ನಲ್ಲಿ ಭಾರತ ತಂಡವನ್ನು ಎದುರಿಸುವುದು ಶೇಕಡಾ 99 ರಷ್ಟು ಖಚಿತ. ನೆಟ್ ರನ್-ರೇಟ್ +0.743.
ಇತರ ಗ್ಯಾಲರಿಗಳು