ಟಿ20 ವಿಶ್ವಕಪ್ ಗುಂಪು ಹಂತದಲ್ಲಿ ಹೆಚ್ಚು ರನ್, ಗರಿಷ್ಠ ವಿಕೆಟ್ ಪಡೆದವರು ಯಾರು; ಎಲ್ಲಾ ಅಂಕಿ-ಅಂಶ ಇಲ್ಲಿದೆ
- T20 World Cup 2024: ಟಿ20 ವಿಶ್ವಕಪ್ 2024 ಲೀಗ್ ಹಂತ ಮುಕ್ತಾಯಗೊಂಡಿದೆ. ಗುಂಪು ಹಂತದ ಪಂದ್ಯಗಳಲ್ಲಿ ಅತ್ಯಧಿಕ ರನ್, ವಿಕೆಟ್, ಕ್ಯಾಚ್, ಡಕೌಟ್, ಅರ್ಧಶತಕಗಳು ಯಾರ ಹೆಸರಿನಲ್ಲಿದೆ ಎಂಬುದನ್ನು ಈ ಮುಂದೆ ನೋಡೋಣ.
- T20 World Cup 2024: ಟಿ20 ವಿಶ್ವಕಪ್ 2024 ಲೀಗ್ ಹಂತ ಮುಕ್ತಾಯಗೊಂಡಿದೆ. ಗುಂಪು ಹಂತದ ಪಂದ್ಯಗಳಲ್ಲಿ ಅತ್ಯಧಿಕ ರನ್, ವಿಕೆಟ್, ಕ್ಯಾಚ್, ಡಕೌಟ್, ಅರ್ಧಶತಕಗಳು ಯಾರ ಹೆಸರಿನಲ್ಲಿದೆ ಎಂಬುದನ್ನು ಈ ಮುಂದೆ ನೋಡೋಣ.
(1 / 9)
ಅತಿ ಹೆಚ್ಚು ರನ್: ರಹಮಾನುಲ್ಲಾ ಗುರ್ಬಾಜ್ ಪ್ರಸಕ್ತ ಟಿ20 ವಿಶ್ವಕಪ್ನ ಲೀಗ್ ಪಂದ್ಯಗಳಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರ ಎನಿಸಿದ್ದಾರೆ. ಗುರ್ಬಾಜ್ 167 ರನ್ ಗಳಿಸಿದರೆ, ವೆಸ್ಟ್ ಇಂಡೀಸ್ನ ನಿಕೋಲಸ್ ಪೂರನ್ ಎರಡನೇ ಸ್ಥಾನದಲ್ಲಿದ್ದು, 4 ಪಂದ್ಯಗಳಲ್ಲಿ 164 ರನ್ ಗಳಿಸಿದ್ದಾರೆ. ಆಸ್ಟ್ರೇಲಿಯಾದ ಮಾರ್ಕಸ್ ಸ್ಟೋಯ್ನಿಸ್ ಈ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದು, 3 ಇನ್ನಿಂಗ್ಸ್ಗಳಲ್ಲಿ 156 ರನ್ ಗಳಿಸಿದ್ದಾರೆ.
(2 / 9)
ಅತ್ಯಧಿಕ ವೈಯಕ್ತಿಕ ಇನ್ನಿಂಗ್ಸ್: ಪ್ರಸಕ್ತ ವಿಶ್ವಕಪ್ ಗ್ರೂಪ್ ಪಂದ್ಯಗಳಲ್ಲಿ ನಿಕೋಲಸ್ ಪೂರನ್ ಅವರು ವೈಯಕ್ತಿಕ ಗರಿಷ್ಠ ಸ್ಕೋರರ್ ಆಗಿದ್ದಾರೆ. ಅಫ್ಘಾನಿಸ್ತಾನ ವಿರುದ್ಧ ಕೆರಿಬಿಯನ್ ತಾರೆ 98 ರನ್ ಗಳಿಸಿದರು. ಅಮೆರಿಕದ ಆ್ಯರೋನ್ ಜೋನ್ಸ್ ಕೆನಡಾ ವಿರುದ್ಧ ಅಜೇಯ 94 ರನ್ ಗಳಿಸಿ ಎರಡನೇ ಗರಿಷ್ಠ ಸ್ಕೋರರ್ ಆಗಿದ್ದಾರೆ. ರಹಮಾನುಲ್ಲಾ ಗುರ್ಬಾಜ್ ನ್ಯೂಜಿಲೆಂಡ್ ವಿರುದ್ಧ 80 ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.
(3 / 9)
ಟಿ20 ವಿಶ್ವಕಪ್ ಗ್ರೂಪ್ ಪಂದ್ಯಗಳಲ್ಲಿ ಅತ್ಯಧಿಕ ಅರ್ಧಶತಕ ಸಿಡಿಸಿದವರ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಮಾರ್ಕಸ್ ಸ್ಟೊಯಿನಿಸ್, ಸ್ಕಾಟ್ಲೆಂಡ್ನ ಬ್ರಾಂಡನ್ ಮೆಕ್‌ಮುಲ್ಲೆನ್ ಮತ್ತು ಅಫ್ಘಾನಿಸ್ತಾನದ ರಹಮಾನುಲ್ಲಾ ಗುರ್ಬಾಜ್ ಮೊದಲ ಮೂರು ಸ್ಥಾನ ಪಡೆದಿದ್ದಾರೆ. ಮೂವರು ಸಹ ತಲಾ ಎರಡು ಅರ್ಧಶತಕ ಸಿಡಿಸಿದ್ದಾರೆ.
