iPhone SE 4: ಮಾರ್ಚ್‌ನಲ್ಲಿ ಬರುತ್ತಂತೆ ಅಗ್ಗದ ಐಫೋನ್; ಮಧ್ಯಮ ವರ್ಗದವರು ಆಪಲ್‌ ಫೋನ್‌ ಖರೀದಿಸಲು 5 ಕಾರಣಗಳಿವು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Iphone Se 4: ಮಾರ್ಚ್‌ನಲ್ಲಿ ಬರುತ್ತಂತೆ ಅಗ್ಗದ ಐಫೋನ್; ಮಧ್ಯಮ ವರ್ಗದವರು ಆಪಲ್‌ ಫೋನ್‌ ಖರೀದಿಸಲು 5 ಕಾರಣಗಳಿವು

iPhone SE 4: ಮಾರ್ಚ್‌ನಲ್ಲಿ ಬರುತ್ತಂತೆ ಅಗ್ಗದ ಐಫೋನ್; ಮಧ್ಯಮ ವರ್ಗದವರು ಆಪಲ್‌ ಫೋನ್‌ ಖರೀದಿಸಲು 5 ಕಾರಣಗಳಿವು

  • iPhone SE 4: ಐಫೋನ್ ಎಸ್ಇ 4 ಬಿಡುಗಡೆ ದಿನಾಂಕ ಬಹುತೇಕ ಖಚಿತವಾಗಿದೆ. 2025ರ ಮಾರ್ಚ್‌ ತಿಂಗಳಲ್ಲಿ ಅಗ್ಗದ ಐಫೋನ್ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಫೋನ್‌ 2022ರಲ್ಲಿ ಬಿಡುಗಡೆಯಾದ ಆಪಲ್‌ ಕಂಪನಿಯು ಐಫೋನ್ ಎಸ್ಇ 3 ಬಿಡುಗಡೆ ಮಾಡಿತ್ತು. ಇದರ ಅಪ್ಡೇಟೆಡ್‌ ವರ್ಷನ್‌ ಐಫೋನ್ ಎಸ್ಇ 4.

ಆಪಲ್ ಗ್ಲೋಟೈಮ್ ಈವೆಂಟ್ 2024ರಲ್ಲಿ ಹೊಸ ಐಫೋನ್ 16 ಸರಣಿ ಬಿಡುಗಡೆ ಮಾಡಲಾಯ್ತು. ಅದರ ನಡುವೆ ಮಧ್ಯಮವರ್ಗದವರ ಚಿತ್ತವು ಐಫೋನ್ ಎಸ್ಇ 4ನತ್ತ ನೆಟ್ಟಿದೆ. ಈ ಫೋನ್‌ಭಾರಿ ನಿರೀಕ್ಷೆ ಮೂಡಿಸಿದ್ದು, ಐಫೋನ್ ಮಾದರಿಗಳಲ್ಲಿ ಅಗ್ಗದ ಫೋನ್‌ ಆಗಿದೆ. ಐಫೋನ್ ಎಸ್ಇ 4 ಬಿಡುಗಡೆಯಾದರೆ, ಐಫೋನ್ ಎಸ್ಇ 3 ನಂತರ ಆಪಲ್ ಕಂಪನಿಯ ಅತ್ಯಂತ ಕೈಗೆಟುಕುವ ಫೋನ್ ಆಗಿ ಹೊರಹೊಮ್ಮಲಿದೆ. ವರದಿಗಳ ಪ್ರಕಾರ, ಐಫೋನ್ ಎಸ್ಇ 4 ಎಲ್ಲಾ ಹೊಸ ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಸರಿಸುಮಾರು 45,000 ರೂಪಾಯಿ ಬೆಲೆಗೆ ಈ ಐಫೋನ್‌ ಖರೀದಿಸಬಹುದು ಎಂದು ಹೇಳಲಾಗುತ್ತಿದೆ.
icon

(1 / 6)

