Tenkana Jayamangali: ದೇವರಾಯನದುರ್ಗದ ಬಳಿ ಹೊಸ ಪ್ರಭೇದದ ಜೇಡ ಪತ್ತೆ; ಸ್ಫೈಡರ್ಗೆ ವಿಶೇಷ ಹೆಸರು ನಾಮಕರಣ
- Tenkana Jayamangali: ತುಮಕೂರು ಜಿಲ್ಲೆಯ ದೇವರಾಯನ ದುರ್ಗದ ಬಳಿಯ ಜಯಮಂಗಲಿ ನದಿ ಉಗಮ ಸ್ಥಾನ ಪಿಳ್ಳಾಆಂಜನೇಯ ಗುಡಿಯ ಬಳಿ ಹೊಸ ಪ್ರಭೇದದ ಜೇಡ ಪತ್ತೆಯಾಗಿದೆ.
- Tenkana Jayamangali: ತುಮಕೂರು ಜಿಲ್ಲೆಯ ದೇವರಾಯನ ದುರ್ಗದ ಬಳಿಯ ಜಯಮಂಗಲಿ ನದಿ ಉಗಮ ಸ್ಥಾನ ಪಿಳ್ಳಾಆಂಜನೇಯ ಗುಡಿಯ ಬಳಿ ಹೊಸ ಪ್ರಭೇದದ ಜೇಡ ಪತ್ತೆಯಾಗಿದೆ.
(1 / 7)
ತುಮಕೂರಿನಲ್ಲಿ ಹೊಸ ಪ್ರಭೇದದ ಜೇಡ ಪತ್ತೆಯಾಗಿದೆ. ಒಂದೂವರೆ ವರ್ಷದ ಹಿಂದೆ ದೇವರಾಯನ ದುರ್ಗದ ಬಳಿಯ ಜಯಮಂಗಲಿ ನದಿ ಉಗಮ ಸ್ಥಾನ ಪಿಳ್ಳಾಆಂಜನೇಯ ಗುಡಿಯ ಬಳಿ ಪತ್ತೆಯಾಗಿದ್ದ ಈ ಜೇಡಕ್ಕೆ ತೆಂಕಣ ಜಯಮಂಗಲಿ ಎಂದು ಹೆಸರಿಡಲಾಗಿದೆ.(All Images From Lohit YT Facebook)
(2 / 7)
ಒಂದೂವರೆ ವರ್ಷದ ಹಿಂದೆ ಆರಂಭವಾದ ಸಂಶೋಧನೆ ವೇಳೆ ಈ ಹೊಸ ಪ್ರಭೇದ ಜೇಡ ಪತ್ತೆಯಾಗಿತ್ತು. ತುಮಕೂರಿನ ವೈಲ್ಡ್ ಲೈಫ್ ಅವರ್ನೇಸ್ ನೇಚರ್ ತಂಡ 2023ರ ಏಪ್ರಿಲ್ನಲ್ಲಿ ಪತ್ತೆ ಹಚ್ಚಿತ್ತು. ಈ ಸಂಶೋಧನಾ ತಂಡ ಸಂಗ್ರಹಿಸಿದ್ದ ಜೇಡ ಪ್ರಭೇದಗಳ ಮಾದರಿಗಳಲ್ಲಿ ಇದು ಒಂದು.
(3 / 7)
ಈ ಸಂಶೋಧನಾ ತಂಡದಲ್ಲಿ ಜೇಡ ತಜ್ಞರಾದ ನಿಶಾ ಬಿಜಿ, ಚಿನ್ಮಯ್ ಸಿ ಮಳಿಯೆ ಮತ್ತು ವೈಟಿ ಲೋಹಿತ್ ಇದ್ದರು. ವಿಜ್ಞಾನಿಗಳಾದ ಜಾನ್ ಕೆಲಬ್, ಕೃಷ್ಣಮೇಘ ಕುಂಟೆ, ಕಿರಣ್ ಮರಾಠೆ ಮತ್ತು ಕೆನಡಾದ ವೈನೆ ಮ್ಯಾಡಿಸನ್ ಕೂಡ ಈ ಸಂಶೋಧನೆಗೆ ಕೈ ಜೋಡಿಸಿದ್ದರು.