(4 / 9)
ಉಗಾಂಡಾದ ರೋಜರ್ ಮುಕಾಸಾ ಟಿ20 ವಿಶ್ವಕಪ್ ಲೀಗ್ನಲ್ಲಿ ಅತಿ ಹೆಚ್ಚು ಡಕೌಟ್ ಆಗಿದ್ದಾರೆ. ಮುಕಾಸಾ 3 ಇನ್ನಿಂಗ್ಸ್ಗಲ್ಲಿ ಬ್ಯಾಟಿಂಗ್ ಮಾಡಿದ್ದು, 3 ಬಾರಿ ಶೂನ್ಯ ರನ್ಗಳಿಗೆ ಔಟಾಗಿದ್ದಾರೆ.
(5 / 9)
ಅಮೆರಿಕದ ಆರೋನ್ ಜೋನ್ಸ್ 3 ಇನ್ನಿಂಗ್ಸ್ಗಳಲ್ಲಿ ಜಂಟಿಯಾಗಿ ಅತಿ ಹೆಚ್ಚು ಸಿಕ್ಸರ್ಗಳನ್ನು ಬಾರಿಸಿದ್ದಾರೆ. ವೆಸ್ಟ್ ಇಂಡೀಸ್ ನಿಕೋಲಸ್ ಪೂರನ್ 4 ಇನ್ನಿಂಗ್ಸ್ಗಳಲ್ಲಿ 13 ಸಿಕ್ಸರ್, ಆರೋನ್ 3 ಇನ್ನಿಂಗ್ಸ್ಗಳಲ್ಲಿ 10 ಸಿಕ್ಸರ್ಗಳನ್ನು ಸಿಡಿಸಿದ್ದಾರೆ.
(6 / 9)
ಅಫ್ಘಾನ್ ವೇಗಿ ಫಜಲ್ಹಕ್ ಫಾರೂಕಿ ಅವರು ಲೀಗ್ ಹಂತದಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಎನಿಸಿದ್ದಾರೆ. ಫಾರೂಕಿ 4 ಪಂದ್ಯಗಳಲ್ಲಿ 12 ವಿಕೆಟ್ ಉರುಳಿಸಿದ್ದಾರೆ. ನ್ಯೂಜಿಲೆಂಡ್ನ ಟ್ರೆಂಟ್ ಬೌಲ್ಟ್, ವೆಸ್ಟ್ ಇಂಡೀಸ್ನ ಅಕಿಲ್ ಹೊಸೈನ್, ಅಲ್ಜಾರಿ ಜೋಸೆಫ್, ದಕ್ಷಿಣ ಆಫ್ರಿಕಾದ ಅನ್ರಿಚ್ ನಾರ್ಟ್ಜೆ, ಬಾಂಗ್ಲಾದೇಶದ ತಂಜಿಮ್ ಹಸನ್ ಶಕೀಬ್ ಮತ್ತು ಆಸ್ಟ್ರೇಲಿಯಾದ ಆಡಮ್ ಜಂಪಾ ತಲಾ 9 ವಿಕೆಟ್ ಪಡೆದಿದ್ದಾರೆ.
(7 / 9)
ನ್ಯೂಜಿಲೆಂಡ್ ವೇಗಿ ಟಿಮ್ ಸೌಥಿ ಮೂರು ಟಿ 20 ವಿಶ್ವಕಪ್ ಗ್ರೂಪ್ ಲೀಗ್ ಪಂದ್ಯಗಳಲ್ಲಿ 12 ಓವರ್ಗಳಲ್ಲಿ ಕೇವಲ 36 ರನ್ ಬಿಟ್ಟುಕೊಟ್ಟಿದ್ದಾರೆ. ಪ್ರತಿ ಓವರ್ಗೆ ಕೇವಲ 3 ರನ್ಗಳ ಎಕಾನಮಿಯಲ್ಲಿ ರನ್ ಬಿಟ್ಟು ಕೊಟ್ಟಿದ್ದಾರೆ. ಅತ್ಯಂತ ಕಡಿಮೆ ಎಕಾನಮಿ ಹೊಂದಿರುವ ಬೌಲರ್ ಎನಿಸಿಕೊಂಡಿದ್ದಾರೆ.
(8 / 9)
ಟಿ20 ವಿಶ್ವಕಪ್ ಲೀಗ್ನಲ್ಲಿ ಭಾರತದ ರಿಷಭ್ ಪಂತ್ ಅವರು ವಿಕೆಟ್ ಕೀಪರ್ ಆಗಿ ಅತ್ಯಧಿಕ ಬಲಿ ಪಡೆದಿದ್ದಾರೆ. ನ್ಯೂಜಿಲೆಂಡ್ನ ಡೆವೊನ್ ಕಾನ್ವೇ ಮತ್ತು ಬಾಂಗ್ಲಾದೇಶದ ಲಿಟ್ಟನ್ ದಾಸ್ ತಲಾ ವಿಕೆಟ್ ಕೀಪರ್ ಬಲಿ ಪಡೆದಿದ್ದಾರೆ.
ಇತರ ಗ್ಯಾಲರಿಗಳು