ಆಪಲ್ ಗ್ಲೋಟೈಮ್ ಈವೆಂಟ್ 2024ರಲ್ಲಿ ಹೊಸ ಐಫೋನ್ 16 ಸರಣಿ ಬಿಡುಗಡೆ ಮಾಡಲಾಯ್ತು. ಅದರ ನಡುವೆ ಮಧ್ಯಮವರ್ಗದವರ ಚಿತ್ತವು ಐಫೋನ್ ಎಸ್ಇ 4ನತ್ತ ನೆಟ್ಟಿದೆ. ಈ ಫೋನ್‌ಭಾರಿ ನಿರೀಕ್ಷೆ ಮೂಡಿಸಿದ್ದು, ಐಫೋನ್ ಮಾದರಿಗಳಲ್ಲಿ ಅಗ್ಗದ ಫೋನ್‌ ಆಗಿದೆ. ಐಫೋನ್ ಎಸ್ಇ 4 ಬಿಡುಗಡೆಯಾದರೆ, ಐಫೋನ್ ಎಸ್ಇ 3 ನಂತರ ಆಪಲ್ ಕಂಪನಿಯ ಅತ್ಯಂತ ಕೈಗೆಟುಕುವ ಫೋನ್ ಆಗಿ ಹೊರಹೊಮ್ಮಲಿದೆ. ವರದಿಗಳ ಪ್ರಕಾರ, ಐಫೋನ್ ಎಸ್ಇ 4 ಎಲ್ಲಾ ಹೊಸ ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಸರಿಸುಮಾರು 45,000 ರೂಪಾಯಿ ಬೆಲೆಗೆ ಈ ಐಫೋನ್‌ ಖರೀದಿಸಬಹುದು ಎಂದು ಹೇಳಲಾಗುತ್ತಿದೆ.(X.com/MajinBuOfficial)

ಈ ಫೋನ್‌ನಲ್ಲಿ ಆಪಲ್ ಇಂಟೆಲಿಜೆನ್ಸ್ ಕೆಲಸ ಮಾಡಲಿದೆ. ಕಂಪನಿಯು ಬಹಿರಂಗಪಡಿಸಿದಂತೆ, ಆಪಲ್ ಇಂಟೆಲಿಜೆನ್ಸ್ ಕಾರ್ಯನಿರ್ವಹಿಸಲು ಕನಿಷ್ಠ 8 ಜಿಬಿ RAM ಅಗತ್ಯವಿದೆ ಮತ್ತು ಐಫೋನ್ ಎಸ್ಇ 4 ಆಪಲ್ ಇಂಟೆಲಿಜೆನ್ಸ್ ಪಡೆದರೆ ಅದು 8 ಜಿಬಿ RAM ಕೂಡಾ ಪಡೆಯುತ್ತದೆ.
icon

(2 / 6)

ಈ ಫೋನ್‌ನಲ್ಲಿ ಆಪಲ್ ಇಂಟೆಲಿಜೆನ್ಸ್ ಕೆಲಸ ಮಾಡಲಿದೆ. ಕಂಪನಿಯು ಬಹಿರಂಗಪಡಿಸಿದಂತೆ, ಆಪಲ್ ಇಂಟೆಲಿಜೆನ್ಸ್ ಕಾರ್ಯನಿರ್ವಹಿಸಲು ಕನಿಷ್ಠ 8 ಜಿಬಿ RAM ಅಗತ್ಯವಿದೆ ಮತ್ತು ಐಫೋನ್ ಎಸ್ಇ 4 ಆಪಲ್ ಇಂಟೆಲಿಜೆನ್ಸ್ ಪಡೆದರೆ ಅದು 8 ಜಿಬಿ RAM ಕೂಡಾ ಪಡೆಯುತ್ತದೆ.