(4 / 7)
ಸಾಕಷ್ಟು ಕೀಟ ಮತ್ತು ಜೇಡಗಳು ಲ್ಯಾಟಿನ್ ಹೆಸರನ್ನು ಹೊಂದಿವೆ. ಆದರೆ ಅವುಗಳನ್ನು ನೆನಪಿಡುವುದು ಮತ್ತು ಉಚ್ಛರಿಸುವುದು ಕಷ್ಟ. ಹೀಗಾಗಿ, ತೆಂಕಣ ಜಯಮಂಗಲಿ ಎಂದು ಹೆಸರು ಇಡಲಾಗಿದೆ ಎಂದು ವೈಟಿ ಲೋಹಿತ್ ಹೇಳಿದ್ದಾರೆ.
(5 / 7)
ಇದು ಪ್ರಭೇದ ಮಾತ್ರವಲ್ಲ, ಇದರ ಜೀನಸ್ ಕೂಡ ವಿಜ್ಞಾನ ಲೋಕಕ್ಕೆ ಹೊಸದು. ದೇವರಾಯನ ದುರ್ಗವು ಕೇವಲ ಪುಣ್ಯ ಕ್ಷೇತ್ರವಲ್ಲ, ಜೀವ ವೈವಿದ್ಯತೆಯ ತಾಣ ಎಂದರೂ ತಪ್ಪಾಗಲ್ಲ. ಈ ಬಗ್ಗೆ ವೈಟಿ ಲೋಹಿತ್ ಅವರು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ.
(6 / 7)
ಬೆಂಗಳೂರಿನ ರಾಷ್ಟ್ರೀಯ ಜೈವಿಕ ವಿಜ್ಲಾನ ಕೇಂದ್ರ ಮತ್ತು ಯೂನಿವರ್ಸಿಟಿ ಆಪ್ ಬ್ರಿಟೀಷ್ ಕೊಲಾಂಬಿಯಾ ಲ್ಯಾಬ್ ನ ಸಹಯೊಗದೊಂದಿಗೆ ಹೊಸ ಪ್ರಭೇದ ಗುರುತಿಸುವಿಕೆ ಕಾರ್ಯ ನಡೆದಿದೆ. ಯೂನಿವರ್ಸಿಟಿ ಆಫ್ ಬ್ರಿಟಿಷ್ ಕೊಲಂಬಿಯಾ ಲ್ಯಾಬ್ ಮತ್ತು ಬೆಂಗಳೂರಿನ ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರ (NCBS)ಸಹಯೋಗದೊಂದಿಗೆ ಹೊಸ ಪ್ರಭೇದ ಪತ್ತೆ ಹಚ್ಚಲಾಯಿತು.
(7 / 7)
ದೇವರಾಯನದುರ್ಗ ಕಾಡು, ಬೆಟ್ಟ, ನದಿ, ಜಲಮೂಲಗಳು ಜೀವವೈವಿಧ್ಯತೆಯನ್ನು ಪೋಶಿಸುತ್ತ ಸುತ್ತಲಿನ ನಗರ ಹಳ್ಳಿಗಳನ್ನು ಕಾಪಾಡುತ್ತಾ ಬಂದಿದೆ. ಈ ಹೊಸ ಜೇಡದಂತೆ ವಿಜ್ಞಾನಕ್ಕೆ ಪರಿಚಯವಿಲ್ಲದ ಇನ್ನೂ ಅನೇಕ ಜೀವಿಗಳು ಈ ಕಾಡಿನ ಕಣಜದಲ್ಲಿ ಇವೆ. ದೇವರಾಯನದುರ್ಗವನ್ನು ಕೇವಲ ಪುಣ್ಯಕ್ಷೇತ್ರ ಅಥವಾ ಪ್ರವಾಸಿ ತಾಣವಾಗಿಯಷ್ಟೇ ನೋಡಲು ಸಾಧ್ಯವಿಲ್ಲ, ಎಲ್ಲಕ್ಕಿಂತ ಮುಖ್ಯವಾಗಿ ಇದು ಜೀವವೈವಿಧ್ಯತೆಯ ತಾಣ ಎನ್ನುತ್ತಾರೆ ವೈಟಿ ಲೋಹಿತ್.
ಇತರ ಗ್ಯಾಲರಿಗಳು