ಚಿರತೆ ಇದೆ ಎಚ್ಚರ, ಗುಂಪು ಗುಂಪಾಗಿ ಬನ್ನಿ; ತಿರುಮಲ ಶ್ರೀವಾರಿ ಮೆಟ್ಟು ಮಾರ್ಗದಲ್ಲಿ ಸಾಗುವ ಭಕ್ತರಿಗೆ ಟಿಟಿಸಿ ಸೂಚನೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಚಿರತೆ ಇದೆ ಎಚ್ಚರ, ಗುಂಪು ಗುಂಪಾಗಿ ಬನ್ನಿ; ತಿರುಮಲ ಶ್ರೀವಾರಿ ಮೆಟ್ಟು ಮಾರ್ಗದಲ್ಲಿ ಸಾಗುವ ಭಕ್ತರಿಗೆ ಟಿಟಿಸಿ ಸೂಚನೆ

ಚಿರತೆ ಇದೆ ಎಚ್ಚರ, ಗುಂಪು ಗುಂಪಾಗಿ ಬನ್ನಿ; ತಿರುಮಲ ಶ್ರೀವಾರಿ ಮೆಟ್ಟು ಮಾರ್ಗದಲ್ಲಿ ಸಾಗುವ ಭಕ್ತರಿಗೆ ಟಿಟಿಸಿ ಸೂಚನೆ

ತಿರುಮಲ ತಿರುಪತಿ ಬೆಟ್ಟದ ಸುತ್ತಮುತ್ತ ಅರಣ್ಯ ಇರುವ ಕಾರಣ ವನ್ಯಜೀವಿಗಳು ಕಾಣಿಸಿಕೊಳ್ಳುವುದು ಹೊಸದಲ್ಲ. ಆದರೆ ಈ ಬಾರಿ ಶ್ರೀವಾರಿ ಮೆಟ್ಟು ಮಾರ್ಗದಲ್ಲೇ ಚಿರತೆ ಕಂಡ ಕಾರಣ, ಚಿರತೆ ಇದೆ ಎಚ್ಚರ, ಗುಂಪು ಗುಂಪಾಗಿ ಬನ್ನಿ ಎಂದು ತಿರುಮಲ ಸನ್ನಿಧಿಗೆ ಬರುವ ಭಕ್ತರಿಗೆ ಟಿಟಿಡಿ ಅಧಿಕಾರಿಗಳು ಸೂಚಿಸಿದ್ದಾರೆ.

ತಿರುಮಲ ತಿರುಪತಿ ಬೆಟ್ಟದ ಆಸುಪಾಸಿನಲ್ಲಿ ಮತ್ತೊಮ್ಮೆ ಚಿರತೆ ಕಂಡುಬಂದಿದೆ. ಈ ಬಾರಿ ತಿರುಮಲ ಶ್ರೀವಾರಿ ಮೆಟ್ಟು ಮಾರ್ಗದಲ್ಲಿಯೇ ಚಿರತೆ ಕಾಣಸಿಕ್ಕಿರುವುದು ಭಕ್ತರಲ್ಲಿ ಕಳವಳ ಮೂಡಿಸಿದೆ. ಇದರ ಬಗ್ಗೆ ಟಿಟಿಡಿ ಅಧಿಕಾರಿಗಳಿಗೆ ಭಕ್ತರು ಮಾಹಿತಿ ನೀಡಿದ್ದು, ಅದನ್ನು ಹಿಮ್ಮೆಟ್ಟಿಸುವ ಪ್ರಯತ್ನ ಶುರುವಾಗಿದೆ.
icon

(1 / 6)

ತಿರುಮಲ ಶ್ರೀವಾರಿ ಮೆಟ್ಟು ನಿಯಂತ್ರಣ ಕೊಠಡಿ ಬಳಿಗೆ ಚಿರತೆ ಬಂದಿತ್ತು. ಆಗ ಅಲ್ಲಿದ್ದ ನಾಯಿಗಳು ಅದನ್ನು ಬೆನ್ನಟ್ಟಿವೆ. ಚಿರತೆಯನ್ನು ಕಂಡ ಭಕ್ತರು ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಭಯದಿಂದ ಕಂಟ್ರೋಲ್ ರೂಮಿಗೆ ಹೋಗಿ ರಕ್ಷಣೆ ಪಡೆದುಕೊಂಡಿದ್ದರು.
icon

(2 / 6)

ಶ್ರೀನಿವಾಸಮಂಗಪುರದಿಂದ ಶ್ರೀವಾರಿ ಮೆಟ್ಟುವರೆಗೆ ಭಕ್ತರು ಗುಂಪು ಗುಂಪಾಗಿ ಹೋಗಬೇಕು ಎಂದು ಟಿಟಿಡಿ ಸಿಬ್ಬಂದಿ ಸೂಚಿಸಿದ್ದು, ಕಾಲ್ನಡಿಗೆಯಲ್ಲಿ ಬರುವ ಭಕ್ತರನ್ನು ಗುಂಪು ಗುಂಪಾಗಿ ಬಿಡಲಾಗುತ್ತಿದೆ ಎಂದು ಟಿಟಿಡಿ ಮೂಲಗಳು ತಿಳಿಸಿವೆ.
icon

(3 / 6)

ಟಿಟಿಡಿ ಅಧಿಕಾರಿಗಳು ಹಾಗೂ ಅರಣ್ಯಾಧಿಕಾರಿಗಳಿಗೆ ಚಿರತೆಯ ಚಲನವಲನದ ಬಗ್ಗೆ ಭದ್ರತಾ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಶ್ರೀವಾರಿ ಮೆಟ್ಟು ಬಳಿ ಟ್ರ್ಯಾಪ್ ಕ್ಯಾಮೆರಾ ಅಳವಡಿಸಲು ಟಿಟಿಡಿ ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ.
icon

(4 / 6)

ತಿರುಮಲದಲ್ಲಿ ಚಿರತೆ ಓಡಾಡುತ್ತಿರುವುದರಿಂದ ಭಕ್ತರು ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಅಲಿಪಿರಿ ಮಾರ್ಗದ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದ ಆಸುಪಾಸಿನಲ್ಲಿ ಕೂಡ ಕೆಲ ಚಿರತೆಗಳನ್ನು ಸೆರೆ ಹಿಡಿದಿರುವುದಾಗಿ ಮೂಲಗಳು ತಿಳಿಸಿವೆ.
icon

(5 / 6)

ಚಿರತೆ ಹಾವಳಿ ಹಿನ್ನೆಲೆಯಲ್ಲಿ ಭಕ್ತರು ಗುಂಪು ಗುಂಪಾಗಿ ತಿರುಮಲಕ್ಕೆ ತೆರಳುವಂತೆ ಟಿಟಿಡಿ ಸೂಚಿಸಿದ್ದು, ಭಕ್ತರ ಧೈರ್ಯಕ್ಕಾಗಿ ಕೋಲುಗಳನ್ನು ನೀಡಲಾಗುತ್ತಿದೆ ಎಂದು ಟಿಟಿಡಿ ಮೂಲಗಳು ತಿಳಿಸಿವೆ.
icon

(6 / 6)

ಇತರ ಗ್ಯಾಲರಿಗಳು