ಐಫೋನ್ ಎಸ್ಇ 4 ಫೇಸ್ ಐಡಿಯೊಂದಿಗೆ ಒಎಲ್ಇಡಿ ಡಿಸ್ಪ್ಲೇ ಹೊಂದಿರಲಿದೆ. ಹಳೆಯ ಹೋಮ್ ಬಟನ್ ತೆಗೆದು ಆಲ್-ಸ್ಕ್ರೀನ್ ಲುಕ್‌ ಕೊಡುತ್ತದೆ ಎಂದು ನಂಬಲಾಗಿದೆ. ಡಿಸ್ಪ್ಲೇ ಗಾತ್ರವು 4.7 ಇಂಚುಗಳಿಂದ 6.06 ಇಂಚುಗಳಿಗೆ ಹೆಚ್ಚಾಗಬಹುದು. ಐಫೋನ್ ಎಸ್ಇ 4 ನ ಹಿಂಭಾಗದ ಪ್ಯಾನಲ್ ಹೊಸ ಐಫೋನ್ 16 ನಿಂದ ಸ್ಫೂರ್ತಿ ಪಡೆದಿದೆ ಎಂದು ಹೇಳಲಾಗಿದೆ.
icon

(3 / 6)

ಐಫೋನ್ ಎಸ್ಇ 4 ಫೇಸ್ ಐಡಿಯೊಂದಿಗೆ ಒಎಲ್ಇಡಿ ಡಿಸ್ಪ್ಲೇ ಹೊಂದಿರಲಿದೆ. ಹಳೆಯ ಹೋಮ್ ಬಟನ್ ತೆಗೆದು ಆಲ್-ಸ್ಕ್ರೀನ್ ಲುಕ್‌ ಕೊಡುತ್ತದೆ ಎಂದು ನಂಬಲಾಗಿದೆ. ಡಿಸ್ಪ್ಲೇ ಗಾತ್ರವು 4.7 ಇಂಚುಗಳಿಂದ 6.06 ಇಂಚುಗಳಿಗೆ ಹೆಚ್ಚಾಗಬಹುದು. ಐಫೋನ್ ಎಸ್ಇ 4 ನ ಹಿಂಭಾಗದ ಪ್ಯಾನಲ್ ಹೊಸ ಐಫೋನ್ 16 ನಿಂದ ಸ್ಫೂರ್ತಿ ಪಡೆದಿದೆ ಎಂದು ಹೇಳಲಾಗಿದೆ.(AppleTrack)

ಐಫೋನ್ ಎಸ್ಇ 4 ಕಂಪನಿಯ ಆಂತರಿಕ 5ಜಿ ಮೋಡೆಮ್ ಹೊಂದಿರುವ ಮೊದಲ ಆಪಲ್ ಐಫೋನ್ ಆಗಿರಬಹುದು. ಆಪಲ್‌ನ ಆಂತರಿಕ 5ಜಿ ಚಿಪ್ ಕ್ರಮೇಣ ಕ್ವಾಲ್ಕಾಮ್ ಮೋಡೆಮ್‌ ಅನ್ನು ಬದಲಾಯಿಸುತ್ತದೆ. ಆಪಲ್‌ನ ಪ್ರಮುಖ ಬದಲಾವಣೆ ಮುಂದಿನ ವರ್ಷ ಪ್ರಾರಂಭವಾದರೆ, ಐಫೋನ್ ಎಸ್ಇ 4 2025ರ ಮಾರ್ಚ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
icon

(4 / 6)

ಐಫೋನ್ ಎಸ್ಇ 4 ಕಂಪನಿಯ ಆಂತರಿಕ 5ಜಿ ಮೋಡೆಮ್ ಹೊಂದಿರುವ ಮೊದಲ ಆಪಲ್ ಐಫೋನ್ ಆಗಿರಬಹುದು. ಆಪಲ್‌ನ ಆಂತರಿಕ 5ಜಿ ಚಿಪ್ ಕ್ರಮೇಣ ಕ್ವಾಲ್ಕಾಮ್ ಮೋಡೆಮ್‌ ಅನ್ನು ಬದಲಾಯಿಸುತ್ತದೆ. ಆಪಲ್‌ನ ಪ್ರಮುಖ ಬದಲಾವಣೆ ಮುಂದಿನ ವರ್ಷ ಪ್ರಾರಂಭವಾದರೆ, ಐಫೋನ್ ಎಸ್ಇ 4 2025ರ ಮಾರ್ಚ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.(Ming-Chi Kuo)

ಐಫೋನ್ ಎಸ್ಇ 4 ಯುಎಸ್‌ಬಿ-ಸಿ ಪೋರ್ಟ್ ಪಡೆಯುವ ಆಪಲ್‌ನ ಮೊದಲ ಮಧ್ಯಮ ಶ್ರೇಣಿಯ ಸ್ಮಾರ್ಟ್ಫೋನ್ ಆಗಿದೆ. ಐಫೋನ್‌ಗಳು ಸೇರಿದಂತೆ ಎಲ್ಲಾ ಹೊಸ ಆಪಲ್ ಸಾಧನಗಳು ಈಗ ಯುಎಸ್‌ಬಿ-ಸಿ ಚಾರ್ಜಿಂಗ್ ಅನ್ನು ಹೊಂದಿವೆ. ಬಿಡುಗಡೆಯ ನಂತರ, ಐಫೋನ್ ಎಸ್ಇ 4 ಯುಎಸ್‌ಬಿ-ಸಿ ಹೊಂದಿರುವ ಆಪಲ್‌ನ ಮೊದಲ ಮತ್ತು ಏಕೈಕ ಮಧ್ಯಮ ಶ್ರೇಣಿಯ ಫೋನ್‌ ಆಗಿದೆ.
icon

(5 / 6)

ಐಫೋನ್ ಎಸ್ಇ 4 ಯುಎಸ್‌ಬಿ-ಸಿ ಪೋರ್ಟ್ ಪಡೆಯುವ ಆಪಲ್‌ನ ಮೊದಲ ಮಧ್ಯಮ ಶ್ರೇಣಿಯ ಸ್ಮಾರ್ಟ್ಫೋನ್ ಆಗಿದೆ. ಐಫೋನ್‌ಗಳು ಸೇರಿದಂತೆ ಎಲ್ಲಾ ಹೊಸ ಆಪಲ್ ಸಾಧನಗಳು ಈಗ ಯುಎಸ್‌ಬಿ-ಸಿ ಚಾರ್ಜಿಂಗ್ ಅನ್ನು ಹೊಂದಿವೆ. ಬಿಡುಗಡೆಯ ನಂತರ, ಐಫೋನ್ ಎಸ್ಇ 4 ಯುಎಸ್‌ಬಿ-ಸಿ ಹೊಂದಿರುವ ಆಪಲ್‌ನ ಮೊದಲ ಮತ್ತು ಏಕೈಕ ಮಧ್ಯಮ ಶ್ರೇಣಿಯ ಫೋನ್‌ ಆಗಿದೆ.(IceUniverse)

ಆಪಲ್‌ನ ಐಫೋನ್ 16 ಸರಣಿ ಈಗಾಗಲೇ ಭಾರತದಲ್ಲಿ ಮಾರಾಟ ನಡೆಯುತ್ತಿದೆ. ಆರಂಭದ ದಿನಗಳಲ್ಲಿ ಜನರು ಆಪಲ್ ಸ್ಟೋರ್‌ ಹೊರಗೆ ಸರತಿ ಸಾಲುಗಳಲ್ಲಿ ನಿಂತು ಫೋನ್‌ ಖರೀದಿಸಿದ್ದಾರೆ.
icon

(6 / 6)

ಆಪಲ್‌ನ ಐಫೋನ್ 16 ಸರಣಿ ಈಗಾಗಲೇ ಭಾರತದಲ್ಲಿ ಮಾರಾಟ ನಡೆಯುತ್ತಿದೆ. ಆರಂಭದ ದಿನಗಳಲ್ಲಿ ಜನರು ಆಪಲ್ ಸ್ಟೋರ್‌ ಹೊರಗೆ ಸರತಿ ಸಾಲುಗಳಲ್ಲಿ ನಿಂತು ಫೋನ್‌ ಖರೀದಿಸಿದ್ದಾರೆ.(X: Shikhil Vyas)


ಇತರ ಗ್ಯಾಲರಿಗಳು